logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Apple Photo Stream: ಆಪಲ್‌ ಫೋಟೊ ಸ್ಟ್ರೀಮ್‌ಗೆ ವಿದಾಯ, ಇನ್ಮುಂದೆ ಐಫೋನ್‌ ಐಪ್ಯಾಡ್‌ ಮೆಕ್‌ಬುಕ್‌ಗಳಲ್ಲಿ ಫೋಟೊ ಸಿಂಕ್‌ ಮಾಡುವುದು ಹೇಗೆ

Apple Photo Stream: ಆಪಲ್‌ ಫೋಟೊ ಸ್ಟ್ರೀಮ್‌ಗೆ ವಿದಾಯ, ಇನ್ಮುಂದೆ ಐಫೋನ್‌ ಐಪ್ಯಾಡ್‌ ಮೆಕ್‌ಬುಕ್‌ಗಳಲ್ಲಿ ಫೋಟೊ ಸಿಂಕ್‌ ಮಾಡುವುದು ಹೇಗೆ

HT Kannada Desk HT Kannada

Jan 09, 2024 07:44 PM IST

google News

Apple Photo Stream: ಆಪಲ್‌ ಫೋಟೊ ಸ್ಟ್ರೀಮ್‌ಗೆ ವಿದಾಯ

    • ಆಪಲ್‌ ಐಫೋನ್‌ ಬಳಸುವವರು ಆಪಲ್‌ ಫೋಟೊ ಸ್ಟ್ರೀಮ್‌ ಫೀಚರ್‌ (Apple's Photo Stream feature) ಬಳಸುತ್ತಿರಬಹುದು. ಈ ಫೀಚರ್‌ ನಾಳೆ ಕೊನೆಗೊಳ್ಳಲಿದೆ. ಮೈ ಸ್ಟ್ರೀಮ್‌ ಫೋಟೋದಲ್ಲಿದ್ದ ಫೋಟೊಗಳನ್ನು ಸೇವ್‌ ಮಾಡಲು ಸಲಹೆ ಇಲ್ಲಿದೆ.
Apple Photo Stream: ಆಪಲ್‌ ಫೋಟೊ ಸ್ಟ್ರೀಮ್‌ಗೆ ವಿದಾಯ
Apple Photo Stream: ಆಪಲ್‌ ಫೋಟೊ ಸ್ಟ್ರೀಮ್‌ಗೆ ವಿದಾಯ (AP)

ಆಪಲ್‌ ಐಫೋನ್‌ ಬಳಸುವವರು ಆಪಲ್‌ ಫೋಟೊ ಸ್ಟ್ರೀಮ್‌ ಫೀಚರ್‌ (Apple's Photo Stream feature) ಬಳಸುತ್ತಿರಬಹುದು. ಆದರೆ, ಈ ಫೀಚರ್‌ ನಾಳೆ ಅಂದರೆ ಜುಲೈ 26ಕ್ಕೆ ಕೊನೆಗೊಳ್ಳಲಿದೆ. ಈ ಫೀಚರ್‌ ಮೂಲಕ ಇತ್ತೀಚೆಗೆ ತೆಗೆದ ಫೋಟೊಗಳನ್ನು 30 ದಿನಗಳ ಕಾಲ ಸ್ವಯಂಚಾಲಿತವಾಗಿ ಸ್ಟೋರ್‌ ಮಾಡಿಡಲು ಅವಕಾಶವಿತ್ತು. ಆದರೆ, ಈ ಫೀಚರ್‌ ಅನ್ನು ಆಪಲ್‌ ಕಂಪನಿಯು ಹಿಂಪಡೆದಿದೆ. ಜೂನ್‌ 26ರಿಂದಲೇ ಈ ಫೀಚರ್‌ನಲ್ಲಿ ಫೋಟೊ ಅಪ್ಲೋಡ್‌ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಪಲ್‌ ತಿಳಿಸಲಾಗಿದೆ. ಆಪಲ್‌ ಫೋನ್‌ನಲ್ಲಿ ಫೋಟೊ ತೆಗೆದು ಆ ಫೋಟೊಗಳನ್ನು ಮೆಮೊರಿಯಾಗಿ ಇಟ್ಟುಕೊಳ್ಳಲು ಬಯಸುವವರು ಈ ಫೀಚರ್‌ ಬಳಸುತ್ತಿದ್ದರು.

ಜೂನ್ 26ರ ಮೊದಲು ಈ ಫೀಚರ್‌ನಲ್ಲಿ ಫೋಟೊ ಸಂಗ್ರಹಿಸಿರುವವರ ಫೋಟೊ ಜುಲೈ 26ರವರೆಗೆ ಅಂದರೆ ನಾಳೆಯವರೆಗೆ ಆಪಲ್‌ ಫೋಟೊ ಸ್ಟ್ರೀಮ್‌ನಲ್ಲಿ ಇರಲಿದೆ. ಇಲ್ಲಿರುವ ಫೋಟೊಗಳನ್ನು ತಕ್ಷಣ ಐಕ್ಲೌಡ್‌ನಲ್ಲಿ ಸೇವ್‌ ಮಾಡಬಹುದಾಗಿದೆ. ಐಕ್ಲೌಡ್‌ ಸಿಂಕ್‌ ಫೀಚರ್‌ ಬಳಸಿ ನಿಮ್ಮ ಫೋಟೊಗಳನ್ನು ಕಾಪಾಡಬಹುದು.

ಏನಿದು ಫೋಟೊ ಸ್ಟ್ರೀಮ್‌

ಈ ಸೇವೆಯನ್ನು ಆಪಲ್‌ ಕಂಪನಿಯು 2021ರಲ್ಲಿ ಪರಿಚಯಿಸಿತ್ತು. ಬಳಕೆದಾರರು ತಮ್ಮ ಸಾಧನದಲ್ಲಿ ತೆಗೆದ ಫೋಟೊವನ್ನು ತಾತ್ಕಾಲಿಕವಾಗಿ ಸೇವ್‌ ಮಾಡಿಡಲು ಇದನ್ನು ಬಳಸಬಹುದಾಗಿತ್ತು. ಬಳಿಕ ಈ ಫೀಚರ್‌ನಿಂದ ಮೊಬೈಲ್‌ನಲ್ಲಿರುವ ಲೈಬ್ರೆರಿಗೆ ಇಂಪೋರ್ಟ್‌ ಮಾಡುವ ಅವಕಾಶವಿತ್ತು.

ಆಪಲ್‌ ಪ್ರಕಾರ ಮೈ ಫೋಟೊ ಸ್ಟ್ರೀಮ್‌ನಲ್ಲಿ 30 ದಿನಗಳವರೆಗೆ ಉಳಿಯಲಿದೆ. ಅಂದರೆ, ಈ ಸಮಯದಲ್ಲಿ 1 ಸಾವಿರದಷ್ಟು ಫೋಟೊಗಳು ಉಳಿಯುತ್ತದೆ. ಬಳಿಕ ಐ ಕ್ಲೌಡ್‌ನಿಂದ ಡಿಲೀಟ್‌ ಆಗಲಿದೆ.

ನಿರ್ದಿಷ್ಟ ಐಫೋನ್‌, ಐಪ್ಯಾಡ್‌, ಮ್ಯಾಕ್‌ಗಳಿಗೆ ಐ ಕ್ಲೌಡ್‌ ಸೆಟಪ್‌ ಮಾಡಿಲ್ಲದಿದ್ದರೆ ಬಳಕೆದಾರರರಿಗೆ ಈ ಫೋಟೊಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

ಫೋಟೊ ಸ್ಟ್ರೀಮ್‌ ಬದಲು ಐಕ್ಲೌಡ್‌ ಬಳಸುವಂತೆ ಆಪಲ್‌ ತಿಳಿಸಿದೆ. ಐಕ್ಲೌಡ್‌ ಫೋಟೋಸ್‌ನಲ್ಲಿ ಉಚಿತವಾಗಿ 5 ಜಿಬಿವರೆಗೆ ಸ್ಟೋರೇಜ್‌ ಮಾಡಬಹುದು. ಅದಕ್ಕಿಂತ ಹೆಚ್ಚಿನ ಸ್ಥಳಾವಕಾಶ ಬೇಕಿದ್ದರೆ ಪ್ರೀಮಿಯಂ ಸೇವೆ ಪಡೆದುಕೊಳ್ಳಬೇಕು.

ಬಳಕೆದಾರರು ಏನು ಮಾಡಬೇಕು

ಆಪಲ್‌ ಸಾಧನಗಳನ್ನು ಹೊಂದಿರುವ ಬಳಕೆದಾರರು ಐಕ್ಲೌಡ್‌ ಫೋಟೋ (ಎಲ್ಲಾ ಸಾಧನಗಳಿಗೆ) ಸಿಂಕ್‌ ಆಯ್ಕೆಗೆ ಅನುವು ಮಾಡಿಕೊಡಬೇಕು. ಸೆಟ್ಟಿಂಗ್‌> ಯೂಸರ್‌> ಐ ಕ್ಲೌಡ್‌ ಕ್ಲಿಕ್‌ ಮಾಡಿ, ಪ್ರತಿ ಸಾಧನಗಳ ಮುಂದೆ ಆನ್‌ ಬಟನ್‌ ಕ್ಲಿಕ್‌ ಮಾಡಿ. ಮ್ಯಾಕ್‌ ಬಳಕೆದಾರರು ಆಪಲ್‌ ಮೆನು>ಸಿಸ್ಟಮ್‌ ಸೆಟ್ದಟಿಂಗ್‌ ವಿಭಾಗಕ್ಕೆ ಹೋಗಿ ಅಲ್ಲಿ ಹೆಸರನ್ನು ಕ್ಲಿಕ್‌ ಮಾಡಿ, ಬಳಿಕ ಕ್ಲಿಕ್‌ ಐಕ್ಲೌಡ್‌ ಕ್ಲಿಕ್‌ ಮಾಡಿ. ಅಲ್ಲಿ ಫೋಟೋಸ್‌ ಆನ್‌ ಈಚ್‌ ಯುವರ್‌ ಡಿವೈಸ್‌ ಎಂಬಲ್ಲಿ ಆನ್‌ ಮಾಡಿ.

ಕರ್ನಾಟಕದಲ್ಲಿ ಆಪಲ್‌ ಐಫೋನ್‌ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮನ್ನು ವಿಧಾನಸೌಧದಲ್ಲಿ ಭೇಟಿಯಾದ ಫಾಕ್ಸ್‌ಕಾನ್ ಇಂಡಸ್ಟ್ರೀಯಲ್ ಇಂಟರ್ನೆಟ್ ಸಂಸ್ಥೆಯ ಸಿ ಇ ಓ ಬ್ರಾಂಡ್ ಚೆಂಗ್ ನೇತೃತ್ವದ ನಿಯೋಗದ ಜತೆ ಮಾತುಕತೆ ನಡೆಸಿದ್ದಾರೆ. ಫಾಕ್ಸ್ ಕಾನ್ ಇಂಡಸ್ಟ್ರೀಯಲ್ ಇಂಟರ್ನೆಟ್ ಸಂಸ್ಥೆಯು ಫಾಕ್ಸ್‌ಕಾನ್ ಸಂಸ್ಥೆಯ ಅಂಗ ಸಂಸ್ಥೆಯಾಗಿದೆ. ಇದು ಸುಮಾರು 8,800 ಕೋಟಿ ರೂಪಾಯಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿದೆ. ಈ ಕುರಿತ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ