logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Whatsapp Accounts: ನಿಯಮ ಉಲ್ಲಂಘಿಸಿದ 74 ಲಕ್ಷಕ್ಕೂ ಅಧಿಕ ವಾಟ್ಸ್‌ಆಪ್‌ ಖಾತೆಗಳು ರದ್ದು

WhatsApp Accounts: ನಿಯಮ ಉಲ್ಲಂಘಿಸಿದ 74 ಲಕ್ಷಕ್ಕೂ ಅಧಿಕ ವಾಟ್ಸ್‌ಆಪ್‌ ಖಾತೆಗಳು ರದ್ದು

HT Kannada Desk HT Kannada

Oct 02, 2023 11:19 PM IST

google News

ವಾಟ್ಸ್‌ಆಪ್ (ಸಾಂಕೇತಿಕ ಚಿತ್ರ)

  • ಭಾರತದ ಐಟಿ ನಿಯಮ ಪ್ರಕಾರ ಮಾನದಂಡಗಳನ್ನು ಪಾಲಿಸದೇ ಇರುವಂತಹ 74 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ರದ್ದುಗೊಳಿಸಿರುವುದಾಗಿ ವಾಟ್ಸ್‌ಆಪ್‌ನ ಆಗಸ್ಟ್‌ ತಿಂಗಳ ವರದಿ ವಿವರಿಸಿದೆ.

ವಾಟ್ಸ್‌ಆಪ್ (ಸಾಂಕೇತಿಕ ಚಿತ್ರ)
ವಾಟ್ಸ್‌ಆಪ್ (ಸಾಂಕೇತಿಕ ಚಿತ್ರ) (Pixabay)

ನವದೆಹಲಿ: ಮೆಟಾ ಮಾಲೀಕತ್ವದ ವಾಟ್ಸ್‌ಆಪ್‌ ಆಗಸ್ಟ್ ತಿಂಗಳಲ್ಲಿ 74 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದೆ. ಐಟಿ ನಿಯಮಗಳ ಅನುಸಾರವಾಗಿ ಈ ಖಾತೆಗಳನ್ನು ನಿಷೇಧಿಸಿರುವುದಾಗಿ ಅದು ಹೇಳಿದೆ.

ವಾಟ್ಸ್‌ಆಪ್ ಪ್ರಕಟಿಸಿರುವ ಇತ್ತೀಚಿನ ಮಾಸಿಕ ವರದಿ ಪ್ರಕಾರ ಈ ದತ್ತಾಂಶ ಬಹಿರಂಗವಾಗಿದೆ. ನಿಷೇಧಿಸಲಾಗಿರುವ 74 ಲಕ್ಷ ಖಾತೆಗಳ ಪೈಕಿ 35 ಲಕ್ಷ ಖಾತೆಗಳನ್ನು ಅವುಗಳ ವಿರುದ್ಧ ದೂರು ಬರುವ ಮೊದಲೇ ನಿಯಮ ಉಲ್ಲಂಘನೆಯನ್ನು ಗುರುತಿಸಿ ನಿಷೇಧಿಸಲಾಗಿದೆ.

'ಬಳಕೆದಾರ-ಸುರಕ್ಷತಾ ವರದಿ'ಯು ಬಳಕೆದಾರರ ದೂರುಗಳನ್ನು ಸ್ವೀಕರಿಸಿದ ವಿವರಗಳು ಮತ್ತು ವಾಟ್ಸ್‌ಆಪ್‌ನಿಂದ ತೆಗೆದುಕೊಂಡ ಕ್ರಮಗಳು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆಯನ್ನು ಎದುರಿಸಲು ವಾಟ್ಸ್‌ಆಪ್‌ನದ್ದೇ ಆದ ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿದೆ.

ಆಗಸ್ಟ್ 1 ಮತ್ತು ಆಗಸ್ಟ್ 31ರ ನಡುವೆ, ಒಟ್ಟು 74,20,748 ವಾಟ್ಸ್‌ಆಪ್‌ ಖಾತೆಗಳನ್ನು ನಿಷೇಧಿಸಲಾಗಿದೆ. ಈ ಖಾತೆಗಳಲ್ಲಿ 35,06,905 ಬಳಕೆದಾರರಿಂದ ಯಾವುದೇ ದೂರು ವರದಿ ದಾಖಲಾಗುವ ಮೊದಲೇ ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ಅದು ಹೇಳಿದೆ.

ಭಾರತದಲ್ಲಿರುವ ವಾಟ್ಸ್‌ಆಪ್‌ ಖಾತೆಗಳನ್ನು +91 ಮೊಬೈಲ್ ನಂಬರ್‌ಗಳ ಮೂಲಕ ಗುರುತಿಸಲಾಗುತ್ತದೆ ಎಂದು ಪಿಟಿಐ ವರದಿ ಹೇಳಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ