logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Narendra Modi: ಇಸ್ಲಾಂ ಧರ್ಮದಲ್ಲಿ ತ್ರಿವಳಿ ತಲಾಖ್ ಅಗತ್ಯ ಸಿದ್ದಾಂತವಾಗಿದ್ದರೆ ಪಾಕಿಸ್ತಾನದಲ್ಲಿ ಯಾಕಿಲ್ಲ; ಪ್ರಧಾನಿ ಮೋದಿ ಪ್ರಶ್ನೆ

PM Narendra Modi: ಇಸ್ಲಾಂ ಧರ್ಮದಲ್ಲಿ ತ್ರಿವಳಿ ತಲಾಖ್ ಅಗತ್ಯ ಸಿದ್ದಾಂತವಾಗಿದ್ದರೆ ಪಾಕಿಸ್ತಾನದಲ್ಲಿ ಯಾಕಿಲ್ಲ; ಪ್ರಧಾನಿ ಮೋದಿ ಪ್ರಶ್ನೆ

HT Kannada Desk HT Kannada

Jun 27, 2023 03:27 PM IST

google News

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿ ಪ್ರದಾನಿ ನರೇಂದ್ರ ಮೋದಿ ಮಾತನಾಡಿದರು.

  • ತ್ರಿವಳಿ ತಲಾಖ್ ಇಸ್ಲಾಂ ಧರ್ಮದ ಅಗತ್ಯ ಸಿದ್ದಾಂತವಾಗಿದ್ದರೆ, ಪಾಕಿಸ್ತಾನ, ಇಂಡೋನೇಷ್ಯಾ ಹಾಗೂ ಬಾಂಗ್ಲಾದೇಶದಲ್ಲಿ ತ್ರಿವಳಿ ತಲಾಖ್ ಯಾಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ  ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿ ಪ್ರದಾನಿ ನರೇಂದ್ರ ಮೋದಿ ಮಾತನಾಡಿದರು.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿ ಪ್ರದಾನಿ ನರೇಂದ್ರ ಮೋದಿ ಮಾತನಾಡಿದರು.

ಭೋಪಾಲ್ (ಮಧ್ಯಪ್ರದೇಶ): ಅಮೆರಿಕ ಮತ್ತು ಈಜಿಪ್ಟ್ ಪ್ರವಾಸ ಮುಗಿಸಿ ಸ್ವದೇಶಕ್ಕೆ ವಾಪಸ್ ಆಗಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿಧಾನಸಭೆ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದಲ್ಲಿ (Madhya Pradesh) ಭರ್ಜರಿ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ.

ಭೋಪಾಲ್‌ನಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರುವ ಪ್ರಧಾನಿ ಮೋದಿ, ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಯ ಸುಳಿವು ನೀಡಿದ್ದಾರೆ.

ತ್ರಿವಳಿ ತಲಾಖ್ (Triple Talaq) ಇಸ್ಲಾಂ ಧರ್ಮದ ಅಗತ್ಯ ಸಿದ್ದಾಂತವಾಗಿದ್ದರೆ, ಪಾಕಿಸ್ತಾನ, ಇಂಡೋನೇಷ್ಯಾ ಹಾಗೂ ಬಾಂಗ್ಲಾದೇಶದಲ್ಲಿ ತ್ರಿವಳಿ ತಲಾಖ್ ಯಾಕಿಲ್ಲ, ಕುಟುಂಬ ಸದಸ್ಯರಿಗೆ ವಿಭಿನ್ನ ನಿಯಮಗಳು ಅನ್ವಯಿಸುತ್ತವೆಯೇ, ಇಂತಹ ಪರಿಸ್ಥಿತಿಯಲ್ಲಿ ಕುಟುಂಬವು ಸುಗಮವಾಗಿ ನಡೆಯಬಹುದೇ ಎಂದು ಪ್ರಶ್ನಿಸಿದ್ದಾರೆ.

ನಾವು ಈ ವಿಷಯವನ್ನು ಅಧ್ಯಯನ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ತ್ರಿವಳಿ ತಲಾಖ್ ಅನ್ನು ಬೆಂಬಲಿಸುವವರು ಮತಬ್ಯಾಂಕ್ ತುಷ್ಟೀಕರಣದ ರಾಜಕೀಯ ಮಾಡುತ್ತಿದ್ದಾರೆ. ಅವರು ನಮ್ಮ ಮುಸ್ಲಿಂ ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ. ತ್ರಿವಳಿ ತಲಾಖ್ ಕೇವಲ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ. ಮಗಳನ್ನು ಮದುವೆ ಮಾಡಿ 10 ವರ್ಷಗಳ ನಂತರ ಆಕೆ ವಾಪಸ್ ಬಂದರೆ ಕುಟುಂಬದ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿಕೊಳ್ಳಿ. ತ್ರಿವಳಿ ತಲಾಖ್ ಇಡೀ ಕುಟುಂಬಕ್ಕೆ ಹಾನಿ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮುಸ್ಲಿಂ ಬಾಹುಳ್ಯದ ದೇಶಗಳು ಕೂಡ ತ್ರಿವಳಿ ತಲಾಖ್ ಅನ್ನು ನಿಷೇಧಿಸಿವೆ. ನಾನು ಕಳೆದ ಕೆಲ ದಿನಗಳ ಹಿಂದಷ್ಟೇ ಈಜಿಪ್ಟ್‌ನಲ್ಲಿ ಇದ್ದೆ. ಈಜಿಪ್ಟ್‌ನಲ್ಲಿ ಶೇಕಡಾ 90ಕ್ಕಿಂತ ಹೆಚ್ಚಿನ ಜನರು ಸುನ್ನಿ ಸಮುದಾಯಕ್ಕೆ ಸೇರಿದವರು. ಇವರು 80 ರಿಂದ 90 ವರ್ಷಗಳ ಹಿಂದೆಯೇ ತ್ರಿವಳಿ ತಲಾಖ್ ಅನ್ನು ರದ್ು ಮಾಡಿದ್ದಾರೆ. ಇಸ್ಲಾಂ ಧರ್ಮದಲ್ಲಿ ತ್ರಿವಳಿ ತಲಾಖ್ ಅಗತ್ಯವೇ ಆಗಿದ್ದರೆ ಈ ದೇಶಗಳಲ್ಲಿ ಯಾಕೆ ತ್ರಿವಳಿ ತಲಾಖ್ ಇಲ್ಲ? ಜೋರ್ಡಾನ್, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಇಂಡೋನೇಷ್ಯಾದಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ತ್ರಿವಳಿ ತಲಾಖ್ ವಿಷಯವನ್ನು ಪ್ರಸ್ತಾಪಿಸಿ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಸುಳಿವು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಯಾವ ರಾಜಕೀಯ ಪಕ್ಷಗಳು ತಮ್ಮನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿವೆ ಎಂಬುದನ್ನು ಮುಸ್ಲಿಂ ಸಮುದಾಯದವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಜನರಿಗೆ ಎರಡು ವಿಭಿನ್ನ ನಿಮಯಗಳಿದ್ದರೆ ಕುಟುಂಬವು ಸರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ. ಇದರಿಂದಾಗಿ ದೇಶವು ಹೇಗೆ ಚಲಿಸುತ್ತೆ ಹೇಳಿ, ನಮ್ಮ ಸಂವಿಧಾನವೂ ಎಲ್ಲಾ ಜನರಿಗೆ ಸಮಾನ ಹಕ್ಕುಗಳ ಖಾತರಿಪಡಿಸುತ್ತದೆ. ಸುಪ್ರೀಂ ಕೋರ್ಟ್ ಕೂಡ ಸಾಮಾನ್ಯ ನಾಗರಿಕ ಸಂಹಿತೆಗಾಗಿ ಒತ್ತಾಯಿಸುತ್ತಿದೆ. ಆದರೆ ಮತದ ಹಸಿವುಳ್ಳ ಜನರು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇದಕ್ಕೂ ಮುನ್ನ ಭೋಪಾಲ್‌ನಲ್ಲಿ ಬೆಂಗಳೂರು-ಧಾರವಾಡ ಸೇರಿ ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಉದ್ಘಾಟಿಸಿದ ಬಳಿಕ ಮಾತನಾಡಿದರು. ಬಿಜೆಪಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಆದೇಶಗಳನ್ನು ನೀಡುವ ಪಕ್ಷವಲ್ಲ, ಬಿಜೆಪಿ ತಳಮಟ್ಟದ ಜನರಿಗಾಗಿ ಅವಿರತವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ ಪಕ್ಷಕ್ಕಿಂತ ದೇಶ ಮೊದಲು. ಬೂತ್ ಮಟ್ಟದಲ್ಲಿ ಘರ್ಷಣೆಗಳಿಗೆ ಸ್ಥಳವಿಲ್ಲ. ಜನರ ಸೇವೆಯೇ ಬೂತ್ ಮಟ್ಟದ ರಾಜಕಾರಣದ ಮಂತ್ರವಾಗಬೇಕು ಎಂದು ಪಕ್ಷದ ಕಾರ್ಯಕರ್ತರ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ