logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Republic Day 2024: ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ, ಧ್ವಜಾರೋಹಣ, ಪರೇಡ್ ಸಮಯ ಸೇರಿ ಪ್ರಮುಖ ಅಂಶಗಳು ಇಲ್ಲಿವೆ

Republic Day 2024: ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ, ಧ್ವಜಾರೋಹಣ, ಪರೇಡ್ ಸಮಯ ಸೇರಿ ಪ್ರಮುಖ ಅಂಶಗಳು ಇಲ್ಲಿವೆ

Raghavendra M Y HT Kannada

Jan 26, 2024 11:31 AM IST

google News

ದೆಹಲಿಯ ಕರ್ತವ್ಯ ಪಥದಲ್ಲಿ ಬೆಳಗ್ಗೆ 10.30ಕ್ಕೆ ಗಣರಾಜ್ಯೋತ್ಸವದ ಪರೇಡ್ ಆರಂಭವಾಗುತ್ತದೆ

  • ದೆಹಲಿಯ ಕರ್ತವ್ಯ ಪಥದಲ್ಲಿ 2024ರ ಗಣರಾಜ್ಯೋತ್ಸದ ಪರೇಡ್ ಬೆಳಗ್ಗೆ 10.30ಕ್ಕೆ ಆರಂಭವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ.

ದೆಹಲಿಯ ಕರ್ತವ್ಯ ಪಥದಲ್ಲಿ ಬೆಳಗ್ಗೆ 10.30ಕ್ಕೆ ಗಣರಾಜ್ಯೋತ್ಸವದ ಪರೇಡ್ ಆರಂಭವಾಗುತ್ತದೆ
ದೆಹಲಿಯ ಕರ್ತವ್ಯ ಪಥದಲ್ಲಿ ಬೆಳಗ್ಗೆ 10.30ಕ್ಕೆ ಗಣರಾಜ್ಯೋತ್ಸವದ ಪರೇಡ್ ಆರಂಭವಾಗುತ್ತದೆ (PTI)

ದೆಹಲಿ: ದೇಶಾದ್ಯಂತ 75ನೇ ಗಣರಾಜ್ಯೋತ್ಸವ (Republic Day 2024) ಸಂಭ್ರಮದ ಸಡಗರ ಮನೆ ಮಾಡಿದ್ದು, ರಾಷ್ಟ್ರರಾಜಧಾನಿ ದೆಹಲಿಯಲ್ಲಿಂದು (ಜನವರಿ 26, ಶುಕ್ರವಾರ) ಬೆಳಗ್ಗೆ 9.30ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಭಾರತೀಯ ಸೇನೆಯ ಪರಾಕ್ರಮ ಹಾಗೂ ರೋಮಾಂಚನಕಾರಿ ಪ್ರದರ್ಶನ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳ್ಳಲಿದೆ.

ಈ ಬಾರಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದು, ನಿನ್ನೆ (ಜನವರಿ 25, ಗುರುವಾರ) ರಾಜಸ್ಥಾನದ ಜೈಪುರಕ್ಕೆ ಆಗಮಿಸಿದ್ದಾರೆ. 17ನೇ ಶತಮಾನದ ಕೋಟೆ, 18ನೇ ಶತಮಾನದ ಕೆಲವು ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಫ್ರೆಂಚ್ ಅಧ್ಯಕ್ಷರನ್ನು ತೆರೆದ ಜೀಪಿನಲ್ಲಿ ಸುತ್ತಾಡಿಸಿದ್ದಾರೆ. ರಸ್ತೆಗಳ ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದ ನೂರಾರು ಜನರು ಗುಲಾಬಿ ಹೂಗಳನ್ನು ಸುರಿಮಳೆಗೈದು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

2024ರ ಗಣರಾಜ್ಯೋತ್ಸವ ಪರೇಡ್ ಸಮಯ ಸೇರಿ ಪ್ರಮುಖ ಅಂಶಗಳು ಇಲ್ಲಿವೆ

ಗಣರಾಜ್ಯೋತ್ಸವ ಪರೇಡ್: ದೆಹಲಿಯ ಕರ್ತವ್ಯ ಪಥದಲ್ಲಿ ಪರೇಡ್ ಬೆಳಗ್ಗೆ 10.30ಕ್ಕೆ ಆರಂಭವಾಗಿ ಸುಮಾರು 90 ನಿಮಿಷಗಳ ಕಾಲ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕ್ಕೆ ಭೇಟಿ ನೀಡುವುದರೊಂದಿಗೆ ಸಮಾರಂಭ ಪ್ರಾರಂಭವಾಗುತ್ತದೆ. ಇಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನಂತರ ಮೆರವಣಿಗೆ ವೀಕ್ಷಿಸಲು ಕರ್ತವ್ಯ ಪಥದ ವೇದಿಕೆಗೆ ಆಗಮನ

ರಾಷ್ಟ್ರಪತಿಗಳ ಆಗಮನ: ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮುಖ್ಯ ಅತಿಥಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಗಮನ. ರಾಷ್ಟ್ರಪತಿಯವರ ಅಂಕರಕ್ಷಕ ಬೆಂಗಾವಲು ಪಡೆಯಿಂದ ಮ್ಯಾಕ್ರನ್ ಅವರನ್ನು ಸ್ವಾಗತಿಸಿದ್ದಾರೆ. ರಾಷ್ಟ್ರಪತಿಗಳ ಅಂಗರಕ್ಷಕ ಭಾರತೀಯ ಸೇನೆಯ ಅತ್ಯಂತ ಹಿರಿಯ ರೆಜಿಮೆಂಟ್ ಆಗಿದೆ.

ಅಂಗರಕ್ಷಕ: ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಗಣ್ಯರ ರೆಜಿಮೆಂಟ್‌ಗೆ ವಿಶೇಷವಾಗಿದೆ. 'ಅಂಗ್‌ರಕ್ಷಕ್' ಅನ್ನು 1773 ರಲ್ಲಿ ಸ್ಥಾಪನೆ ಮಾಡಲಾಗಿತ್ತು. ಇದೀಗ 250 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದೆ. 'ಸಾಂಪ್ರದಾಯಿಕ ಬಗ್ಗಿ'ಯಲ್ಲಿ ರಾಷ್ಟ್ರಪತಿ ಮುರ್ಮು ಮತ್ತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಆಗಮಿಸುತ್ತಾರೆ.

ಕರ್ತವ್ಯ ಪಥ: 2024ರ ಗಣರಾಜ್ಯೋತ್ಸವ ಪರೇಡ್ ವಿಜಯ್ ಚೌಕ್‌ನಿಂದ ಆರಂಭವಾಗಿ ಕರ್ತವ್ಯ ಪಥದ ವರೆಗೆ ಸಾಗುತ್ತದೆ. ಸರಿಸುಮಾರು 77,000 ಜನರು ಕುಳಿತು ಪರೇಡ್ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲ 42,000 ಸಾರ್ವಜನಿಕರಿಗೆ ಆಸನಗಳನ್ನು ಕಾಯ್ದಿರಿಸಲಾಗಿದೆ.

ರಾಷ್ಟ್ರೀಯ ಧ್ವಜ ಮತ್ತು ರಾಷ್ಟ್ರಗೀತೆ: ದೇಶೀಯ ಗನ್ ಸಿಸ್ಟಮ್ 105-ಎಂಎಂ ಇಂಡಿಯನ್ ಫೀಲ್ಡ್ ಗನ್‌ಗಳೊಂದಿಗೆ ನೀಡಲಾದ 21-ಗನ್ ಸೆಲ್ಯೂಟ್‌ನೊಂದಿಗೆ ವಿಜೃಂಭಿಸುವ 21-ಗನ್ ಸೆಲ್ಯೂಟ್‌ನೊಂದಿಗೆ ರಾಷ್ಟ್ರಗೀತೆ ಆರಂಭವಾಗುತ್ತದೆ. ನಂತರ ರಾಷ್ಟ್ರಧ್ವಜವನ್ನು ಬಿಚ್ಚಿಡಲಾಗುತ್ತದೆ.

ಹೂವಿನ ಸುರಿಮಳೆ: 105 ಹೆಲಿಕಾಪ್ಟರ್ ಘಟಕದ 4 Mi-17 IV ಹೆಲಿಕಾಪ್ಟರ್‌ಗಳು ಕರ್ತವ್ಯ ಪಥದಲ್ಲಿ ಭಾಗವಹಿಸುವ ಪ್ರೇಕ್ಷಕರ ಮೇಲೆ ಹೂವಿನ ಸುರಿಮಳೆ ಸುರಿಸಲಿವೆ. ಇದಾದ ನಂತರ 100 ಕ್ಕೂ ಹೆಚ್ಚು ಮಹಿಳಾ ಕಲಾವಿದರು ವಿವಿಧ ರೀತಿಯ ತಾಳವಾದ್ಯಗಳನ್ನು ನೀಡಲಿದ್ದಾರೆ. ‘ಆವಾಹನ್’ ಬ್ಯಾಂಡ್ ಪ್ರದರ್ಶನವು ನಾರಿ ಶಕ್ತಿಯನ್ನು ಪ್ರದರ್ಶಿಸಲಿದೆ.

ರಾಷ್ಟ್ರಪತಿಗಳಿಗೆ ಗೌರವ ವಂದನೆ: ನಂತರ ರಾಷ್ಟ್ರಪತಿ ಮುರ್ಮು ಅವರು ಗೌರವ ವಂದನೆ ಸ್ವೀಕರಿಸುವ ಮೂಲಕ ಪರೇಡ್ ಆರಂಭವಾಗಲಿದೆ. ಪರೇಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಭವ್ನಿಶ್ ಕುಮಾರ್ ಆಗಿದ್ದಾರೆ. ದೆಹಲಿ ಪ್ರದೇಶದ ಕಮಾಂಡಿಂಗ್ ಜನರಲ್ ಆಫೀಸರ್ ನೇತೃತ್ವದಲ್ಲಿ ಪರೇಡ್ ನಡೆಯಲಿದೆ.

ಶೌರ್ಯ ಪ್ರಶಸ್ತಿಗಳು: ಅತ್ಯುನ್ನತ ಶೌರ್ಯ ಪ್ರಶಸ್ತಿಗಳ ಪ್ರದಾನ ನಡೆಯಲಿದೆ. ಪರಮವೀರ ಚಕ್ರ ವಿಜೇತರು ಸುಬೇದಾರ್ ಮೇಜರ್ (ಗೌರವ ನಾಯಕ) ಯೋಗೇಂದ್ರ ಸಿಂಗ್ ಯಾದವ್ (ನಿವೃತ್ತ) ಮತ್ತು ಸುಬೇದಾರ್ ಮೇಜರ್ ಸಂಜಯ್ ಕುಮಾರ್ (ನಿವೃತ್ತ), ಮತ್ತು ಅಶೋಕ್ ಚಕ್ರ ವಿಜೇತರು ಮೇಜರ್ ಜನರಲ್ ಸಿಎ ಪಿತವಾಲ್ಲಾ (ನಿವೃತ್ತ), ಕರ್ನಲ್ ಡಿ ಶ್ರೀರಾಮ್ ಕುಮಾರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಜಸ್ ರಾಮ್ ಸಿಂಗ್ ( ನಿವೃತ್ತ) ಪ್ರಶಸ್ತಿ ಪುರಸ್ಕೃತರು.

ಫ್ರೆಂಚ್ ತುಕಡಿ: ಫ್ರೆಂಚ್ ಸಶಸ್ತ್ರ ಪಡೆಗಳ ಸಂಯೋಜಿತ ಬ್ಯಾಂಡ್ ಮತ್ತು ಕವಾಯತು ತಂಡವು ಕಾರ್ತವ್ಯ ಪಥದಲ್ಲಿ ಪರೇಡ್ ನಡೆಸಲಿದೆ. 30-ಸದಸ್ಯ ಬ್ಯಾಂಡ್ ತುಕಡಿಯನ್ನು ಕ್ಯಾಪ್ಟನ್ ಖೌರ್ದಾ ನೇತೃತ್ವ ವಹಿಸಿದ್ದಾರೆ. ನಂತರ ಕ್ಯಾಪ್ಟನ್ ನೋಯೆಲ್ ನೇತೃತ್ವದ 90 ಸದಸ್ಯರ ಮೆರವಣಿಗೆಯ ತುಕಡಿ. ಒಂದು ಬಹು ಪಾತ್ರದ ಟ್ಯಾಂಕರ್ ಸಾರಿಗೆ ವಿಮಾನ ಮತ್ತು ಫ್ರೆಂಚ್ ವಾಯು ಮತ್ತು ಬಾಹ್ಯಾಕಾಶ ಪಡೆಗಳ ಎರಡು ರಫೇಲ್ ಫೈಟರ್ ಜೆಟ್‌ಗಳು ಸೆಲ್ಯೂಟಿಂಗ್ ನಡೆಯುತ್ತದೆ.

ಭಾರತೀಯ ಸೇನಾ ತುಕಡಿ: ಸೇನೆಯ ಮೊದಲ ತುಕಡಿ 61 ಅಶ್ವದಳವನ್ನು ಯಶ್ದೀಪ್ ಅಹ್ಲಾವತ್ ಅವರು ಮುನ್ನಡೆಸಲಿದ್ದಾರೆ. 1953 ರಿಂದ 61 ಅಶ್ವಸೈನ್ಯವು ಎಲ್ಲಾ 'ರಾಜ್ಯ ಕುದುರೆ ಸವಾರಿ ಘಟಕಗಳ' ಸಂಯೋಜನೆಯೊಂದಿಗೆ ವಿಶ್ವದ ಏಕೈಕ ಸಕ್ರಿಯ ಹಾರ್ಸ್ಡ್ ಕ್ಯಾವಲ್ರಿ ರೆಜಿಮೆಂಟ್ ಆಗಿದೆ. ಟ್ಯಾಂಕ್ T-90 ಭೀಷ್ಮ, NAG ಕ್ಷಿಪಣಿ ವ್ಯವಸ್ಥೆ, ಪದಾತಿ ದಳದ ಯುದ್ಧ ವಾಹನ, ಆಲ್-ಟೆರೈನ್ ವೆಹಿಕಲ್, ಪಿನಾಕಾ, ವೆಪನ್ ಲೊಕೇಟಿಂಗ್ ರಾಡಾರ್ ಸಿಸ್ಟಮ್ 'ಸ್ವಾತಿ', ಸರ್ವತ್ರ ಮೊಬೈಲ್ ಬ್ರಿಡ್ಜಿಂಗ್ ಸಿಸ್ಟಮ್, ಡ್ರೋನ್ ಜ್ಯಾಮರ್ ಸಿಸ್ಟಮ್ ಈ ಬಾರಿ ಪರೇಡ್‌ನಲ್ಲಿ ಪ್ರಮುಖ ಹೈಲೈಟ್ಸ್ ಆಗಿದೆ.

ಭಾರತೀಯ ನೌಕಾಪಡೆಯ ತುಕಡಿ: ಭಾರತೀಯ ನೌಕಾಪಡೆಯ ತುಕಡಿಯು 144 ಪುರುಷ ಮತ್ತು ಮಹಿಳಾ ಅಗ್ನಿವೀರ್‌ಗಳನ್ನು ಒಳಗೊಂಡಿರುತ್ತದೆ. ಲೆಫ್ಟಿನೆಂಟ್ ಪ್ರಜ್ವಲ್ ಎಂ ಅವರು ಕಂಟಿಜನ್ ಕಮಾಂಡರ್ ಆಗಿ ಮತ್ತು ಲೆಫ್ಟಿನೆಂಟ್ ಮುದಿತಾ ಗೋಯಲ್, ಲೆಫ್ಟಿನೆಂಟ್ ಶರ್ವಾಣಿ ಸುಪ್ರೀಯಾ ಮತ್ತು ಲೆಫ್ಟಿನೆಂಟ್ ದೇವಿಕಾ ಹೆಚ್ ಅವರು ಪ್ಲಟೂನ್ ಕಮಾಂಡರ್‌ಗಳಾಗಿದ್ದಾರೆ. ನಂತರ ನೌಕಾದಳದ ಟ್ಯಾಬ್ಲೋವು 'ನಾರಿ ಶಕ್ತಿ' ಮತ್ತು 'ಸ್ವದೇಶೀಕರಣದ ಮೂಲಕ ಸಾಗರಗಳಾದ್ಯಂತ ಸಮುದ್ರ ಶಕ್ತಿ' ವಿಷಯಗಳನ್ನು ಪ್ರದರ್ಶಿಸುತ್ತದೆ.

ಭಾರತೀಯ ವಾಯುಪಡೆಯ ತುಕಡಿ: ಭಾರತೀಯ ವಾಯುಪಡೆಯು (IAF) ಸ್ಕ್ವಾಡ್ರನ್ ಲೀಡರ್ ರಶ್ಮಿ ಠಾಕೂರ್ ನೇತೃತ್ವದಲ್ಲಿ 144 ಏರ್‌ಮೆನ್ ಮತ್ತು ನಾಲ್ಕು ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ಸ್ಕ್ವಾಡ್ರನ್ ನಾಯಕರಾದ ಸುಮಿತಾ ಯಾದವ್ ಮತ್ತು ಪ್ರತೀತಿ ಅಹ್ಲುವಾಲಿಯಾ, ಫೈಟರ್ ಲೆಫ್ಟಿನೆಂಟ್ ಕೀರ್ತಿ ರೋಹಿಲ್ ಅವರು ಕಂಟಿಜನ್ ಕಮಾಂಡರ್‌ನ ಹಿಂದೆ ಸೂಪರ್‌ನ್ಯೂಮರರಿ ಆಫೀಸರ್‌ಗಳಾಗಿ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಈ ಬಾರಿಯ ಐಎಎಪ್ ಟ್ಯಾಬ್ಲೋ 'ಭಾರತೀಯ ವಾಯು ಸೇನೆ: ಸಕ್ಷಮ್, ಸಶಕ್ತ್, ಆತ್ಮನಿರ್ಭರ್' ಎಂಬ ವಿಷಯದ ಮೇಲೆ ಇದೆ.

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತರು: ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಅಸಾಧಾರಣ ಸಾಮರ್ಥ್ಯ, ಶೌರ್ಯ, ಕಲೆ ಮತ್ತು ಸಂಸ್ಕೃತಿ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ ಹಾಗೂ ಸಾಮಾಜಿಕ ಸೇವೆಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಹೊಂದಿರುವ ಮಕ್ಕಳು ಪರೇಡ್‌ನಲ್ಲಿ ಸಾಗಲಿದ್ದಾರೆ. (This copy first appeared in Hindustan Times Kannada website. To read more like this please logon to kannada.hindustantime.com).

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ