ಆತ್ಮೀಯರಿಗೆ ಗಣರಾಜ್ಯೋತ್ಸವ ಶುಭಾಶಯ ತಿಳಿಸಲು ಇಲ್ಲಿವೆ ಸಂದೇಶ, ವಾಟ್ಸಪ್, ಫೇಸ್‌ಬುಕ್ ಸ್ಟೇಟಸ್ ಫೋಟೊಗಳು
Jan 25, 2024 10:04 PM IST
ಜನವರಿ 26 ರಂದು ಪ್ರತಿ ವರ್ಷ ಗಣರಾಜ್ಯೋತ್ಸವನ್ನು ಆಚರಿಸುತ್ತೇವೆ. ಈ ವರ್ಷ ನಿಮ್ಮ ಆಪ್ತರಿಗೆ ಶುಭಾಶಯ ಕೋರಲು, ವಾಟ್ಸಪ್ ಹಾಗೂ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿಕೊಳ್ಳಲು ಫೋಟೊಸ್ ಹಾಗೂ ಸಂದೇಶಗಳು ಇಲ್ಲಿವೆ.
ನಿಮ್ಮ ಸ್ನೇಹಿತರು, ಆಪ್ತರು ಹಾಗೂ ಸಂಬಂಧಿಕರಿಗೆ ಗಣರಾಜ್ಯೋತ್ಸವ ಶುಭಾಶಯ ತಿಳಿಸಲು ಸಂದೇಶಗಳು, ವಾಟ್ಸಾಪ್ ಹಾಗೂ ಫೇಸ್‌ಬುಕ್ ಸ್ಟೇಟಸ್‌ಗಳು ಇಲ್ಲಿವೆ.
ದೆಹಲಿ: ಭಾರತವು ತನ್ನ 75 ನೇ ಗಣರಾಜ್ಯೋತ್ಸವವನ್ನು (ಗಣತಂತ್ರ ದಿವಸ್) ಜನವರಿ 26ರ ಶುಕ್ರವಾರ ಆಚರಿಸಲು ಸಜ್ಜಾಗಿದೆ. ದೇಶದ ಎಲ್ಲಾ ಪ್ರಜೆಗಳು ಈ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ.
ದೆಹಲಿಯ ಕರ್ತವ್ಯಪಥದಲ್ಲಿ ನಡೆಯುವ ಸೇನಾ ಶಕ್ತಿ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆಯುತ್ತವೆ. 1950ರ ಜನವರಿ 26 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಗಣರಾಜ್ಯೋತ್ಸವನ್ನು ಆಚರಿಸಲಾಗುತ್ತದೆ. ಭಾರತವು 1947 ರಲ್ಲಿ ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದರೂ, 1950ರ ಜನವರಿ 26 ರವರೆಗೆ ಭಾರತದ ಸಂವಿಧಾನ ಜಾರಿಗೆ ಬರಲಿಲ್ಲ. ಇದರ ನಂತರ, ಭಾರತವು ಸಾರ್ವಭೌಮ ರಾಷ್ಟ್ರವಾಯಿತು. ಅದನ್ನು ಗಣರಾಜ್ಯವೆಂದು ಘೋಷಣೆ ಮಾಡಲಾಯಿತು.
ಗಣರಾಜ್ಯೋತ್ಸವದ ಆಚರಣೆಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರಪತಿ ಭವನದ ಬಳಿಯ ರೈಸಿನಾದಿಂದ, ಕರ್ತವ್ಯ ಪಥದ ಮೂಲಕ, ಇಂಡಿಯಾ ಗೇಟ್ ದಾಟಿ ಐತಿಹಾಸಿಕ ಕೆಂಪು ಕೋಟೆಯವರೆಗೆ ನಡೆಯುತ್ತವೆ. ಗಣರಾಜ್ಯೋತ್ಸವ ಪರೇಡ್ 2024 ರ ಸ್ತಬ್ಧಚಿತ್ರದ ಥೀಮ್ ‘ಭಾರತ್ - ಪ್ರಜಾಪ್ರಭುತ್ವದ ತಾಯಿ’ ಆಗಿದೆ. ನಿಮ್ಮ ಕುಟುಂಬ ಮತ್ತು ಆಪ್ತರಿಗೆ ದೇಶಭಕ್ತಿಯ ಶುಭಾಶಯಗಳು ಮತ್ತು ಸಂದೇಶಗಳನ್ನು ಕಳುಹಿಸುವ ಮೂಲಕ ನೀವು ಕೂಡ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಬಹುದು.
ಆತ್ಮೀಯರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರುವ ಸಂದೇಶದ ಫೋಟೊಗಳು
‘ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ, ನಮ್ಮ ರಾಷ್ಟ್ರವನ್ನು ರಕ್ಷಿಸಲು ಮತ್ತು ಹೆಮ್ಮೆಪಡುವಂತೆ ಮಾಡಲು ಪ್ರತಿಜ್ಞೆ ಮಾಡೋಣ. ಗಣರಾಜ್ಯೋತ್ಸವದ ಶುಭಾಶಯಗಳು’
"ನಂಬಿಕೆ ಎಂದರೆ ಸೂರ್ಯ ಇನ್ನೂ ಕತ್ತಲೆಯಾದಾಗ ಬೆಳಕನ್ನು ಅನುಭವಿಸುವ ಪಕ್ಷಿ." - ರವೀಂದ್ರನಾಥ ಟ್ಯಾಗೋರ್.
‘ನಮ್ಮ ದೇಶದ ಆರ್ಥಿಕ ಪ್ರಗತಿಗಾಗಿ ಕೆಲಸ ಮಾಡುವಾಗ, ನಮ್ಮ ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಅನೇಕ ನಾಯಕರನ್ನು ನೆನಪಿಸಿಕೊಳ್ಳಲು ಈ ಕ್ಷಣ ತೆಗೆದುಕೊಳ್ಳೋಣ’ ಗಣರಾಜ್ಯೋತ್ಸವದ ಶುಭಾಶಯಗಳು
‘ನಾವು ನಮ್ಮ ರಾಷ್ಟ್ರಧ್ವಜವನ್ನು ಹಾರಿಸುವಾಗ, ನಮ್ಮ ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿ ಗೌರವಿಸೋಣ’. ಗಣರಾಜ್ಯೋತ್ಸವದ ಶುಭಾಶಯಗಳು.
"ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೇನೆ." - ಡಾ.ಬಿ.ಆರ್.ಅಂಬೇಡ್ಕರ್.
ನಮ್ಮ ಸಂವಿಧಾನದ ಮೌಲ್ಯಗಳನ್ನು ಹಿಡಿದಿಟ್ಟುಕೊಳ್ಳೋಣ ಮತ್ತು ನಮ್ಮ ದೇಶದ ಪ್ರಗತಿಗೆ ಕೊಡುಗೆ ನೀಡೋಣ. ಗಣರಾಜ್ಯೋತ್ಸವದ ಶುಭಾಶಯಗಳು.
ನಾವು ನಮ್ಮ ದೇಶದ ಶ್ರೀಮಂತ ಪರಂಪರೆಯನ್ನು ಮರೆಯಬಾರದು ಮತ್ತು ಈ ರಾಷ್ಟ್ರದ ಭಾಗವಾಗಿರುವುದಕ್ಕೆ ಹೆಮ್ಮೆ ಪಡಬೇಕು. ಗಣರಾಜ್ಯೋತ್ಸವದ ಶುಭಾಶಯಗಳು.
ಸ್ವಾತಂತ್ರ್ಯ ಸುಲಭವಾಗಿ ಸಿಗಲಿಲ್ಲ, ಅದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದ ಬಂದಿದೆ. ಆದ್ದರಿಂದ ಇದನ್ನು ಎಂದಿಗೂ ಲಘುವಾಗಿ ಸ್ವೀಕರಿಸಬೇಡಿ. ನಿಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ." - ಬಾಲಗಂಗಾಧರ ತಿಲಕ್.
ನಮ್ಮ 75 ನೇ ಗಣರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ, ನಾವೆಲ್ಲರೂ ಹೆಮ್ಮೆಯಿಂದ ನಿಲ್ಲೋಣ ಮತ್ತು ನಮ್ಮ ರಾಷ್ಟ್ರಕ್ಕೆ ಗೌರವವನ್ನು ನೀಡೋಣ. ಗಣರಾಜ್ಯೋತ್ಸವದ ಶುಭಾಶಯಗಳು.
"ಇಂದು ಪ್ರತಿಯೊಬ್ಬರೂ ತಮ್ಮ ಹಕ್ಕುಗಳು ಏನೆಂದು ತಿಳಿಯಲು ಬಯಸುತ್ತಾರೆ, ಆದರೆ ಒಬ್ಬ ಮನುಷ್ಯನು ಬಾಲ್ಯದಿಂದಲೇ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಕಲಿತರೆ ಮತ್ತು ತನ್ನ ನಂಬಿಕೆಯ ಪವಿತ್ರ ಪುಸ್ತಕಗಳನ್ನು ಅಧ್ಯಯನ ಮಾಡಿದರೆ ಅವನು ಸ್ವಯಂಚಾಲಿತವಾಗಿ ತನ್ನ ಹಕ್ಕುಗಳನ್ನು ಚಲಾಯಿಸುತ್ತಾನೆ." - ಮಹಾತ್ಮ ಗಾಂಧಿ. ನಿಮಗೆ ಇಷ್ಟವಾದ ಸಂದೇಶಗಳು, ವಾಟ್ಸಪ್, ಫೇಸ್‌ಬುಕ್ ಸ್ಟೇಟಸ್‌ಗಳನ್ನು ಶೇರ್ ಮಾಡಿಕೊಳ್ಳಿ. (This copy first appeared in Hindustan Times Kannada website. To read more like this please logon to kannada.hindustantime.com).
ವಿಭಾಗ