logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi Selfie With Bjp Worker: ಬಿಜೆಪಿಯ ವಿಕಲಚೇತನ ಕಾರ್ಯಕರ್ತನೊಂದಿಗೆ ಪ್ರಧಾನಿ ಮೋದಿ ಸೆಲ್ಫಿ.. ಈ ಫೋಟೋ ಹಿಂದಿದೆ ವಿಶೇಷ ಕಾರಣ

PM Modi selfie with BJP worker: ಬಿಜೆಪಿಯ ವಿಕಲಚೇತನ ಕಾರ್ಯಕರ್ತನೊಂದಿಗೆ ಪ್ರಧಾನಿ ಮೋದಿ ಸೆಲ್ಫಿ.. ಈ ಫೋಟೋ ಹಿಂದಿದೆ ವಿಶೇಷ ಕಾರಣ

Meghana B HT Kannada

Apr 09, 2023 08:28 AM IST

google News

ಬಿಜೆಪಿ ಕಾರ್ಯಕರ್ತನೊಂದಿಗೆ ಪ್ರಧಾನಿ ಮೋದಿ ಸೆಲ್ಫಿ

    • ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ವಿಕಲಚೇತನ ಕಾರ್ಯಕರ್ತನ ಜೊತೆ ಸೆಲ್ಫಿ ತೆಗೆದುಕೊಂಡಿದ್ದು, ಇದನ್ನು ‘ಸ್ಪೆಷಲ್​ ಸೆಲ್ಫಿ’ ಎಂದು ಕರೆದಿದ್ದಾರೆ.
ಬಿಜೆಪಿ ಕಾರ್ಯಕರ್ತನೊಂದಿಗೆ ಪ್ರಧಾನಿ ಮೋದಿ ಸೆಲ್ಫಿ
ಬಿಜೆಪಿ ಕಾರ್ಯಕರ್ತನೊಂದಿಗೆ ಪ್ರಧಾನಿ ಮೋದಿ ಸೆಲ್ಫಿ

ಚೆನ್ನೈ (ತಮಿಳುನಾಡು) : ಶನಿವಾರ ತಮಿಳುನಾಡಿನ ಚೆನ್ನೈಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ವಿಕಲಚೇತನ ಕಾರ್ಯಕರ್ತನ ಜೊತೆ ಸೆಲ್ಫಿ ತೆಗೆದುಕೊಂಡಿದ್ದು, ಇದನ್ನು 'ಸ್ಪೆಷಲ್​ ಸೆಲ್ಫಿ ಎಂದು ಕರೆದಿದ್ದಾರೆ.

ಬಿಜೆಪಿ ಕಾರ್ಯಕರ್ತ ತಿರು ಎಸ್ ಮಣಿಕಂದನ್ ಅವರೊಂದಿಗೆ ಪಿಎಂ ಮೋದಿ ಸೆಲ್ಫಿ ತೆಗೆದುಕೊಂಡಿರುವುದಕ್ಕೆ ಕಾರಣ ಕೂಡ ಇದೆ. ಮಣಿಕಂದನ್ ಅವರು ವಿಕಲಚೇತನರಾಗಿದ್ದರೂ ಕೂಡ ಬೂತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಅವರು ಅಂಗಡಿಯೊಂದನ್ನು ಕೂಡ ನಡೆಸುತ್ತಾರೆ, ಅಲ್ಲದೇ ಅದರಲ್ಲಿ ಬರುವ ಲಾಭವನ್ನು ಬಿಜೆಪಿಗೆ ನೀಡುತ್ತಾರೆ.

ಮಣಿಕಂದನ್ ಅವರೊಂದಿಗಿನ ಸೆಲ್ಫಿ ಫೋಟೋ ಹಂಚಿಕೊಂಡು ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, “ಒಂದು ವಿಶೇಷ ಸೆಲ್ಫಿ.. ಚೆನ್ನೈನಲ್ಲಿ ನಾನು ತಿರು ಎಸ್. ಮಣಿಕಂದನ್ ಅವರನ್ನು ಭೇಟಿಯಾದೆ. ಈರೋಡ್‌ನ ಅವರು ತಮಿಳುನಾಡು ಬಿಜೆಪಿಯ ಹೆಮ್ಮೆಯ ಕಾರ್ಯಕರ್ತ. ವಿಕಲಚೇತನರಾಗಿರುವ ಇವರು ಬೂತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನದೇ ಆದ ಅಂಗಡಿಯನ್ನು ನಡೆಸುತ್ತಾರೆ. ಹೆಚ್ಚು ಪ್ರೇರೇಪಿಸುವ ಅಂಶವೆಂದರೆ ಅವರು ತಮ್ಮ ದೈನಂದಿನ ಲಾಭದ ಗಣನೀಯ ಭಾಗವನ್ನು ಬಿಜೆಪಿಗೆ ನೀಡುತ್ತಾರೆ” ಎಂದು ಹೇಳಿದ್ದಾರೆ.

ಶನಿವಾರ ಮತ್ತು ಭಾನುವಾರ ದಕ್ಷಿಣ ಭಾರತದ ಮೂರು ರಾಜ್ಯಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಶನಿವಾರ ತೆಲಂಗಾಣ ಬಳಿಕ ತಮಿಳುನಾಡಿಗೆ ಭೇಟಿ ನೀಡಿ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಚೆನ್ನೈ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು ಮತ್ತು ಚೆನ್ನೈ-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು.

ಬಳಿಕ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮೋದಿ, ತಮಿಳುನಾಡಿನ ಶ್ರೀಮಂತ ಇತಿಹಾಸವನ್ನು ಹೊಗಳಿದರು. ಇದು ಭಾಷೆ ಮತ್ತು ಸಾಹಿತ್ಯದ ನಾಡು. ದೇಶಭಕ್ತಿ ಮತ್ತು ರಾಷ್ಟ್ರೀಯ ಪ್ರಜ್ಞೆಯ ಕೇಂದ್ರವಾಗಿದೆ. ದೇಶದ ಅನೇಕ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ತಮಿಳುನಾಡಿನವರು ಎಂದು ಹೇಳಿದರು. 2014ರ ನಂತರ ಭಾರತದ ಮೂಲಸೌಕರ್ಯ ವಲಯದಲ್ಲಿ ಕಾಂತಿಕಾರಿ ಬದಲಾವಣೆ ತರುವಲ್ಲಿ ಎನ್​ಡಿಎ ಸರ್ಕಾರದ ಪ್ರಯತ್ನವನ್ನು ಹೊಗಳಿದರು.

ಆದರೆ, ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ಭೇಟಿಗೆ ವಿರೋಧ ವ್ಯಕ್ತವಾಗಿದ್ದು, ಗೋಬ್ಯಾಕ್ ಮೋದಿ ಎಂಬ ಹ್ಯಾಶ್ ಟ್ಯಾಗ್ ಬಳಸಿ ನೆಟ್ಟಿಗರು ಮಾಡಿರುವ ಟ್ವೀಟ್​ಗಳು ಶನಿವಾರ ಟ್ರೆಂಡಿಂಗ್ ಆಗಿದ್ದವು. ಸುಮಾರು 15 ಸಾವಿರ ಜನರು ತಮಿಳುನಾಡಿಗೆ ಮೋದಿ ಭೇಟಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ತರಹೇವಾರಿ ಮಿಮ್ಸ್ ಗಳನ್ನು ಹಂಚಿಕೊಂಡಿದ್ದರು.

‘ದಿ ಎಲಿಫೆಂಟ್​ ವಿಸ್ಪರರ್ಸ್​’ ಖ್ಯಾತಿಯ ಬೊಮ್ಮನ್‌, ಬೆಳ್ಳಿ ಭೇಟಿ ಮಾಡಲಿರುವ ಮೋದಿ

ಆಸ್ಕರ್ ಪ್ರಶಸ್ತಿ ಪಡೆದ ‘ದಿ ಎಲೆಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿಯಲ್ಲಿ ನಟಿಸಿದ್ದ ಬೊಮ್ಮಾ ಮತ್ತು ಬೆಳ್ಳಿ ದಂಪತಿಯನ್ನು ಇಂದು ಪ್ರಧಾನಿ ಮೋದಿ ಭೇಟಿ ಮಾಡಿ ಸನ್ಮಾನಿಸಲಿದ್ದಾರೆ. ಈಗಾಗಲೇ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ನಡೆಸುತ್ತಿರುವ ಮೋದಿ, ಬಳಿಕ ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಕ್ಯಾಂಪ್ ಗೆ ಆಗಮಿಸಲಿದ್ದಾರೆ. ಬೊಮ್ಮಾ ಮತ್ತು ಬೆಳ್ಳಿ ದಂಪತಿ ಇದೇ ಕ್ಯಾಂಪ್​​ನಲ್ಲಿದ್ದು, ಅವರನ್ನು ಮೋದಿ ಸನ್ಮಾನಿಸಲಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ