logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  2000 Note: ಪ್ರಧಾನಿ ಮೋದಿಗೆ 2 ಸಾವಿರ ರೂಪಾಯಿ ನೋಟು ಇಷ್ಟನೇ ಇರಲಿಲ್ವಂತೆ, ಮಾಜಿ ಕಾರ್ಯದರ್ಶಿ ಬಹಿರಂಗಪಡಿಸಿದ್ರು ಸತ್ಯ

2000 Note: ಪ್ರಧಾನಿ ಮೋದಿಗೆ 2 ಸಾವಿರ ರೂಪಾಯಿ ನೋಟು ಇಷ್ಟನೇ ಇರಲಿಲ್ವಂತೆ, ಮಾಜಿ ಕಾರ್ಯದರ್ಶಿ ಬಹಿರಂಗಪಡಿಸಿದ್ರು ಸತ್ಯ

Praveen Chandra B HT Kannada

May 21, 2023 01:07 PM IST

google News

₹2000 Note: ಪ್ರಧಾನಿ ಮೋದಿಗೆ 2 ಸಾವಿರ ರೂಪಾಯಿ ನೋಟು ಇಷ್ಟನೇ ಇರಲಿಲ್ವಂತೆ, ಮಾಜಿ ಕಾರ್ಯದರ್ಶಿ ಬಹಿರಂಗಪಡಿಸಿದ್ರು ಸತ್ಯ

    • 2,00 ರೂಪಾಯಿ ದೈನಂದಿನ ವಹಿವಾಟಿಗೆ ಸೂಕ್ತವಲ್ಲ ಎಂದು ಪ್ರಧಾನಿ ಮೋದಿ ನಂಬಿದ್ದರು ಎಂದು ಅವರು ಹೇಳಿದರು. ಇದು ತೆರಿಗೆ ವಂಚನೆ ಮತ್ತು ಕಪ್ಪು ಹಣವನ್ನು ಉತ್ತೇಜಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
 ₹2000 Note: ಪ್ರಧಾನಿ ಮೋದಿಗೆ 2 ಸಾವಿರ ರೂಪಾಯಿ ನೋಟು ಇಷ್ಟನೇ ಇರಲಿಲ್ವಂತೆ, ಮಾಜಿ ಕಾರ್ಯದರ್ಶಿ ಬಹಿರಂಗಪಡಿಸಿದ್ರು ಸತ್ಯ
₹2000 Note: ಪ್ರಧಾನಿ ಮೋದಿಗೆ 2 ಸಾವಿರ ರೂಪಾಯಿ ನೋಟು ಇಷ್ಟನೇ ಇರಲಿಲ್ವಂತೆ, ಮಾಜಿ ಕಾರ್ಯದರ್ಶಿ ಬಹಿರಂಗಪಡಿಸಿದ್ರು ಸತ್ಯ (PTI)

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಡಿಜಿಟಲ್‌ ಪಾವತಿಯನ್ನು ಉತ್ತೇಜಿಸುವುದು, ಕಪ್ಪು ಹಣವನ್ನು ತಡೆಯುವುದು ಮತ್ತು ದೇಶದಲ್ಲಿ ತೆರಿಗೆ ವಂಚನೆಯನ್ನು ಕಡಿಮೆ ಮಾಡುವ ಉದ್ದೇಶ ಇದರ ಹಿಂದೆ ಇದೆಯೆಂದು ಬಿಜೆಪಿ ಸಚಿವರು ಆರ್‌ಬಿಐ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಇನ್ನೊಂದೆಡೆ 2000 ರೂಪಾಯಿ ನೋಟು ವಿಚಾರವಾಗಿ ವಿರೋಧ ಪಕ್ಷಗಳು ಮೋದಿಯನ್ನು ಪ್ರಶ್ನಿಸುತ್ತಿವೆ.

ಮುಂದಿನ ಕೆಲವು ತಿಂಗಳುಗಳಲ್ಲಿ ದೇಶದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ 2000 ರೂಪಾಯಿ ನೋಟಿನ ಕುರಿತು ಮಾಜಿ ಪ್ರಧಾನ ಕಾರ್ಯದರ್ಶಿಯೊಬ್ಬರು ಮಾತನಾಡಿದ್ದಾರೆ. "ಪ್ರಧಾನಿ ನರೇಂದ್ರ ಮೋದಿಯವರಿಗೆ 2000 ರೂಪಾಯಿ ನೋಟು ಇರುವುದು ಇಷ್ಟವಾಗಿರಲಿಲ್ಲ ಎಂದು ಪ್ರಧಾನಿಯವರ  ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಹೇಳಿದ್ದರು" ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಹೋದರಿ ಪತ್ರಿಕೆ ಲೈವ್‌ ಹಿಂದೂಸ್ತಾನ್‌ ವರದಿ ಮಾಡಿದೆ.

2016 ರಲ್ಲಿ ನೋಟು ಅಮಾನ್ಯೀಕರಣದ ಘೋಷಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು 2 ಸಾವಿರ ರೂ.ನಂತಹ ದೊಡ್ಡ ನೋಟು ಮಾರುಕಟ್ಟೆಗೆ ಬರಲು ಬಯಸಲಿಲ್ಲ. ಆದರೆ ಅಲ್ಪಾವಧಿಯ ಕ್ರಮವಾಗಿ ಅದನ್ನು ಬಿಡುಗಡೆ ಮಾಡಬೇಕಾಯಿತು ಎಂದು ಅವರು ಹೇಳಿದ್ದಾರೆ. ನೋಟು ಅಮಾನ್ಯೀಕರಣದ ವೇಳೆ ಮಿಶ್ರಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.

2,00 ರೂಪಾಯಿ ದೈನಂದಿನ ವಹಿವಾಟಿಗೆ ಸೂಕ್ತವಲ್ಲ ಎಂದು ಪ್ರಧಾನಿ ಮೋದಿ ನಂಬಿದ್ದರು ಎಂದು ಅವರು ಹೇಳಿದರು. ಇದು ತೆರಿಗೆ ವಂಚನೆ ಮತ್ತು ಕಪ್ಪು ಹಣವನ್ನು ಉತ್ತೇಜಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಸುಗಮ ವಹಿವಾಟಿಗಾಗಿ ಕಡಿಮೆ ಮೌಲ್ಯದ ನೋಟುಗಳನ್ನು ಮಾರುಕಟ್ಟೆಗೆ ತರಲು ಪ್ರಧಾನಿ ಮೋದಿ ಯಾವಾಗಲೂ ಒಲವು ತೋರುತ್ತಿದ್ದರು ಎಂದು ಮಿಶ್ರ ಹೇಳಿದ್ದಾರೆ.

ನೋಟು ಅಮಾನ್ಯೀಕರಣದ ಘೋಷಣೆಯಾದ ನವೆಂಬರ್ 8 ರಂದೇ ಪ್ರಧಾನಿ ಪ್ರಕಟಿಸಿದ್ದು 2000 ಮುಖಬೆಲೆಯ ನೋಟು. ಅಂದರೆ ಕೆನ್ನೇರಳೆ ಬಣ್ಣದ ನೋಟನ್ನು ಬಳಕೆಗೆ ಒದಗಿಸಲಾಯಿತು. ಆ ನೋಟುಗಳು ಭಾರತ ಪ್ರಕಟಿಸಿದ ಮೇಕ್ ಇನ್ ಇಂಡಿಯಾ ಯೋಜನೆಯ ಮೊದಲ ನೋಟೂ ಹೌದು.

ಈ ನೋಟುಗಳು ಮುದ್ರಣವಾಗಿದ್ದು ಕರ್ನಾಟಕದ ಮೈಸೂರು, ಪಶ್ಚಿಮಬಂಗಾಲದ ಸಾಲ್ಬನಿ, ಮಹಾರಾಷ್ಟದ ನಾಸಿಕ್ ಹಾಗೂ ಮಧ್ಯಪ್ರದೇಶದ ದೇವಾಸ್‌ನಲ್ಲಿ. ಮೊದಲೆಲ್ಲಾ ನೋಟು ಮುದ್ರಣಕ್ಕೆ ಬೇಕಾದ ಪೇಪರ್ ಅನ್ನು ಹೊರ ದೇಶದಿಂದ ತರಿಸಲಾಗುತ್ತಿತ್ತು. ಈಗ ಮೈಸೂರಿನಲ್ಲಿಯೇ ನೋಟು ತಯಾರಿ ನಡೆಯುತ್ತದೆ. ಅದು ಹತ್ತಿ ಹಾಗೂ ನೀರು ಬಳಸಿ ವಿಶೇಷವಾಗಿ ಪೇಪರ್ ತಯಾರಿಸುವ ಘಟಕವಿದೆ.

2000 ಮುಖಬೆಲೆಯ ನೋಟು ವಿನಿಮಯ ಮಾಡಿಕೊಳ್ಳುವುದು ಹೇಗೆ?

ಭಾರತೀಯ ರಿಸರ್ವ್‌ ಬ್ಯಾಂಕ್ (Reserve Bank of India - RBI) ಶುಕ್ರವಾರ (ಮೇ 19) rU 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಿದೆ. 'ಸ್ವಚ್ಛ ನೋಟು ನೀತಿ'ಯ ಭಾಗವಾಗಿ ಈ ಆದೇಶ ಹೊರಡಿಸಿರುವುದಾಗಿ ರಿಸರ್ವ್‌ ಬ್ಯಾಂಕ್ ತಿಳಿಸಿದೆ. 'ನಮ್ಮ ಬಳಿ ಸಾಕಷ್ಟು ನೋಟುಗಳು ಉಳಿದಿವೆ, ಈಗ ರಿಸರ್ವ್ ಬ್ಯಾಂಕ್ ನಿರ್ದೇಶನದ ನಂತರ ನಮ್ಮ ಹಣ ಮೌಲ್ಯ ಕಳೆದುಕೊಂಡು ಕೇವಲ ಕಾಗದವಷ್ಟೇ ಆಗಿಬಿಡುವುದೇ' ಎಂಬ ಅನುಮಾನ ಹಲವರನ್ನು ಕಾಡುತ್ತಿದೆ. ಇಂಥ ಅನುಮಾನಗಳಿಗೆ ಇಲ್ಲಿದೆ ಉತ್ತರ. ನೋಟು ಅಮಾನ್ಯದ ವಿವರ, ವಿನಿಮಯಕ್ಕೆ ಅನುಸರಿಸಬೇಕಾದ ಕ್ರಮದ ಬಗ್ಗೆ ನೀವು ತಿಳಿಯಬೇಕಾದ 5 ಮುಖ್ಯ ಅಂಶಗಳಿವು. ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

 

 

 

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ