Maldives Issue: ಭಾರತ ವಿರುದ್ದ ಅವಹೇಳನಕಾರಿ ಹೇಳಿಕೆ, ಮಾಲ್ಡೀವ್ಸ್‌ನ ಮೂವರು ಸಚಿವರು ವಜಾ: ಪ್ರವಾಸೋದ್ಯಮ ಹೊಡೆತಕ್ಕೆ ಬೆಚ್ಚಿದ ದ್ವೀಪ ರಾಷ್ಟ
Jan 07, 2024 09:05 PM IST
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಜ್ಜು.
- maldives issue ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳಕನಕಾರಿ ಹೇಳಿಕೆ ನೀಡಿದ ಮಾಲ್ಡೀವ್ಸ್‌ನ ಮೂವರು ಸಚಿವರನ್ನು ವಜಾಗೊಳಿಸಲಾಗಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಜ್ಜು ವಜಾ ನಿರ್ಧಾರ ತೆಗೆದುಕೊಂಡಿದ್ದಾರೆ.
ದೆಹಲಿ: ಭಾರತದ ವಿರುದ್ದ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಿ ಭಾರತ ಹಾಗೂ ಮಾಲ್ಡೀವ್ಸ್ ನಡುವೆ ಸಂಬಂಧ ಹಾಳಾಗಲು ಕಾರಣರಾಗಿದ್ದೂ ಅಲ್ಲದೇ ಭಾರತದ ಪ್ರವಾಸಿಗರ ಕೆಂಗೆಣ್ಣಿಗೆ ಗುರಿಯಾಗಿದ್ದ ಮಾಲ್ಡೀವ್ಸ್‌ನ ಮೂವರು ಸಚಿವರನ್ನು ಸಚಿವ ಸಂಪುಟದಲ್ಲಿ ವಜಾಗೊಳಿಸಲಾಗಿದೆ. ಮಾಲ್ಡೀವ್ಸ್ ನ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬೀಳುವ ಮುನ್ಸೂಚನೆ ದೊರೆತ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ ವಿವಾದೀತ ಮೂವರು ಸಚಿವರನ್ನು ವಜಾಗೊಳಿಸಿತು. ಅಲ್ಲದೇ ವಿದೇಶ ಸಚಿವಾಲಯವೂ ಭಾರತದೊಂದಿಗೆ ಸಂಬಂಧವನ್ನು ಯಾವುದೇ ಕಾರಣಕ್ಕೂ ಹಾಳಾಗಲು ಬಿಡುವುದಿಲ್ಲ ಎನ್ನುವ ಹೇಳಿಕೆಯನ್ನೂ ಬಿಡುಗಡೆ ಮಾಡಿತು.
ಮಾಲ್ಡೀವ್ಸ್ ಸರ್ಕಾರದಲ್ಲಿ ಸಚಿವರಾಗಿದ್ದ ಮರಯಮ್ ಶ್ಯೂನ, ಮಾಲ್ಶಾ ಷರೀಫ್ ಮತ್ತು ಮಹಝೀಮ್ ಮಸ್ಜಿದ್ ವಜಾಗೊಂಡವರು. ಈ ಕುರಿತು ಸರ್ಕಾರದಿಂದಲೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಲಕ್ಷ್ವದ್ವೀಪಕ್ಕೆ ಹೋಗಿದ್ದಾಗಿನ ಕೆಲವು ಕ್ಷಣಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಅದೂ ಲಕ್ಷದ್ವೀಪದಲ್ಲಿ ವಿಹರಿಸುತ್ತಿರುವ ಚಿತ್ರ ಹಾಗೂ ವೀಡಿಯೋಗಳಾಗಿದ್ದವು. ಈ ಚಿತ್ರ ಹಾಗೂ ವಿಡಿಯೋಗಳನ್ನು ಶೇರ್ ಮಾಡಿದ್ದ ಮಾಲ್ಡೀವ್ಸ್‌ನ ಮೂವರು ಸಚಿವರು ಹಾಗೂ ಕೆಲ ಮುಖಂಡರು ಇದನ್ನು ವ್ಯಂಗ್ಯದ ರೀತಿಯಲ್ಲಿ ಬಳಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಭಾರತೀಯರು ಮಾಲ್ಡೀವ್ಸ್‌ನ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ್ದರು. ಮಾಲ್ಡೀವ್ಸ್ ಅನ್ನು ಭಾರತೀಯರು ತಮ್ಮ ಪ್ರವಾಸಿ ಪಟ್ಟಿಯಿಂದ ತೆಗೆದು ಹಾಕಬೇಕು. ಮಾಲ್ಡೀವ್ಸ್‌ಗೆ ಹೋಗುವುದನ್ನು ನಿಷೇಧಿಸಬೇಕು ಎನ್ನುವ ಒತ್ತಾಯ ಮಾಡಿದ್ದರು. ಭಾರತದ ಹಲವಾರು ನಾಯಕರೂ ಈ ವರ್ತನೆಯನ್ನು ಬಲವಾಗಿಯೇ ಖಂಡಿಸಿದ್ದರು.
ಭಾರತೀಯರಿಂದ ಈ ರೀತಿಯ ನಡೆಗೆ ಬಲವಾದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಸರ್ಕಾರವೂ ಮೂವರು ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಇದು ಅವರ ವೈಯಕ್ತಿಕ ಹೇಳಿಕೆ. ಸರ್ಕಾರ ಇದನ್ನು ಬೆಂಬಲಿಸುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೀಗೆ ದೇಶಗಳ ನಡುವೆ ದ್ವೇಷ ಬಿತ್ತುವ ಇಂತಹ ವರ್ತನೆಗಳು ಸರಿಯಿಲ್ಲ ಎಂದು ಹೇಳಿತ್ತು.
ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಕೂಡ ನಮ್ಮ ನೆರೆ ದೇಶಗಳ ಸಂಬಂಧಗಳನ್ನು ಹಾಳು ಮಾಡುವಂತಹ ಇಂತಹ ಹೇಳಿಕೆಯನ್ನು ಎಂದಿಗು ಸಹಿಸಲಾಗದು. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಜ್ಜು ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಾರ್ವಜನಿಕ ಜೀವನದಲ್ಲಿರುವವರು ಈ ರೀತಿ ಹೇಳಿಕೆ ಕೊಡುವುದನ್ನು ತಡೆಯಬೇಕು ಎಂದು ಆಗ್ರಹಿಸಿದ್ದರು.
ವಿಭಾಗ