logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pralhad Joshi: ಈಶಾನ್ಯ ಗಣಿಗಾರಿಕೆ ಸಮಾವೇಶದಲ್ಲಿ ನಾಗಲ್ಯಾಂಡ್ ಉಡುಗೆ ತೊಟ್ಟು ಸಂಭ್ರಮಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Pralhad Joshi: ಈಶಾನ್ಯ ಗಣಿಗಾರಿಕೆ ಸಮಾವೇಶದಲ್ಲಿ ನಾಗಲ್ಯಾಂಡ್ ಉಡುಗೆ ತೊಟ್ಟು ಸಂಭ್ರಮಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Oct 31, 2022 10:14 PM IST

ನಾಗಾಲ್ಯಾಂಡ್‌ನ ದಿಮಾಪುರ್‌ನಲ್ಲಿ ಇಂದು ನಡೆದ ಈಶಾನ್ಯ ಗಣಿಗಾರಿಕೆ ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಾಲ್ಗೊಂಡಿದ್ದು, ಈಶಾನ್ಯ ಭಾರತೀಯರ ಉಡುಗೆಯಲ್ಲಿ ಮಿಂಚಿದರು. ಈ ಕಾರ್ಯಕ್ರಮದಲ್ಲಿ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಕುರಿತು ಜೋಶಿ ಮಾತನಾಡಿದರು.

  • ನಾಗಾಲ್ಯಾಂಡ್‌ನ ದಿಮಾಪುರ್‌ನಲ್ಲಿ ಇಂದು ನಡೆದ ಈಶಾನ್ಯ ಗಣಿಗಾರಿಕೆ ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಾಲ್ಗೊಂಡಿದ್ದು, ಈಶಾನ್ಯ ಭಾರತೀಯರ ಉಡುಗೆಯಲ್ಲಿ ಮಿಂಚಿದರು. ಈ ಕಾರ್ಯಕ್ರಮದಲ್ಲಿ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಕುರಿತು ಜೋಶಿ ಮಾತನಾಡಿದರು.
ನಾಗಾಲ್ಯಾಂಡ್‌ನ ದಿಮಾಪುರ್‌ನಲ್ಲಿ  ಇಂದು ನಡೆದ ಈಶಾನ್ಯ ಗಣಿಗಾರಿಕೆ ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಾಲ್ಗೊಂಡಿದ್ದು, ಈಶಾನ್ಯ ಭಾರತೀಯರ ಉಡುಗೆಯಲ್ಲಿ ಮಿಂಚಿದರು. ಈ ಕಾರ್ಯಕ್ರಮದಲ್ಲಿ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಕುರಿತು ಜೋಶಿ ಮಾತನಾಡಿದರು.
(1 / 8)

ದೇಶದ ಬೆಳವಣಿಗೆಯಲ್ಲಿ ಈಶಾನ್ಯ ರಾಜ್ಯಗಳು ತಮ್ಮ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
(2 / 8)
ದೇಶದ ಬೆಳವಣಿಗೆಯಲ್ಲಿ ಈಶಾನ್ಯ ರಾಜ್ಯಗಳು ತಮ್ಮ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾಗಲ್ಯಾಂಡ್ ನ ದಿಮಾಪುರ್ ನಲ್ಲಿ ಇಂದು ಈಶಾನ್ಯ ಗಣಿಗಾರಿಕೆ ಸಮಾವೇಶ ಉದ್ದೇಶಿಸಿ ಸಚಿವರು ಮಾತನಾಡಿದರು. ಇತಿಹಾಸದಲ್ಲೇ ಮೊದಲ ಬಾರಿಗೆ ಈಶಾನ್ಯ ರಾಜ್ಯಗಳ ಗಣಿಗಾರಿಕೆಯಲ್ಲಿ ಹೊಸ ಸಾಧ್ಯತೆಗಳನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತೆರೆದಿಟ್ಟಿದ್ದಾರೆ.
(3 / 8)

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ActEast ನೀತಿಯ ಅಡಿಯಲ್ಲಿ ಈಶಾನ್ಯ ರಾಜ್ಯಗಳು ಗಮನಾರ್ಹ ಕ್ರಮಗಳನ್ನು ತೆಗೆದುಕೊಂಡಿವೆ. ಎನ್‌ಇಆರ್‌ನಲ್ಲಿ ಖನಿಜ ಪರಿಶೋಧನೆಗೆ ಒತ್ತು ನೀಡಲಾಗಿದ್ದು, ಇದು ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
(4 / 8)

ಈಶಾನ್ಯ ಭಾಗದ ಮೊಟ್ಟಮೊದಲ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಸಮಾವೇಶಕ್ಕೆ ಪ್ರಲ್ಹಾದ್ ಜೋಶಿ ಅವರನ್ನ ನಾಗಾಲ್ಯಾಂಡ್ ಮತ್ತು ಅಸ್ಸಾಂ ಸಿಎಂ ಆತ್ಮೀಯವಾಗಿ ಸ್ವಾಗತಿಸಿದರು.
(5 / 8)
ಈಶಾನ್ಯ ಭಾಗದ ಮೊಟ್ಟಮೊದಲ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಸಮಾವೇಶಕ್ಕೆ ಪ್ರಲ್ಹಾದ್ ಜೋಶಿ ಅವರನ್ನ ನಾಗಾಲ್ಯಾಂಡ್ ಮತ್ತು ಅಸ್ಸಾಂ ಸಿಎಂ ಆತ್ಮೀಯವಾಗಿ ಸ್ವಾಗತಿಸಿದರು.(MINT_PRINT)
ಇದೇ ವೇಳೆ  ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ನಾಗಾಲ್ಯಾಂಡ್‌ನ ದಿಮಾಪುರ್‌ನಲ್ಲಿ ಜಿಎಸ್‌ಐ ಅಧಿಕಾರಿಗಳಿಗೆ ಪ್ರತಿಜ್ಞೆ ಬೋಧಿಸಲಾಯಿತು.‌ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಏಕ್ ಭಾರತ್ ಶ್ರೇಷ್ಠ ಭಾರತ್ ನಿರ್ಮಾಣಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ದಾರ್ಶನಿಕರಾಗಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟರು.
(6 / 8)
ಇದೇ ವೇಳೆ ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ನಾಗಾಲ್ಯಾಂಡ್‌ನ ದಿಮಾಪುರ್‌ನಲ್ಲಿ ಜಿಎಸ್‌ಐ ಅಧಿಕಾರಿಗಳಿಗೆ ಪ್ರತಿಜ್ಞೆ ಬೋಧಿಸಲಾಯಿತು.‌ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಏಕ್ ಭಾರತ್ ಶ್ರೇಷ್ಠ ಭಾರತ್ ನಿರ್ಮಾಣಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ದಾರ್ಶನಿಕರಾಗಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟರು.(Caisii Mao)
ನಾಗಾಲ್ಯಾಂಡ್‌ನ ದಿಮಾಪುರ್‌ನಲ್ಲಿರುವ ಜಿಎಸ್‌ಐ ಕಚೇರಿಗೆ ಭೇಟಿ ನೀಡಿದ ಅವರು, ಆ ಭಾಗದ ಪರಿಶೋಧನಾ ಚಟುವಟಿಕೆಗಳಿಗೆ ಕುರಿತಂತೆ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು.
(7 / 8)
ನಾಗಾಲ್ಯಾಂಡ್‌ನ ದಿಮಾಪುರ್‌ನಲ್ಲಿರುವ ಜಿಎಸ್‌ಐ ಕಚೇರಿಗೆ ಭೇಟಿ ನೀಡಿದ ಅವರು, ಆ ಭಾಗದ ಪರಿಶೋಧನಾ ಚಟುವಟಿಕೆಗಳಿಗೆ ಕುರಿತಂತೆ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು. (Caisii Mao)
 ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ಉಪಕ್ರಮಗಳನ್ನು ಖುದ್ದಾಗಿ ಕೇಂದ್ರ ಸಚಿವರೇ ಪರಿಶೀಲಿಸಿದರು. ವಿಶೇಷ ಅಭಿಯಾನ 2.0 ಅಡಿಯಲ್ಲಿ  ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಸ್ವತಃ ಸಸಿಗಳನ್ನು ನೆಟ್ಟು ನೀರೆದರು. ಒಟ್ಟಾರೆ ಈಶಾನ್ಯ ಭಾಗದ ಮೊಟ್ಟಮೊದಲ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಸಮಾವೇಶದ ಮೂಲಕ ಈಶಾನ್ಯ ಭಾಗದ ಆರ್ಥಿಕಾಭಿವೃದ್ಧಿ ದೃಷ್ಟಿಯಿಂದ ಮಹತ್ತರ ಹೆಜ್ಜೆಗೆ ಪ್ರಲ್ಹಾದ ಜೋಶಿಯವರು ಮುಂದಡಿ ಇಟ್ಟಿದ್ದಾರೆ.
(8 / 8)
ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ಉಪಕ್ರಮಗಳನ್ನು ಖುದ್ದಾಗಿ ಕೇಂದ್ರ ಸಚಿವರೇ ಪರಿಶೀಲಿಸಿದರು. ವಿಶೇಷ ಅಭಿಯಾನ 2.0 ಅಡಿಯಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಸ್ವತಃ ಸಸಿಗಳನ್ನು ನೆಟ್ಟು ನೀರೆದರು. ಒಟ್ಟಾರೆ ಈಶಾನ್ಯ ಭಾಗದ ಮೊಟ್ಟಮೊದಲ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಸಮಾವೇಶದ ಮೂಲಕ ಈಶಾನ್ಯ ಭಾಗದ ಆರ್ಥಿಕಾಭಿವೃದ್ಧಿ ದೃಷ್ಟಿಯಿಂದ ಮಹತ್ತರ ಹೆಜ್ಜೆಗೆ ಪ್ರಲ್ಹಾದ ಜೋಶಿಯವರು ಮುಂದಡಿ ಇಟ್ಟಿದ್ದಾರೆ.(Pitamber Newar)

    ಹಂಚಿಕೊಳ್ಳಲು ಲೇಖನಗಳು