logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Deora Quits Congress: ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಹೊಡೆತ: ಕೈ ತೊರೆದ ಯುವ ನಾಯಕ ಮಿಲಿಂದ್‌ ದಿಯೋರಾ

Deora quits congress: ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಹೊಡೆತ: ಕೈ ತೊರೆದ ಯುವ ನಾಯಕ ಮಿಲಿಂದ್‌ ದಿಯೋರಾ

Umesha Bhatta P H HT Kannada

Jan 14, 2024 04:15 PM IST

google News

ಕಾಂಗ್ರೆಸ್‌ ತೊರೆದ ಕಾಂಗ್ರೆಸ್‌ ನಾಯಕ ಮಿಲಿಂದ್‌ ದಿಯೋರಾ ಮುಂಬೈನಲ್ಲಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

    • policital news ಕಾಂಗ್ರೆಸ್‌ನಲ್ಲಿ ದಶಕಗಳಿಂದ ಗುರುತಿಸಿಕೊಂಡಿದ್ದ ದಿಯೋರಾ ಕುಟುಂಬದ ಮಿಲಿಂದ್‌ ದಿಯೋರಾ ಪಕ್ಷ ತೊರೆದಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ಟಿಕೆಟ್‌ ಹಿನ್ನೆಲೆಯಲ್ಲಿ ಅವರು ಶಿವಸೇನೆ ಶಿಂಧೆ ಬಣ ಸೇರಿಕೊಂಡಿದ್ದಾರೆ.
ಕಾಂಗ್ರೆಸ್‌ ತೊರೆದ ಕಾಂಗ್ರೆಸ್‌ ನಾಯಕ ಮಿಲಿಂದ್‌ ದಿಯೋರಾ ಮುಂಬೈನಲ್ಲಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಕಾಂಗ್ರೆಸ್‌ ತೊರೆದ ಕಾಂಗ್ರೆಸ್‌ ನಾಯಕ ಮಿಲಿಂದ್‌ ದಿಯೋರಾ ಮುಂಬೈನಲ್ಲಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಮುಂಬೈ: ಇನ್ನೇನು ಲೋಕಸಭೆ ಚುನಾವಣೆಗೆ ತಯಾರಿ ನಡೆಯುತ್ತಿರುವಾಗಲೇ ಯುವ ಕಾಂಗ್ರೆಸ್‌ ನಾಯಕ ಹಾಗೂ ಮುಂಬೈನಲ್ಲಿ ಪಕ್ಷದ ಪ್ರಮುಖ ನಾಯಕರಾಗಿದ್ದ ಮಿಲಿಂದ್‌ ದಿಯೋರಾ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಉದ್ದವ್‌ ಠಾಕ್ರೆ ಬಣದೊಳಗಿನ ಮುಸುಕಿನ ಗುದ್ದಾಟದಿಂದಾಗಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು. ಕಾಂಗ್ರೆಸ್‌ ಪಕ್ಷದೊಂದಿಗೆ ತಮ್ಮ ಕುಟುಂಬದ 55 ವರ್ಷದ ನಂಟು ಕಡಿದುಕೊಂಡಿದ್ದೇವೆ ಎಂದು ಮಿಲಿಂದ್‌ ದಿಯೋರಾ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಗುರುತಿಸಿಕೊಂಡಿದ್ದ ಮಿಲಿಂದ್‌ ದಿಯೋರಾ ಅವರು ರಾಹುಲ್‌ ಆರಂಭಿಸಿರುವ ಭಾರತ್‌ ಜೋಡೊ ಯಾತ್ರೆಯ ವೇಳೆಯೇ ಪಕ್ಷ ಬಿಟ್ಟಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಪ್ರಮುಖ ನಾಯಕ

ಕೇಂದ್ರ ಸರ್ಕಾರದಲ್ಲಿ ಸಚಿವರೂ ಆಗಿದ್ದ 47 ವರ್ಷದ ಮಿಲಿಂದ್‌ ದಿಯೋರಾ ಅವರು ಎರಡು ಬಾರಿ ಮುಂಬೈ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಸತತ ಎರಡು ಬಾರಿ ಇದೇ ಕ್ಷೇತ್ರದಲ್ಲಿ ಶಿವಸೇನೆ ಉದ್ದವ್‌ ಠಾಕ್ರೆ ಬಣದ ಅರವಿಂದ್‌ ಸಾವಂತ್‌ ಅವರ ವಿರುದ್ದ ಸೋತಿದ್ದರು. ಈ ಬಾರಿ ಮುಂಬೈ ದಕ್ಷಿಣ ಕ್ಷೇತ್ರವನ್ನು ಇಂಡಿಯಾ ಮೈತ್ರಿ ಕೂಟದ ಭಾಗವಾಗಿರುವ ಶಿವಸೇನೆ ಉದ್ದವ್‌ ಠಾಕ್ರೆ ಬಣಕ್ಕೆ ಬಿಟ್ಟುಕೊಡುವಂತೆ ಕೇಳಿಕೊಳ್ಳಲಾಗಿದೆ. ಇದರಿಂದ ಇಲ್ಲಿ ತಮಗೆ ಟಿಕೆಟ್‌ ಕೈ ತಪ್ಪಬಹುದು ಎಂದು ಮಿಲಿಂದ್‌ ದಿಯೋರಾ ಪಕ್ಷ ತೊರೆದಿರುವುದಾಗಿ ಮೂಲಗಳು ತಿಳಿಸಿವೆ.

ಅವರು ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಅಲ್ಲದೇ ರಾಹುಲ್‌ ಗಾಂಧಿ ಅವರೊಂದಿಗೂ ಚರ್ಚಿಸಿದ್ದರು. ಆದರೆ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಪಡೆಯುವ ವಿಚಾರದಲ್ಲಿ ಸ್ಪಷ್ಟತೆ ಇರಲಿಲ್ಲ. ಬೇರೆ ಕಡೆಯೂ ಸ್ಪರ್ಧಿಸುವ ಕುರಿತು ನಿರ್ದೇಶನ ಇರಲಿಲ್ಲ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮಿಲಿಂದ್‌ ಅವರು ಶಿವಸೇನೆ ಶಿಂಧೆ ಬಣ ಸೇರ್ಪಡೆಯಾಗಿದ್ದು, ಮುಂಬೈ ದಕ್ಷಿಣದಿಂದಲೇ ಎನ್‌ಡಿಐಯ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಕಣಕ್ಕೆ ಉಳಿಯುವುದು ಖಚಿತವಾಗಿದೆ.

ಕಾರ್ಯಕರ್ತರಿಗೆ ಋಣಿ

ನನ್ನ ಲಕ್ಷದ ಎಲ್ಲದ ನಾಯಕರಿಗೆ ನಾನು ಋಣಿಯಾಗಿದ್ದೇನೆ. ಅದರಲ್ಲೂ ಕಾರ್ಯಕರ್ತರು ಹಲವಾರು ವರ್ಷಗಳಿಂದ ನನ್ನ ಪರವಾಗಿ ದುಡಿದಿದ್ದೀರಿ. ಇದಕ್ಕೆ ನಾನು ಋಣಿ. ನನ್ನ ರಾಜಕೀಯ ಜೀವನದಲ್ಲಿ ಪ್ರಮುಖ ಘಟ್ಟವಿದು. ಪಕ್ಷದ ಸದಸ್ಯತ್ವಕ್ಕೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ನನ್ನ ಕುಟುಂಬದೊಂದಿಗಿನ ಸುಧೀರ್ಘ ಪಯಣ ಅಂತ್ಯಗೊಂಡಿದೆ. ಇನ್ನೇನಿದ್ದರೂ ಅಭಿವೃದ್ದಿ ಪಥದಲ್ಲಿ ನನ್ನ ರಾಜಕೀಯ ಮುಂದುವರಿಯಲಿದೆ ಎಂದು ಮಿಲಿಂದ್‌ ಹೇಳಿದ್ದಾರೆ.

ಹಿರಿಯ ಕಾಂಗ್ರೆಸ್‌ ನಾಯಕ ಮುರಳಿ ದಿಯೋರಾ ಅವರ ಪುತ್ರರಾದ ಮಿಲಿಂದ್‌ ಅವರು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಹಲವು ರಾಜ್ಯಗಳಲ್ಲಿ ಸಂಘಟನೆಯ ಹೊಣೆಯನ್ನೂ ಹೊತಿದ್ದರು. ಮನಮೋಹನ್‌ ಸಿಂಗ್‌ ಅವರ ಸಂಪುಟದಲ್ಲಿ ಸಚಿವರಾಗಿಯೂ ಉತ್ತಮವಾಗಿ ಕೆಲಸ ಮಾಡಿದ್ದರು. ತಂದೆಯ ನಂತರ ಮಗನಿಗೆ ಸಚಿವ ಸ್ಥಾನವನ್ನು ನೀಡಲಾಗಿತ್ತು.

ಪಕ್ಷ ಬಿಟ್ಟ ಹಲವರು

ಈಗಾಗಲೇ ಜಿತಿನ್‌ ಪ್ರಸಾದ್‌, ಜ್ಯೋತಿರಾಧಿತ್ಯ ಸಿಂಧಿಯಾ, ಹಾರ್ದಿಕ್‌ ಪಟೇಲ್‌, ಅಲ್ಪೇಶ್‌ ಠಾಕೂರ್‌, ಅನಿಲ್‌ ಆಂಟೋನಿ ಸಹಿತ ಹಲವು ಯುವ ನಾಯಕರು ಕಾಂಗ್ರೆಸ್‌ ತೊರೆದಿದ್ದಾರೆ. ಅವರ ಸಾಲಿಗೆ ಮಿಲಿಂದ್‌ ದಿಯೋರಾ ಕೂಡ ಸೇರಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ