logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Naxalites Set Bus On Fire: ಪ್ರಯಾಣಿಕ ಬಸ್‌ ತಡೆದು ಬೆಂಕಿ ಹಚ್ಚಿದ 20-25 ನಕ್ಸಲರು, ದಾಂತೇವಾಡದಲ್ಲಿ ಘೋರ ಕೃತ್ಯ

Naxalites set bus on fire: ಪ್ರಯಾಣಿಕ ಬಸ್‌ ತಡೆದು ಬೆಂಕಿ ಹಚ್ಚಿದ 20-25 ನಕ್ಸಲರು, ದಾಂತೇವಾಡದಲ್ಲಿ ಘೋರ ಕೃತ್ಯ

HT Kannada Desk HT Kannada

Apr 01, 2023 02:20 PM IST

google News

Naxalites set bus on fire: ಪ್ರಯಾಣಿಕ ಬಸ್‌ ತಡೆದು ಬೆಂಕಿ ಹಚ್ಚಿದ 20-25 ನಕ್ಸಲರು

  • ಸುಮಾರು 20-25 ನಕ್ಸಲೀಯರು ಬಸ್‌ಗೆ ಬೆಂಕಿ ಹಚ್ಚಿದ್ದಾರೆ. ಮಲೆವಾಹಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Naxalites set bus on fire: ಪ್ರಯಾಣಿಕ ಬಸ್‌ ತಡೆದು ಬೆಂಕಿ ಹಚ್ಚಿದ 20-25 ನಕ್ಸಲರು
Naxalites set bus on fire: ಪ್ರಯಾಣಿಕ ಬಸ್‌ ತಡೆದು ಬೆಂಕಿ ಹಚ್ಚಿದ 20-25 ನಕ್ಸಲರು

ಛತ್ತೀಸ್‌ಗಢ: ಇಲ್ಲಿನ ದಾಂತೇವಾಡದ ಬರ್ಸೂರ್-ಪಲ್ಲಿ ಮಾರ್ಗದಲ್ಲಿ ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ನಡುವೆ ಸಂಚರಿಸುತ್ತಿದ್ದ ಪ್ರಯಾಣಿಕರ ಬಸ್‌ಗೆ ನಕ್ಸಲೀಯರು ಶನಿವಾರ ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ.

ಸುಮಾರು 20-25 ನಕ್ಸಲೀಯರು ಬಸ್‌ಗೆ ಬೆಂಕಿ ಹಚ್ಚಿದ್ದಾರೆ. ಮಲೆವಾಹಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ದಾಂತೇವಾಡ ಪೊಲೀಸರು ಖಚಿತಪಡಿಸಿದ್ದಾರೆ.

"ಘಟನೆಯ ಮಾಹಿತಿ ದೊರಕಿದ ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಪ್ರಯಾಣಿಕರನ್ನು ಅವರ ನಿಗದಿತ ಸ್ಥಳಗಳಿಗೆ ತಲುಪಿಸಲಾಗುತ್ತಿದೆ. ಬಂದ್‌ ಆಗಿದ್ದ ರಸ್ತೆಯನ್ನು ಮತ್ತೆ ತೆರೆಯಲಾಗಿದ್ದು, ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ" ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಅಡ್ಡಲ್ ಎಸ್‌ಪಿ) ಆರ್ ಕೆ ಬರ್ಮನ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ನಕ್ಸಲರ ಗುಂಪು ಬಸ್‌ ತಡೆದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚುವ ಮೊದಲು ಪ್ರಯಾಣಿಕರನ್ನು ಕೆಳಕ್ಕೆ ಇಳಿಸಿದ್ದಾರೆ. ಖಾಸಗಿ ಪ್ಯಾಸೆಂಜರ್ ಬಸ್ ನಾರಾಯಣಪುರ ಪಟ್ಟಣದಿಂದ ದಾಂತೇವಾಡಕ್ಕೆ ತೆರಳುತ್ತಿದ್ದಾಗ ನಕ್ಸಲರು ತಡೆದು ಈ ಕೃತ್ಯ ಎಸಗಿದ್ದಾರೆ.

"ಸುಮಾರು ಎರಡು ಡಜನ್ ಮಾವೋವಾದಿಗಳು ಬಸ್‌ ತಡೆದಿದ್ದಾರೆ. ಅವರಲ್ಲಿ ಕೆಲವರು ಶಸ್ತ್ರಸಜ್ಜಿತರಾಗಿದ್ದರು. ಬಸ್‌ ನಿಲ್ಲಿಸಿದ ಅವರು ಪ್ರಯಾಣಿಕರನ್ನು ಕೆಳಕ್ಕೆ ಇಳಿಸಿದರು. ಬಳಿಕ ಬಸ್‌ಗೆ ಬೆಂಕಿ ಹಚ್ಚಿದ್ದಾರೆ" ಎಂದು ದಾಂತೇವಾಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್ ಕೆ ಬರ್ಮನ್ ತಿಳಿಸಿದ್ದಾರೆ.

ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ. ಬಸ್‌ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ನಕ್ಸಲಿಯರನ್ನು ಬಂಧಿಸಲು ಕೊಂಬಿಂಗ್‌ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಘಟನೆ ನಡೆದ ಸುತ್ತಲಿನ ಅರೆಸೇನಾ ಶಿಬಿರಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಛತ್ತೀಸ್‌ಗಢದಲ್ಲಿ ನಕ್ಸಲರು ಕಳೆದ ವಾರ ಅಳವಡಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಪೋಟಗೊಂಡು ಬಿಎಸ್‌ಎಫ್‌ನ ಇಬ್ಬರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದರು. ಕಂಕೇರ್‌ನಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಚಿಲ್ಪಾರಸ್‌ನಲ್ಲಿರುವ ಬಿಎಸ್‌ಎಫ್‌ ಶಿಬಿರದ ಬಳಿ ಈ ಘಟನೆ ನಡೆದಿತ್ತು. ಬಿಎಸ್‌ಎಫ್‌ ಯೋಧರು ರಸ್ತೆ ಭದ್ರತೆ ಪರಿಶೀಲನೆ ನಡೆಸುತ್ತಿದ್ದಾಗ ಐಇಡಿ ಸ್ಪೋಟಗೊಂಡಿತ್ತು. ಕೊಯಲಿಬೆಡ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

ಇದಕ್ಕೂ ಹಿಂದಿನ ದಿನ ಛತ್ತಿಸ್‌ಘಡದ ಬಿಜಾಪುರ ಜಿಲ್ಲೆಯಲ್ಲೂ ಐಇಡಿ ಸ್ಪೋಟಗೊಂಡಿತ್ತು. ಘಟನೆಯಲ್ಲಿ ಛತ್ತೀಸ್‌ಗಢ ಸಶಸ್ತ್ರ ಪಡೆ (ಸಿಎಎಫ್‌) ಸಹಾಯಕ ಪ್ಲಟೂನ್‌ ಕಮಾಂಡರ್‌ವೊಬ್ಬರು ಮೃತಪಟ್ಟಿದ್ದರು.

ಕಳೆದ ತಿಂಗಳು ಕರ್ನಾಟಕದ ಕೊಡಗು-ಕೇರಳ ಗಡಿ ಗ್ರಾಮದಲ್ಲಿ ನಕ್ಸಲ್‌ ತಂಡ ಪ್ರತ್ಯಕ್ಷಗೊಂಡು ಆತಂಕ ಮೂಡಿಸಿತ್ತು .ದಕ್ಷಿಣ ಕೊಡಗಿನ ಬಿರುನಾಣಿಯಿಂದ 15 ಕಿ.ಮೀ. ದೂರದಲ್ಲಿರುವ ಗ್ರಾಮದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ಐವರು ಬಂದೂಕುಧಾರಿ ಮಾವೋವಾದಿಗಳ ಗುಂಪಿನಲ್ಲಿ ಈ ಓರ್ವ ಮಹಿಳೆ ಹಾಗೂ ನಾಲ್ವರು ಪುರುಷರಿದ್ದರು ಎಂದು ವರದಿಗಳು ತಿಳಿಸಿವೆ. ನಕ್ಸಲರು ರಾತ್ರಿ 7.30ಕ್ಕೆ ರಾಜೀವ್‌ ಎಂಬವರ ಮನೆಗೆ ಬಂದಿದ್ದರು. ರಾಜೀವ್‌ ಮನೆಯಲ್ಲೇ ಊಟ ಮಾಡಿ 9.30ರ ಬಳಿಕ ತೆರಳಿದ್ದಾರೆ. ಕಣ್ಣೂರು ಜಿಲ್ಲೆ ಆರಳಾಂ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ