India Population 2023: ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ; 2023ರ ಜಾಗತಿಕ ಜನಸಂಖ್ಯಾ ಸ್ಥಿತಿಗತಿ ವರದಿ
Apr 19, 2023 02:43 PM IST
ಸಾಂದರ್ಭಿಕ ಚಿತ್ರ
- ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳಿವೆ. ವಿಶ್ವಸಂಸ್ಥೆ ವರದಿಯು ಅಂದಾಜಿಸಿದಂತೆ, ಚೀನಾದ ಜನಸಂಖ್ಯೆ ಇದೀಗ 142.57 ಕೋಟಿಯಷ್ಟಿದ್ದರೆ, ಭಾರತದ ಜನಸಂಖ್ಯೆ 142.86 ಕೋಟಿಯಷ್ಟಾಗಿದೆ.
ನವದೆಹಲಿ: ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳಿವೆ. ವಿಶ್ವಸಂಸ್ಥೆ ವರದಿಯು ಅಂದಾಜಿಸಿದಂತೆ, ಚೀನಾದ ಜನಸಂಖ್ಯೆ ಇದೀಗ 142.57 ಕೋಟಿಯಷ್ಟಿದ್ದರೆ, ಭಾರತದ ಜನಸಂಖ್ಯೆ 142.86 ಕೋಟಿಯಷ್ಟಾಗಿದೆ.
1950 ರಲ್ಲಿ ಜನಸಂಖ್ಯೆಯ ಅಂಕಿಅಂಶಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ ನಂತರ, ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಯುಎನ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವುದು ಇದೇ ಮೊದಲು. ಅದೇ ರೀತಿ 1960ರಿಂದ ಇದೇ ಮೊದಲ ಬಾರಿಗೆ ಚೀನಾದಲ್ಲಿ ಜನಸಂಖ್ಯೆ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಜನನ ಪ್ರಮಾಣ ಕುಸಿಯುತ್ತಿದ್ದು, ಚೀನಾವು ತೀವ್ರ ಜನಸಂಖ್ಯಾ ಕುಸಿತದ ಅಪಾಯವನ್ನು ಎದುರಿಸುತ್ತಿದೆ. ಚೀನಾಎ ಹಲವು ಭಾಗಗಳಲ್ಲಿ ಜನನ ದರವನ್ನು ಹೆಚ್ಚಿಸುವ ಯೋಜನೆಗಳನ್ನು ಸ್ಥಳೀಯ ಸರ್ಕಾರಗಳು ಘೋಷಿಸಿವೆ. ಆದರೆ ಅಧಿಕೃತ ಪ್ರಯತ್ನಗಳು ಇಲ್ಲಿಯವರೆಗೆ ಕುಸಿತವನ್ನು ಹಿಮ್ಮೆಟ್ಟಿಸಲು ವಿಫಲವಾಗಿವೆ.
ಭಾರತವು 2011ರಿಂದ ಜನಗಣತಿಯನ್ನು ನಡೆಸದ ಕಾರಣ, ನಿಖರ ಜನಸಂಖ್ಯೆಯನ್ನು ಹೇಳುವುದು ಕಷ್ಟ. ಈ ಕುರಿತು ಇತ್ತೀಚಿನ ಅಧಿಕೃತ ಡೇಟಾವನ್ನು ಭಾರತ ಹೊಂದಿಲ್ಲ. 2021ರಲ್ಲಿ ಜನಗಣತಿ ನಡೆಯಬೇಕಿತ್ತದರೂ. ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಈ ಪ್ರಕ್ರಿಯೆ ವಿಳಂಬವಾಯಿತು.
ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (UNFPA) ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತವು ಈಗ ಚೀನಾಕ್ಕಿಂತ 2.9 ಮಿಲಿಯನ್ ಹೆಚ್ಚು ಜನರನ್ನು ಹೊಂದಿರುವ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.
'ದಿ ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್, 2023' ಎಂಬ ಶೀರ್ಷಿಕೆಯ '8 ಬಿಲಿಯನ್ ಲೈವ್ಸ್, ಇನ್‌ಫೈನೈಟ್ ಪಾಸಿಬಿಲಿಟೀಸ್: ದಿ ಕೇಸ್ ಫಾರ್ ರೈಟ್ಸ್ ಅಂಡ್ ಚಾಯ್ಸ್' ಎಂಬ ಬುಧವಾರ ಬಿಡುಗಡೆ ಮಾಡಿದ್ದು, ಭಾರತದ ಜನಸಂಖ್ಯೆ 1,428.6 ಮಿಲಿಯನ್ ಆಗಿದ್ದರೆ, ಚೀನಾದ ಜನಸಂಖ್ಯೆ 1,425.7 ಮಿಲಿಯನ್ ಆಗಿದ್ದು, 2.9 ಮಿಲಿಯನ್ ವ್ಯತ್ಯಾಸವಿದೆ.
1950ರಲ್ಲಿ ಯುಎನ್ ಜನಸಂಖ್ಯಾ ಡೇಟಾವನ್ನು ಸಂಗ್ರಹಿಸಲು ಮತ್ತು ಬಿಡುಗಡೆ ಮಾಡಲು ಪ್ರಾರಂಭಿಸಿದ ನಂತರ, ಭಾರತದ ಜನಸಂಖ್ಯೆಯು ಚೀನಾವನ್ನು ಹಿಂದಿಕ್ಕಿರುವುದು ಇದೇ ಮೊದಲು ಎನ್ನಲಾಗಿದೆ.ಈ ಬದಲಾವಣೆ ಯಾವ ಸಮಯದಲ್ಲಿ ಆಯಿತು ಎಂಬುದು ಅಸ್ಪಷ್ಟವಾಗಿದ್ದರೂ, ಭಾರತವೀಗ ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಸಲಹೆಗಾರ ಅನ್ನಾ ಜೆಫರಿಸ್ ಹೇಳಿದ್ದಾರೆ.
"ಭಾರತದ ಜನಸಂಖ್ಯೆಯಲ್ಲಿ 0-14 ವಯಸ್ಸಿನವರು ಶೇ. 25ರಷ್ಟು, 10-19 ವಯಸ್ಸಿನವರು ಶೇ.18ರಷ್ಟು, 10-24 ವಯಸ್ಸಿನವರು ಶೇ. 26ರಷ್ಟು, 15-64 ವಯಸ್ಸಿನವರು ಶೇ.68ರಷ್ಟು ಮತ್ತು 65 ವಯಸ್ಸಿಗಿಂತ ಮೇಲ್ಪಟ್ಟವರು ಶೇ.7ರಷ್ಟು ಇದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಚೀನಾದ ಜನಸಂಖ್ಯೆಯ ಬೆಳವಣಿಗೆಯ ದರವು 1980ರಿಂದ ಕ್ಷೀಣಿಸುತ್ತಿದೆ. ಚೀನಾದಲ್ಲಿ 0-14 ವಯಸ್ಸಿನವರು ಶೇ.17ರಷ್ಟು, 10-19 ವಯಸ್ಸಿನವರು ಶೇ. 12ರಷ್ಟು, 10-24 ವಯಸ್ಸಿನವರು ಶೇ.69ರಷ್ಟು, 15-64 ವಯಸ್ಸಿನವರು ಶೇ. 69ರಷ್ಟು ಮತ್ತು 65 ವಯಸ್ಸಿಗಿಂತ ಮೇಲ್ಪಟ್ಟವರು ಶೇ.14ರಷ್ಟಿದ್ದಾರೆ. ಅಂದರೆ ಚೀನಾ ದೇಶವು 65 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 200 ಮಿಲಿಯನ್ ಜನರನ್ನು ಹೊಂದಿದೆ.." ಎಂದು ಅನ್ನಾ ಜೆಫರಿಸ್ ಮಾಹಿತಿ ನೀಡಿದ್ದಾರೆ.
ಮಾನವರ ಜೀವಿತಾವಧಿ ಪ್ರಮಾಣದಲ್ಲಿ ಚೀನಾವು ಭಾರತಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಚೀನಾದಲ್ಲಿ ಮಹಿಳೆಯರ ಜೀವಿತಾವಧಿ 82 ಆಗಿದ್ದರೆ, ಪುರುಷರ ಜೀವಿತಾವಧಿ 76 ವಯಸ್ಸಾಗಿದೆ. ಆದರೆ ಭಾರತದಲ್ಲಿ ಮಹಿಳೆಯರ ಜೀವಿತಾವಧಿ 74 ಮತ್ತು ಪುರುಷರ ಜೀವಿತಾವಧಿ 71 ವಯಸ್ಸಾಗಿದೆ.
ವಿಭಾಗ