logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Twitter X: ಟ್ವಿಟ್ಟರ್‌ಗೆ ಗುಡ್‌ಬೈ, ಎಕ್ಸ್‌ ಮೋಹದಿಂದ ಎಲಾನ್‌ ಮಸ್ಕ್‌ಗೆ ಹಲವು ಶತಕೋಟಿ ಡಾಲರ್‌ ಬ್ರಾಂಡ್‌ ಮೌಲ್ಯ ನಷ್ಟ ಗ್ಯಾರಂಟಿ

Twitter X: ಟ್ವಿಟ್ಟರ್‌ಗೆ ಗುಡ್‌ಬೈ, ಎಕ್ಸ್‌ ಮೋಹದಿಂದ ಎಲಾನ್‌ ಮಸ್ಕ್‌ಗೆ ಹಲವು ಶತಕೋಟಿ ಡಾಲರ್‌ ಬ್ರಾಂಡ್‌ ಮೌಲ್ಯ ನಷ್ಟ ಗ್ಯಾರಂಟಿ

Praveen Chandra B HT Kannada

Jul 25, 2023 10:56 AM IST

google News

Twitter X: ಟ್ವಿಟ್ಟರ್‌ಗೆ ಗುಡ್‌ಬೈ, ಎಕ್ಸ್‌ ಮೋಹದಿಂದ ಎಲಾನ್‌ ಮಸ್ಕ್‌ಗೆ ಹಲವು ಶತಕೋಟಿ ಡಾಲರ್‌ ಬ್ರಾಂಡ್‌ ಮೌಲ್ಯ ನಷ್ಟ ಗ್ಯಾರಂಟಿ

    • Twitter X: ಎಲಾನ್‌ ಮಸ್ಕ್‌ ಅವರು ಟ್ವಿಟ್ಟರ್‌ ಉತ್ಪನ್ನ್‌ ಹೆಸರನ್ನು X ಎಂದು ಬದಲಾಯಿಸಿದರು. ಟ್ವಿಟ್ಟರ್‌ ಹಕ್ಕಿ, ಟ್ವೀಟ್‌, ರಿಟ್ವೀಟ್‌ ಇತ್ಯಾದಿ ಟ್ವಿಟ್ಟರ್‌ಗೆ ಸಂಬಂಧಪಟ್ಟ ಎಲ್ಲಾ ಪದಗಳನ್ನು, ಲೊಗೊಗಳನ್ನು ತೊಡೆದು ಹಾಕಲು ಅವರು ಆದೇಶಿಸಿದ್ದಾರೆ.
Twitter X: ಟ್ವಿಟ್ಟರ್‌ಗೆ ಗುಡ್‌ಬೈ, ಎಕ್ಸ್‌ ಮೋಹದಿಂದ ಎಲಾನ್‌ ಮಸ್ಕ್‌ಗೆ ಹಲವು ಶತಕೋಟಿ ಡಾಲರ್‌ ಬ್ರಾಂಡ್‌ ಮೌಲ್ಯ ನಷ್ಟ ಗ್ಯಾರಂಟಿ
Twitter X: ಟ್ವಿಟ್ಟರ್‌ಗೆ ಗುಡ್‌ಬೈ, ಎಕ್ಸ್‌ ಮೋಹದಿಂದ ಎಲಾನ್‌ ಮಸ್ಕ್‌ಗೆ ಹಲವು ಶತಕೋಟಿ ಡಾಲರ್‌ ಬ್ರಾಂಡ್‌ ಮೌಲ್ಯ ನಷ್ಟ ಗ್ಯಾರಂಟಿ (AFP)

ಜಗತ್ತಿನಾದ್ಯಂತ ಟ್ವಿಟ್ಟರ್‌ ಅತ್ಯಂತ ಜನಪ್ರಿಯ ಸೋಷಿಯಲ್‌ ಮೀಡಿಯಾ. ಟ್ವಿಟ್‌, ರಿಟ್ವಿಟ್‌ ಇತ್ಯಾದಿ ಪದಗಳನ್ನು ಪ್ರತಿಯೊಬ್ಬರೂ ನಿತ್ಯ ಸಂಭಾಷಣೆಯಲ್ಲಿ ಬಳಸುವಷ್ಟು ಅದು ಫೇಮಸ್‌. ಟ್ವಿಟ್ಟರ್‌ ಹಕ್ಕಿಯಂತೂ ಎಲ್ಲರ ಮನಸ್ಸಲ್ಲಿ ಅಚ್ಚೊತ್ತಿದೆ. ಇಂತಹ ಅಗಣಿತ ಬ್ರಾಂಡ್‌ ಮೌಲ್ಯವಿರುವ ಲೊಗೊವನ್ನು ಬದಲಾಯಿಸಿದ ಎಲಾನ್‌ ಮಸ್ಕ್‌ ನಿರ್ಧಾರಕ್ಕೆ ಟ್ವಿಟ್ಟರ್‌ ಲೊಗೊದ ಹಕ್ಕಿ ಬಿಕ್ಕಿಬಿಕ್ಕಿ ಅಳುತ್ತಿರಬಹುದು ಎನ್ನುವುದು ಒಂದು ಕಲ್ಪನೆ. ಈ ಲೇಖನದಲ್ಲಿ ಟ್ವಿಟ್ಟರ್‌ನ ಲೊಗೊ ಬದಲಾವಣೆಯಿಂದ ಹಲವು ಶತಕೋಟಿ ಡಾಲರ್‌ ಮೌಲ್ಯದ ಬ್ರಾಂಡ್‌ ನಷ್ಟವಾಗುವುದು ಹೇಗೆಂದು ತಿಳಿಯೋಣ.

ಟ್ವಿಟ್ಟರ್‌ ಎಕ್ಸ್‌ನಿಂದ ಹಲವು ಶತಕೋಟಿ ಡಾಲರ್‌ ನಷ್ಟ

ಭಾನುವಾರ ಎಲಾನ್‌ ಮಸ್ಕ್‌ ಅವರು ಟ್ವಿಟ್ಟರ್‌ ಉತ್ಪನ್ನ್‌ ಹೆಸರನ್ನು X ಎಂದು ಬದಲಾಯಿಸಿದರು. ಟ್ವಿಟ್ಟರ್‌ ಹಕ್ಕಿ, ಟ್ವೀಟ್‌, ರಿಟ್ವೀಟ್‌ ಇತ್ಯಾದಿ ಟ್ವಿಟ್ಟರ್‌ಗೆ ಸಂಬಂಧಪಟ್ಟ ಎಲ್ಲಾ ಪದಗಳನ್ನು ತೊಡೆದು ಹಾಕಲು ಅವರು ಆದೇಶಿಸಿದರು. ಮಸ್ಕ್‌ನ ಈ ಕ್ರಮದಿಂದಾಗಿ 4 ಶತಕೋಟಿ ಡಾಲರ್‌ನಿಂದ 20 ಶತಕೋಟಿ ಡಾಲರ್‌ನಷ್ಟು ಬ್ರಾಂಡ್‌ ಮೌಲ್ಯವು ನಾಶವಾಯಿತು ಎಂದು ವಿಶ್ಲೇಷಕರು ಮತ್ತು ಬ್ರಾಂಡ್‌ ಏಜೆನ್ಸಿಗಳ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ ಎಂದು ಎನ್‌ಡಿ ಟಿವಿ ವರದಿ ತಿಳಿಸಿದೆ.

ಜಗತ್ತಿನಾದ್ಯಂತ ಇಷ್ಟೊಂದು ಈಕ್ವಿಟಿ ಗಳಿಸಲು ಸುಮಾರು 15 ವರ್ಷ ಬೇಕಾಗಿದೆ. ಟ್ವಿಟ್ಟರ್‌ ಎಂಬ ಬ್ರ್ಯಾಂಡ್‌ ಹೆಸರನ್ನು ಕಳೆದುಕೊಳ್ಳುವುದು ಪ್ರಮುಖ ಆರ್ಥಿಕ ನಷ್ಟವಾಗಿದೆ" ಎಂದು ಸೀಗಲ್‌ ಆಂಡ್‌ ಗೇಲ್‌ನ ಬ್ರಾಂಡ್‌ ಕಮ್ಯುನಿಕೇಷನ್‌ ಡೈರೆಕ್ಟರ್‌ ಸ್ಟೀವ್‌ ಸುಸಿ ಹೇಳಿದ್ದಾರೆ.

ಅಕ್ಟೋಬರ್‌ ತಿಂಗಳಲ್ಲಿ 44 ಶತಕೋಟಿ ಡಾಲರ್‌ಗೆ ಎಲಾನ್‌ ಮಸ್ಕ್‌ ಅವರು ಟ್ವಿಟ್ಟರ್‌ ಖರೀದಿಸಿದ ಬಳಿಕವೇ ಅದರ ಬ್ರಾಂಡ್‌ ಮೌಲ್ಯ ಸಾಕಷ್ಟು ಕುಸಿದಿದೆ. ನೂತನ ಎಕ್ಸ್‌ ಲೊಗೊವನ್ನು ಕಂಪನಿಯ ಅಭಿಮಾನಿಯೊಬ್ಬರು ರಚಿಸಿದ್ದಾರೆ ಎನ್ನಲಾಗಿದೆ. ಕಂಪನಿಯು ಆಡಿಯೋ, ವಿಡಿಯೋ, ಮೆಸೆಜಿಂಗ್‌, ಪೇಮೆಂಟ್‌ ಮತ್ತು ಬ್ಯಾಂಕಿಂಗ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುವ ವಿಷನ್‌ ಅನ್ನು ಎಕ್ಸ್‌ ಪ್ರತಿಬಿಂಬಿಸುತ್ತದೆ ಎಂದು ಕಂಪನಿಯ ನೂತನ ಚೀಫ್‌ ಎಕ್ಸಿಕ್ಯುಟಿವ್‌ ಆಫೀಸರ್‌ ಲಿಂಡಾ ಯಕರಿನೊ ಹೇಳಿದ್ದಾರೆ.

ಎಕ್ಸ್‌ ಎಂದು ಟ್ವಿಟ್ಟರ್‌ ಹೆಸರು ಬದಲಾಯಿಸಿದ್ದು ತಪ್ಪು ನಿರ್ಧಾರ

ಉತ್ಪನ್ನವೊಂದರ ಹೆಸರನ್ನು ಎಕ್ಸ್‌ ಎಂದು ಬದಲಾಯಿಸಿದ್ದು ತಪ್ಪು ನಿರ್ಧಾರ ಎಂದು ಬ್ರ್ಯಾಂಡ್‌ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಟ್ವಿಟ್ಟರ್‌ ಎನ್ನುವುದು ಜಗತ್ತಿನಲ್ಲಿ ಅತ್ಯಂತ ಗುರುತಿಸಲ್ಪಟ್ಟ ಬ್ರಾಂಡ್‌ ಎಂದು ಫೇಜರ್‌ ಎಂಬ ಬ್ರಾಂಡ್‌ ಏಜೆನ್ಸಿಯ ಸ್ಥಾಪಕ ಟೊಡ್‌ ಇರ್ವಿನ್‌ ಹೇಳಿದ್ದಾರೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

ಟ್ವೀಟ್‌, ರೀಟ್ವೀಟ್‌ ಇತ್ಯಾದಿ ಪದಗಳು ಆಧುನಿಕ ಸಂಸ್ಕೃತಿಯಲ್ಲಿ ಅತ್ಯಂತ ಹೆಚ್ಚು ಬಳಸುತ್ತಿರುವ ಪದಗಳಾಗಿವೆ. ಸೆಲೆಬ್ರಿಟಿಗಳು, ರಾಜಕಾರಣಿಗಳು ಸಾರ್ವಜನಿಕವಾಗಿ ಮಾತನಾಡುವಾಗ ಈ ಪದಗಳನ್ನು ಬಳಸುತ್ತಾರೆ ಎಂದು ಜೋಶುಹಾ ವೈಟ್‌ ಎಂಬ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಎಕ್ಸ್‌ಗೆ ಈ ರೀತಿಯ ಸಾಂಸ್ಕೃತಿಕ ಘನತೆ, ಭಾಷಾ ಮಹತ್ವವನ್ನು ಒದಗಿಸಲು ತುಂಬಾ ಕಷ್ಟಪಡಬೇಕಿದೆ. ಇನ್ನು ಆರಂಭದಿಂದಲೇ ಎಕ್ಸ್‌ಗೆ ಬ್ರಾಂಡ್‌ ಮೌಲ್ಯ ತರಬೇಕಿದೆ ಎಂದು ಅವರು ಹೇಳಿದ್ದಾರೆ.

ಹೆಸರು ಬದಲಾವಣೆ ಮಾಡಿದ ಇತರೆ ಕಂಪನಿಗಳು

ಟ್ವಿಟ್ಟರ್‌ ಮಾತ್ರವಲ್ಲದೆ ಹಲವು ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ತಮ್ಮ ಬ್ರ್ಯಾಂಡ್‌ ಹೆಸರು ಬದಲಾಯಿಸಿಕೊಂಡಿದೆ. ಗೂಗಲ್‌ ಕಂಪನಿಯು ಆಲ್ಪಾಬೆಟ್‌ ಐಎನ್‌ಸಿಯಾಗಿತ್ತು. ಕಂಪನಿಯ ವಿವಿಧ ವ್ಯವಹಾರಗಳಿಗೆ ತಕ್ಕಂತೆ ಈ ಬ್ರ್ಯಾಂಡ್‌ ಹೆಸರು ನೀಡಿತ್ತು. ಫೇಸ್‌ಬುಕ್‌ ಕಂಪನಿಯು ಮೆಟಾ ಪ್ಲಾಟ್‌ಫಾರ್ಮ್‌ ಐಎನ್‌ಸಿಯೆಂದು ಹೆಸರು ಬದಲಾಯಿಸಿಕೊಂಡಿತ್ತು. ಮೆಟಾವರ್ಸ್‌ ಕ್ಷೇತ್ರದಲ್ಲಿ ಸಾಧಿಸುವ ಸಲುವಾಗಿ ಈ ಹೆಸರು ನೀಡಿತ್ತು. ಆದರೆ, ಇವರೆಲ್ಲ ಬ್ರ್ಯಾಂಡ್‌ ಹೆಸರು ಬದಲಾಯಿಸಿದರು ಪ್ರಾಡಕ್ಟ್‌ ಹೆಸರು ಬದಲಾಯಿಸಿರಲಿಲ್ಲ. ಗೂಗಲ್‌ ಹೆಸರು ಗೂಗಲ್‌ ಎಂದೇ ಉಳಿದಿದೆ. ಫೇಸ್‌ಬುಕ್‌ ಹೆಸರು ಫೇಸ್‌ಬುಕ್‌ ಹೆಸರೇ ಎಂದು ಉಳಿದಿದೆ. ಆದರೆ, ಟ್ವಿಟ್ಟರ್‌ ಮಾತ್ರ ಎಕ್ಸ್‌ ಆಗಲಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ