logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sonia Gandhi: ಭಾರತ್‌ ಜೋಡೋ ಯಾತ್ರೆಯೊಂದಿಗೆ ನನ್ನ ರಾಜಕೀಯ ಪಯಣ ಅಂತ್ಯವಾಗಿದೆ: ಸೋನಿಯಾ ಗಾಂಧಿ

Sonia Gandhi: ಭಾರತ್‌ ಜೋಡೋ ಯಾತ್ರೆಯೊಂದಿಗೆ ನನ್ನ ರಾಜಕೀಯ ಪಯಣ ಅಂತ್ಯವಾಗಿದೆ: ಸೋನಿಯಾ ಗಾಂಧಿ

HT Kannada Desk HT Kannada

Feb 25, 2023 02:10 PM IST

google News

ಸೋನಿಯಾ ಗಾಂಧಿ

    • ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿರುವ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಭಾರತ್‌ ಜೋಡೋ ಯಾತ್ರೆಯೊಂದಿಗೆ ನನ್ನ ರಾಜಕೀಯ ಪಯಣವೂ ಮುಕ್ತಾಯ ಕಂಡಿದೆ ಎಂದು ಹೇಳಿದ್ದಾರೆ. ಛತ್ತೀಸ್‌ಗಢ ರಾಜಧಾನಿ ರಾಯ್‌ಪುರ್‌ದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಪಕ್ಷದ ಮೂರು ದಿನಗಳ ಚಿಂತನ-ಮಂಥನ ಸಭೆಯನ್ನು ಸಭೆಯನ್ನು ಉದ್ದೇಶಿಸಿ ಸೋನಿಯಾ ಗಾಂಧಿ ಮಾತನಾಡಿದರು.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ (PTI)

ರಾಯ್‌ಪುರ್:‌ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿರುವ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಭಾರತ್‌ ಜೋಡೋ ಯಾತ್ರೆಯೊಂದಿಗೆ ನನ್ನ ರಾಜಕೀಯ ಪಯಣವೂ ಮುಕ್ತಾಯ ಕಂಡಿದೆ ಎಂದು ಹೇಳಿದ್ದಾರೆ.

ಛತ್ತೀಸ್‌ಗಢ ರಾಜಧಾನಿ ರಾಯ್‌ಪುರ್‌ದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಪಕ್ಷದ ಮೂರು ದಿನಗಳ ಚಿಂತನ-ಮಂಥನ ಸಭೆಯನ್ನು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುತ್ತಿರುವುದಾಗಿ ಘೋಷಿಸಿದರು.

ಕಾಂಗ್ರೆಸ್‌ ಪಕ್ಷ ಕಷ್ಟದ ದಿನಗಳನ್ನು ಎದುರಿಸುತ್ತಿದೆ ಎಂಬುದು ನಿಜ. ಆದರೆ ಇತಿಹಾಸದುದ್ದಕ್ಕೂ ಇಂತಹ ಸಾವಿರಾರು ಕಷ್ಟಗಳನ್ನು ಪಕ್ಷವು ಯಶಸ್ವಿಯಾಗಿ ಎದುರಿಸಿ ಜಯಿಸಿದೆ. ಪ್ರಸ್ತುತ ಸವಾಲುಗಳನ್ನೂ ಪಕ್ಷ ದಿಟ್ಟವಾಗಿ ಎದುರಿಸಿ ಜಯ ಸಾಧಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದರು.

ಭಾರತ್‌ ಜೋಡೋ ಯಾತ್ರೆಯು ಪಕ್ಷದ ಪಾಲಿಗೆ ಪರಿವರ್ತನೆಯ ದಾರಿದೀಪವಾಗಿ ಪರಿಣಮಿಸಿದೆ. ಈ ಐತಿಹಾಸಿಕ ಯಾತ್ರೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮತ್ತು ಶಕ್ತಿಯನ್ನು ತುಂಬಿದೆ. ದೇಶದ ಜನರೊಂದಿಗೆ ಅತ್ಯಂತ ನಿಕಟವಾಗಿ ಬೆರೆಯುವ ಏಕೈಕ ರಾಜಕೀಯ ಪಕ್ಷವೆಂದರೆ ಅದು ಕಾಂಗ್ರೆಸ್‌ ಎಂಬುದನ್ನು ಈ ಯಾತ್ರೆ ಮತ್ತೊಮ್ಮೆ ದೃಢಪಡಿಸಿದೆ ಎಂದು ಸೋನಿಯಾ ಗಾಂಧಿ ಇದೇ ವೇಳೆ ಮೆಚ್ಚುಗೆ ಸೂಚಿಸಿದರು.

ಭಾರತದ ಜನ ಕೋಮು ಸೌಹಾರ್ದತೆ, ಶಾಂತಿ ಮತ್ತು ಸಹಬಾಳ್ವೆಯನ್ನು ಬಯಸುತ್ತಾರೆ ಎಂಬ ಸತ್ಯವನ್ನು ಭಾರತ್‌ ಜೋಡೋ ಯಾತ್ರೆ ಜಗಜ್ಜಾಹೀರು ಮಾಡಿದೆ. ಅಧಿಕಾರಕ್ಕಾಗಿ ಕೋಮು ವಿಷಬೀಜ ಬಿತ್ತುವ ಶಕ್ತಿಗಳು, ಸಮಾಜವನ್ನು ಒಡೆಯುವ ಹುನ್ನಾರವನ್ನು ಭಾರತ್‌ ಜೋಡೋ ಯಾತ್ರೆ ನಗ್ನಗೊಳಿಸಿದೆ. ಭಾರತ್‌ ಜೋಡೋ ಯಾತ್ರೆ ನೈಜ ಭಾರತಕ್ಕೆ ಹಿಡಿದ ಕನ್ನಡಿ ಎಂದು ಸೋನಿಯಾ ಗಾಂಧಿ ಹೇಳಿದರು.

15,000 ಕಾಂಗ್ರೆಸ್ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಗಾಂಧಿ, "ನನಗೆ ಅತ್ಯಂತ ಸಂತೋಷಕರ ಸಂಗತಿಯೆಂದರೆ, ನನ್ನ ‌ರಾಜಕೀಯ ಇನ್ನಿಂಗ್ಸ್ ಭಾರತ್ ಜೋಡೋ ಯಾತ್ರೆಯೊಂದಿಗೆ ಮುಕ್ತಾಯವಾಗಿದೆ. ಯಾತ್ರೆಯು ಕಾಂಗ್ರೆಸ್‌ ಪಕ್ಷಕ್ಕೆ ಒಂದು ಮಹತ್ವದ ತಿರುವು ನೀಡಿದೆ. ಭಾರತದ ಜನರು ಅಗಾಧವಾಗಿ ಸಾಮರಸ್ಯ, ಸಹಿಷ್ಣುತೆ ಮತ್ತು ಸಮಾನತೆಯನ್ನು ಬಯಸುತ್ತಾರೆ ಎಂಬುದನ್ನು ಇದು ಸಾಬೀತುಪಡಿಸಿದೆ..." ಎಂದು ಸೋನಿಯಾ ಗಾಂಧಿ ಹೇಳಿದರು.

ಜನಸಂಪರ್ಕ ಕಾರ್ಯಕ್ರಮಗಳ ಮೂಲಕ ನಮ್ಮ ಪಕ್ಷ ಮತ್ತು ಜನರ ನಡುವಿನ ಸಂವಾದದ ಶ್ರೀಮಂತ ಪರಂಪರೆಯನ್ನು ಭಾರತ್‌ ಜೋಡೋ ಯಾತ್ರೆ ನವೀಕರಿಸಿದೆ. ಕಾಂಗ್ರೆಸ್ ಜನರೊಂದಿಗೆ ನಿಂತಿದೆ ಮತ್ತು ಅವರಿಗಾಗಿ ಹೋರಾಡಲು ಸಿದ್ಧವಾಗಿದೆ ಎಂಬುದನ್ನು ಇದು ನಮಗೆ ತೋರಿಸಿದೆ ಎಂದು ಸೋನಿಯಾ ಗಾಂಧಿ

"ಯಾತ್ರೆಗಾಗಿ ಶ್ರಮಿಸಿದ ಎಲ್ಲಾ ಪಕ್ಷದ ಕಾರ್ಯಕರ್ತರನ್ನು ನಾನು ಅಭಿನಂದಿಸುತ್ತೇನೆ... ಯಾತ್ರೆಯ ಯಶಸ್ಸಿನಲ್ಲಿ ಅವರ ಸಂಕಲ್ಪ ಮತ್ತು ನಾಯಕತ್ವ ನಿರ್ಣಾಯಕವಾಗಿದ್ದ ರಾಹುಲ್ ಗಾಂಧಿ ಅವರಿಗೆ ನಾನು ವಿಶೇಷವಾಗಿ ಧನ್ಯವಾದ ಹೇಳುತ್ತೇನೆ.." ಎಂದು 76 ವರ್ಷದ ಕಾಂಗ್ರೆಸ್ ಮಾಜಿ ಮುಖ್ಯಸ್ಥರು ಹೇಳಿದ್ದಾರೆ.

ಪ್ರಸ್ತುತ ಅವಧಿಯನ್ನು ಕಾಂಗ್ರೆಸ್ ಮತ್ತು ದೇಶಕ್ಕೆ "ವಿಶೇಷವಾಗಿ ಸವಾಲಿನ ಸಮಯ" ಎಂದು ಕರೆದಿರು ಸೋನಿಯಾ ಗಾಂಧಿ, "ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ-ಆರ್‌ಎಸ್‌ಎಸ್ ನೇತೃತ್ವದ ಆಡಳಿತವು, ಪ್ರತಿಯೊಂದು ಸಂಸ್ಥೆಯನ್ನು ಪಟ್ಟುಬಿಡದೆ ವಶಪಡಿಸಿಕೊಂಡಿದೆ ಮತ್ತು ಬುಡಮೇಲು ಮಾಡಿದೆ ಎಂದು ಹರಿಹಾಯ್ದರು.

"ಇದು ಯಾವುದೇ ವಿರೋಧದ ಧ್ವನಿಯನ್ನು ನಿರ್ದಯವಾಗಿ ನಿಶ್ಯಬ್ದಗೊಳಿಸುವ ಕುತಂತ್ರವಾಗಿದೆ. ಬಿಜೆಪಿಯು ಕೆಲವು ಉದ್ಯಮಿಗಳಿಗೆ ಒಲವು ತೋರುವ ಮೂಲಕ, ಆರ್ಥಿಕ ವಿನಾಶವನ್ನು ಉಂಟುಮಾಡಿದೆ. ಬಿಜೆಪಿಯು ಸಹ ಭಾರತೀಯರ ವಿರುದ್ಧ ಭಯ ಮತ್ತು ದ್ವೇಷದ ಬೆಂಕಿಯನ್ನು ಉತ್ತೇಜಿಸುತಿರುವ ಅತ್ಯಂತ ದು:ಖದ ಸಂಗತಿ.." ಎಂದು ಸೋನಿಯಾ ಗಾಂಧಿ ಕಿಡಿಕಾರಿದರು.

ಕಾಂಗ್ರೆಸ್‌ನ 85 ನೇ ಸರ್ವಸದಸ್ಯರ ಅಧಿವೇಶನವು 2024ರ ಲೋಕಸಭೆ ಚುನಾವಣೆಗೆ, ಇತರ ವಿರೋಧ ಪಕ್ಷಗಳೊಂದಿಗೆ ಮೈತ್ರಿ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ