logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Samsung Jobs: 1 ಸಾವಿರ ಎಂಜಿನಿಯರ್‌ಗಳ ನೇಮಕಕ್ಕೆ ಮುಂದಾದ ಸ್ಯಾಮ್‌ಸಂಗ್‌, ಬೆಂಗಳೂರು ಸೇರಿದಂತೆ ದೇಶಾದ್ಯಂತ ನೇಮಕ

Samsung Jobs: 1 ಸಾವಿರ ಎಂಜಿನಿಯರ್‌ಗಳ ನೇಮಕಕ್ಕೆ ಮುಂದಾದ ಸ್ಯಾಮ್‌ಸಂಗ್‌, ಬೆಂಗಳೂರು ಸೇರಿದಂತೆ ದೇಶಾದ್ಯಂತ ನೇಮಕ

HT Kannada Desk HT Kannada

Nov 30, 2022 02:47 PM IST

google News

Samsung Jobs: 1 ಸಾವಿರ ಎಂಜಿನಿಯರ್‌ಗಳ ನೇಮಕಕ್ಕೆ ಮುಂದಾದ ಸ್ಯಾಮ್‌ಸಂಗ್‌

    • ದೇಶದ ವಿವಿಧೆಡೆ ಇರುವ ತನ್ನ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ಗಳಿಗೆ ಭಾರತದ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಸುಮಾರು 1,000 ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ.
Samsung Jobs: 1 ಸಾವಿರ ಎಂಜಿನಿಯರ್‌ಗಳ ನೇಮಕಕ್ಕೆ ಮುಂದಾದ ಸ್ಯಾಮ್‌ಸಂಗ್‌
Samsung Jobs: 1 ಸಾವಿರ ಎಂಜಿನಿಯರ್‌ಗಳ ನೇಮಕಕ್ಕೆ ಮುಂದಾದ ಸ್ಯಾಮ್‌ಸಂಗ್‌ (AFP)

ಗುರುಗ್ರಾಮ: ದೇಶದ ವಿವಿಧೆಡೆ ಇರುವ ತನ್ನ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ಗಳಿಗೆ ಭಾರತದ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಸುಮಾರು 1,000 ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ಎಲ್ಲೆಲ್ಲಿ ನೇಮಕ?

ಸ್ಯಾಮ್‌ಸಂಗ್‌ ಆರ್ ಮತ್ತು ಡಿ ಇನ್ಸ್ಟಿಟ್ಯೂಟ್ ಬೆಂಗಳೂರು, ಸ್ಯಾಮ್‌ಸಂಗ್‌ ಆರ್ ಮತ್ತು ಡಿ ಇನ್ಸ್ಟಿಟ್ಯೂಟ್ ನೋಯ್ಡಾ, ಸ್ಯಾಮ್‌ಸಂಗ್‌ ಆರ್ ಮತ್ತು ಡಿ ಇನ್ಸ್ಟಿಟ್ಯೂಟ್ ದೆಹಲಿ ಮತ್ತು ಸ್ಯಾಮ್‌ಸಂಗ್‌ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್ ಬೆಂಗಳೂರು ಸೇರಿದಂತೆ ವಿವಿಧ ರಿಸರ್ಚ್‌ ಸೆಂಟರ್‌ಗಳಲ್ಲಿ ಈ ನೇಮಕ ನಡೆಯಲಿದೆ. ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ ( ML ), ಡೀಪ್‌ ಲರ್ನಿಂಗ್‌, ಇಮೇಜ್ ಪ್ರೊಸೆಸಿಂಗ್, ಇಂಟರ್ನೆಟ್ ಆಫ್ ಥಿಂಗ್ಸ್ ( IoT ) ನಂತಹ ಹೊಸ-ಯುಗದ ತಂತ್ರಜ್ಞಾನಗಳಲ್ಲಿ ಕೆಲಸ ಮಾಡಲು ಒಂದು ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪನಿ ತಿಳಿಸಿದೆ.

ಸ್ಯಾಮ್‌ಸಂಗ್‌ನ ಆರ್‌ಡಿ ಕೇಂದ್ರಗಳು ಭಾರತದ ಉನ್ನತ ಎಂಜಿನಿಯರಿಂಗ್ ಸಂಸ್ಥೆಗಳಿಂದ ಹೊಸ ಪ್ರತಿಭೆಗಳನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿವೆ, ಅವರು ಭಾರತ-ಕೇಂದ್ರಿತ ನಾವೀನ್ಯತೆಗಳನ್ನು ಒಳಗೊಂಡಂತೆ ಪ್ರಗತಿಯ ಆವಿಷ್ಕಾರಗಳು, ತಂತ್ರಜ್ಞಾನಗಳು, ಉತ್ಪನ್ನಗಳು ಮತ್ತು ವಿನ್ಯಾಸಗಳಲ್ಲಿ ಈ ಉದ್ಯೋಗಿಗಳು ಕೆಲಸ ಮಾಡಲಿದ್ದಾರೆ ಎಂದು ಸ್ಯಾಮ್‌ಸಂಗ್‌ ತಿಳಿಸಿದೆ.

ಮ್ಯಾಥಮೆಟಿಕ್ಸ್‌ ಮತ್ತು ಕಂಪ್ಯೂಟಿಂಗ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್‌ ವಿಭಾಗದಲ್ಲಿ ಪರಿಣಿತಿ ಇರುವ ಅಭ್ಯರ್ಥಿಗಳನ್ನು ಸ್ಯಾಮ್‌ಸಂಗ್‌ ನೇಮಕ ಮಾಡಿಕೊಳ್ಳಲಿದೆ. ಐಐಟಿ-ಮದ್ರಾಸ್ , ಐಐಟಿ-ದೆಹಲಿ , ಐಐಟಿ-ಹೈದರಾಬಾದ್ , ಐಐಟಿ-ಬಾಂಬೆ , ಐಐಟಿ-ರೂರ್ಕಿ , ಐಐಟಿ-ಖರಗ್‌ಪುರ , ಐಐಟಿ -ಕಾನ್ಪುರ್ ಮುಂತಾದ ಉನ್ನತ ಐಐಟಿಗಳಿಂದ ಸುಮಾರು 200 ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲಿವೆ ಎಂದು ಕಂಪನಿ ಮಾಹಿತಿ ನೀಡಿದೆ. ಇನ್ನುಳಿದ ಐಐಟಿಗಳು, ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳಲ್ಲಿಯೂ ಸುಮಾರು ನಾಲ್ಕುನೂರು ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಒಟ್ಟಾರೆ ಒಂದು ಸಾವಿರ ಪದವೀಧರರನ್ನು ನೇಮಕ ಮಾಡಲು ಕಂಪನಿ ಉದ್ದೇಶಿಸಿದೆ.

ಇನ್ನೆಲ್ಲಿದೆ ಉದ್ಯೋಗಾವಕಾಶ

ತೆಂಗು ಅಭಿವೃದ್ಧಿ ಮಂಡಳಿ: ಭಾರತ ಸರಕಾರದ ಕೃಷಿ ಮತ್ತು ಕೃಷಿಕರ ಕಲ್ಯಾಣ ಸಚಿವಾಲಯದಡಿ ಬರುವ ತೆಂಗು ಅಭಿವೃದ್ಧಿ ಮಂಡಳಿ(Coconut Development Board) ಯು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ: ಎಸ್‌ಬಿಐಯು ಮ್ಯಾನೇಜರ್‌ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕ್ರೆಡಿಟ್‌ ಅನಾಲಿಸ್ಟ್‌, ಪ್ರಾಜೆಕ್ಟ್ಸ್‌ ಡಿಜಿಟಲ್‌ ಪೇಮೆಂಟ್ಸ್‌, ಪ್ರಾಡಕ್ಟ್‌ ಡಿಜಿಟಲ್ಸ್‌ ಪ್ಲಾಟ್‌ಫಾರ್ಮ್ಸ್‌, ಪ್ರಾಡಕ್ಟ್ಸ್‌ ಡಿಜಿಟಲ್‌ ಪೇಮೆಂಟ್ಸ್‌, ಕಾರ್ಡ್ಸ್‌ ವಿಭಾಗಗಗಳಲ್ಲಿ ಹುದ್ದೆಗಳಿವೆ. ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಸೇರಿದಂತೆ ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ