Ayodhya: ಜ 22 ಕ್ಕೆ ಅಯೋಧ್ಯೆಯಲ್ಲಿ ರಾಮ ವಿಗ್ರಹದ ಪ್ರಾಣಪ್ರತಿಷ್ಠೆ, ಆರಂಭವಾಗಿದೆ ಅಕ್ಷತೆ ಹಂಚಿಕೆ; ಇಲ್ಲಿದೆ ಕಾರ್ಯಕ್ರಮ ವಿವರ
Jan 17, 2024 09:12 PM IST
ರಾಮಮಂದಿರ
- ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಮೊದಲ ಹಂತದ ಕಾಮಗಾರಿ ಸಂಪೂರ್ಣವಾಗಿದ್ದು, ರಾಮಮಂದಿರುವ ಜನವರಿ 22 ರಂದು ಉದ್ಘಾಟನೆಗೊಳ್ಳಲಿದೆ. ಈ ದಿನ ಮಧ್ಯಾಹ್ನ 12.20ಕ್ಕೆ ಪ್ರಾಣಪ್ರತಿಷ್ಠಾ ಪೂಜೆ ನಡೆಯಲಿದ್ದು, ಈಗಾಗಲೇ ರಾಮಮಂದಿರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಕ್ಷತೆ ಹಂಚಿಕೆ ಕಾರ್ಯಕ್ರಮ ನಡೆಯುತ್ತಿದೆ. ಈ ಕುರಿತ ವಿವರ ಇಲ್ಲಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ಮೊದಲ ಹಂತ ಮುಕ್ತಾಯವಾಗಿತ್ತು ಜನವರಿ 22 ರಂದು ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ. ಜನವರಿ 22 ರಂದು ನಡೆಯುವ ಈ ಕಾರ್ಯಕ್ರಮಕ್ಕೆ ದೇಶದಾದ್ಯಂತ ರಾಮಭಕ್ತರು ಕಾತರಿಂದ ಕಾಯುತ್ತಿದ್ದಾರೆ. ಈಗಾಗಲೇ ಹಲವು ಗಣ್ಯರಿಗೆ ರಾಮಮಂದಿರ ನಿರ್ಮಾಣಕ್ಕೆ ಆಹ್ವಾನ ನೀಡಲಾಗಿದೆ.
ಜನವರಿ 22 ರಂದು ಮಧ್ಯಾಹ್ನ 12.20ಕ್ಕೆ ಪ್ರಾಣಪ್ರತಿಷ್ಠಾಪನ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಅಯೋಧ್ಯೆಯಲ್ಲಿ ಗಂಧಾಕ್ಷತೆಯನ್ನು ವಿತರಿಸುವ ಕಾರ್ಯಕ್ರಮ ನಡೆಯುತ್ತಿದೆ. ಹೊಸ ವರ್ಷದ ಮೊದಲ ದಿನದಿಂದ ಅಕ್ಷತೆ ವಿತರಿಸಲಾಗುತ್ತಿದೆ. ಅಕ್ಕಿಯೊಂದಿಗೆ ಅರಿಶಿನ ಹಾಗೂ ತುಪ್ಪ ಬೆರೆಸಿ ಅಕ್ಷತೆಯನ್ನು ತಯಾರಿಸಲಾಗಿದೆ. ಜನವರಿ 15ರವರೆಗೆ ಅಕ್ಷತೆಯನ್ನು ವಿತರಿಸಲಾಗುತ್ತದೆ.
ರಾಮಮಂದಿರದ ಚಿತ್ರವಿರುವ ಕಾಗದದ ಪೌಚ್‌ನಲ್ಲಿ ಟ್ರಸ್ಟ್‌ನ ಲೋಗೊ ಹಾಗೂ ಅಯೋಧ್ಯೆ - ದೇವಾಲಯದ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಶೀರ್ಷಿಕೆ ಹೊಂದಿರುವ ಹಾಗೂ ದೇವಾಲಯ ರಚನೆಯ ವಿವರ ಇರುವ ಕರಪತ್ರವನ್ನು ಜನರಿಗೆ ಹಂಚಲಾಗುತ್ತಿದೆ.
ಇದನ್ನೂ ಓದಿ: Ayodhya Ram mandir: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಕರ್ನಾಟಕ ಕಲಾವಿದ ಅರುಣ್ ಕೆತ್ತಿದ ರಾಮನ ವಿಗ್ರಹ ಆಯ್ಕೆ: ಯಾರು ಈ ಅರುಣ್ ಯೋಗಿರಾಜ್
ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್, ರಾಮಮಂದಿರ ಉದ್ಘಾಟನೆಯನ್ನು ದೇಶದಾದ್ಯಂತ ಜನರು ಹಬ್ಬದಂತೆ ಆಚರಿಸಬೇಕು ಎಂದು ಕರೆ ಕೊಟ್ಟರು. ಅಕ್ಷತೆ ವಿತರಣೆಯ ಸಂದರ್ಭ ದೇಶದಾದ್ಯಂತ ರಾಮಮಂದಿರ ರೀತಿಯಲ್ಲೇ ಬೇರೆ ಬೇರೆ ದೇಗುಲಗಳಲ್ಲೂ ಆಚರಣೆಗಳು ನಡೆಯಬೇಕು ಎಂದು ಅವರು ಕರೆ ನೀಡಿದರು.
ಮಕರ ಸಂಕ್ರಾಂತಿವರೆಗೂ ಅಕ್ಷತೆ ವಿತರಣಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕರ್ತರು ಪಟ್ಟಣಗಳು, ಹಳ್ಳಿ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಅಕ್ಷತೆ ಹಂಚುತ್ತಿದ್ದಾರೆʼ ಎಂದು ಚಂಪತ್ ರಾಯ್ ತಿಳಿಸಿದ್ದಾರೆ.
ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಭಾರತ ಹಾಗೂ ವಿವಿಧ ದೇಶಗಳಲ್ಲಿ ಆಹ್ವಾನಿತರಾಗಿರುವ 7,000 ಅತಿಥಿಗಳು ಭಾಗವಹಿಸುವ ಸಾಧ್ಯತೆ ಇದೆ. ಈ ಸಮಾರಂಭದಲ್ಲಿ ಸುಮಾರು 7ಲಕ್ಷಕ್ಕೂ ಅಧಿಕ ಭಕ್ತರು ಅಯೋಧ್ಯೆಗೆ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: PM Modi: ಅಯೋಧ್ಯೆಯಲ್ಲಿ ಮೀರಾ ಮಾಂಜಿ ಮನೆಗೆ ಪ್ರಧಾನಿ ಮೋದಿ ದಿಢೀರ್ ಭೇಟಿ, ಯಾರು ಈ ಮಹಿಳೆ
ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ಜನರು ತಮ್ಮ ಮನೆ ಮನೆಗಳಲ್ಲಿ ದೀಪ ಹಚ್ಚಬೇಕು, ಆರತಿ ಬೆಳಗಬೇಕು ಎಂದು ಅವರು ಹೇಳಿದ್ದಾರೆ.
ರಾಮಮಂದಿರ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವಿದ್ದು ಸಾಂಪ್ರದಾಯಿಕ ನಾಗರಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಪ್ರತಿ ಮಹಡಿ 20 ಅಡಿ ಎತ್ತರ ಇರಲಿದೆ.
ಹೊಸ ವರ್ಷದಂದು ರಾಮಲಲಾನನ್ನು ಪ್ರಾರ್ಥಿಸಲು ಮತ್ತು ಸರಯು ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಬಹಳಷ್ಟು ಜನ ಅಯೋಧ್ಯೆಯಲ್ಲಿ ಸೇರಿದ್ದರು. ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿದ ಉತ್ತರಾಖಂಡದ ಮಹಿಳೆಯರ ಗುಂಪಿನಿಂದ ಶೋಭಾಯಾತ್ರೆ ಕೂಡ ನಡೆಯಿತು.