Fact Check: SSC ಅಧಿಕೃತ ಟ್ವಿಟ್ಟರ್ ಅಕೌಂಟ್ ಇಲ್ಲ: ಅಭ್ಯರ್ಥಿಗಳೇ ಅರ್ಜಿ ಹಾಕುವ ಮುನ್ನ ಇರಲಿ ಎಚ್ಚರ..
Apr 07, 2023 04:04 PM IST
ಸಾಂದರ್ಭಿಕ ಚಿತ್ರ
- ಇತ್ತೀಚೆಗೆ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗವು ಪರೀಕ್ಷಾ ಅಧಿಸೂಚನೆಗಳನ್ನು ಹೊರಡಿಸಿದ ಬಗ್ಗೆ, ಅದರ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಮಾಹಿತಿ ನೀಡಿತ್ತು. ಆದರೆ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB)ದ ಸತ್ಯ ತಪಾಸಣೆ ಘಟಕವಾದ PIB ಫ್ಯಾಕ್ಟ್ ಚೆಕ್, ಇಂತಹ ಯಾವುದೇ ಅಧಿಕೃತ ಅಕೌಂಟ್ ಇಲ್ಲ ಎಂದು ಸ್ಪಷ್ಟಪಡಿಸಿದೆ.
ನವದೆಹಲಿ: ಇಂದಿನ ಡಿಜಿಟಲ್ ಸಂಪರ್ಕ ಜಗತ್ತಿನಲ್ಲಿ ನಕಲಿ ಸುದ್ದಿ ಎಂಬುದು ಒಂದು ಗಂಭೀರ ಸಮಸ್ಯೆಯಾಗಿ ಬೆಳೆದಿದೆ. ಇತ್ತೀಚಿನ ದಿನಗಳಲ್ಲಿ ಸುಳ್ಳು ಮತ್ತು ತಪ್ಪು ಮಾಹಿತಿಗಳು ಅತ್ಯಂತ ವೇಗವಾಗಿ ಹರಡುತ್ತಿದ್ದು, ವಂಚಕರು ನಮ್ಮನ್ನು ವಂಚನೆಯ ಜಾಲದಲ್ಲಿ ಸಿಲುಕಿಸಲು ತರಹೇವಾರಿ ದಾರಿಗಳನ್ನು ಹುಡುಕುತ್ತಿದ್ದಾರೆ.
ಇತ್ತೀಚೆಗೆ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗವು ಪರೀಕ್ಷಾ ಅಧಿಸೂಚನೆಗಳನ್ನು ಹೊರಡಿಸಿದ ಬಗ್ಗೆ, ಅದರ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಮಾಹಿತಿ ನೀಡಿತ್ತು. ಆದರೆ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB)ದ ಸತ್ಯ ತಪಾಸಣೆ ಘಟಕವಾದ PIB ಫ್ಯಾಕ್ಟ್ ಚೆಕ್, ಇಂತಹ ಯಾವುದೇ ಅಧಿಕೃತ ಅಕೌಂಟ್ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಈ ನಕಲಿ ಟ್ವಿಟ್ಟರ್ ಖಾತೆಯಲ್ಲಿ ಪರೀಕ್ಷಾ ಅಧಿಸೂಚನೆಗಳನ್ನು ತೆರೆಯಲು ಕೆಲವು ಲಿಂಕ್‌ಗಳನ್ನು ಕೊಡಲಾಗಿತ್ತು. ಇದೀಗ ಪಿಐಬಿ ನಡೆಸಿದ ಫ್ಯಾಕ್ಟ್ ಚೆಕ್‌ನಲ್ಲಿ ಈ ಟ್ವಿಟ್ಟರ್ ಖಾತೆ ಜೊತೆಗೆ. ಅದರ ಲಿಂಕ್‌ಗಳು ಕೂಡ ನಕಲಿ ಎಂಬುದು ಸ್ಪಷ್ಟವಾಗಿದೆ. ಜನರು ಈ ನಕಲಿ ಟ್ವಿಟರ್ ಖಾತೆಯನ್ನು ಅನುಸರಿಸಬಾರದು ಎಂದು ಮನವಿ ಮಾಡಿರುವ ಪಿಐಬಿ ಫ್ಯಾಕ್ಟ್ ಚೆಕ್, ಪರೀಕ್ಷಾ ಅಧಿಸೂಚನೆಗಳ ಅಧಿಕೃತ ಮಾಹಿತಿಗಾಗಿ ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಆಕಾಂಕ್ಷಿಗಳನ್ನು ಕೋರಿದೆ.
“ಒಂದು ಟ್ವಿಟ್ಟರ್ ಖಾತೆ @ssc_official__ ಸಿಬ್ಬಂದಿ ಆಯ್ಕೆ ಆಯೋಗದ (SSC) ಅಧಿಕೃತ Twitter ಹ್ಯಾಂಡಲ್ ಎಂದು ಹೇಳಿಕೊಳ್ಳುತ್ತದೆ. ಈ ಖಾತೆ ನಕಲಿಯಾಗಿದ್ದು, SSC ಯಾವುದೇ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಹೊಂದಿಲ್ಲ. ಅಧಿಕೃತ ಮಾಹಿತಿಗಾಗಿ ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್‌ಗೆ (ssc.nic.in) ಭೇಟಿ ನೀಡಿ.. ”ಎಂದು ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿದೆ.
ಸಿಬ್ಬಂದಿ ಆಯ್ಕೆ ಆಯೋಗ
ಸ್ಟಾಫ್ ಸೆಲೆಕ್ಷನ್ ಕಮಿಷನ್ ಅಥವಾ ಎಸ್‌ಎಸ್‌ಸಿ ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಒಂದು ಸಂಸ್ಥೆಯಾಗಿದ್ದು, ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡುವ ಜವಾಬ್ದಾರಿಯನ್ನು ಹೊಂದಿದೆ.
ಕಾರ್ಯಗಳು:
ಸ್ಟಾಫ್ ಸೆಲೆಕ್ಷನ್ ಕಮಿಷನ್ ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಹುದ್ದೆಗಳಿಗೆ ಅಗತ್ಯವಿರುವಂತೆ, ಉದ್ಯೋಗ ಅಭ್ಯರ್ಥಿಗಳಿಗೆ ಪರೀಕ್ಷೆಗಳು ಮತ್ತು/ಅಥವಾ ಸಂದರ್ಶನಗಳನ್ನು ನಿರ್ವಹಿಸುತ್ತದೆ. ಈ ಪರೀಕ್ಷೆಗಳನ್ನು ದೇಶದ ವಿವಿಧ ಸ್ಥಳಗಳಲ್ಲಿ ನಿರ್ವಹಿಸಲಾಗುತ್ತದೆ.
ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್‌ಸೈಟ್ ಯಾವುದು?
ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್‌ಸೈಟ್ ssc.nic.in.
ಇಂದಿನ ಪ್ರಮುಖ ಸುದ್ದಿಗಳು
Explainer: ಜಗತ್ತಿಗೆ ಕ್ಷೀರಸಾಗರವಾಗಿದ್ದ ಭಾರತದಲ್ಲಿ ಹಾಲಿಗೆ ತತ್ವಾರ, ಯಾಕೆ ಹೀಗಾಯಿತು? ಒಂದು ವಿಶ್ಲೇಷಣೆ
ಜಗತ್ತಿನ ಪ್ರಮುಖ ಹಾಲು ಉತ್ಪಾದಕ ದೇಶವಾಗಿದ್ದ ಭಾರತಕ್ಕೆ ಈಗ ಹಾಲು ಆಮದು ಮಾಡಿಕೊಂಡು ಇಲ್ಲಿನ ಬೇಡಿಕೆ ಪೂರೈಸುವಂತಹ ದುಸ್ಥಿತಿ ಬಂದಿದೆ. ಏಕೆ ಈಗಾಯಿತು? ಹಿಂದೂಸ್ತಾನ್ ಟೈಮ್ಸ್‌ನ ಸಹೋದರಿ ಪತ್ರಿಕೆ ದಿ ಮಿಂಟ್‌ನ ವಿಶ್ಲೇಷಣೆ ಹೀಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
Siddaramaiah: ಕನ್ನಡಿಗರ ನಂದಿನಿ ಕಬಳಿಸಲು ಸಂಚು: ಅಮುಲ್ ಉತ್ಪನ್ನ ಮಾರಾಟಕ್ಕೆ ಸಿದ್ದರಾಮಯ್ಯ ಕಿಡಿ!
ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳ ಮಾರಾಟದ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಅಮುಲ್ ಹಾಗೂ ನಂದಿನಿ ವಿಲೀನದ ಆತಂಕ ಎದುರಾಗಿದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೇ ನಂದಿನಿಯನ್ನು ಕಾಪಾಡಲು ಕನ್ನಡಿಗರು ಒಂದಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
ವಿಭಾಗ