logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Trending: ಮದುವೆಯ ದಿನ ವರನ ಪರಾರಿ ಯತ್ನ; 20 ಕಿಲೋಮೀಟರ್‌ ಓಡಿಸಿಕೊಂಡು ಹೋಗಿ ಮಂಟಪಕ್ಕೆ ಮರಳಿ ಕರೆತಂದ ವಧು

Trending: ಮದುವೆಯ ದಿನ ವರನ ಪರಾರಿ ಯತ್ನ; 20 ಕಿಲೋಮೀಟರ್‌ ಓಡಿಸಿಕೊಂಡು ಹೋಗಿ ಮಂಟಪಕ್ಕೆ ಮರಳಿ ಕರೆತಂದ ವಧು

Reshma HT Kannada

May 24, 2023 04:17 PM IST

google News

ಮದುವೆ ಮನೆಯಿಂದ ತಪ್ಪಿಸಿಕೊಂಡ ವರನನ್ನು ಓಡಿಸಿಕೊಂಡು ಹೋಗಿ ಮದುವೆಯಾದ ವಧು

    • Bride Chases Groom: ಎರಡು ವರ್ಷಗಳ ಕಾಲ ಪ್ರೀತಿಸಿದ್ದ ವ್ಯಕ್ತಿ ಮದುವೆಯ ದಿನದಂದು ಮದುವೆ ನಿರಾಕರಿಸಿ ಓಡಿ ಹೋಗಲು ಯತ್ನಿಸಿದ್ದ. ಈ ವಿಷಯ ತಿಳಿದ ವಧು ಅವನನ್ನು 20 ಕಿಲೋಮೀಟರ್‌ ಓಡಿಸಿಕೊಂಡು ಹೋಗಿ ಮದುವೆಯಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಏನಿದು ಘಟನೆ, ಈ ಸ್ಟೋರಿ ಓದಿ. 
ಮದುವೆ ಮನೆಯಿಂದ ತಪ್ಪಿಸಿಕೊಂಡ ವರನನ್ನು ಓಡಿಸಿಕೊಂಡು ಹೋಗಿ ಮದುವೆಯಾದ ವಧು
ಮದುವೆ ಮನೆಯಿಂದ ತಪ್ಪಿಸಿಕೊಂಡ ವರನನ್ನು ಓಡಿಸಿಕೊಂಡು ಹೋಗಿ ಮದುವೆಯಾದ ವಧು

ನವದೆಹಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಮದುವೆ ತಪ್ಪಿಸಿಕೊಳ್ಳಲು ಯತ್ನಿಸಿ ಮದುವೆ ಮಂಟಪದಿಂದ ಎಸ್ಕೇಪ್‌ ಆಗಿದ್ದ ವರನನ್ನು ಬೆನ್ನಟ್ಟಿ ಹಿಡಿಯುವ ಘಟನೆಗೆ ವಧು ಸಾಕ್ಷಿಯಾಗಿದ್ದಾಳೆ.

ಮದುವೆ ಮಂಟಪದಿಂದ ಓಡಿ ಹೋಗಿದ್ದ ವರನನ್ನು ಹಿಡಿಯಲು ವಧು 20 ಕಿಲೋಮೀಟರ್‌ ದೂರ ವಧುವಿನ ಅಲಂಕಾರದಲ್ಲೇ ಓಡಿದ್ದಾಳೆ. ಕೊನೆಗೂ ವರನನ್ನು ಹುಡುಕಿದ ವಧು ಮನೆಯವರ ಸುಮ್ಮುಖದಲ್ಲಿ ಸರಳವಾಗಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾಳೆ. ಈ ಘಟನೆಗೆ ವಧು-ವರರ ಕುಟುಂಬದವರು ಸಾಕ್ಷಿಯಾಗಿದ್ದಾರೆ. ಈ ವಿಡಿಯೊ ಹಾಗೂ ಸುದ್ದಿ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಏನಿದು ಘಟನೆ?

ಬರೇಲಿ ಮೂಲದ ವಧು-ವರರು ಕಳೆದ ಎರಡೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದರು ಹಾಗೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಮದುವೆ ತಯಾರಿ ಎಲ್ಲವೂ ನಡೆದು ಮದುವೆ ದಿನ ಹುಡುಗ ಎಸ್ಕೇಪ್‌ ಆಗಲು ಯೋಚಿಸಿದ್ದ. ಮದುವೆಯ ದಿನ ಮಂಟಪದಲ್ಲಿ ಹುಡುಗಿ ಕಾದು ಕುಳಿತಿದ್ದರೂ ಹುಡುಗ ಬಂದಿರಲಿಲ್ಲ. ಹುಡುಗ ಎಲ್ಲೂ ಕಾಣುತ್ತಿಲ್ಲ ಎಂದಾಗ ಅವನನ್ನು ಹುಡುಕಿ ಬರಲು ತಾನೇ ಹೋಗುತ್ತೇನೆ ಎಂದು ಮಂಟಪದಿಂದ ಹೊರಟಿದ್ದಳು ವಧು.

ವರ ತಾನು ತಾಯಿಯನ್ನು ಮದುವೆ ಮಂಟಪಕ್ಕೆ ಕರೆತರಲು ಹೋಗಿದ್ದೇನೆ, ಬರುತ್ತೇನೆ ಎಂದು ಫೋನ್‌ನಲ್ಲಿ ಹೇಳಿದ್ದರೂ ಕೂಡ ವಧು ನಂಬಿರಲಿಲ್ಲ. ಅವನನ್ನು ಬೆನ್ನಟ್ಟಿ ಓಡಿಸಿಕೊಂಡು ಹೋಗಿದ್ದಳು. ಸುಮಾರು 20 ಕಿಲೋಮೀಟರ್‌ ಓಡಿದ ಬಳಿಕ ವರ ಕಾಣಿಸಿದ್ದ. ಬರೇಲಿ ನಗರ ವ್ಯಾಪ್ತಿಯ ಹೊರ ಪ್ರದೇಶದಲ್ಲಿನ ಪೊಲೀಸ್‌ ಠಾಣೆಯ ಬಳಿ ಬಸ್‌ನಲ್ಲಿ ವರ ಪತ್ತೆಯಾಗಿದ್ದಾನೆ.

ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಸಿನಿಮೀಯ ಘಟನೆಯ ನಂತರ ವಧು ಹಾಗೂ ವರನ ಕುಟುಂಬದವರು ಇಬ್ಬರನ್ನೂ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆ ಮಾಡಿಸಿದ್ದಾರೆ. ಮದುವೆಗೆ ವಧು-ವರ ಇಬ್ಬರ ಮನೆಯವರೂ ಒಪ್ಪಿ ಮದುವೆ ಸುಖಾಂತ್ಯ ಕಂಡಿತ್ತು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಮದುವೆಯಾಗುವುದಾಗಿ ನಂಬಿಸಿ, ಮದುವೆ ಮಂಟಪದಿಂದ ಓಡಿ ಹೋದ ವರನನ್ನು ನೆಟ್ಟಿಗರು ನಿಂದಿಸಿದ್ದಾರೆ. ಮದುವೆಯನ್ನು ಉಳಿಸುವ ಉದ್ದೇಶದಿಂದ ವಧುವಿನ ವೇಷದಲ್ಲೇ 20 ಕಿಲೋಮೀಟರ್‌ ಓಡಿದ ಹುಡುಗಿಯ ಸಾಹಸಕ್ಕೆ ಮೆಚ್ಚಿದ ನೆಟ್ಟಿಗರು ಶಹಭಾಸ್‌ ಎನ್ನುತ್ತಿದ್ದಾರೆ.

ಇದನ್ನೂ ಓದಿ

Jharkhand News: ಏಕಕಾಲಕ್ಕೆ 5 ಶಿಶುಗಳಿಗೆ ಜನ್ಮ ನೀಡಿದ ಮಹಿಳೆ; ಮುದ್ದಾದ ಮಕ್ಕಳ ಫೋಟೋ ನೋಡಿ, ಕ್ವಿಂಟಪ್ಲೆಟ್ಸ್ ಬಗ್ಗೆ ತಿಳಿಯಿರಿ

Woman Gives Birth To Five Babies: ವೈದ್ಯಕೀಯ ಭಾಷೆಯಲ್ಲಿ ಒಂದೇ ಬಾರಿಗೆ ಜನಿಸಿದ ಐದು ಮಕ್ಕಳನ್ನು ಕ್ವಿಂಟಪ್ಲೆಟ್ಸ್ (quintuplets) ಎಂದು ಕರೆಯಲಾಗುತ್ತದೆ. ಐದೂವರೆ ಕೋಟಿ ಜನನಗಳಲ್ಲಿ ಒಂದು ಕೇಸ್​ ಮಾತ್ರ ಕ್ವಿಂಟಪ್ಲೆಟ್ಸ್ ಆಗಿರುತ್ತದೆ.

ರಾಂಚಿ (ಜಾರ್ಖಂಡ್‌): ಅಪರೂಪದ ಪ್ರಕರಣವೊಂದರಲ್ಲಿ ಜಾರ್ಖಂಡ್‌ನ ಮಹಿಳೆಯೊಬ್ಬರು ಸೋಮವಾರ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (RIMS) ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ