logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi's Total Assets: ಪಿಎಂ ಮೋದಿ ಒಟ್ಟು ಆಸ್ತಿ 26 ಲಕ್ಷದಿಂದ 2.23 ಕೋಟಿ ರೂಪಾಯಿಗೇರಿಕೆ

PM Modi's total assets: ಪಿಎಂ ಮೋದಿ ಒಟ್ಟು ಆಸ್ತಿ 26 ಲಕ್ಷದಿಂದ 2.23 ಕೋಟಿ ರೂಪಾಯಿಗೇರಿಕೆ

HT Kannada Desk HT Kannada

Aug 09, 2022 04:10 PM IST

google News

ಪ್ರಧಾನ ಮಂತ್ರಿ ನರೇಂದ್ರ ಮೋದಿ

  • PM Modi's total assets: ಪ್ರಧಾನಿ ನರೇಂದ್ರ ಮೋದಿ ಅವರ ಒಟ್ಟು ಆಸ್ತಿ 26 ಲಕ್ಷ ರೂಪಾಯಿಯಿಂದ 2.23 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಬಹುತೇಕ ಎಲ್ಲವೂ ಬ್ಯಾಂಕ್‌ ಠೇವಣಿ ರೂಪದಲ್ಲಿದ್ದು, ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. 

ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ (ANI)

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಸ್ತಿ ಮೌಲ್ಯ 2.23 ಕೋಟಿ ರೂಪಾಯಿಗೂ ಹೆಚ್ಚು ಏರಿಕೆಯಾಗಿದೆ. ಬಹುತೇಕ ಬ್ಯಾಂಕ್‌ ಠೇವಣಿ ರೂಪದಲ್ಲಿದೆ. ಅವರು ಗಾಂಧಿನಗರದಲ್ಲಿ ಇದ್ದ ಒಂದು ತುಂಡು ಭೂಮಿಯಲ್ಲಿ ತಮ್ಮ ಪಾಲನ್ನು ದಾನ ಮಾಡಿರುವ ಕಾರಣ ಯಾವುದೇ ಸ್ಥಿರ ಆಸ್ತಿಯನ್ನು ಹೊಂದಿಲ್ಲ.

ಪ್ರಧಾನಮಂತ್ರಿಯವರು ತಮ್ಮ ಆಸ್ತಿ ವಿವರವನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದು, ಅದರಂತೆ ಈ ಮಾಹಿತಿ ಬೆಳಕಿಗೆ ಬಂದಿದೆ.

ಅವರು ಯಾವುದೇ ಬಾಂಡ್, ಷೇರು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಯಾವುದೇ ಹೂಡಿಕೆಯನ್ನು ಮಾಡಿಲ್ಲ. ಯಾವುದೇ ವಾಹನವನ್ನು ಹೊಂದಿಲ್ಲ. ಆದರೆ 1.73 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಈ ವಿಚಾರವನ್ನು ಮಾರ್ಚ್‌ 31ಕ್ಕೆ ಅಪ್ಡೇಟ್‌ ಮಾಡಿದ ಆಸ್ತಿ ವಿವರದಲ್ಲಿದೆ.

ಮೋದಿಯವರ ಚರ ಆಸ್ತಿಯ ಮೌಲ್ಯ ಒಂದು ವರ್ಷದ ಹಿಂದೆ 26.13 ಲಕ್ಷ ರೂ.ಪಾಯಿ ಇತ್ತು. ಆದರೆ ಅವರು 2021ರ ಮಾರ್ಚ್ 31 ರಂತೆ ಚರಾಸ್ತಿಯ ಮೌಲ್ಯ 1.1 ಕೋಟಿ ರೂಪಾಯಿ ಆಗಿದೆ. ಯಾವುದೇ ಸ್ಥಿರ ಆಸ್ತಿಯನ್ನು ಅವರು ಹೊಂದಿಲ್ಲ.

ಪ್ರಧಾನ ಮಂತ್ರಿಗಳ ಕಚೇರಿ (PMO) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ವಿವರ ಪ್ರಕಾರ, 2022ರ ಮಾರ್ಚ್ 31ರ ಪ್ರಕಾರ ಅವರ ಆಸ್ತಿ ಮೌಲ್ಯ ಒಟ್ಟು 2,23,82,504 ರೂಪಾಯಿ.

ಅವರು ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಇತರೆ ಮೂವರ ಜತೆ ಸೇರಿ ಒಂದು ವಸತಿ ಫ್ಲ್ಯಾಟ್‌ ಖರೀದಿಸಿದ್ದರು. 2002ರ ಅಕ್ಟೋಬರ್‌ ತಿಂಗಳಲ್ಲಿ ಅವರು ಸಮಾನ ಪಾಲುದಾರರಾಗಿ ಖರೀದಿಸಿದ್ದರು. ಇತ್ತೀಚಿನ ಅಪ್ಡೇಟ್ಸಸ್‌ ಪ್ರಕಾರ, ಸ್ಥಿರ ಆಸ್ತಿ ಸರ್ವೆ ಸಂಖ್ಯೆ 401/ಎ ಅನ್ನು ನಾಲ್ವರು ಮಾಲೀಕರು ಜಂಟಿಯಾಗಿ ಮಾಲೀಕತ್ವ ಹೊಂದಿದ್ದಾರೆ. 25 ಪ್ರತಿಶತದಷ್ಟು ಸಮಾನ ಪಾಲನ್ನು ಹೊಂದಿರುವ ಮೂವರಿಗೆ ಅದನ್ನು ದಾನ ಮಾಡಿರುವುದರಿಂದ ಪ್ರಧಾನಮಂತ್ರಿ ಈಗ ಅದರ ಪಾಲುದಾರಿಕೆ ಅಥವಾ ಮಾಲೀಕತ್ವ ಹೊಂದಿರುವುದಿಲ್ಲ.

ಹೊಸ ಅಪ್ಡೇಟ್‌ ಪ್ರಕಾರ, 2022ರ ಮಾರ್ಚ್‌ 31ರಂತೆ ಪ್ರಧಾನ ಮಂತ್ರಿಯವರ ಕೈಯಲ್ಲಿ ನಗದು 35,250 ರೂಪಾಯಿ ಮತ್ತು ಅಂಚೆ ಕಚೇರಿಯಲ್ಲಿ ಅವರ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು 9,05,105 ರೂ ಮೌಲ್ಯದವು ಮತ್ತು 1,89,305 ರೂಪಾಯಿ ಮೌಲ್ಯದ ಜೀವ ವಿಮಾ ಪಾಲಿಸಿಗಳಿದ್ದವು.

ಸಹೋದ್ಯೋಗಿಗಳಿಂದಲೂ ಆಸ್ತಿ ವಿವರ ಪ್ರಕಟ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಂತೆಯೇ ಸಚಿವ ಸಂಪುಟದ ಸಹೋದ್ಯೋಗಿಗಳ ಪೈಕಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2022ರ ಮಾರ್ಚ್ 31 ರಂತೆ 2.54 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು 2.97 ಕೋಟಿ ಮೌಲ್ಯದ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ.

ಎಲ್ಲ 29 ಕ್ಯಾಬಿನೆಟ್ ಮಂತ್ರಿಗಳಲ್ಲಿ, ಕಳೆದ ಹಣಕಾಸು ವರ್ಷದಲ್ಲಿ ತಮ್ಮದೇ ಆದ ಮತ್ತು ಅವರ ಅವಲಂಬಿತರ ಆಸ್ತಿಯನ್ನು ಘೋಷಿಸಿದವರಲ್ಲಿ ಧರ್ಮೇಂದ್ರ ಪ್ರಧಾನ್, ಜ್ಯೋತಿರಾದಿತ್ಯ ಸಿಂಧಿಯಾ, ಆರ್ ಕೆ ಸಿಂಗ್, ಹರ್ದೀಪ್ ಸಿಂಗ್ ಪುರಿ, ಪರ್ಶೋತ್ತಮ್ ರೂಪಲಾ ಮತ್ತು ಜಿ ಕಿಶನ್ ರೆಡ್ಡಿ ಸೇರಿದ್ದಾರೆ.

ಕಳೆದ ಹಣಕಾಸು ವರ್ಷ ಕ್ಯಾಬಿನೆಟ್ ಸಚಿವರಾಗಿದ್ದ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಜುಲೈನಲ್ಲಿ ತಮ್ಮ ಕಚೇರಿಯನ್ನು ತೊರೆದ ಬಳಿಕವೂ ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ