logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Airtel Price Hike: ಏರ್‌ಟೆಲ್‌ ಗ್ರಾಹಕರೇ ಗಮನಿಸಿ: ಮಿನಿಮಮ್‌ ರಿಚಾರ್ಜ್‌ ಪ್ಲ್ಯಾನ್‌ ಬೆಲೆ ಈಗ...!

Airtel Price Hike: ಏರ್‌ಟೆಲ್‌ ಗ್ರಾಹಕರೇ ಗಮನಿಸಿ: ಮಿನಿಮಮ್‌ ರಿಚಾರ್ಜ್‌ ಪ್ಲ್ಯಾನ್‌ ಬೆಲೆ ಈಗ...!

HT Kannada Desk HT Kannada

Nov 23, 2022 09:41 AM IST

google News

ಸಂಗ್ರಹ ಚಿತ್ರ

    • ಏರ್‌ಟೆಲ್ ತನ್ನ ಪ್ರತಿ ಬಳಕೆದಾರರಿಂದ ಸರಾಸರಿ ಆದಾಯವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದು, ಇದಕ್ಕಾಗಿ ಮಿನಿಮಮ್ ರೀಚಾರ್ಜ್ ಪ್ಲ್ಯಾನ್ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲು ಮುಂದಾಗಿದೆ. ಪ್ರಾಯೋಗಿಕವಾಗಿ ಹರಿಯಾಣ ಮತ್ತು ಒಡಿಶಾದಲ್ಲಿ ಮಿನಮಮ್ ರಿಚಾರ್ಜ್ ಬೆಲೆಯನ್ನು 155 ರೂ.ಗೆ ಏರಿಸಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ಈ ದರ ಪರಿಷ್ಕರಣೆ ಜಾರಿಯಾಗುವ ಮುನ್ಸೂಚನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (MINT_PRINT)

ನವದೆಹಲಿ: ದೇಶದಲ್ಲಿ 5G ಸೇವೆ ಒದಗಿಸಲಿರುವ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಭಾರ್ತಿ ಏರ್‌ಟೆಲ್‌, ಇದೀಗ ತನ್ನ ಮಿನಿಮಮ್‌ ರಿಚಾರ್ಜ್‌ ಪ್ಲ್ಯಾನ್‌ ಬೆಲೆಯಲ್ಲಿ ಏರಿಕೆ ಮಾಡಿದೆ. ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಏರ್‌ಟೆಲ್‌, ಇದೀಗ ದರ ಪರಿಷ್ಕರಣೆಗೆ ಮುಂದಾಗಿರುವುದು ಗಮನ ಸೆಳೆದಿದೆ.

ಏರ್‌ಟೆಲ್ ತನ್ನ ಪ್ರತಿ ಬಳಕೆದಾರರಿಂದ ಸರಾಸರಿ ಆದಾಯವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದು, ಇದಕ್ಕಾಗಿ ಮಿನಿಮಮ್ ರೀಚಾರ್ಜ್ ಪ್ಲ್ಯಾನ್ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲು ಮುಂದಾಗಿದೆ. ಪ್ರಾಯೋಗಿಕವಾಗಿ ಹರಿಯಾಣ ಮತ್ತು ಒಡಿಶಾದಲ್ಲಿ ಮಿನಮಮ್ ರಿಚಾರ್ಜ್ ಬೆಲೆಯನ್ನು 155 ರೂ.ಗೆ ಏರಿಸಿರುವ ಏರ್‌ಟೆಲ್‌, ಹಂತ ಹಂತವಾಗಿ ದೇಶದ ಇತರ ರಾಜ್ಯಗಳಲ್ಲೂ, ಈ ನೂತನ ದರವನ್ನು ಪರಿಚಯಿಸಲಿದೆ ಎನ್ನಲಾಗಿದೆ. ಏರ್‌ಟೆಲ್ ಗ್ರಾಹಕರು ತಮ್ಮ ಸಿಮ್ ಸಕ್ರೀಯವಾಗಿ ಇರಿಸಿಕೊಳ್ಳಲು ಇದೀಗ ಕನಿಷ್ಠ 155 ರೂ. ರೀಚಾರ್ಜ್ ಯೋಜನೆಗೆ ಚಂದಾದಾರಗಬೇಕು.

ಈ ಮೊದಲು ದೇಶದಾದ್ಯಂತ ಏರ್‌ಟೆಲ್ ಗ್ರಾಹಕರು ತಮ್ಮ ಸಿಮ್ ಸಕ್ರೀಯವಾಗಿ ಇಟ್ಟುಕೊಳ್ಳಲು, 99 ರೂ. ಪ್ರೀಪೇಡ್ ಯೋಜನೆಗೆ ಚಂದಾದಾರಗಾಗಿದ್ದರು. ಆದರೆ ಹರಿಯಾಣ ಮತ್ತು ಒಡಿಶಾದಲ್ಲಿ ಇದೀಗ ಮಿನಿಮಮ್‌ ರಿಚಾರ್ಜ್‌ ಬೆಲೆಯಲ್ಲಿ ಶೇ. 57ರಷ್ಟು ವೃದ್ಧಿ ಮಾಡಲಾಗಿದೆ. ಅಂದರೆ ಈ ಎರಡೂ ರಾಜ್ಯಗಳಲ್ಲಿ ಮಿನಿಮಮ್‌ ರಿಚಾರ್ಜ್‌ ಬೆಲೆ ಇದೀಗ 99 ರೂ. ದಿಂದ 155 ರೂ. ಗೆ ಏರಿಕೆಯಾಗಿದೆ.

ಏರ್‌ಟೆಲ್ ಕಂಪನಿಯ ವೆಬ್‌ಸೈಟ್‌ನಲ್ಲಿ ಈ ಕುರಿತು ಮಾಹಿತಿ ನೀಡಲಾಗಿದ್ದು, ಕಂಪನಿಯು ಪ್ರಾಯೋಗಿಕವಾಗಿ ಈ ರೀಚಾರ್ಜ್ ಪ್ಲಾನ್ ಅನ್ನು ಹರಿಯಾಣ ಮತ್ತು ಒಡಿಶಾಗಳಲ್ಲಿ ಜಾರಿಗೊಳಿಸಿದೆ. ಆದರೆ, ಮುಂದಿನ ಕೆಲ ದಿನಗಳಲ್ಲಿ ದೇಶದಾದ್ಯಂತ ಈ ದರ ಪರಿಷ್ಕರಣೆ ಜಾರಿಯಾಗಲಿದೆ ಎಂದು ಹೇಳಲಾಗಿದೆ.

ಒಂದು ವೇಳೆ ಈ ಪ್ರಾಯೋಗಿಕ ದರ ಪರಿಷ್ಕರಣೆ ಯಶಸ್ವಿಯಾದಲ್ಲಿ, ಇದರ ಫಲಿತಾಂಶವನ್ನು ಆಧರಿಸಿ ಮುಂದಿನ ದಿನಗಳಲ್ಲಿ ದೇಶಾದ್ಯಂತ ಈ ಯೋಜನೆಯನ್ನು ಏರ್‌ಟೆಲ್‌ ಜಾರಿಗೊಳಿಸಲಿದೆ. ಒಂದು ವೇಳೆ ದೇಶಾದ್ಯಂತ ಈ ಯೋಜನೆ ಜಾರಿಯಾದಲ್ಲಿ, ಉಚಿತ ಎಸ್‌ಎಂಎಸ್‌ ಮತ್ತು ಡೇಟಾದೊಂದಿಗೆ 155 ರೂ.ಗಿಂತ ಕಡಿಮೆ ಬೆಲೆಯ ಎಲ್ಲ 28 ದಿನದ ಕರೆ ಯೋಜನೆಗಳನ್ನು ಏರ್‌ಟೆಲ್ ರದ್ದುಗೊಳಿಸಬಹುದು ಎನ್ನಲಾಗಿದೆ.

ಸದ್ಯಕ್ಕೆ ಮಾರುಕಟ್ಟೆ ಪರಿಸ್ಥಿತಿಯನ್ನು ಆಧರಿಸಿ ದರ ಪರಿಷ್ಕರಣೆಯನ್ನು ಕಾರ್ಯಗತಗೊಳಿಸುವಲ್ಲಿ ಏರ್‌ಟೆಲ್‌ ತನ್ನ ಮೊದಲ ಹೆಜ್ಜೆಯನ್ನಿಟ್ಟಿದ್ದು, ಏರ್‌ಟೆಲ್‌ ಈ ನಿರ್ಧಾರ ಇತರ ಟೆಲಿಕಾಂ ಕಂಪನಿಗಳ ಮೇಲೂ ಪರಿಣಾಮ ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಏರ್‌ಟೆಲ್ ಈ ಮೊದಲು 99 ರೂ.ಬೆಲೆಯ ಕನಿಷ್ಠ ರೀಚಾರ್ಜ್ ಪ್ಲ್ಯಾನ್ ಹೊಂದಿತ್ತು. ಈ ಯೋಜನೆಯು 28 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದ್ದು, 200 MBಯ ಅತ್ಯಂತ ಸೀಮಿತ ಡೇಟಾ ಸೇವೆ ಒದಗಿಸುತ್ತಿತ್ತು. ಆದರೆ ಇದೀಗ ಏರ್‌ಟೆಲ್ ಪರಿಚಯಿಸಿರುವ 155 ರೂ. ಬೆಲೆಯ ಕನಿಷ್ಠ ರೀಚಾರ್ಜ್ ಪ್ಲ್ಯಾನ್, 28 ದಿನಗಳವರೆಗೆ ಅನಿಯಮಿತ ಧ್ವನಿ, 1GB ಡೇಟಾ ಮತ್ತು 300 ಉಚಿತ ಎಸ್‌ಎಂಎಸ್‌ ಸೇವೆಯನ್ನು ನೀಡುತ್ತದೆ.

ಇದೇ ವೇಳೆ ದೂರಸಂಪರ್ಕ ನಿಯಂತ್ರಕ ಟ್ರಾಯ್ (TRAI)‌ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಭಾರ್ತಿ ಏರ್‌ಟೆಲ್‌ ಟೆಲಿಕಾಂ ಸಂಸ್ಥೆ ಒಂದು ತಿಂಗಳಲ್ಲಿ 4.12 ಲಕ್ಷ ಗ್ರಾಹಕರನ್ನು ಹೆಚ್ಚಿಸಿಕೊಂಡಿದೆ. ದೇಶಾದ್ಯಂರ ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ರಿಲಯನ್ಸ್‌ ಜಿಯೋ ಮೊದಲ ಸ್ಥಾನದಲ್ಲಿದ್ದು, ಕಳೆದ ಸೆಪ್ಟೆಂಬರ್‌ ತಿಂಗಳೊಂದರಲ್ಲೇ, 7.2 ಲಕ್ಷ ವೈರ್‌ಲೆಸ್ ಚಂದಾದಾರರನ್ನು ಕಂಪನಿಯು ಸೇರ್ಪಡೆ ಮಾಡಿಕೊಂಡಿದೆ ಎಂದು ಟ್ರಾಯ್‌ ವರದಿ ಹೇಳಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ