logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nasa News: ಹೊಸ ನಕ್ಷತ್ರಗಳ ಸೃಷ್ಟಿ ಪ್ರಕ್ರಿಯೆಗೆ ಸಾಕ್ಷಿಯಾಗುತ್ತಿರುವ ಬೃಹತ್‌ ಕಪ್ಪು ಕುಳಿ ಪತ್ತೆಹಚ್ಚಿದ ನಾಸಾದ ಹಬಲ್‌ ಟೆಲಿಸ್ಕೋಪ್‌

NASA News: ಹೊಸ ನಕ್ಷತ್ರಗಳ ಸೃಷ್ಟಿ ಪ್ರಕ್ರಿಯೆಗೆ ಸಾಕ್ಷಿಯಾಗುತ್ತಿರುವ ಬೃಹತ್‌ ಕಪ್ಪು ಕುಳಿ ಪತ್ತೆಹಚ್ಚಿದ ನಾಸಾದ ಹಬಲ್‌ ಟೆಲಿಸ್ಕೋಪ್‌

Praveen Chandra B HT Kannada

Apr 08, 2023 09:23 AM IST

google News

ಕಲಾವಿದರ ನೆರವಿನಿಂದ ರಚಿಸಲಾದ ಹೊಸ ಕಪ್ಪುಕುಳಿಯ ಚಿತ್ರ

  • ಈ ದೈತ್ಯಾಕಾರದ ರಾಕ್ಷಸ ಕಪ್ಪು ಕುಳಿಯು ಅಂತರ್‌ ಗ್ಯಾಲಾಕ್ಸಿಗಳ ವಿಲಕ್ಷಣ ಆಟದಿಂದ ಸೃಷ್ಟಿಯಾಗಿರುವ ಸಾಧ್ಯತೆಯಿದೆ ಎಂದು ಖಗೋಳವಿಜ್ಞಾನಿಗಳು ಹೇಳಿದ್ದಾರೆ.

ಕಲಾವಿದರ ನೆರವಿನಿಂದ ರಚಿಸಲಾದ ಹೊಸ ಕಪ್ಪುಕುಳಿಯ ಚಿತ್ರ
ಕಲಾವಿದರ ನೆರವಿನಿಂದ ರಚಿಸಲಾದ ಹೊಸ ಕಪ್ಪುಕುಳಿಯ ಚಿತ್ರ (NASA)

ಭೂಮಿಯಿಂದ ಸರಿಸುಮಾರು 200,000 ಜ್ಯೋತಿರ್ವರ್ಷ ದೂರದಲ್ಲಿ ಹೊಸದಾಗಿ ಸೃಷ್ಟಿಯಾಗುತ್ತಿರುವ ನಕ್ಷತ್ರಗಳನ್ನೇ ಬಾಲವಾಗಿಸಿಕೊಂಡ ಬೃಹತ್‌ ಕಪ್ಪು ಕುಳಿಯನ್ನು ನಾಸಾ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಈ ದೈತ್ಯಾಕಾರದ ರಾಕ್ಷಸ ಕಪ್ಪು ಕುಳಿಯು ಅಂತರ್‌ ಗ್ಯಾಲಾಕ್ಸಿಗಳ ವಿಲಕ್ಷಣ ಆಟದಿಂದ ಸೃಷ್ಟಿಯಾಗಿರುವ ಸಾಧ್ಯತೆಯಿದೆ.

ಈ ಕಪ್ಪು ಕುಳಿಯ ಅಪರಿಮಿತ ಶಕ್ತಿಯು ಹೊಸದಾಗಿ ಉದಯಿಸುತ್ತಿರುವ ನಕ್ಷತ್ರಗಳನ್ನು ಹಿಡಿದಿಟ್ಟುಕೊಂಡಂತೆ ಭಾಸವಾಗುತ್ತಿದೆ. ಈ ಕಪ್ಪುಕುಳಿಯನ್ನು ನಾಸಾದ ಶಕ್ತಿಶಾಲಿ ಹಬಲ್‌ ಸ್ಪೇಸ್‌ ಟಲಿಸ್ಕೋಪ್‌ ಸೆರೆಹಿಡಿದಿದೆ. ಚಿತ್ರದಲ್ಲಿ ಕಪ್ಪುಕುಳಿಗೆ ಬಾಲಬಂದಂತೆ ಹೊಸ ನಕ್ಷತ್ರಗಳು ಸಾಲಾಗಿವೆ.

"ಹೊಸ ನಕ್ಷತ್ರಗಳ ಉದಯಕ್ಕೆ ಕಾರಣವಾಗುವಂತಹ ಪ್ರಕ್ರಿಯೆಯಲ್ಲಿ ಈ ಕಪ್ಪು ಕುಳಿ ತೊಡಗಿರುವಂತೆ ಭಾಸವಾಗುತ್ತಿದೆ" ಎಂದು ಯೇಲ್ ವಿಶ್ವವಿದ್ಯಾಲಯದ ವಿಜ್ಞಾನಿ ಪೀಟರ್ ವ್ಯಾನ್ ಡೊಕ್ಕುಮ್ ಹೇಳಿದ್ದಾರೆ.

ಬಹುಶಃ ಕಪ್ಪು ಕುಳಿಯ ಚಲನೆಯಿಂದ ಅನಿಲವು ಸ್ಫೋಟಗೊಳ್ಳುತ್ತದೆ ಮತ್ತು ಬೆಚ್ಚಗಾಗುತ್ತದೆ ಎಂದು ಸಂಶೋಧಕರು ನಂಬಿದ್ದಾರೆ. "ಅನಿಲದ ಮೂಲಕ ಚಳಿಸುವ ಈ ಕಪ್ಪುಕುಳಿಯು ಅತಿವೇಗದ ಪ್ರಭಾವದಿಂದಾಗಿ ಅದರ ಮುಂಭಾಗದ ಅನಿಲಗಳು ಆಘಾತಗೊಂಡಂತೆ ಕಾಣಿಸುತ್ತದೆ" ಎಂದು ಅವರು ಹೇಳಿದ್ದಾರೆ.

ಈ ಕಪ್ಪು ಕುಳಿ ಎಷ್ಟು ದೊಡ್ಡದಾಗಿರಬಹುದು ಎಂಬ ಅಂದಾಜನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. "ಕಪ್ಪು ಕುಳಿಯು ನಮ್ಮ ಸೂರ್ಯನ 20 ದಶಲಕ್ಷದಷ್ಟು ದೊಡ್ಡದಾಗಿದೆೆ" ಎಂದು ಅವರು ಹೇಳಿದ್ದಾರೆ.

ಬಹುಶಃ ಎರಡು ಗೆಲಾಕ್ಸಿಗಳು ಸುಮಾರು 50 ಮಿಲಿಯನ್ ವರ್ಷಗಳ ಹಿಂದೆ ವಿಲೀನಗೊಂಡಿವೆ. ಇದರಿಂದ ಇದು ಎರಡು ಬೃಹತ್ ಕಪ್ಪು ಕುಳಿಗಳು ಒಟ್ಟಾಗಿ ಪರಸ್ಪರ ಸಾಮರಸ್ಯದಿಂದ ಸುತ್ತುತ್ತಿದೆ ಎಂದು ಅವರು ಹೇಳಿದ್ದಾರೆ.

ಇದೇ ಚಿತ್ರದಲ್ಲಿ ಮೂರನೇ ನಕ್ಷತ್ರಪುಂಜವು ತನ್ನದೇ ಆದ ಕಪ್ಪು ಕುಳಿಯೊಂದಿಗೆ ಅಸ್ಥಿರ ಮತ್ತು ಅಸ್ತವ್ಯಸ್ತವಾಗಿರುವುದನ್ನು ಖಗೋಳ ವಿಜ್ಞಾನಿಗಳು ಗಮನಿಸಿದ್ದಾರೆ.

ಈ ಕಪ್ಪುಕುಳಿ ತುಂಬಾ ದೂರದಲ್ಲಿರುವುದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹಿಂದೆಂದೂ ನೋಡಿರದ ಈ ಕಪ್ಪು ಕುಳಿ ಆಕಸ್ಮಿಕವಾಗಿ ಪತ್ತೆಯಾಗಿದೆ ಎಂದು ವ್ಯಾನ್ ಡೊಕ್ಕುಮ್ ಹೇಳುತ್ತಾರೆ. ""ನಾನು ಹಬಲ್ ಚಿತ್ರದ ಮೂಲಕ ಸ್ಕ್ಯಾನ್ ಮಾಡುತ್ತಿದ್ದೆ. ಇದು ಹಿಂದೆ ನೋಡಿರದ ಕಪ್ಪುಕುಳಿಯಾಗಿದೆ. ಇದು ತುಂಬಾ ಆಶ್ಚರ್ಯಕರ, ಪ್ರಕಾಶಮಾನ ಮತ್ತು ಅಸಾಮಾನ್ಯವಾಗಿದೆ" ಎಂದು ಅವರು ಹೇಳಿದ್ದಾರೆ.

ಈ ಕಪ್ಪುಕುಳಿಯ ಆಕಾರದಿಂದಾಗಿ ಇದನ್ನು ಕಣ್ಣೀರಿನ ಕಪ್ಪು ಕುಳಿ ಎಂದು ಕರೆಯಲಾಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ