ಭಗವದ್ಗೀತೆ: ಮನುಷ್ಯನ ಅಜ್ಞಾನದ ಅಂಧಕಾರ ಹೊಡೆದೋಡಿಸಲು ಏನು ಮಾಡುಬೇಕು? ಗೀತೆಯಲ್ಲಿನ ಅರ್ಥ ಹೀಗಿದೆ
Oct 24, 2023 06:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಮನುಷ್ಯನ ಅಜ್ಞಾನದ ಅಂಧಕಾರ ಹೊಡೆದೋಡಿಸಲು ಏನು ಮಾಡುಬೇಕು? ಗೀತೆಯಲ್ಲಿ ಹೀಗೆ ಬರೆಯಲಾಗಿದೆ.
ನಾಸತೋ ವಿದ್ಯತೇ ಭಾವೋ ನಾ ಭಾವೋ ವಿದ್ಯತೇ ಸತಃ |
ಉಭಯೋರಪಿ ದೃಷ್ಟೋನ್ತಸ್ತ್ವನಯೋಸ್ತತ್ತ್ವದರ್ಶಿಭಿಃ ||16||
ಅಸ್ತಿತ್ವದಲ್ಲಿಲ್ಲದಿರುವುದು (ಐಹಿಕ ದೇಹ) ಉಳಿಯುವುದಿಲ್ಲ ಮತ್ತು ನಿರಂತರವಾದದ್ದು (ಆತ್ಮ) ಬದಲಾವಣೆ ಹೊಂದುವುದಿಲ್ಲ ಎಂದು ಅಧ್ಯಯನ ಮಾಡಿ ಅವರು ಈ ನಿರ್ಣಯಕ್ಕೆ ಬಂದಿದ್ದಾರೆ.
ಬದಲಾವಣೆ ಹೊಂದುತ್ತಿರುವ ದೇಹಕ್ಕೆ ಉಳಿವು ಎನ್ನುವುದಿಲ್ಲ. ಜೀವಕಣಗಳ ಕ್ರಿಯೆ ಮತ್ತು ಪ್ರಕ್ರಿಯೆಗಳಿಂದ ಪ್ರತಿಕ್ಷಣವೂ ದೇಹವು ಬದಲಾವಣೆ ಹೊಂದುತ್ತಿರುತ್ತದೆ ಎನ್ನುವುದನ್ನು ಆಧುನಿಕ ವೈದ್ಯ ವಿಜ್ಞಾನವು ಒಪ್ಪುತ್ತದೆ. ಹೀಗೆ ದೇಹವು ಬೆಳವಣಿಗೆ ಮತ್ತು ವೃದ್ಧಾಪ್ಯಗಳಿಗೆ ಒಳಗಾಗುತ್ತದೆ. ಆದರೆ ಆತ್ಮವು ಒಂದೇ ರೀತಿ ಉಳಿಯುತ್ತದೆ.
ಭೌತದ್ರವ್ಯಕ್ಕೂ ಆತ್ಮಕ್ಕೂ ಇದೇ ವ್ಯತ್ಯಾಸ. ಸ್ವಭಾವತಃ ದೇಹವು ಸದಾ ಬದಲಾವಣೆ ಹೊಂದುತ್ತಿರುತ್ತದೆ. ಆತ್ಮವು ನಿರಂತರವಾಗಿರುತ್ತದೆ. ಸಾಕಾರವಾದಿಗಳಾಗಲಿ, ನಿರಾಕಾರವಾದಿಗಳಾಗಲಿ ಎಲ್ಲ ದಾರ್ಶನಿಕರು ಈ ನಿರ್ಣಯವನ್ನು ಸ್ಥಾಪಿಸಿದ್ದಾರೆ. ವಿಷ್ಣುಪುರಾಣದಲ್ಲಿ (2.12.38) ವಿಷ್ಣುವಿಗೂ ಅವನ ವಾಸಸ್ಥಾನಗಳಿಗೂ ಸ್ವಯಂ ಪ್ರಭೆಯುಳ್ಳ ಆಧ್ಯಾತ್ಮಿಕ ಅಸ್ತಿತ್ವವಿದೆ ಎಂದು ಹೇಳಿದೆ. (ಜ್ಯೋತೀಂಷಿ ವಿಷ್ಣುರ್ ಭುವನಾನಿ ವಿಷ್ಣುಃ) ಅಸ್ತಿತ್ವವಿದೆ, ಅಸ್ತಿತ್ವವಿಲ್ಲ ಎನ್ನುವ ಶಬ್ದಗಳು ಚೇತನ ಮತ್ತು ಜಡವಸ್ತುಗಳಿಗೆ ಮಾತ್ರ ಅನ್ವಯಿಸುತ್ತವೆ. ಸತ್ಯವನ್ನು ಕಾಣುವ ಎಲ್ಲರ ಮಾತೂ ಇದೇ.
ಅಜ್ಞಾನದ ಪ್ರಭಾವದಿಂದ ದಿಗ್ಭ್ರಮೆಯಾದ ಎಲ್ಲ ಜೀವಿಗಳಿಗೆ ಭಗವಂತನ ಮಾರ್ಗದರ್ಶನದ ಪ್ರಾರಂಭ ಇದೇ. ಅಜ್ಞಾನವನ್ನು ಹೋಗಲಾಡಿಸಬೇಕಾದರೆ ಪೂಜಿಸುವವನು ಮತ್ತು ಪೂಜನೀಯನಾದವನು ಇವರ ನಿರಂತರ ಸಂಬಂಧವನ್ನು ಮತ್ತೆ ಸ್ಥಾಪಿಸಬೇಕು. ಇದರ ಪರಿಣಾಮವಾಗಿ ವಿಭಿನ್ನಾಂಶಗಳಷ್ಟೇ ಆದ ಜೀವಿಗಳು ಮತ್ತು ದೇವೋತ್ತಮ ಪರಮ ಪುರುಷನ ನಡುವಿನ ವ್ಯತ್ಯಾಸದ ಅರಿವು ಖಚಿತವಾಗಬೇಕು.
ಮನುಷ್ಯನು ತನ್ನನ್ನು ಕೂಲಂಕಷವಾಗಿ ಅಧ್ಯಯನ ಮಾಡಿಕೊಂಡರೆ ಪರಾತ್ಪರನ ಸ್ವರೂಪವನ್ನು ತಿಳಿದುಕೊಳ್ಳಬಹುದು. ತನ್ನ ಮತ್ತು ಪರಾತ್ಪರನ ನಡುವಿನ ವ್ಯತ್ಯಾಸವು ಭಾಗಾಂಶದ ಮತ್ತು ಪೂರ್ಣವಾದುದರ ನಡುವಿನ ವ್ಯತ್ಯಾಸ ಎಂದು ಅರ್ಥಮಾಡಿಕೊಳ್ಳಬೇಕು. ವೇದಾಂತಸೂತ್ರಗಳಲ್ಲಿ ಮತ್ತು ಶ್ರೀಮದ್ಭಾಗವತದಲ್ಲಿ ಪರಾತ್ಪರನನ್ನು ಎಲ್ಲ ಉದ್ಗಮಗಳ ಮೂಲ ಎಂದು ಒಪ್ಪಿಕೊಳ್ಳಲಾಗಿ. ಇಂತಹ ಉದ್ಗಮಗಳು ಉತ್ತಮವಾದ ಮತ್ತು ಕೆಳಮಟ್ಟದ ಪ್ರಕೃತಿ ಸರಣಿಗಳಿಂದ ಅನುಭವವಾಗುತ್ತದೆ.
ಮನುಷ್ಯನಿಗೆ ಅಜ್ಞಾನ ಮುಸುಕಿದಾರೆ ಏನಾಗುತ್ತೆ?
ಏಳನೆಯ ಅಧ್ಯಾಯದಲ್ಲಿ ತೋರಿಸಿಕೊಡುವಂತೆ ಜೀವಿಗಳು ಉತ್ತಮ ಪ್ರಕೃತಿಗ ಸೇರಿದವು. ಚೈತನ್ಯಕ್ಕೂ, ಚೈತನ್ಯಶಾಲಿಯಾದುದಕ್ಕೂ ವ್ಯತ್ಯಾಸವಿಲ್ಲದಿದ್ದರೂ ಚೈತನ್ಯಶಾಲಿಯಾದವನ್ನು ಪರಮೋಚ್ಚವೆಂದು ಸ್ವೀಕರಿಸಲಾಗಿದೆ ಮತ್ತು ಚೈತನ್ಯ ಅಥವಾ ಪ್ರಕೃತಿಯನ್ನು ಅಧೀನವಾದದು ಎಂದು ಸ್ವೀಕರಿಸಲಾಗಿದೆ. ಆದುದರಿಂದ ಒಡೆಯ ಮತ್ತು ಸೇವಕರಲ್ಲಿ ಸೇವಕ ಯಾವಾಗಲೂ ಅಧೀನನಾಗಿರುವಂತೆ ಜೀವಿಗಳು ಯಾವಾಗಲೂ ಪರಮ ಪ್ರಭುವಿಗೆ ಅಧೀನ. ಅಜ್ಞಾನವು ಮುಸುಕಿದಾಗ ಇಂತಹ ತಿಳಿಯಾದ ವಿದ್ಯೆಯನ್ನು ಗ್ರಹಿಸಲಾಗುವುದಿಲ್ಲ. ಇಂತಹ ಅಜ್ಞಾನವನ್ನು ಹೊಡದೋಡಿಸುವುದಕ್ಕಾಗಿ, ಎಲ್ಲ ವಿದ್ಯೆಯನ್ನು ಗ್ರಹಿಸಲಾಗುವುದಿಲ್ಲ. ಇಂತಹ ಅಜ್ಞಾನವನ್ನು ಹೊಡೆದೋಡಿಸುವುದಕ್ಕಾಗಿ, ಎಲ್ಲ ಕಾಲದ ಎಲ್ಲ ಜೀವಿಗಳ ಜ್ಞಾನೋದಯಕ್ಕಾಗಿ ಭಗವಂತನು ಭಗವದ್ಗೀತೆಯನ್ನು ಉಪದೇಶಿಸುತ್ತಾನೆ.