logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Indian Railways: ಧಾರ್ಮಿಕ ಕ್ಷೇತ್ರ ದರ್ಶನಕ್ಕೆ ಭಾರತ್‌ ಗೌರವ್‌ ವಿಶೇಷ ರೈಲು, ಮೇ 18ಕ್ಕೆ ಆರಂಭ, ಮಾರ್ಗ, ದರ ಪರಿಶೀಲಿಸಿ

Indian Railways: ಧಾರ್ಮಿಕ ಕ್ಷೇತ್ರ ದರ್ಶನಕ್ಕೆ ಭಾರತ್‌ ಗೌರವ್‌ ವಿಶೇಷ ರೈಲು, ಮೇ 18ಕ್ಕೆ ಆರಂಭ, ಮಾರ್ಗ, ದರ ಪರಿಶೀಲಿಸಿ

Umesha Bhatta P H HT Kannada

May 13, 2024 12:55 AM IST

google News

ಭಾರತ್‌ ಗೌರವ್‌ ವಿಶೇಷ ರೈಲು ಹೀಗಿದೆ

    • ಉತ್ತರ ಭಾರತದ ಪ್ರಸಿದ್ದ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಭಾರತ್‌ ಗೌರವ್‌( Bharat Gaurav) ವಿಶೇಷ ರೈಲು ಸೇವೆಯನ್ನು ಭಾರತೀಯ ರೈಲ್ವೆ( Indian Railway) ಆರಂಭಿಸಲಿದೆ. ಇದರ ವಿವರ ಇಲ್ಲಿದೆ.
ಭಾರತ್‌ ಗೌರವ್‌ ವಿಶೇಷ ರೈಲು ಹೀಗಿದೆ
ಭಾರತ್‌ ಗೌರವ್‌ ವಿಶೇಷ ರೈಲು ಹೀಗಿದೆ

ದೆಹಲಿ: ನೀವು ಉತ್ತರ ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬೇಕೇ. ಒಂದೇ ಪ್ರವಾಸದಲ್ಲಿ ಉತ್ತರ ಭಾರತದ ಯಾತ್ರಾ ಸ್ಥಳಗಳನ್ನು ನೋಡುವ ಅಭಿಲಾಷೆ ಇಟ್ಟುಕೊಂಡಿದ್ದೀರಾ, ಕಡಿಮೆ ಖರ್ಚಿಯಲ್ಲಿ ಸುರಕ್ಷಿತವಾಗಿ ಪ್ರವಾಸ ಕೈಗೊಳ್ಳುವ ಉದ್ದೇಶವಿದೆಯಾ, ಇದಕ್ಕಾಗಿ ಭಾರತೀಯ ರೈಲ್ವೆ( Indian Railway) ಭಾರತ್‌ ಗೌರವ್‌ ಎನ್ನುವ ವಿಶೇಷ ರೈಲನ್ನು ಇದಕ್ಕಾಗಿಯೇ ಆರಂಭಿಸಲಿದೆ. ಮೇ 18ರಂದು ಭಾರತ್‌ ಗೌರವ್‌ ನ ಮೊದಲ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಸಂಚರಿಸುವ ಮಾರ್ಗ, ಪ್ರಯಾಣದ ದಿನಗಳು, ಪ್ರಯಾಣಕ್ಕೆ ತಗುಲುವ ವೆಚ್ಚ, ರೈಲಿನಲ್ಲಿ ದೊರೆಯುವ ಸೌಲಭ್ಯಗಳು, ಆರಂಭ ಹಾಗೂ ಅಂತ್ಯದ ಊರುಗಳ ವಿವರ ಸೇರಿದಂತೆ ರೈಲು ಸಂಚಾರದ ವಿವರಗಳನ್ನು ಭಾರತೀಯ ರೈಲ್ವೆ ಬಿಡುಗಡೆ ಮಾಡಿದೆ.

ಇತ್ತೀಚೆಗೆ ಭಾರತೀಯ ರೈಲ್ವೆಯ ಈಶಾನ್ಯ ಫ್ರಾಂಟಿಯರ್‌ ರೈಲ್ವೆ ( NFR) ಈ ವಿಶೇಷ ರೈಲಿನ ವಿವರ ಬಿಡುಗಡೆ ಮಾಡಿದೆ. ಪಶ್ಚಿಮ ಬಂಗಾಲದ ನ್ಯೂ ಜಲಪಾಯ್‌ ಗುರಿಯಲ್ಲಿ ಈ ವಿಶೇಷ ರೈಲಿನ ಸಂಚಾರ ಮೇ 18 ರಂದು ಆರಂಭವಾಗಲಿದೆ.

ಈ ವಿಶೇಷ ಪ್ರವಾಸಿ ರೈಲು ಕೇಂದ್ರ ಸರ್ಕಾರದ ಒಂದು ಭಾರತ ಶ್ರೇಷ್ಠ ಭಾರತ, ಭಾರತವನ್ನು ನೋಡಿ(Ek Bharat, Shrestha Bharat' and 'Dekho Apna Desh) ಪರಿಕಲ್ಪನೆಯಡಿ ರೂಪಿಸಲಾಗಿದೆ. ಭಾರತ್‌ ಗೌರವ್‌ ಎನ್ನುವ ಹೆಸರಿನಡಿ ಈ ರೈಲು ಸಂಚರಿಸಲಿದೆ. ದೇಶಿಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಇದು ಸಹಕಾರಿಯಾಗಲಿದೆ ಎಂಬುದು ಅಧಿಕಾರಿಗಳ ವಿವರಣೆ.

ಇದು ಒಟ್ಟು 8 ರಾತ್ರಿ ಹಾಗೂ 9 ಹಗಲಿನಲ್ಲಿ ವಿಶೇಷ ರೈಲು ಸಂಚರಿಸಲಿದೆ. ವೈಷ್ಣೋದೇವಿ, ಹರಿದ್ವಾರ, ರಿಷಿಕೇಷ, ಮಥುರಾ, ವೃಂದಾವನ ಹಾಗೂ ಅಯೋಧ್ಯೆ ದರ್ಶನವನ್ನು ಮಾಡಿಸಲಿದೆ.

ಈ ರೈಲು ಒಟ್ಟು3 ಎಸಿ ಟೈಯರ್‌, ಸ್ಲೀಪರ್‌ ದರ್ಜೆಯ ಬೋಗಿಗಳನ್ನು ಹೊಂದಿರಲಿದೆ. ಈ ರೈಲು ನಿಗದಿತ ಮಾರ್ಗದಲ್ಲಿಯೇ ಸಂಚರಿಸಲಿದ್ದು, ಮಾಲ್ದಾ, ರಾಮಪುರ್ಹತ್‌, ದುಮ್ಕಾ, ಭಗಲ್‌ಪುರ, ಜಮಲ್‌ಪುರ, ಕುಯಿಲ್‌ ನಿಲ್ದಾಣಗಳಲ್ಲಿ ನಿಂತು ಪಟ್ನಾ ತಲುಪಲಿದೆ.

ಮರು ದಿನ ವೈಷೋದೇವಿ ಕಾತ್ರಾ, ಆನಂತರ ಹರಿದ್ವಾರ, ಮಥುರಾ, ಅಯೋಧ್ಯೆಗೆ ಆಗಮಿಸಲಿದೆ. ಮೇ 26ಕ್ಕೆ ಪಾಟ್ನಾಕ್ಕೆ ಆಗಮಿಸಲಿದ್ದು. ಅಲ್ಲಿಂದಲೂ ಪ್ರವಾಸಿಗರು ನಿರ್ಗಮಿಸಬಹುದು. ಇಲ್ಲದೇ ಇದ್ದರೆ ನ್ಯೂ ಜಲಪಾಯ್‌ ಗುರಿಗೂ ತೆರಳಬಹುದು ಎಂದು ತಿಳಿಸಲಾಗಿದೆ.

ಈ ರೈಲಿನ ಪ್ರಯಾಣಕ್ಕೆ ದರವನ್ನೂ ನಿಗದಿ ಮಾಡಲಾಗಿದೆ. ಎಸಿ ಬೋಗಿಯಲ್ಲಿ ಸಂಚರಿಸುವ ಒಬ್ಬರಿಗೆ 29,500 ರೂ. ಹಾಗೂ ಸ್ಲೀಪರ್‌ ಬೋಗಿಯಲ್ಲಿ ತೆರಳುವವರಿಗೆ 17,900 ರೂ. ನಿಗದಿಪಡಿಸಲಾಗಿದೆ. ಇದು ಪ್ರವಾಸಿ ಸ್ನೇಹಿ ದರವಾಗಿದ್ದು, ಉತ್ತರ ಭಾರತದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರವಾಸವನ್ನು ಕಡಿಮೆ ದರದಲ್ಲಿ ಮಾಡಬಹುದು ಎಂದು ತಿಳಿಸಲಾಗಿದೆ.

irctc ವೆಬ್‌ ಸೈಟ್‌ ಮೂಲಕ ತಮ್ಮ ಪ್ರವಾಸದ ಸೀಟ್‌ ಅನ್ನು ಬುಕ್‌ ಮಾಡಿಕೊಳ್ಳಬಹುದು ಎಂದು ಭಾರತೀಯ ರೈಲ್ವೆ ತಿಳಿಸಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ