logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rajasthan Cm: ಈ ಐವರಲ್ಲಿ ಯಾರು ರಾಜಸ್ಥಾನ ಮುಖ್ಯಮಂತ್ರಿ ಆಗಬಹುದು? ನೀವು ತಿಳಿಯಬೇಕಾದ 5 ಅಂಶಗಳಿವು

Rajasthan CM: ಈ ಐವರಲ್ಲಿ ಯಾರು ರಾಜಸ್ಥಾನ ಮುಖ್ಯಮಂತ್ರಿ ಆಗಬಹುದು? ನೀವು ತಿಳಿಯಬೇಕಾದ 5 ಅಂಶಗಳಿವು

HT Kannada Desk HT Kannada

Dec 03, 2023 08:52 PM IST

google News

ರಾಜಸ್ಥಾನದಲ್ಲಿ ಯಾರು ಸಿಎಂ ಆಗಬಹುದು ಎನ್ನುವ ಚರ್ಚೆಗಳು ನಡೆದಿವೆ.

    • Rajsthan CM ರಾಜಸ್ಥಾನದಲ್ಲಿ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಯಾರನ್ನು ವರಿಷ್ಠರು ಸಿಎಂ ಗಾದಿಗೆ ಕೂರಿಸಲಿದ್ದಾರೆ ಎನ್ನುವ ಕುತೂಹಲ ಇದ್ದೇ ಇದೆ. 
ರಾಜಸ್ಥಾನದಲ್ಲಿ ಯಾರು ಸಿಎಂ ಆಗಬಹುದು ಎನ್ನುವ ಚರ್ಚೆಗಳು ನಡೆದಿವೆ.
ರಾಜಸ್ಥಾನದಲ್ಲಿ ಯಾರು ಸಿಎಂ ಆಗಬಹುದು ಎನ್ನುವ ಚರ್ಚೆಗಳು ನಡೆದಿವೆ.

ರಾಜಸ್ಥಾನದಲ್ಲಿ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರ ಗದ್ದುಗೆ ಹಿಡಿದಿದೆ. ಐದು ವರ್ಷದ ಹಿಂದೆ ಆಡಳಿತ ವಿರೋಧಿ ಅಲೆ ಹಾಗೂ ನಾಯಕತ್ವ ಗೊಂದಲದಿಂದ ಅಧಿಕಾರವನ್ನು ಪಡೆಯಲು ಸಾಧ್ಯವಾಗಿದೆ. ಈಗ ಯಾರನ್ನು ಸಿಎಂ ಮಾಡಬಹುದು ಎನ್ನುವ ಚರ್ಚೆಗಳು ನಡೆದಿವೆ.

ಎರಡು ಬಾರಿ ಸಿಎಂ ಆಗಿದ್ದ ಹಿರಿಯ ನಾಯಕಿ ವಸುಂಧರಾ ರಾಜೇ ಅವರಿಗೆ ಮತ್ತೆ ಅವಕಾಶ ಸಿಗಲಿದೆಯಾ ಅಥವಾ ಹೊಸ ಮುಖಕ್ಕೆ ಮಣೆ ಹಾಕುತ್ತಾರೆಯೇ ಎನ್ನುವ ಚರ್ಚೆಗಳು ನಡೆದಿವೆ.

ರಾಜಸ್ಥಾನದಲ್ಲಿ ಯಾರು ಸಿಎಂ ಆಗಬಹುದು ಎನ್ನುವ ಕುರಿತು ಐದು ಪ್ರಮುಖ ಅಂಶಗಳು ಇಲ್ಲಿವೆ

  1. ರಾಜವಂಶಸ್ಥೆ ಹಾಗೂ ಎರಡು ಬಾರಿ ಸಿಎಂ ಆಗಿ ಪಕ್ಷದಲ್ಲಿ ಹಿರಿತನ ಹೊಂದಿರುವ ವಸುಂಧರಾ ರಾಜೇ ಅವರು ಕೊನೆಗೂ ಟಿಕೆಟ್‌ ಗಿಟ್ಟಿಸಿ ಗೆದ್ದು ಬಂದಿದ್ದಾರೆ. ಹಿರಿತನದ ಆಧಾರದ ಮೇಲೆ ತಮಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ಅವರ ಬೇಡಿಕೆ. ಆದರೆ ಅವರಿಗೀಗ 70 ವರ್ಷ. ಆರೋಗ್ಯವಾಗಿ ಗಟ್ಟಿ ಇದ್ದಾರೆ. ಪಕ್ಷದ ನಿಯಮದಂತೆ ಇನ್ನೂ ಐದು ವರ್ಷ ಅಧಿಕಾರದಲ್ಲಿ ಇರಬಹುದು ಎನ್ನುವ ಲೆಕ್ಕಾಚಾರದಲ್ಲಿ ಅವರಿದ್ಧಾರೆ. ಆದರೆ ವರಿಷ್ಠರ ತಲೆಯಲ್ಲಿ ಬೇರೆಯೇ ಇದೆ.
  2. ಮತ್ತೊಬ್ಬ ರಾಜವಂಶಸ್ಥೆ ಜೈಪುರ ರಾಯಲ್‌ ಕುಟುಂಬದ ದಿಯಾಕುಮಾರಿ ಅವರು ಈಗಾಗಲೇ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಎರಡೂ ಕಡೆ ಗೆದ್ದಿದ್ದಾರೆ. ಅದರಲ್ಲೂ 2019 ರ ಲೋಕಸಭೆ ಚುನಾವಣೆಯಲ್ಲಿ 5.51 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. 52 ವರ್ಷದ ದಿಯಾ ಕುಮಾರಿ ಈಗಲೂ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ರಾಜವಂಶಸ್ಥೆ ಹಾಗೂ ಯುವ ನಾಯಕಿಗೆ ಅವಕಾಶ ಕೊಟ್ಟರೆ ಹೇಗೆ ಎನ್ನುವ ಚರ್ಚೆಗಳು ವರಿಷ್ಠರ ಹಂತದಲ್ಲಿ ನಡೆದಿವೆ. ರಾಜವಂಶಸ್ಥೆ ಹಾಗೂ ಮಹಿಳೆ ಎಂಬ ಕಾರಣ ನೀಡಿ ವಸುಂಧರಾ ರಾಜೇ ಅವರನ್ನು ದೂರವಿರಿಸಬಹುದು ಎನ್ನುವ ಲೆಕ್ಕಾಚಾರಗಳೂ ಇವೆ.
  3. ಕೇಂದ್ರದಲ್ಲಿ ಜಲಶಕ್ತಿ ಸಚಿವರಾಗಿರುವ ಗಜೇಂದ್ರ ಸಿಂಗ್‌ ಶೇಖಾವತ್‌ ಹೆಸರು ಈ ಬಾರಿ ಪ್ರಬಲವಾಗಿದೆ. ಏಕೆಂದರೆ ರಾಜಸ್ಥಾನ ಸಿಎಂ ಆಗಿದ್ದ ಅಶೋಕ್‌ ಗೆಹ್ಲೋಟ್‌ ಅವರನ್ನು ಪ್ರಬಲವಾಗಿ ಎದುರಿಸಿದ್ದು ಶೇಖಾವತ್‌. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಶೋಕ್‌ ಗೆಹ್ಲೋಟ್‌ ಪುತ್ರ ವೈಭವ್‌ ಗೆಹ್ಲೋಟ್‌ ಸೋಲಿಸಿದ್ದು ಇದೇ ಶೇಖಾವತ್‌. ಈ ಚುನಾವಣೆಯಲ್ಲಿಯೂ ಪ್ರವಾಸ ಮಾಡಿ ಪಕ್ಷ ಸಂಘಟಿಸಿರುವುದು ವರಿಷ್ಠರ ಗಮನದಲ್ಲಿದೆ.
  4. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ಮಹಾಂತ ಬಾಲಕನಾಥ ಯೋಗಿ ಅವರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್‌ ಮಾದರಿಯಲ್ಲೇ ಇವರಿಗೆ ಅವಕಾಶ ಮಾಡಿಕೊಟ್ಟರೆ ಹೇಗೆ ಎನ್ನುವ ಚರ್ಚೆಗಳು ಕೂಡ ಇವೆ. ಇವರೊಟ್ಟಿಗೆ ಬಿಜೆಪಿ ರಾಜ್ಯ ಅಧ್ಯಕ್ಷ ಸಿ.ಪಿ.ಜೋಶಿ, ಹಿರಿಯ ಬಿಜೆಪಿ ನಾಯಕ ಕಿರೋಡಿಮಾಲ್‌ ಮೀನಾ ಹೆಸರು ಕೂಡ ಇದೆ.
  5. ಇತ್ತಿಚೀನ ಲೋಕನೀತಿ ಸಿಎಸ್‌ಡಿಎಸ್‌ ಸರ್ವೇಯಲ್ಲಿ ವಸುಂಧರಾ ಅವರ ಹೆಸರೇ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿದೆ. ಅವರನ್ನು ಬಿಟ್ಟರೆ ಮಹಾಂತ ಬಾಲಕನಾಥ ಯೋಗಿ ಹಾಗೂ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಹೆಸರು ಮುಂಚೂಣಿಯಲ್ಲಿವೆ. ವರಿಷ್ಠರು ಇಂತಹ ಸಮೀಕ್ಷೆಗಳನ್ನೂ ಗಮನಿಸಿ ನಿರ್ಧರಿಸಬಹುದು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ