Rajasthan Assembly elections: ರಾಜಸ್ಥಾನ ಮತದಾರರ ಮನದಾಳ: ಮೂರು ದಶಕದಿಂದ ಕಾಂಗ್ರೆಸ್- ಬಿಜೆಪಿ ನಡುವೇ ಅಧಿಕಾರ ಅದಲು ಬದಲು
Dec 03, 2023 08:30 AM IST
ರಾಜಸ್ಥಾನದಲ್ಲಿ ಮೂರು ದಶಕದಿಂದ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಅಧಿಕಾರ ಹಂಚಿಕೆ ಐದು ವರ್ಷಕ್ಕೊಮ್ಮೆ ನಡೆದಿದೆ.
- Rajasthan voters two party love ರಾಜಸ್ಥಾನದಲ್ಲಿ ಒಂದೇ ಪಕ್ಷಕ್ಕೆ ಅಧಿಕಾರ ಕೊಡುವುದನ್ನು ಮೂರು ದಶಕದಿಂದ ಮತದಾರ ನಿಲ್ಲಿಸಿದ್ಧಾರೆ. ಒಮ್ಮೆ ಕಾಂಗ್ರೆಸ್ ನಂತರ ಬಿಜೆಪಿಗೆ. ಈ ಬಾರಿ ಕಾಂಗ್ರೆಸ್ ಮುಗಿಯಿತು. ಬಿಜೆಪಿಗೆ ಅಧಿಕಾರ ಸಿಗಲಿದೆಯೇ ಎನ್ನುವುದನ್ನು ಫಲಿತಾಂಶ ತಿಳಿಸಲಿದೆ.
ಜೈಪುರ: ರಾಜಸ್ಥಾನದ ಚುನಾವಣೆಗಳ ಇತಿಹಾಸ ನೋಡಿದರೆ ಅಲ್ಲಿನ ಮತದಾರರು ಒಂದು ಪಕ್ಷಕ್ಕೆ ಅಧಿಕಾರ ನೀಡುವ ಪದ್ದತಿಯನ್ನು ಮೂರು ದಶಕದಿಂದ ನಿಲ್ಲಿಸಿದ್ದಾರೆ.
ಹಿಂದೆಲ್ಲಾ ಕಾಂಗ್ರೆಸ್ ಪಕ್ಷವೇ ಪ್ರಬಲವಾಗಿದ್ದರಿಂದ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್‌ನ ಆಡಳಿತವೇ ಇತ್ತು. ಅದೇ ರೀತಿ ರಾಜಸ್ಥಾನದಲ್ಲೂ ಮೊದಲ ಎರಡೂವರೆ ದಶಕದ ಕಾಂಗ್ರೆಸ್‌ನದ್ದೇ ಸಾಮ್ರಾಜ್ಯ. ಜನತಾಪಕ್ಷವಿದ್ದರೂ ಅಧಿಕಾರ ಹಿಡಿಯುವಷ್ಟು ಸ್ಥಾನ ಪಡೆಯುತ್ತಿರಲಿಲ್ಲ. ಕಾಂಗ್ರೆಸ್ ಗ್ರಾಮ ಮಟ್ಟಕ್ಕೂ ಬೇರು ಬಿಟ್ಟಿದ್ದರಿಂದ ಅಧಿಕಾರ ಹಿಡಿಯಲು ಸುಲಭವಾಗಿತ್ತು.
ಕಾಂಗ್ರೆಸ್ ಸತತ ಆಡಳಿತದ ಪರಂಪರೆಯನ್ನು ಮುರಿದಿದ್ದು ಜನತಾಪಕ್ಷ 1977ರಲ್ಲಿ ಮೊದಲ ಬಾರಿ ಕಾಂಗ್ರೆಸ್ ಹಿಂದಿಕ್ಕಿ ಅಧಿಕಾರಕ್ಕೆ ಬಂದಿತು. ಆದರೂ ಕಾಂಗ್ರೆಸ್ ಪ್ರಭಾವದ ನಡುವೆ ಪೂರ್ಣಾವಧಿ ಮುಗಿಸಲು ಜನತಾಪಕ್ಷಕ್ಕೆ ಆಗಲೇ ಇಲ್ಲ. ಮತ್ತೆ ಎರಡು ಅವಧಿ ಕಾಂಗ್ರೆಸ್‌ನದ್ದೇ ಪಾರುಪತ್ಯ. ಆಗ ಹತ್ತು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿತ್ತು.
1990ರಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತ್ತು. ಮೂರು ವರ್ಷ ಅಧಿಕಾರದಲ್ಲಿದ್ದು ಮತ್ತೆ ಚುನಾವಣೆ ನಡೆದಾಗ ಜನ ಐದು ವರ್ಷ ಅಧಿಕಾರವನ್ನು ನೀಡಿದ್ದರು. ಅಂದರೆ ಮೊದಲ ಬಾರಿಗೆ ಸತತ ಎಂಟು ವರ್ಷ ಆಡಳಿತ ಹಿಡಿದಿತ್ತು ಬಿಜೆಪಿ. ಅಲ್ಲಿಂದ ಯಾರಿಗೂ ಎರಡನೇ ಬಾರಿಗೆ ಅಧಿಕಾರವನ್ನು ನೀಡಿಯೇ ಇಲ್ಲ ರಾಜಸ್ಥಾನದ ಮತದಾರ.
1998ರಲ್ಲಿ ಕಾಂಗ್ರೆಸ್‌ಗೆ 153 ಸ್ಥಾನದೊಂದಿಗೆ ಭಾರೀ ಬಹುಮತ ದೊರೆತಾದ ಅಶೋಕ್ ಗೆಹ್ಲೋಟ್‌ಗೆ ಸಿಎಂ ಗಾದಿ ದೊರೆಯಿತು.
2003ರ ವಿಧಾನಸಭೆ ಚುನಾವಣೆಯಲ್ಲಿ ಮತದಾರ ಬಿಜೆಪಿಗೆ ಅಧಿಕಾರ ನೀಡಿದ್ದ. ಆಗ ರಾಜ್ಯದ ಮೊದಲ ಮಹಿಳಾ ಸಿಎಂ ಬಂದಿದ್ದರು. ವಸುಂಧರಾ ರಾಜೇಗೆ ಸಿಎಂ ಗಾದಿ ಒಲಿಯಿತು.
2008ರಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಲಭಿಸಿ ಅಶೋಕ್ ಗೆಹ್ಲೋಟ್ ಸಿಎಂ ಆದರು.
2013ರಲ್ಲಿ ಕಾಂಗ್ರೆಸ್ ಅನ್ನು ಭಾರೀ ಅಂತರದಿಂದ ಸೋಲಿಸಿ ಬಿಜೆಪಿಗೆ ಬಲ ತುಂಬಿದರು ಮತದಾರರು. ವಸುಂಧರಾ ರಾಜೇ ದಾಖಲೆ ನಿರ್ಮಿಸಿದ್ದರಿಂದ ಸಿಎಂ ಸ್ಥಾನ ಅನಾಯಾಸವಾಗಿ ಸಿಕ್ಕಿತು.
ಆದರೆ 2018ರಲ್ಲಿ ಬಿಜೆಪಿಗೆ ಅದೇ ಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್‌ಗೆ ಜನ ಅಧಿಕಾರ ನೀಡಿದರು.
ಅಶೋಕ್ ಗೆಹ್ಲೋಟ್ ಸಿಎಂ ಆದರು. ಈ ಬಾರಿ ನಾಯಕತ್ವದ ಸಂಘರ್ಷದ ನಡುವೆಯೂ ಮತ್ತೆ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಎದುರಿಸಿವೆ. ಇರುವುದೇ ಎರಡು ಪಕ್ಷಗಳು. ಅಧಿಕಾರ ಯಾರಿಗೆ ಎನ್ನುವುದನ್ನು ಫಲಿತಾಂಶ ಬಹಿರಂಗಪಡಿಸಲಿವೆ