logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tamilnadu Rains: ತಮಿಳುನಾಡಲ್ಲಿ ಮಳೆ ಬಿಡುವು, ಪ್ರಧಾನಿ ಭೇಟಿ ಮಾಡಿ ಪರಿಸ್ಥಿತಿ ವಿವರಿಸಿದ ಸಿಎಂ ಸ್ಟಾಲಿನ್‌

Tamilnadu Rains: ತಮಿಳುನಾಡಲ್ಲಿ ಮಳೆ ಬಿಡುವು, ಪ್ರಧಾನಿ ಭೇಟಿ ಮಾಡಿ ಪರಿಸ್ಥಿತಿ ವಿವರಿಸಿದ ಸಿಎಂ ಸ್ಟಾಲಿನ್‌

HT Kannada Desk HT Kannada

Dec 20, 2023 08:14 AM IST

google News

ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಭಾರೀ ಮಳೆಯಿಂದ ಹೆಚ್ಚಿನ ಅನಾಹುತ ಆಗಿದ್ದು. ಹೆಚ್ಚಿನ ಪರಿಹಾರಕ್ಕೆ ಸಿಎಂ ಎಂ,ಕೆ.ಸ್ಟಾಲಿನ್‌ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

    • Tamilnadu rain effect ತಮಿಳುನಾಡಿನಲ್ಲಿ( TamilNadu Rains) ಉಂಟಾದ ಮಳೆ ಹಾನಿ ರಕ್ಷಣಾ ಚಟುವಟಿಕೆಗಳ ನಡುವೆ ಸಿಎಂ ಎಂ.ಕೆ.ಸ್ಟಾಲಿನ್‌( CM Stalin) ಅವರು ಪ್ರಧಾನಿ ನರೇಂದ್ರಮೋದಿ( PM Narendra Modi) ಅವರನ್ನು ಭೇಟಿ ಮಾಡಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿದ್ದಾರೆ.
ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಭಾರೀ ಮಳೆಯಿಂದ ಹೆಚ್ಚಿನ ಅನಾಹುತ ಆಗಿದ್ದು. ಹೆಚ್ಚಿನ ಪರಿಹಾರಕ್ಕೆ ಸಿಎಂ ಎಂ,ಕೆ.ಸ್ಟಾಲಿನ್‌ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಭಾರೀ ಮಳೆಯಿಂದ ಹೆಚ್ಚಿನ ಅನಾಹುತ ಆಗಿದ್ದು. ಹೆಚ್ಚಿನ ಪರಿಹಾರಕ್ಕೆ ಸಿಎಂ ಎಂ,ಕೆ.ಸ್ಟಾಲಿನ್‌ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ಚೆನ್ನೈ: ದಕ್ಷಿಣ ತಮಿಳುನಾಡಿನ ನಾಲ್ಕೈದು ಜಿಲ್ಲೆಗಳಲ್ಲಿ ಎಡಬಿಡದೇ ಎರಡು ದಿನ ಸುರಿದ ಮಳೆ ಈಗ ತಗ್ಗಿದ್ದರೂ ಪ್ರವಾಹದ ಪ್ರಮಾಣ ಇನ್ನೂ ಹಾಗೆಯೇ ಇದೆ.

ತೂತ್ತುಕುಡಿ, ತಿರುನೆಲ್ವೇಲಿ, ಟುಟಿಕಾರಿನ್‌, ಕೊಯಮತ್ತೂರು, ತೆಂಕಾಸಿ ಸಹಿತ ಹಲವು ಭಾಗಗಳಲ್ಲಿ ಮಳೆಯಿಂದ ಭಾರೀ ಹಾನಿಯಾಗಿದೆ. ರಕ್ಷಣಾ ಕಾರ್ಯ ಬುಧವಾರವೂ ಮುಂದುವರಿದಿದೆ.

20 ದಿನಗಳ ಅಂತರದಲ್ಲೇ ಭಾರೀ ಮಳೆಯಿಂದ ತಮಿಳುನಾಡಿನಲ್ಲಿ ಹಾನಿ ಹೆಚ್ಚಾಗಿರುವುದರಿಂದ ಖುದ್ದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ರಾತ್ರಿ ಭೇಟಿ ಮಾಡಿ ಪರಿಸ್ಥಿತಿ ವಿವರಿಸಿ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ಚೆನ್ನೈ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸುರಿದಿದ್ದ ಭಾರೀ ಮಳೆಯಿಂದ 7ಸಾವಿರ ಕೋಟಿ ರೂ. ನೆರವನ್ನು ನೀಡುವಂತೆ ಕೋರಲಾಗಿತ್ತು. ಇದಲ್ಲದೇ 12 ಕೋಟಿ ರೂ.ಗಳನ್ನು ಆಸ್ತಿಪಾಸ್ತಿ, ರಸ್ತೆಗಳ ದುರಸ್ಥಿಗೆ ಹೆಚ್ಚುವರಿಯಾಗಿ ಕೋರಲಾಗಿತ್ತು. ಈಗಲೂ ಭಾರಿ ಹಾನಿಯಾಗಿದ್ದು ಎನ್‌ಡಿಆರ್‌ಎಫ್‌ನಿಂದ ತಕ್ಷಣಕ್ಕೆ 2 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಸ್ಟಾಲಿನ್‌ ಮನವಿ ಮಾಡಿದರು.

ಭಾರೀ ಮಳೆಯಿಂದ ತಿರುನೆಲ್ವೇಲಿ ಹಾಗೂ ಟುಟಿಕಾರಿನ್‌ ಜಿಲ್ಲೆಗಳಲ್ಲಿಯೇ ಅಧಿಕ ಹಾನಿಯಾಗಿದೆ. ಇಲ್ಲಿ 40 ಲಕ್ಷಕ್ಕೂ ಅಧಿಕ ಮಂದಿ ತೊಂದರೆಗೆ ಒಳಗಾಗಿದ್ದಾರೆ. ಮನೆಗಳು ಹಾನಿಯಾಗಿ ಜನ ಪುನರ್ವಸತಿ ಕೇಂದ್ರಗಳಲ್ಲಿ ಆಸರೆ ಪಡೆದಿದ್ದಾರೆ. ಇನ್ನೇನು ಕಟಾವಿಗೆ ಬಂದಿದ್ದ ಭತ್ತ ಸೇರಿದಂತೆ ಇತಡರೆ ಫಸಲುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಭಾರೀ ಮಳೆ ಪರಿಣಾಮವಾಗಿ ಟುಟಿಕಾರಿನ್‌ ಹಾಗೂ ಶ್ರೀವೈಕುಂಠ ನಗರಗಳಂತೂ ಅಕ್ಷರಶಃ ನಡುಗಡ್ಡೆಗಳಾಗಿ ಪರಿವರ್ತನೆಗೊಂಡಿದ್ದವು.

ಪಕ್ಕದಲ್ಲೇ ಹರಿಯುವ ತಮಿರಬರಣಿ ನದಿ ಮಿತಿ ಮೀರಿದ್ದರಿಂದ ಎರಡೂ ನಗರಗಳಿಗೆ ನೀರು ನುಗ್ಗಿತು. ಇದಲ್ಲದೇ ತೂತುಕುಡಿ ಸಹಿತ ಹಲವು ಭಾಗಗಳಲ್ಲಿ ಹೆದ್ದಾರಿಗಳೂ ಹೊಳೆಗಳಾಗಿ ರೂಪುಗೊಂಡಿದ್ದವು.

ಈ ಭಾಗದಲ್ಲಿ ಇನ್ನೂ ಪ್ರವಾಹದ ಸ್ಥಿತಿಯಿದ್ದು, ಮನೆ, ದೇವಸ್ಥಾನ, ಆಸ್ಪತ್ರೆಗಳಿಗೂ ನೀರು ನುಗ್ಗಿದೆ. ನೀರು ಹೊರ ತೆಗೆಯುವ ಕೆಲಸ ನಡೆದಿದೆ. 1,100 ಕ್ಕೂ ಅಧಿಕ ವಿವಿಧ ರಕ್ಷಣಾ ಪಡೆಗಳ ಸಿಬ್ಬಂದಿ ರಕ್ಷಣೆಯಲ್ಲಿ ತೊಡಗಿದ್ದಾರೆ.

ಸೇನಾಪಡೆಗಳ 168 ಮಂದಿಯೂ ಕೈ ಜೋಡಿಸಿದ್ದಾರೆ. ದೋಣಿಗಳು,. ಮೋಟಾರ್‌ ಪಂಪ್‌ಗಳನ್ನು ಬಳಸಿ ಜನರ ರಕ್ಷಣೆ ಮುಂದುವರಿದಿದೆ. ಇದರೊಟ್ಟಿಗೆ ಮೊದಲ ಆದ್ಯತೆಯಾಗಿ ಹೆದ್ದಾರಿಗಳನ್ನು ಸರಿಪಡಿಸುವ ಕಾರ್ಯವೂ ಸದ್ಯದಲ್ಲೇ ಆರಂಭಗೊಳ್ಳಲಿದೆ.

ಸಂಪೂರ್ಣ ವ್ಯತ್ಯಯಗೊಂಡಿದ್ದ ಬಸ್‌ ಸೇವೆಯೂ ನಿಧಾನವಾಗಿ ಆರಂಭವಾಗುತ್ತಿದೆ. ರೈಲು ಮಾರ್ಗಗಳ ದುರಸ್ಥಿಯೂ ಸಾಗಿದ್ದು, ಕೆಲವು ರೈಲುಗಳ ಸಂಚಾರ ಮಾರ್ಗದಲ್ಲಿ ಬುಧವಾರವೂ ಬದಲಾವಣೆಯಾಗಲಿದೆ. ಶ್ರೀವೈಕುಂಠ ರೈಲ್ವೆ ನಿಲ್ದಾಣದಲ್ಲಿ ಸಿಲುಕಿದ್ದ ಬಹುತೇಕ ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ