ಫಸ್ಟ್ ನೈಟ್ನಲ್ಲೂ ಕಂಪ್ಯೂಟರ್ ಮುಂದೆ ಕುಳಿತ ಮದುಮಗ: ವಾರಕ್ಕೆ 70 ಗಂಟೆ ಕೆಲಸ ಮಾಡೋಕೆ ಬಿಡಿ ಎಂದು ಕಾಲೆಳೆದ ನೆಟ್ಟಿಗರು
Oct 29, 2023 09:43 AM IST
ಫಸ್ಟ್ ನೈಟ್ನಲ್ಲೂ ಕಂಪ್ಯೂಟರ್ ಮುಂದೆ ಕುಳಿತ ಮದುಮಗ
- Viral News: ಯುವಜನರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ಅಂದರೆ ದಿನಕ್ಕೆ ಸರಿಸುಮಾರು 12 ಗಂಟೆ ಕೆಲಸ ಮಾಡಬೇಕು. ಇವರ ಹೇಳಿಕೆ ಕುರಿತ ಪರ-ವಿರೋಧ ಚರ್ಚೆಗಳ ನಡುವೆ ಈಗೊಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಕೆಲಸದ ಸಮಯದ ಕುರಿತು ಇನ್‌ಫೋಸಿಸ್ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಅವರು ನೀಡಿದ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಚರ್ಚೆ ಹುಟ್ಟುಹಾಕಿದೆ. ಯುವಜನರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ಅಂದರೆ ದಿನಕ್ಕೆ ಸರಿಸುಮಾರು 12 ಗಂಟೆ ಕೆಲಸ ಮಾಡಬೇಕು. ಇವರ ಹೇಳಿಕೆ ಕುರಿತ ಪರ-ವಿರೋಧ ಚರ್ಚೆಗಳ ನಡುವೆ ಈಗೊಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ವೈರಲ್ ಆಗಿರುವ ಈ ಫೋಟೋದಲ್ಲಿ ನವಜೋಡಿಯ ಮೊದಲ ರಾತ್ರಿ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಬೆಡ್ ರೂಂ ಅನ್ನು ಸಿಂಗಾರಗೊಳಿಸಲಾಗಿದೆ. ಮಂಚದ ಮೇಲೆ ಮದುಮಗಳು ಪತಿಯಾಗಿ ಕಾಯುತ್ತಾ ಕುಳಿತಿದ್ದಾಳೆ. ಆದರೆ ಮದುಮಗ ಮಾತ್ರ ಅದೇ ಕೋಣೆಯಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಆಫೀಸ್ ಕೆಲಸ ಮಾಡುತ್ತಿದ್ದಾನೆ.
ಗಬ್ಬರ್ ಸಿಂಗ್ ಎನ್ನುವವರು (@GabbbarSingh) ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಇಮೇಜ್ ಹಂಚಿಕೊಂಡಿದ್ದು, ಇದಕ್ಕೆ ‘ಇನ್‌ಫೋಸಿಸ್ ಉದ್ಯೋಗಿ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ನಾರಾಯಣ ಮೂರ್ತಿ ಹೇಳಿಕೆಗೂ ಈ ಪೋಟೋಗೂ ನೆಟ್ಟಿಗರು ಸಿಂಕ್ ಮಾಡಿ ಕಾಮಿಡಿ ಮಾಡುತ್ತಿದ್ದಾರೆ.
“ಸ್ವಲ್ಪ ಇರು ಬೇಬಿ, ನಾನು ವಾರಕ್ಕೆ 70 ಗಂಟೆ ಕೆಲಸ ಫಿನಿಷ್ ಮಾಡಬೇಕಿದೆ” ಎಂದು ಪತಿ ತನ್ನ ಪತ್ನಿಗೆ ಹೇಳುತ್ತಿರುವಂತೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಹ್ಹಹ್ಹಹ್ಹ ಈತ 69 ಗಂಟೆ ಕೆಲಸ ಮಾಡಿದ್ದಾನೆ, ಇನ್ನೊಂದು ಗಂಟೆ ಬಾಕಿ ಇದೆ” ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.
"70 ಗಂಟೆಗಳ ಕೆಲಸ, 40 ಗಂಟೆಗಳ ಸಂಬಳ" ಎಂದು ಒಬ್ಬರು ಹೇಳಿದರೆ, "ಕಳೆದ 2 ದಿನಗಳಲ್ಲಿ ಇನ್ಫೋಸಿಸ್ ಅತಿದೊಡ್ಡ ರಾಜೀನಾಮೆ ಸಾಂಕ್ರಾಮಿಕವನ್ನು ಕಂಡಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ನಾರಾಯಣ ಮೂರ್ತಿ ಹೇಳಿದ್ದೇನು?
"ಇತರೆ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತದ ಉತ್ಪಾದಕತೆ ಬಹಳ ಕಡಿಮೆ. ಆದ್ದರಿಂದ ಜಪಾನ್, ಚೀನಾದಂತಹ ರಾಷ್ಟ್ರಗಳ ಜತೆಗೆ ಪೈಪೋಟಿ ನಡೆಸುವುದಕ್ಕಾಗಿ ಯುವಜನರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ಎರಡನೆಯ ಮಹಾಯುದ್ಧದ ನಂತರ, ಜರ್ಮನಿ ಮತ್ತು ಜಪಾನ್‌ನ ಜನ ತಮ್ಮ ದೇಶಕ್ಕಾಗಿ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದರು. ಭಾರತದಲ್ಲಿನ ಯುವಕರು ಸಹ ದೇಶದ ಆರ್ಥಿಕತೆಯ ಸಲುವಾಗಿ ಶ್ರಮಿಸಬೇಕು" ಎಂದು ನಾರಾಯಣ ಮೂರ್ತಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ವಿಭಾಗ