Chandrayaan 3: ಆಗಸ್ಟ್ 23ರ ಸಂಜೆ ಚಂದ್ರನ ಮೇಲೆ ಇಳಿಯಲಿದೆ ವಿಕ್ರಮ್ ಲ್ಯಾಂಡರ್; ಲೈವ್ ವೀಕ್ಷಣೆ ಹೇಗೆ?
Aug 20, 2023 08:33 PM IST
ಚಂದ್ರನ ಮೇಲೆ ಇಳಿಯಲಿದೆ ವಿಕ್ರಮ್ ಲ್ಯಾಂಡರ್ (ಇಸ್ರೋ)
- Vikram Lander: ಆಗಸ್ಟ್ 23 ರಂದು (ಬುಧವಾರ) ಸಂಜೆ 6:04 ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಯಲಿದೆ ಎಂದು ಇಸ್ರೋ ತಿಳಿಸಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವುದನ್ನು ಆಗಸ್ಟ್ 23 ರಂದು ಸಂಜೆ 5:27 ರಿಂದ ನೇರಪ್ರಸಾರ ವೀಕ್ಷಿಸಬಹುದು.
ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ( ಇಸ್ರೋ)ಯ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಮಿಷನ್ ಯಶಸ್ಸಿನ ಸನಿಹದಲ್ಲಿದೆ. ಈ ಕುರಿತು ಇಸ್ರೋ ಲೇಟೆಸ್ಟ್ ಅಪ್ಡೇಟ್ ಕೂಡ ನೀಡಿದೆ.
ಆಗಸ್ಟ್ 23 ರಂದು (ಬುಧವಾರ) ಸಂಜೆ 6:04 ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಯಲಿದೆ ಎಂದು ಇಸ್ರೋ ತಿಳಿಸಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವುದನ್ನು ಆಗಸ್ಟ್ 23 ರಂದು ಸಂಜೆ 5:27 ರಿಂದ ನೇರಪ್ರಸಾರ ವೀಕ್ಷಿಸಬಹುದು.
ಲೈವ್ ವೀಕ್ಷಣೆ ಹೇಗೆ?
• ಇಸ್ರೋ ವೆಬ್‌ಸೈಟ್: https://isro.gov.in
• ಇಸ್ರೋ ಅಧಿಕೃತ ಯೂಟ್ಯೂಬ್ ಚಾನಲ್: https://youtube.com/watch?v=DLA_64yz8Ss
• ಇಸ್ರೋ ಅಧಿಕೃತ ಫೇಸ್ಬುಕ್ ಚಾನಲ್: https://facebook.com/ISRO
• ದೂರದರ್ಶನ ನ್ಯಾಷನಲ್ ಟಿವಿ (DD National TV)
ಜುಲೈ 14 ರಂದು ಭಾರತೀಯ ಬಾಹ್ಯಕಾಶ ಸಂಸ್ಥೆ-ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಿತ್ತು. ಒಂದೊಂದೇ ಕಕ್ಷೆ ಪ್ರವೇಶಿಸುತ್ತಾ ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಬಳಿಕ ವಿಕ್ರಮ್ ಲ್ಯಾಂಡರ್ ಭೂಮಿಯ ಜತೆಗೆ ಚಂದ್ರನ ವಿಡಿಯೋ ದೃಶ್ಯ ಚಿತ್ರೀಕರಿಸಿ ರವಾನಿಸಿತ್ತು. ಇದೀಗ ಚಂದ್ರಯಾನ 3 ತನ್ನ ಪ್ರಮುಖ ಮೈಲಿಗಲ್ಲಿನ ಸಮೀಪಕ್ಕೆ ಬಂದಿದೆ. ಇಸ್ರೋ ಅಂತಿಮ ಡಿ-ಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಆಗಸ್ಟ್ 23 ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ.
ರಷ್ಯಾ ಚಂದ್ರಯಾನ ವಿಫಲ
ಭಾರತದ ಚಂದ್ರಯಾನ-3 ಮಿಷನ್ಗೆ ಸೆಡ್ಡುಹೊಡೆಯಲು ರಷ್ಯಾ ಲೂನಾ 25 ಮಿಷನ್ ರೂಪಿಸಿತ್ತು. ಚಂದ್ರಯಾನ 3 ಉಡಾವಣೆ ಬಳಿಕ ಆಗಸ್ಟ್ 11 ರಂದು ರಷ್ಯಾ ಈ ರಾಕೆಟ್ ಉಡಾವಣೆ ಮಾಡಿತ್ತಾದರೂ ಭಾರತಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಲು ಪ್ಲಾನ್ ಮಾಡಿತ್ತು. ಆದರೆ ಇದು ಸಫಲವಾಗಿಲ್ಲ. . ತಾಂತ್ರಿಕ ದೋಷದಿಂದಾಗಿ ಚಂದ್ರನ ಮೇಲ್ಮೈಗೆ ಬಾಹ್ಯಾಕಾಶ ನೌಕೆ ಡಿಕ್ಕಿ ಹೊಡೆದಿದೆ ಎಂದು ರಷ್ಯಾ ಬ್ಯಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ (Roscosmos) ಹೇಳಿದೆ.