logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತೆಲಂಗಾಣ ವಿಧಾನಸಭೆಗೆ ಮತದಾನ, ಮತ ಎಣಿಕೆ ದಿನಾಂಕ; ಕಣದಲ್ಲಿರುವ ಪ್ರಮುಖ ಪಕ್ಷಗಳು, ಹೊಸ ಸರ್ಕಾರ ರಚನೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

ತೆಲಂಗಾಣ ವಿಧಾನಸಭೆಗೆ ಮತದಾನ, ಮತ ಎಣಿಕೆ ದಿನಾಂಕ; ಕಣದಲ್ಲಿರುವ ಪ್ರಮುಖ ಪಕ್ಷಗಳು, ಹೊಸ ಸರ್ಕಾರ ರಚನೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

Raghavendra M Y HT Kannada

Nov 23, 2023 11:41 PM IST

google News

ತೆಲಂಗಾಣ ಚುನಾವಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

  • ತೆಲಂಗಾಣ ವಿಧಾನಸಭೆ ಚುನಾವಣೆ ಯಾವಾಗ?, ಮತದಾನ, ಮತ ಎಣಿಕೆ, ಪ್ರಮುಖ ಪಕ್ಷಗಳು, ಪ್ರಸ್ತುತ ಸರ್ಕಾರದ ಅವಧಿ ಯಾವಾಗ ಮುಗಿಯುತ್ತೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ತೆಲಂಗಾಣ ಚುನಾವಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ತೆಲಂಗಾಣ ಚುನಾವಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೈದರಾಬಾದ್ (ತೆಲಂಗಾಣ): ಪಂಚ ರಾಜ್ಯಗಳ ಚುನಾವಣೆ ಭಾಗವಾಗಿ ತೆಲಂಗಾಣದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ (Telangana Assembly Election) ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಬಿಆರ್‌ಎಸ್ ಪಕ್ಷಕ್ಕೆ ಮೂರನೇ ಬಾರಿಗೆ ಜನರ ಆಶೀರ್ವಾದ ಸಿಗುತ್ತಾ, ಇಲ್ಲ ಬೇರೆ ಪಕ್ಷಕ್ಕೆ ಅಧಿಕಾರಕ್ಕೆ ಕೊಡ್ತಾರಾ ಅನ್ನೋದು ಭಾರಿ ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ಗೆ ವೋಟ್‌ ಹಾಕಿದರೆ ಕರ್ನಾಟಕದಲ್ಲಿನ ಪರಿಸ್ಥಿತಿ ಇಲ್ಲೂ ನಿರ್ಮಾಣವಾಗುತ್ತೆಂದು ಸಿಎಂ ಕೆಸಿಆರ್ ತಮ್ಮ ಚುನಾವಣಾ ಪ್ರಚಾರದ ಭಾಷಣಗಳಲ್ಲಿ ಕೈ ಪಕ್ಷದ ವಿರುದ್ಧ ವಾಗ್ದಾಳಿಯನ್ನು ಮಾಡುತ್ತಿದ್ದಾರೆ. ಅತ್ತ ಕಾಂಗ್ರೆಸ್ ಕೂಡ ಬಿಆರ್‌ಎಸ್ ಮತ್ತು ಬಿಜೆಪಿ ವಿರುದ್ಧ ಸಮರವನ್ನು ಸಾರಿದ್ದು, ಚುನಾವಣಾ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ.

ತೆಲಂಗಾಣ ವಿಧಾನಸಭೆ ಚುನಾವಣೆ ಯಾವಾಗ ನಡೆಯುತ್ತಿದ್ದು, ಮತ ಎಣಿಕೆ ದಿನಾಂಕ, ಪ್ರಸ್ತುತ ಸರ್ಕಾರದ ಅವಧಿ ಮುಗಿಯೋದು ಯಾವಾಗ, ಹೊಸ ಸರ್ಕಾರ ರಚನೆ ಯಾವಾಗ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಯಾವಾಗ ತೆಲಂಗಾಣ ವಿಧಾನಸಭೆಗೆ ಮತದಾನ ನಡೆಯುತ್ತೆ?

ಕೇಂದ್ರ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಅವರು ಅಕ್ಟೋಬರ್ 19 ರಂದು ಸುದ್ದಿಗೋಷ್ಠಿ ನಡೆಸಿ ನೀಡಿದ ಮಾಹಿತಿ ಪ್ರಕಾರ ತೆಲಂಗಾಣ ವಿಧಾನಸಭೆಗೆ 2023ರ ನವೆಂಬರ್ 30 ರಂದು ಚುನಾವಣೆ ನಡೆಯಲಿದೆ.

2. ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶ ಯಾವಾಗ?

2023ರ ಡಿಸೆಂಬರ್ 3 ರಂದು ತೆಲಂಗಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ

3. ತೆಲಂಗಾಣ ವಿಧಾನಸಭೆಯ ಒಟ್ಟು ಸ್ಥಾನಗಳು ಎಷ್ಟು?

ನೆರೆಯ ರಾಜ್ಯವಾದ ತೆಲಂಗಾಣದಲ್ಲಿ ಒಟ್ಟು 119 ವಿಧಾನಸಭಾ ಕ್ಷೇತ್ರಗಳಿವೆ

4. ತೆಲಂಗಾಣದಲ್ಲಿ ಅಧಿಕಾರಕ್ಕೆ ಬೇಕಿರುವ ಸ್ಥಾನಗಳು ಎಷ್ಟು?

ತೆಲಂಗಾಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 60 ಕ್ಷೇತ್ರಗಳಲ್ಲಿ ಗೆಲ್ಲಬೇಕು

5. ತೆಲಂಗಾಣದಲ್ಲಿರುವ ಪ್ರಸ್ತುತ ಸರ್ಕಾರದ ಅವಧಿ ಯಾವಾಗ ಮುಗಿಯುತ್ತೆ?

2024ರ ಜನವರಿ 16 ರಂದು ಪ್ರಸ್ತುತ ಇರುವ ಬಿಆರ್‌ಎಸ್ ಪಕ್ಷದ ಅವಧಿ ಮುಗಿಯಲಿದೆ

6. ಹೊಸ ಸರ್ಕಾರ ಯಾವಾಗ ರಚನೆಯಾಗುತ್ತೆ?

ಪ್ರಸ್ತುತ ಮುಖ್ಯಮಂತ್ರಿ ಕಲ್ವಕುಂಟ್ಲ ಚಂದ್ರಶೇಕರ್ ರಾವ್ ಅವರ ನೇತೃತ್ವದ ಬಿಆರ್‌ಎಸ್ ಸರ್ಕಾರ 2024ರ ಜನವರಿ 16ಕ್ಕೆ ಮುಗಿಯಲಿದೆ. ಆ ವೇಳೆಗಾಗಲೇ ಹೊಸ ಸರ್ಕಾರ ರಚನೆಯಾಗಬೇಕು.

7. ತೆಲಂಗಾಣ ವಿಧಾನಸಭೆ ಚುನಾವಣೆ ಕಣದಲ್ಲಿರುವ ಪ್ರಮುಖ ಪಕ್ಷಗಳು

ತೆಲಂಗಾಣ ವಿಧಾನಸಭೆ ಚುನಾವಣಾ ಕಣದಲ್ಲಿರುವ ಪ್ರಮುಖ ಪಕ್ಷಗಳೆಂರೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಭಾರತೀಯ ಜನತಾ ದಳ (ಬಿಜೆಪಿ), ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್).

ಈ ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ-ಟಿಆರ್‌ಎಸ್‌ ಹೆಸರನ್ನು ಸಿಎಂ ಕೆಸಿಆರ್ ಅವರು ಬಿಆರ್‌ಎಸ್ - ಭಾರತ್ ರಾಷ್ಟ್ರ ಸಮಿತಿಯನ್ನಾಗಿ ಬದಲಾಯಿಸಿಕೊಂಡಿದ್ದಾರೆ. 2018ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ 88 ಕ್ಷೇತ್ರಗಳಲ್ಲಿ ಕೆ ಚಂದ್ರಶೇಖರ್ ರಾವ್ ಅವರ ಪಕ್ಷ ಗೆದ್ದು ಅಧಿಕಾರಕ್ಕೆ ಬಂದಿತ್ತು. ಈ ಸರ್ಕಾರದ ಅವಧಿ 2024ರ ಜನವರಿ 16ಕ್ಕೆ ಮುಕ್ತಾಯಗೊಳ್ಳಲಿದೆ.

ಆಂಧ್ರಪ್ರದೇಶದಿಂದ ತೆಲಂಗಾಣ ಇಬ್ಭಾಗವಾದ ಬಳಿಕ ನಡೆಯುತ್ತಿರುವ ಮೂರನೇ ವಿಧಾನಸಭೆ ಚುನಾವಣೆ ಇದಾಗಿದೆ. ಕಳೆದ ಎರಡೂ ವಿಧಾನಸಭೆ ಚುನಾವಣೆಯಲ್ಲಿ ಕೆಸಿಆರ್ ಅವರ ಪಕ್ಷವೇ ಅಧಿಕಾರಕ್ಕೆ ಬಂದಿದೆ. ಈ ಬಾರಿ ಅವರು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮಗೂ ಒಮ್ಮೆ ಅಧಿಕಾರ ನೀಡಿ ಎಂದು ಮತದಾರರಲ್ಲಿ ಬೇಡುತ್ತಿವೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ