logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Russia: ರಷ್ಯಾ ಚಂದ್ರಯಾನ ವಿಫಲ; ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದ ಬಾಹ್ಯಾಕಾಶ ನೌಕೆ ಲೂನಾ 25

Russia: ರಷ್ಯಾ ಚಂದ್ರಯಾನ ವಿಫಲ; ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದ ಬಾಹ್ಯಾಕಾಶ ನೌಕೆ ಲೂನಾ 25

Meghana B HT Kannada

Aug 20, 2023 06:55 PM IST

google News

ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದ ರಷ್ಯಾ ಬಾಹ್ಯಾಕಾಶ ನೌಕೆ (ಪ್ರಾತಿನಿಧಿಕ ಚಿತ್ರ)

    • ಭಾರತದ ಚಂದ್ರಯಾನ-3 ಮಿಷನ್​​ಗೆ ಸೆಡ್ಡುಹೊಡೆಯಲು ರಷ್ಯಾ ಲೂನಾ 25 ಮಿಷನ್​ ರೂಪಿಸಿತ್ತು. ಚಂದ್ರಯಾನ 3 ಉಡಾವಣೆ ಬಳಿಕ ಆಗಸ್ಟ್​ 11 ರಂದು ರಷ್ಯಾ ಈ ರಾಕೆಟ್​ ಉಡಾವಣೆ ಮಾಡಿತ್ತಾದರೂ ಭಾರತಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಲು ಪ್ಲಾನ್​ ಮಾಡಿತ್ತು. ಆದರೆ ಇದು ಸಫಲವಾಗಿಲ್ಲ.
ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದ ರಷ್ಯಾ ಬಾಹ್ಯಾಕಾಶ ನೌಕೆ (ಪ್ರಾತಿನಿಧಿಕ ಚಿತ್ರ)
ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದ ರಷ್ಯಾ ಬಾಹ್ಯಾಕಾಶ ನೌಕೆ (ಪ್ರಾತಿನಿಧಿಕ ಚಿತ್ರ)

ಮಾಸ್ಕೋ: ರಷ್ಯಾದ ಬಾಹ್ಯಾಕಾಶ ನೌಕೆ ಲೂನಾ 25 ಪತನವಾಗಿ ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ತಾಂತ್ರಿಕ ದೋಷದಿಂದಾಗಿ ಚಂದ್ರನ ಮೇಲ್ಮೈಗೆ ಬಾಹ್ಯಾಕಾಶ ನೌಕೆ ಡಿಕ್ಕಿ ಹೊಡೆದಿದೆ ಎಂದು ರಷ್ಯಾ ಬ್ಯಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ (Roscosmos) ಹೇಳಿದೆ.

ಭಾರತದ ಚಂದ್ರಯಾನ-3 ಮಿಷನ್​​ಗೆ ಸೆಡ್ಡುಹೊಡೆಯಲು ರಷ್ಯಾ ಲೂನಾ 25 ಮಿಷನ್​ ರೂಪಿಸಿತ್ತು. ಚಂದ್ರಯಾನ 3 ಉಡಾವಣೆ ಬಳಿಕ ಆಗಸ್ಟ್​ 11 ರಂದು ರಷ್ಯಾ ಈ ರಾಕೆಟ್​ ಉಡಾವಣೆ ಮಾಡಿತ್ತಾದರೂ ಭಾರತಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಲು ಪ್ಲಾನ್​ ಮಾಡಿತ್ತು. ಆದರೆ ಇದು ಸಫಲವಾಗಿಲ್ಲ.

ಆಗಸ್ಟ್ 21 ರಂದು ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್​ ಮಾಡಲು ರೋಸ್ಕೋಸ್ಮಾಸ್ ಉದ್ದೇಶಿಸಿತ್ತು. ಆದರೆ ನೌಕೆಯು ತಪ್ಪಾದ ಕಕ್ಷೆಗೆ ಜಾರಿ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದಿದೆ.

1976ರ ಬಳಿಕ ರಷ್ಯಾ ಇದೀಗ ಅಂದರೆ 2023ರಲ್ಲಿ ಚಂದ್ರನ ಅನ್ವೇಷಣೆಗೆ ನೌಕೆಯನ್ನು ಕಳಿಸಿಕೊಟ್ಟಿತ್ತು. ಒಂದು ವೇಳೆ ರಷ್ಯಾದ ಈ ಮಿಷನ್​ ಯಶಸ್ವಿಯಾಗಿದ್ದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಿದ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಗುತ್ತಿತ್ತು. ಆದರೆ 47 ವರ್ಷಗಳ ಬಳಿಕ ಚಂದ್ರನ ಅಂಗಳಕ್ಕೆ ಇಳಿಯುವ ಅವಕಾಶ ಕೈತಪ್ಪಿದೆ.

ಇಸ್ರೋ ಚಂದ್ರಯಾನ 3

ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಉಡಾವಣೆ ಮಾಡಿದ್ದ ಚಂದ್ರಯಾನ 3 ಮಿಷನ್ ತನ್ನ ಪ್ರಮುಖ ಮೈಲಿಗಲ್ಲಿನ ಸಮೀಪಕ್ಕೆ ಬಂದಿದೆ. ವಿಕ್ರಮ್ ಲ್ಯಾಂಡರ್ ಆಗಸ್ಟ್ 23ರ ಬುಧವಾರ ಚಂದ್ರನ ಮೇಲೆ ಇಳಿಯಲು ತಯಾರಿ ನಡೆಸುತ್ತಿದ್ದರೆ, ಇಸ್ರೋ ಅಂತಿಮ ಡಿ-ಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಜುಲೈ 14 ರಂದು ಭಾರತೀಯ ಬಾಹ್ಯಕಾಶ ಸಂಸ್ಥೆ-ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಿತ್ತು. ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ