logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Iran Anti Hijab Protest: ಹಿಜಾಬ್‌ ವಿರೋಧಿಸಿ ಇರಾನ್‌ನಲ್ಲಿ ಪ್ರತಿಭಟನೆ, 90ಕ್ಕೂ ಹೆಚ್ಚು ಪ್ರತಿಭಟನಾಕಾರರ ಸಾವು

Iran anti hijab protest: ಹಿಜಾಬ್‌ ವಿರೋಧಿಸಿ ಇರಾನ್‌ನಲ್ಲಿ ಪ್ರತಿಭಟನೆ, 90ಕ್ಕೂ ಹೆಚ್ಚು ಪ್ರತಿಭಟನಾಕಾರರ ಸಾವು

Praveen Chandra B HT Kannada

Oct 02, 2022 09:10 PM IST

google News

Iran anti hijab protest: ಹಿಜಾಬ್‌ ವಿರೋಧಿಸಿ ಪ್ರತಿಭಟನೆ, 90ಕ್ಕೂ ಹೆಚ್ಚು ಸಾವು REUTERS/Isabel Infantes/File Photo

    • ಸೆಪ್ಟೆಂಬರ್‌ 16ರಂದು ಅಮಿನಿ ಮೃತಪಟ್ಟ ಬಳಿಕ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು. ಅಲ್ಲಿನ ಕಾಲೇಜಿನ ವಿದ್ಯಾರ್ಥಿನಿಯರು, ಮಾನವ ಹಕ್ಕುಗಳ ಹೋರಾಟಗಾರರು ಹಿಜಾಬ್‌ ಕಿತ್ತೆಸೆದು ಪ್ರತಿಭಟನೆ ನಡೆಸಿದ್ದರು.
Iran anti hijab protest: ಹಿಜಾಬ್‌ ವಿರೋಧಿಸಿ ಪ್ರತಿಭಟನೆ, 90ಕ್ಕೂ ಹೆಚ್ಚು ಸಾವು REUTERS/Isabel Infantes/File Photo
Iran anti hijab protest: ಹಿಜಾಬ್‌ ವಿರೋಧಿಸಿ ಪ್ರತಿಭಟನೆ, 90ಕ್ಕೂ ಹೆಚ್ಚು ಸಾವು REUTERS/Isabel Infantes/File Photo (REUTERS)

ತೆಹ್ರಾನ್‌: ಮಾಶಾ ಅಮಿನಿ ಎಂಬ 22 ವರ್ಷದ ಯುವತಿಯ ಸಾವಿಗೆ ಆಕ್ರೋಶಗೊಂಡು ಹಿಜಾಬ್‌ ವಿರೋಧಿಸಿ ಇರಾನ್‌ನಾದ್ಯಂತ ನಡೆದ ಪ್ರತಿಭಟನೆಯಲ್ಲಿ 92 ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ನಾರ್ವೆ ಮೂಲದ ಇರಾನ್‌ ಹ್ಯೂಮನ್‌ ರೈಟ್ಸ್‌ ಎನ್‌ಜಿಒವೊಂದರ ವರದಿ ತಿಳಿಸಿದೆ.

"ಈ ಅಪರಾಧದ ಕುರಿತು ತನಿಖೆ ನಡೆಸುವುದು ಅಂತಾರಾಷ್ಟ್ರೀಯ ಸಮುದಾಯದ ಕರ್ತವ್ಯ. ಇಸ್ಲಾಮಿಕ್‌ ರಿಪಬ್ಲಿಕ್‌ನಲ್ಲಿ ಇಂತಹ ಅಪರಾಧಗಳು ಜರುಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆʼʼ ಎಂದು ಅಬುದಾಬಿ ಮೂಲದ ದಿ ನ್ಯಾಷನಲ್‌ ನ್ಯೂಸ್‌ ವರದಿ ಮಾಡಿದೆ.

Mahsa Amini, Iran protests, Norway-based Iran Human Rights, Mahmood Amiry-Moghaddam, IHR directorಇದು 2019ರ ಬಳಿಕ ಸರಕಾರದ ವಿರುದ್ಧ ನಡೆದ ಬೃಹತ್‌ ಪ್ರತಿಭಟನೆಯಾಗಿದೆ.

ಈಗಿನ ಪ್ರತಿಭಟನೆಯಲ್ಲಿ 83ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದನ್ನು ಖಚಿತಪಡಿಸಲಾಗಿದೆ. ಆದರೆ, 90ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ.

ಪ್ರತಿಭಟನೆಯ ಆರಂಭದಲ್ಲಿ ಮಾಸಿಯಾ ಅಲಿನಿಜದ್‌ ಎಂಬ ಇರಾನಿ ಪತ್ರಕರ್ತೆ ಮತ್ತು ಸಾಮಾಜಿಕ ಹೋರಾಟಗಾರ್ತಿಯು ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ "ತನ್ನ ಕೂದಲು ಕತ್ತರಿಸುವʼ ವಿಡಿಯೋ ಪೋಸ್ಟ್‌ ಮಾಡಿದ್ದರು. "ಇರಾನಿ ಮಹಿಳೆಯರು ತಮ್ಮ ಕೂದಲು ಕತ್ತರಿಸುವ ಮೂಲಕ ಮತ್ತು ಹಿಜಾಬ್‌ ಸುಡುವ ಮೂಲಕ ಮಾಶಾ ಅಮಿನಿಯನ್ನು ಹಿಜಾಬ್‌ ಪೊಲೀಸರು ಕೊಲೆ ಮಾಡಿರುವುದನ್ನು ಖಂಡಿಸಬೇಕುʼʼ ಎಂದು ಅವರು ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಕರೆ ನೀಡಿದ್ದರು.

"ಏಳನೇ ವರ್ಷಕ್ಕೆ ನಾವು ನಮ್ಮ ತಲೆಯನ್ನು ಹಿಜಾಬ್‌ನಿಂದ ಸುತ್ತದೆ ಇದ್ದರೆ ನಾವು ಶಾಲೆಗೆ ಹೋಗುವಂತೆ ಇಲ್ಲ, ಉದ್ಯೋಗ ಪಡೆಯುವಂತೆ ಇಲ್ಲ. ನಾವು ಇಲ್ಲಿನ ಈ ಲಿಂಗ ತಾರತಮ್ಯವನ್ನು ವಿರೋಧಿಸುತ್ತೇವೆʼʼ ಎಂದು ಆಕೆ ಬರೆದುಕೊಂಡಿದ್ದರು.

ಮಾಶಾ ಅಮಿನಿಯನ್ನು ಅಲ್ಲಿನ ಪೊಲೀಸರು ತಮ್ಮೊಂದಿಗೆ ಕೊಂಡೊಯ್ದಿದ್ದರು. . "ಆಕೆಗೆ ಮರು ಶಿಕ್ಷಣ ನೀಡಲು ಪೊಲೀಸ್‌ ಸ್ಟೇಷನ್‌ಗೆ ಕರೆದುಕೊಂಡು ಹೋಗುವುದಾಗಿ ಪೊಲೀಸರು ತಿಳಿಸಿದ್ದರುʼ ಎಂದು ಕುಟುಂಬದವರು ಮಾಹಿತಿ ನೀಡಿದ್ದರು.

ಈಕೆಯ ಆರೋಗ್ಯ ಉತ್ತಮವಾಗಿತ್ತು. ಯಾವುದೇ ಹೃದಯದ ತೊಂದರೆಗಳು ಇರಲಿಲ್ಲʼʼ ಎಂದು ಆಕೆಯ ಕುಟುಂಬಸ್ಥರು ಮಾಹಿತಿ ನೀಡಿದ್ದರು.

"ಇದು ಅನುಮಾನಸ್ಪದವಾದ ಸಾವು. ಆಕೆಗೆ ಹಿಂಸೆ ನೀಡಲಾಗಿದೆ ಮತ್ತು ಆಕೆಯನ್ನು ಪೊಲೀಸ್‌ ಸ್ಟೇಷನ್‌ನಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಈ ಕುರಿತು ತನಿಖೆಯಾಗಬೇಕುʼʼ ಎಂದು ಮಾನವ ಹಕ್ಕುಗಳ ಸಂಘಟನೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ತಿಳಿಸಿತ್ತು.

ಬಾಂಗ್ಲಾ ಲೇಖಕಿ ತಸ್ಲಿಮಾ ನಸ್ರೀನ್‌ ಅವರು ಇರಾನ್‌ ಮಹಿಳೆಯರ ಹೋರಾಟವನ್ನು ಶ್ಲಾಘಿಸಿದ್ದು, "ನಿಜಕ್ಕೂ ಹಿಜಾಬ್‌ ಒಂದು ಆಯ್ಕೆಯಲ್ಲʼʼ ಎಂದಿದ್ದರು. ಪ್ರತಿಭಟನೆಯಲ್ಲಿ ಮಹಿಳೆಯರು ತಮ್ಮ ತಲೆಕೂದಲು ಕತ್ತರಿಸುವುದು ಮತ್ತು ಹಿಜಾಬ್‌ ಸುಡುವುದು ನಿಜಕ್ಕೂ ಉತ್ತಮವಾದ ಸನ್ನಿವೇಶ. ಇದು ಜಗತ್ತಿಗೆ ಅತ್ಯಂತ ಅಗತ್ಯವಾದ ಹೋರಾಟ. ಹಿಜಾಬ್‌ ಎನ್ನುವುದು ಮುಸ್ಲಿಂ ಮಹಿಳೆಯರ ನಿಗ್ರಹ, ದಬ್ಬಾಳಿಕೆ, ನಿಂದನೆ ಮತ್ತು ಅವಮಾನದ ಸಂಕೇತವಾಗಿದೆ ಎಂದು ಅವರು ಹೇಳಿದ್ದರು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ