Odisha Train Accident: ಒಡಿಶಾ ರೈಲು ದುರಂತ; ವೈದ್ಯರ ಕೊರತೆ ನಡುವೆಯೇ ಗಾಯಾಳುಗಳಿಗೆ ಚಿಕಿತ್ಸೆ, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಇಳಿಕೆ
Jun 04, 2023 10:05 AM IST
ಒಡಿಶಾ ರೈಲು ದುರಂತದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 294ಕ್ಕೆ ಏರಿಕೆಯಾಗಿದೆ.
ಒಡಿಶಾದಲ್ಲಿ ಕಳೆದ ಶುಕ್ರವಾರ (ಜೂನ್ 2) ನಡೆದ ಭೀಕರ ರೈಲು ದುರಂತದಲ್ಲಿ ಈವರೆಗೆ 294 ಮಂದಿ ಮೃತಪಟ್ಟಿದ್ದು, 1,110 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಬಾಲಸೋರ್ ಆಸ್ಪತ್ರೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಸೋರ್(ಒಡಿಶಾ): ಭಾರತದ ಇತಿಹಾಸದಲ್ಲೇ 28 ವರ್ಷಗಳ ಬಳಿಕ ಭೀಕರ ರೈಲು ಅಪಘಾತದಲ್ಲಿ (Odisha Train Accident) ಕಳೆದ ಶುಕ್ರವಾರ (ಜೂನ್ 2) ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ್ದು, ಮೃತರ ಸಂಖ್ಯೆ 294ಕ್ಕೆ ಏರಿಕೆಯಾಗಿದ್ದು, ಗಾಯಾಳು ಸ್ಥಿತಿ ಹೇಳತೀರದ್ದಾಗಿದೆ.
ಭೀಕರ ರೈಲು ದುರಂತ ನಂತರದ ಅಲ್ಲಿನ ಆಸ್ಪತ್ರೆಗಳಲ್ಲಿನ ಪರಿಸ್ಥಿಯನ್ನು ಒಡಿಶಾದ ಜನರು ಹಿಂದೆಂದೂ ಕಂಡಿರಲಿಲ್ಲ. ಬಾಲಸೋರ್ ಜಿಲ್ಲಾ ಆಸ್ಪತ್ರೆ ಮತ್ತು ಸಮೀಪದ ಸರ್ಕಾರಿ ಸೊರೊ ಆಸ್ಪತ್ರೆಯಲ್ಲಿ ಹೆಚ್ಚಿನ ಗಾಯಾಳುಗಳನ್ನು ದಾಖಲಿಸಲಾಗಿದೆ.
ಕಿಕ್ಕಿರಿದು ತುಂಬಿರುವ ಈ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಒಂದು ಕೊಠಡಿಯಿಂದ ಇನ್ನೊಂದು ಕೊಠಡಿ ಹೋಗಿ ಓಡಾಡಿ ಕೆಲವು ಗಂಟೆಗಳ ಕಾಲ ಚಿಕಿತ್ಸೆ ನೀಡುತ್ತಿದ್ದಾರೆ. ಹಿಂದಿ ಅಥವಾ ಒರಿಯಾ ಭಾಷೆ ಬಾರದ ಗಾಯಾಳುಗಳೊಂದಿಗೆ ತಮ್ಮದೇ ಸಂವಾಹನದೊಂದಿಗೆ ಧೈರ್ಯ ತುಂಬಿ ಚಿಕಿತ್ಸೆ ನೀಡುತ್ತಿದ್ದಾರೆ.
ಬಾಲಸೋರ್ ಜಿಲ್ಲಾ ಕೇಂದ್ರದ ಆಸ್ಪತ್ರೆಯಾಗಿದ್ದರೂ ಇಂತಹ ದೊಡ್ಡ ದುರಂತವನ್ನು ತಕ್ಷಣಕ್ಕೆ ನಿಭಾಯಿಸಲು ಅಲ್ಲಿನ ಸಿಬ್ಬಂದಿಗೆ ಕಷ್ಟವಾಗಿದೆ. ಮತ್ತೊಂದೆಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ರೈಲುಗಳ ಅಪಘಾತ ನಡೆದ ಸ್ಥಳದ ಸಮೀಪ ಇರುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಗಾಯಾಗಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇಲ್ಲಿ ಇಬ್ಬರಿಗಿಂತ ಹೆಚ್ಚು ವೈದ್ಯರು ಇರುವುದಿಲ್ಲ. ಹಾಗಾಗಿ ಪರಿಸ್ಥಿತಿ ಹೇಗಿರುತ್ತೆ ಎಂದು ನಾನು ಊಹಿಸಬಲ್ಲೆ ಎಂದು ಬಾಲಸೋರ್ ಜಿಲ್ಲಾಸ್ಪತ್ರೆಯ ಹೆಚ್ಚುವರಿ ಜಿಲ್ಲಾ ವೈದ್ಯಾಧಿಕಾರಿ ಡಾ ಮೃತ್ಯುಂಜಯ್ ಮಿಶ್ರಾ ಹೇಳಿದ್ದಾರೆ.
ರೈಲು ದುರಂತದ ಬಗ್ಗೆ ಮಾತನಾಡಿರುವ ಡಾ ಮಿಶ್ರಾ, ನಾನು ಹಲವು ದಶಕಗಳಿಂದ ವೈದ್ಯಕೀಯ ವೃತ್ತಿಯಲ್ಲಿ ಇದ್ದೇನೆ. ಆದರೆ ನನ್ನ ಜೀವನದಲ್ಲೇ ಇಂತಹ ದುರಂತವನ್ನು ನೋಡಿಲ್ಲ ಎಂದಿದ್ದಾರೆ.
ಅಪಘಾತ ನಡೆದ ಕೆಲವೇ ಗಂಟೆಗಳಲ್ಲಿ ಗಾಯಾಗಳುಗಳನ್ನು ತರಲಾಯಿತು. ಶುಕ್ರವಾರ ರಾತ್ರಿ 10 ಗಂಟೆಗೆ ಬಾಲಸೋರ್ ಜಿಲ್ಲಾಸ್ಪತ್ರೆಗೆ ಮೊದಲ ಹಂತದ ಮೃತದೇಹಗಳನ್ನು ತರಲಾಯಿತು. ಇದನ್ನು ಗಮನಿಸಿ ದೂಡ್ಡ ಮತ್ತು ಸಣ್ಣ ಆಸ್ಪತ್ರೆಗಳೂ ಕಾರ್ಯನಿವರ್ಹಿಸಬೇಕೆಂಬುದು ಮನದಟ್ಟಾಯಿತು. ಪ್ರಮಾಣಿಕವಾಗಿ ಹೇಳಬೇಕೆಂದರೆ ನಾವು ಮೊದಲು ಇಷ್ಟೊಂದು ಪ್ರಮಾಣದ ಗಾಯಾಳುಗಳಿಗೆ ಚಿಕಿತ್ಸೆ ನೀಡುವುದಕ್ಕೆ ಸಿದ್ಧರಿರಲಿಲ್ಲ. ಆದರೆ ನಮ್ಮ ಸಿಬ್ಬಂದಿ ರಾತ್ರಿಇಡೀ ಕೆಲಸ ಮಾಡಿದ್ದಾರೆ. ಎಲ್ಲರಿಗೂ ವೈದ್ಯಕೀಯ ನೆರವು ನೀಡಿದ್ದಾರೆ ಎಂದು ಹೇಳಿದ್ದಾರೆ.
500 ಯೂನಿಟ್ ರಕ್ತ ಸಂಗ್ರಹಿಸಿದ್ದೇವೆ
ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನ ಮಾಡಲು ಮುಂದಾಗಿರುರವುದು ನೋಡಿ ನಮಗೆ ಆಶ್ಚರ್ಯ ಆಯಿತು. ಇಡೀ ರಾತ್ರಿ ಸುಮಾರು 500 ಯೂನಿಟ್ ರಕ್ತವನ್ನು ಸಂಗ್ರಹಿಸಿದ್ದೇವೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ರಕ್ತದಾನ ಮಾಡುವಂತೆ ಜನರನ್ನು ಮನವೊಲಿಸುವುದು ಕಷ್ಟಕರವಾಗಿದೆ. ಆದರೆ ಜನ ಸ್ವಇಚ್ಛೆಯಿಂದ ಬಂದು ರಕ್ತದಾನ ಮಾಡುತ್ತಿದ್ದಾರೆ ಎಂದು ಡಾ ಮಿಶ್ರಾ ಹೇಳಿದ್ದಾರೆ.
ಹೆಚ್ಚಿನ ಮೃತ ದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಅಪಘಾತದಿಂದ ಬಾಲಸೋರ್‌ನ ರೈಲು ಮಾರ್ಗದಲ್ಲಿ ರೈಲು ಸೇವೆಗಳನ್ನು ರದ್ದು ಮಾಡಲಾಗಿದೆ. ಕೆಲವೊಂದು ತಡವಾಗಿ ಸಂಚಾರ ಆರಂಭಿಸುತ್ತವೆ. ಇದರಿಂದ ಬಾಲಸೋರ್‌ಗೆ ಹೋಗುವುದಕ್ಕೆ ಸಮಸ್ಯೆಯಾಗಿದೆ ಎಂದು ಒಡಿಶಾ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳ ನೆರವು
ಜಿಲ್ಲಾಸ್ಪತ್ರೆಯ ತಜ್ಞರಾದ ಡಾ ಸುಭಜಿತ್ ಗಿರಿ ಮಾತನಾಡಿ, ಒಂದು ದಿನದಲ್ಲಿ ನಾವು 500ಕ್ಕೂ ಅಧಿಕ ಗಾಯಾಗಳುಗಳಿಗೆ ಚಿಕಿತ್ಸೆ ನೀಡಿದ್ದೇವೆ. ಏಕಾಏಕಿ ಎದುರಾದ ಈ ಸವಾಲನ್ನ ಎದುರಿಸಲು ವೈದ್ಯಕೀಯ ವಿದ್ಯಾರ್ಥಿಗಳನ್ನು ನೆರವನ್ನು ಪಡೆಯಬೇಕಾಯಿತು. ರಾಜ್ಯ ಸರ್ಕಾರದ ಅಧಿಕಾರಿಗಳು ಲಭ್ಯವಿರುವ ವೈದ್ಯಕೀಯ ಸಹಾಯವನ್ನು ಒದಗಿಸಿದರು ಎಂದು ವಿವರಿಸಿದ್ದಾರೆ.
ಬಹನಾಗ ಮತ್ತು ಸೊರೊದಲ್ಲಿ 200 ಆಂಬ್ಯುಲೆನ್ಸ್‌ಗಳು, 45 ಮೊಬೈಲ್ ಆರೋಗ್ಯ ತಂಡಗಳು ಹಾಗೂ 50 ಹೆಚ್ಚುವರಿ ವೈದ್ಯರನ್ನು ನಿಯೋಜಿಸಲಾಗಿದೆ. ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಪಿಆರ್‌ಎಂ ವೈದ್ಯಕೀಯ ಕಾಲೇಜು, ಪರಿಪಾಡಾದಲ್ಲಿನ ಆಸ್ಪತ್ರೆಯಿಂದ 25 ವೈದ್ಯರ ತಂಡವನ್ನು ಸಜ್ಜುಗೊಳಿಸಿದ್ದೇವೆ. 64 ರೋಗಿಗಳನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಒಡಿಶಾ ಸರ್ಕಾರದ ಆರೋಗ್ಯ ಇಲಾಖೆ ಕಾರ್ಯದರ್ಶಿ ಶಾಲಿನಿ ಪಂಜಿತ್ ಹೇಳಿದ್ದಾರೆ.
ದಿನವಿಡೀ, ಒಡಿಶಾ ರಾಜ್ಯ ಸರ್ಕಾರದ ಅಧಿಕಾರಿಗಳು ಲಭ್ಯವಿರುವ ವೈದ್ಯಕೀಯ ಸಹಾಯವನ್ನು ಬಲಪಡಿಸಿದ್ದಾರೆ ಮತ್ತು ಬಾಲಸೋರ್, ಬಹನಾಗ ಮತ್ತು ಸೊರೊದಲ್ಲಿ 200 ಆಂಬ್ಯುಲೆನ್ಸ್‌ಗಳು ಮತ್ತು 45 ಮೊಬೈಲ್ ಆರೋಗ್ಯ ತಂಡಗಳನ್ನು ಮತ್ತು 50 ಹೆಚ್ಚುವರಿ ವೈದ್ಯರನ್ನು ನಿಯೋಜಿಸಿದ್ದಾರೆ ಎಂದು ಹೇಳಿದರು.
ಅಮೂಲ್ಯವಾದ ಜೀವಗಳನ್ನ ಉಳಿಸಲು ಎಲ್ಲಾ ರೀತಿಯ ನೆರವು
ಒಡಿಶಾ ರೈಲು ಅಪಘಾತ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಭುವನೇಶ್ವರದ ಏಮ್ಸ್ ನ ಎರಡು ವೈದ್ಯರ ತಂಡಗಳು ಬಾಲಸೋರ್ ಮತ್ತು ಕಟಕ್‌ಗೆ ಕಳುಹಿಸಲಾಗಿದೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ಎಲ್ಲಾ ಸಹಾಯ ಮತ್ತು ವೈದ್ಯಕೀಯ ನೆರವು ನೀಡುತ್ತಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವಿಯಾ ಹೇಳಿದ್ದಾರೆ.
ವಿಭಾಗ