WhatsApp Channel: ಪ್ರಧಾನಿ ಮೋದಿಯವರ ವಾಟ್ಸಾಪ್ ಚಾನೆಲ್ಗೆ ನೀವೂ ಸೇರಲು ಇಲ್ಲಿದೆ 3 ಹಂತಗಳು
Sep 19, 2023 06:55 PM IST
ವಾಟ್ಸಾಪ್ ಚಾನೆಲ್ಗೆ ಸೇರಿದ ಮೋದಿ
- ವಾಟ್ಸಾಪ್ ಚಾನೆಲ್ ಒಂದು-ಮಾರ್ಗದ ಪ್ರಸಾರ ಸಾಧನವಾಗಿದ್ದು, ಕಳೆದ ವಾರ ಬಿಡುಗಡೆಯಾದ ಈ ಹೊಸ ಫೀಚರ್ ಅಡ್ಮಿನ್ಗಳು ತಮ್ಮ ವಾಟ್ಸಾಪ್ ಚಾನೆಲ್ನಲ್ಲಿ ಅನುಯಾಯಿಗಳೊಂದಿಗೆ ಟೆಕ್ಸ್ಟ್, ಫೋಟೋಗಳು, ವಿಡಿಯೋಗಳು, ಸ್ಟಿಕ್ಕರ್‌ಗಳು ಮತ್ತು ಸಮೀಕ್ಷೆಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ.
ನವದೆಹಲಿ: ಮೆಟಾದ ಹೊಸ ಫೀಚರ್ ಆಗಿರುವ ವಾಟ್ಸಾಪ್ ಚಾನೆಲ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಮೋದಿ ಅವರ ವಾಟ್ಸಾಪ್ ಚಾನೆಲ್ಗೆ ನೀವೂ ಸೇರಬಹುದಾಗಿದೆ.
ಮೋದಿಯವರ ವಾಟ್ಸಾಪ್ ಚಾನೆಲ್ ಸೇರುವುದು ಹೇಗೆ?
1) ಮೊದಲು ನೀವು ನಿಮ್ಮ ವಾಟ್ಸಾಪ್ ಅಪ್ಡೇಟ್ ಮಾಡಬೇಕು. ನಂತರ Updates ಟ್ಯಾಬ್ಗೆ ಹೋಗಿ.. (ಸ್ಟೇಟಸ್ ಕಾಣುತ್ತಿದ್ದ ಜಾಗದಲ್ಲಿ)
2) ಸ್ಕ್ರೀನ್ ಕೆಳಭಾಗದಲ್ಲಿ "Find Channels" ಆಯ್ಕೆ ಕಾಣುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ
3) ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಲಭ್ಯವಿರುವ ಚಾನೆಲ್‌ಗಳ ಪಟ್ಟಿ ಕಾಣಿಸುತ್ತದೆ. ಅಥವಾ ನೀವೇ ಹುಡುಕಲು ಸರ್ಚ್ ಆಪ್ಶನ್ ಇದೆ. ನಿಮಗೆ ಬೇಕಾದವರ ಚಾನೆಲ್ ಸೇರಲು, ಅವರ ಚಾನಲ್‌ನ ಹೆಸರಿನ ಪಕ್ಕದಲ್ಲಿರುವ ಪ್ಲಸ್ ಐಕಾನ್ ಅನ್ನು ಟ್ಯಾಪ್ ಮಾಡಿ.
ವಾಟ್ಸಾಪ್ ಚಾನೆಲ್ ಎಂದರೇನು? (What is WhatsApp Channel?)
ವಾಟ್ಸಾಪ್ ಚಾನೆಲ್ ಒಂದು-ಮಾರ್ಗದ ಪ್ರಸಾರ ಸಾಧನವಾಗಿದ್ದು, ಕಳೆದ ವಾರ ಬಿಡುಗಡೆಯಾದ ಈ ಹೊಸ ಫೀಚರ್ ಅಡ್ಮಿನ್ಗಳು ತಮ್ಮ ವಾಟ್ಸಾಪ್ ಚಾನೆಲ್ನಲ್ಲಿ ಅನುಯಾಯಿಗಳೊಂದಿಗೆ ಟೆಕ್ಸ್ಟ್, ಫೋಟೋಗಳು, ವಿಡಿಯೋಗಳು, ಸ್ಟಿಕ್ಕರ್‌ಗಳು ಮತ್ತು ಸಮೀಕ್ಷೆಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಈ ಮೂಲಕ ಒಂದೇ ಆ್ಯಪ್ನಲ್ಲೇ ನಿಮ್ಮ ಆಯ್ಕೆಯ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಬಹುದು.
ಇಲ್ಲಿ ಕೂಡ ನೀವು ಪ್ರತಿಕ್ರಿಯೆ ನೀಡಲು ಎಮೋಜಿಗಳನ್ನು ಬಳಸಬಹುದು. ಒಟ್ಟಾರೆ ಎಷ್ಟು ರಿಯಾಕ್ಷನ್ ಬಂದಿದೆ ಎಂಬುದೂ ಗೊತ್ತಾಗುತ್ತದೆ. ಆದರೆ ನೀವು ಹೇಗೆ ರಿಯಾಕ್ಟ್ ಆಗುತ್ತೀರಿ ಎಂಬುದು ಇತರ ಅನುಯಾಯಿಗಳಿಗೆ ಕಾಣುವುದಿಲ್ಲ.
ವಾಟ್ಸ್ ಆಪ್ ಚಾಲನ್ ಅಡ್ಮಿನ್ಗಳು 30 ದಿನಗಳವರೆಗೆ ತಮ್ಮ ಕಟೆಂಟ್ ಅನ್ನು ಅಪ್ಡೇಟ್ ಮತ್ತು ಬದಲಾವಣೆ ಮಾಡಲು ಅವಕಾಶವಿರುತ್ತದೆ. 30 ದಿನಗಳ ನಂತರ ತಂತಾನೆಯೇ ಹಳೆಯ ಅಪ್ಡೇಟ್ಗಳು ರಿಮೂವ್ ಆಗುತ್ತವೆ.
ನೀವು ಚಾಟ್‌ಗಳು ಅಥವಾ ಗುಂಪುಗಳಿಗೆ ಅಪ್ಡೇಟ್ಸ್ಗಳನ್ನು ಫಾರ್ವರ್ಡ್ ಮಾಡಿದಾಗ, ಅದು ಸ್ವಯಂಚಾಲಿತವಾಗಿ ಮೂಲ ಚಾನಲ್‌ಗೆ ಲಿಂಕ್ ಅನ್ನು ಒಳಗೊಂಡಿರುತ್ತದೆ. ಹೀಗಾಗಿ ಚಾನಲ್‌ನ ವಿಷಯವನ್ನು ಅನ್ವೇಷಿಸಲು ಬಯಸುವ ಇತರರಿಗೆ ಇದು ಸುಲಭವಾಗುತ್ತದೆ.
ಆದರೆ ಸದ್ಯ ಎಲ್ಲಿರಿಗೂ ವಾಟ್ಸಾಪ್ ಚಾನೆಲ್ ಕ್ರಿಯೇಟ್ ಮಾಡುವ ಅವಕಾಶ ನೀಡಲಾಗಿಲ್ಲ. ಕೆಲವು ಸೆಲೆಬ್ರಿಟಿಗಳು, ಪ್ರಭಾವಿ ನಾಯಕರು, ಕ್ರೀಡಾ ತಂಡಗಳು, ಸಂಸ್ಥೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.