Nirmala Sitharaman son in law: ನಿರ್ಮಲಾ ಸೀತಾರಾಮನ್ ಅವರ ಅಳಿಯ ಯಾರು?; ಪಿಎಂ ಮೋದಿ ಕೂಡ ಕಣ್ಣು ಮುಚ್ಚಿ ನಂಬುವ ವ್ಯಕ್ತಿಯ ವಿವರ
Jan 09, 2024 08:17 PM IST
ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರ ಪುತ್ರಿ ವಾಙ್ಮಯಿ ಅವರ ವಿವಾಹ ಬೆಂಗಳೂರಿನಲ್ಲಿ ಸರಳವಾಗಿ ನೆರವೇರಿದೆ.
Nirmala Sitharaman son in law: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಳಿಯ ಪ್ರತೀಕ್ ದೋಷಿ ಯಾರು? ಸರಳವಾಗಿ ವಿವಾಹ ನಡೆದ ಕಾರಣ ಎಲ್ಲರ ಕುತೂಹಲ ಹೆಚ್ಚಾಗಿದೆ. ಪ್ರತೀಕ್ ದೋಷಿ ಬಗ್ಗೆ ನಮಗೆ ತಿಳಿದಿರುವ ಮಾಹಿತಿ ಇಷ್ಟು-
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಪುತ್ರಿ ಪರಕಾಲ ವಾಙ್ಮಯಿ (Parakala Vangamayi) ಅವರು ಗುರುವಾರ ಕರ್ನಾಟಕ (Karnataka) ದಲ್ಲಿ ಸರಳ ಸಮಾರಂಭದಲ್ಲಿ ವಿವಾಹವಾದರು. ಈ ಕಾರ್ಯಕ್ರಮ ತೀರಾ ಖಾಸಗಿಯಾಗಿದ್ದು, ರಾಜಕೀಯ ಹೆವಿವೇಯ್ಟ್‌ಗಳು ಅಥವಾ ಯಾವುದೇ ವಿವಿಐಪಿಗಳು ಅತಿಥಿಗಳಾಗಿ ಆಗಮಿಸಿರಲಿಲ್ಲ. ಕುಟುಂಬ ಸದಸ್ಯರು ಮತ್ತು ಹಿತೈಷಿಗಳು ಹಾಗೂ ಸಂತರ ಸಮ್ಮುಖದಲ್ಲಿ ವಿವಾಹ ನಡೆಯಿತು.
ವರ ಗುಜರಾತ್ ನಿವಾಸಿ ಪ್ರತೀಕ್ ದೋಷಿ (Pratik Doshi). ಹಿಂದು ಬ್ರಾಹ್ಮಣ ಸಂಪ್ರದಾಯ ಪ್ರಕಾರ ವಿವಾಹ ನೆರವೇರಿತು. ಉಡುಪಿ ಅದಮಾರು ಮಠದ ಶ್ರೀಗಳು ಉಪಸ್ಥಿತರಿದ್ದು, ವಧು,ವರರನ್ನು ಆಶೀರ್ವದಿಸಿದರು.
ಪ್ರತೀಕ್ ದೋಷಿ ಸಿಂಗಾಪುರ ಮ್ಯಾನೇಜ್‌ಮೆಂಟ್ ಸ್ಕೂಲ್‌ನ ಪದವೀಧರ. ಗುಜರಾತ್‌ನಲ್ಲಿ ನರೇಂದ್ರ ಮೋದಿ (Narendra Modi) ಅವರು ಮುಖ್ಯಮಂತ್ರಿ ಆಗಿದ್ದಾಗ ಒಬ್ಬ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿದ್ದವರು. ಈಗ ಅಂದರೆ 2014ರಿಂದೀಚೆಗೆ ಪ್ರಧಾನಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಪರಕಾಲ ವಾಙ್ಮಯಿ ಅವರುಮಿಂಟ್ ಲೌಂಜ್‌ನ ಬುಕ್ಸ್ ಆಂಡ್ ಕಲ್ಚರ್ ವಿಭಾಗದಲ್ಲಿ ಫೀಚರ್ ಲೇಖಕರಾಗಿ ಓದುಗ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಸೀತಾರಾಮನ್ ಅಳಿಯ ಪ್ರತೀಕ್ ದೋಷಿ ಯಾರು?
1) ಪ್ರತೀಕ್ ದೋಷಿ ಗುಜರಾತ್‌ನವರು. ಪ್ರಧಾನಮಂತ್ರಿ ಕಚೇರಿಯಲ್ಲಿ 2014ರಿಂದ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾದಾಗ, ಜೂನ್ 2019 ರಲ್ಲಿ ಅವರಿಗೆ ಜಂಟಿ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಸಿಕ್ಕಿದೆ.
2) ಪ್ರತೀಕ್ ದೋಷಿ ಸಿಂಗಾಪುರ ಮ್ಯಾನೇಜ್‌ಮೆಂಟ್ ಸ್ಕೂಲ್‌ನ ಪದವೀಧರರು. ಗುಜರಾತ್‌ನಲ್ಲಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಮುಖ್ಯಮಂತ್ರಿ ಕಚೇರಿಯಲ್ಲಿ (CMO) ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿದ್ದರು.
3) ಪ್ರಧಾನಮಂತ್ರಿ ಕಚೇರಿಯ ವೆಬ್‌ಸೈಟ್ ಪ್ರಕಾರ, ಅವರು ಪ್ರಧಾನಮಂತ್ರಿ ಕಚೇರಿಯಲ್ಲಿ ಸಂಶೋಧನೆ ಮತ್ತು ಕಾರ್ಯತಂತ್ರದ ವಿಭಾಗವನ್ನು ನೋಡಿಕೊಳ್ಳುತ್ತಾರೆ.
4) ಅಪರಾಧಿಗಳು, ಉನ್ನತ ಅಧಿಕಾರಿಗಳು ಮತ್ತು ಸರ್ಕಾರದ ಪ್ರಮುಖ ವ್ಯಕ್ತಿಗಳ ಮೇಲೆ ಪ್ರಧಾನಿ ಮೋದಿ ಅವರ "ಕಣ್ಣು ಮತ್ತು ಕಿವಿ" ಎಂದು ಪರಿಗಣಿಸಲ್ಪಟ್ಟ 360 ಡಿಗ್ರಿ ಕಣ್ಗಾವಲು ನಡೆಸುತ್ತಾರೆ ಎಂದು ವರದಿಯಾಗಿದೆ. ಅವರು ಅಧಿಕಾರಶಾಹಿಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಗೆ ಅಗತ್ಯ ಒಳಹರಿವು ಮತ್ತು ಪ್ರತಿಕ್ರಿಯೆಯನ್ನು ನೀಡುತ್ತಾರೆ.
4) ಪಿಎಂ ಮೋದಿಯ "ಕಣ್ಣು ಮತ್ತು ಕಿವಿ" ಎಂದು ಪರಿಗಣಿಸಲಾದ ದೋಷಿ, ಶಾಗಳು ಮತ್ತು ಪ್ರಮುಖ ವ್ಯಕ್ತಿಗಳು, ಸರ್ಕಾರದ ಉನ್ನತ ಸೇವಕರ ಮೇಲೆ 360 ಡಿಗ್ರಿ ಕಣ್ಗಾವಲನ್ನು ನಡೆಸುವ ತಂಡದ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿ ಪ್ರಧಾನಿ ಮೋದಿಗೆ ಅಗತ್ಯ ಮಾಹಿತಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ನೆರವಾಗುತ್ತಾರೆ.
5) ಪ್ರತೀಕ್ ದೋಷಿ ಹೆಚ್ಚು ಜನಪ್ರಿಯರಲ್ಲ. ಅವರು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪುತ್ರಿ ಸರಳ ವಿವಾಹ
ಸಚಿವೆ ನಿರ್ಮಲಾ ಸೀತಾರಾಮನ್ ಅವರ ಏಕೈಕ ಪುತ್ರಿ ವಾಙ್ಮಯಿ ಅವರ ವಿವಾಹ ಬೆಂಗಳೂರಿನಲ್ಲಿ ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು. ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯದಂತೆ ಮದುವೆ ನಡೆಯಿತು. ವಧು ವಾಙ್ಮಯಿ ನಸುಗೆಂಪು ಬಣ್ಣ ಸೀರೆಯನ್ನು ಉಟ್ಟಿದ್ದರೆ, ವರ ಪ್ರತೀಕ್ ಬಿಳಿ ಪಂಚೆ ಮತ್ತು ಶಾಲು ಧರಿಸಿದ್ದರು. ಮದುವೆಯ ವಿಡಿಯೋವನ್ನು ಉಡುಪಿಯ ಅದಮಾರು ಮಠದ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಆಗಿದೆ. ಹಿಂದುಸ್ತಾನ್ ಟೈಮ್ಸ್ ಕನ್ನಡದ ಯೂಟ್ಯೂಬ್ ಚಾನೆಲ್‌ನಲ್ಲೂ ಆ ವಿಡಿಯೋವನ್ನು ವೀಕ್ಷಿಸಬಹುದು. ಇಲ್ಲೇ ಕೆಳಗಿದೆ.
ವಿಭಾಗ