TTD Mobile App: ಟಿಟಿ ದೇವಸ್ಥಾನಮ್ಸ್ - ಹೊಸ ಮೊಬೈಲ್ ಆಪ್ ಬಿಡುಗಡೆ ಮಾಡಿದ ಟಿಟಿಡಿ; ಜಿಯೋ ಪ್ಲಾಟ್‌ಫಾರಂ ಸಪೋರ್ಟ್
Jan 29, 2023 02:35 PM IST
ತಿರುಮಲ ತಿರುಪತಿ ದೇವಸ್ತಾನ
TTD Mobile App: ತಿರುಪತಿ ತಿಮ್ಮಪ್ಪನ ಭಕ್ತರ ಅನುಕೂಲಕ್ಕಾಗಿ ಹೊಸ ಮೊಬೈಲ್ ಅಪ್ಲಿಕೇಶನ್ -ಟಿಟಿ ದೇವಸ್ಥಾನಮ್ಸ್ (TT Devasthanams) ಅನ್ನು ಟಿಟಿಡಿ ಪರಿಚಯಿಸಿದೆ. ಈ ಆಪ್‌ಗೆ ಜಿಯೋ ಪ್ಲಾಟ್‌ಫಾರಂನ ಸಪೋರ್ಟ್ ಕೂಡ ಇದೆ.
ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಆಡಳಿತ ಮಂತಳಿಯು ತಿರುಪತಿ ತಿಮ್ಮಪ್ಪನ ಭಕ್ತರ ಅನುಕೂಲಕ್ಕಾಗಿ ಹೊಸ ಮೊಬೈಲ್ ಅಪ್ಲಿಕೇಶನ್ -ಟಿಟಿ ದೇವಸ್ಥಾನಮ್ಸ್ (TT Devasthanams) ಅನ್ನು ಪರಿಚಯಿಸಿದೆ. ಈ ಆಪ್‌ಗೆ ಜಿಯೋ ಪ್ಲಾಟ್‌ಫಾರಂನ ಸಪೋರ್ಟ್ ಕೂಡ ಇದೆ.
ಈ ಹೊಸ ಮೊಬೈಲ್ ಅಪ್ಲಿಕೇಶನ್ ಉಪಯೋಗಿಸುವ ಭಕ್ತರಿಗೆ ತಡೆರಹಿತ ತೀರ್ಥಯಾತ್ರೆಯ ಅನುಭವವನ್ನು ಅದು ಒದಗಿಸುತ್ತದೆ. ಜಿಯೋ ಪ್ಲಾಟ್‌ಫಾರ್ಮ್ ಹಲವಾರು ಕೋಟಿ ರೂಪಾಯಿಗಳನ್ನು ವ್ಯಯಿಸಿ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ನಂತರ TTDಗೆ ಈ ಆಪ್ ಅನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ ಎಂದು TTD ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೊಸ ಮೊಬೈಲ್ ಅಪ್ಲಿಕೇಶನ್‌ನಲ್ಲಿ ದೇವರ ದರ್ಶನ ಟಿಕೆಟ್ ಬುಕಿಂಗ್, ವಸತಿ ಬುಕಿಂಗ್, ಇ-ಹುಂಡಿ ಮುಂತಾದ ವಿವಿಧ ಯಾತ್ರಿ ಸೇವೆಗಳು ವೆಂಕಟೇಶ್ವರನ ಭಕ್ತರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಜಿಯೋ ಪ್ಲಾಟ್‌ಫಾರ್ಮ್ಸ್ ಪ್ರತಿನಿಧಿಗಳು ಟಿಟಿಡಿಯ ಮೊಬೈಲ್ ಅಪ್ಲಿಕೇಶನ್‌ನ ಅತ್ಯಾಕರ್ಷಕ ಫೀಚರ್ಸ್ ಅನ್ನು ಶುಕ್ರವಾರ ತಿರುಮಲ ತಿರುಪತಿ ದೇವಸ್ಥಾನಮ್ಸ್ ನ ಆಡಳಿತ ಮಂಡಳಿಗೆ ಪ್ರಸ್ತುತಪಡಿಸಿದರು.
ತಿರುಮಲ ತಿರುಪತಿಯ ಇನ್ನಷ್ಟು ಸುದ್ದಿಗಳು
ತಿರುಮಲ ದೇಗುಲದ ಆನಂದ ಗೋಪುರಕ್ಕೆ ಚಿನ್ನದ ಲೇಪನ ಮಾಡುವ ಕೆಲಸವನ್ನು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಆಡಳಿತ ಮಂಡಳಿ ಅನಿರ್ದಿಷ್ಟ ಅವಧಿಗೆ ಮುಂದೂಡಿದೆ.
"ಚಿನ್ನದ ಲೇಪನದ ಕೆಲಸಕ್ಕಾಗಿ ಜಾಗತಿಕ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ನಿರ್ದಿಷ್ಟ ಸಮಯದೊಳಗೆ ಚಿನ್ನದ ಲೇಪನ ಕಾರ್ಯ ಮುಗಿಯುವಂತಾಗಲು ಮತ್ತು ಯಾವುದೇ ವಿಳಂಬ ತಪ್ಪಿಸುವ ಸಲುವಾಗಿ ಜಾಗತಿಕ ಟೆಂಡರ್ ಕರೆಯಲಾಗುತ್ತದೆʼʼ ಎಂದು ಟಿಟಿಡಿ ಆಡಳಿತ ಹೇಳಿದೆ. ವಿವರ ವರದಿಗೆ ಇಲ್ಲಿ ಕ್ಲಿಕ್ ಮಾಡಿ.
ವಿಶ್ವದ ಅತಿಶ್ರೀಮಂತ ದೇವಾಲಯ ತಿರುಮಲಕ್ಕೆ ಪ್ರತಿನಿತ್ಯ ಕೋಟಿಗಟ್ಟಲೆ ಹುಂಡಿ ಹಣ ಹರಿದು ಬರುತ್ತದೆ. ಅದರಂತೆಯೇ, ವೈಕುಂಠ ಏಕಾದಶಿ ದಿನ, ತಿಮ್ಮಪ್ಪನ ಸನ್ನಿಧಿಗೆ ಕೋಟಿಗಟ್ಟಲೆ ಹುಂಡಿ ಹಣ ಹರಿದು ಬಂದಿದೆ. ಏಳು ಬೆಟ್ಟಗಳ ಒಡೆಯನನ್ನು ಕಣ್ತುಂಬಿಕೊಳ್ಳಲು ವೈಕುಂಠ ಏಕಾದಶಿಯಂದು ಲಕ್ಷಾಂತರ ಭಕ್ತರು ತಿರುಪತಿಗೆ ಬಂದಿದ್ದು, ಭಾರಿ ಮೊತ್ತದಲ್ಲಿ ಹುಂಡಿ ಸಂಗ್ರಹವಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಮ್ಸ್ ಆಡಳಿತ ಮಂಡಳಿ ತಿಳಿಸಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
ವಿಶ್ವವಿಖ್ಯಾತ ತಿರುಪತಿ ವೆಂಕಟೇಶ್ವರನ ಸನ್ನಿಧಾನ ಜಗತ್ತಿನ ಶ್ರೀಮಂತ ದೇಗುಲಗಳಲ್ಲಿ ಒಂದು ಎಂಬುದು ತಿಳಿದಿರುವ ಸಂಗತಿ. ಏಳು ಬೆಟ್ಟಗಳ ಮೇಲಿರುವ ವೆಂಕಟೇಶ್ವರನ್ನು ನೋಡಲು ದೇಶ ವಿದೇಶಗಳಿಂದ ಪ್ರತಿನಿತ್ಯ ಸಾವಿರ, ಲಕ್ಷ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಈಗಲೂ ಕೋಟಿಗಟ್ಟಲೆ ಬೆಲೆಬಾಳುವ ಚಿನ್ನಾಭರಣವನ್ನು ತಿಮ್ಮಪ್ಪನಿಗೆ ದೇಣಿಗೆಯಾಗಿ ನೀಡುವವರಿದ್ದಾರೆ. ಏಳು ಬೆಟ್ಟಗಳ ಒಡೆಯ ಎಷ್ಟು ಶ್ರೀಮಂತ ಎಂದರೆ, ಇಷ್ಟೊಂದು ಆದಾಯ ದೇಶದ ಹಲವು ಪ್ರಮುಖ ಕಂಪನಿಗಳಿಗೆ ಇಲ್ಲ. ಅರ್ಥಾತ್ ಐಟಿ ಸೇವಾ ಸಂಸ್ಥೆಯಾದ ವಿಪ್ರೋ, ಆಹಾರ ಮತ್ತು ಪಾನೀಯ ಕಂಪನಿ ನೆಸ್ಲೆ ಮತ್ತು ಸರ್ಕಾರಿ ಸ್ವಾಮ್ಯದ ತೈಲ ದೈತ್ಯ ONGC ಮತ್ತು IOCಗಳ ಮಾರುಕಟ್ಟೆ ಬಂಡವಾಳ ಕೂಡಾ ಇಷ್ಟು ಪ್ರಮಾಣದಲ್ಲಿಲ್ಲ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ