logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Twitter Blue Tick: ಪ್ರತಿಷ್ಠಿತರ ಟ್ವಿಟರ್ ಖಾತೆಗಳಿಗೆ ಬ್ಲೂಟಿಕ್ ಮಾನ್ಯತೆ ಇನ್ನಿಲ್ಲ; ವೆರಿಫೈಡ್ ಅಕೌಂಟ್ ಗೌರವಕ್ಕೆ ತೆರಬೇಕು ಹಣ

Twitter Blue Tick: ಪ್ರತಿಷ್ಠಿತರ ಟ್ವಿಟರ್ ಖಾತೆಗಳಿಗೆ ಬ್ಲೂಟಿಕ್ ಮಾನ್ಯತೆ ಇನ್ನಿಲ್ಲ; ವೆರಿಫೈಡ್ ಅಕೌಂಟ್ ಗೌರವಕ್ಕೆ ತೆರಬೇಕು ಹಣ

Nikhil Kulkarni HT Kannada

Apr 20, 2023 04:26 PM IST

google News

ಸಂಗ್ರಹ ಚಿತ್ರ

    • ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ಇಂದು(ಏ.20) ಚಂದಾದಾರರಲ್ಲದ ಪ್ರೊಫೈಲ್‌ಗಳಿಂದ ನೀಲಿ ಚಿಹ್ನೆ ಬ್ಯಾಡ್ಜ್‌ಗಳನ್ನು ತೆಗೆದು ಹಾಕಿದೆ. ಕಂಪನಿಯು ಕಳೆದ ಏಪ್ರಿಲ್ 1ರಂದು ಲೆಗಸಿ ಬ್ಲೂ ಟಿಕ್‌ಗಳನ್ನು ತೆಗೆದುಹಾಕುವ ಯೋಜನೆಯನ್ನು ಪ್ರಕಟಿಸಿತ್ತು. ನೀಲಿ ಬ್ಯಾಡ್ಜ್ ಉಳಿಸಿಕೊಳ್ಳಲು ಬಳಕೆದಾರರು ಚಂದಾದಾರಿಕೆಯನ್ನು ಪಡೆಯಬೇಕು ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (HT)

ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ಇಂದು(ಏ.20) ಚಂದಾದಾರರಲ್ಲದ ಪ್ರೊಫೈಲ್‌ಗಳಿಂದ ನೀಲಿ ಚಿಹ್ನೆ ಬ್ಯಾಡ್ಜ್‌ಗಳನ್ನು ತೆಗೆದು ಹಾಕಿದೆ. ಕಂಪನಿಯು ಕಳೆದ ಏಪ್ರಿಲ್ 1ರಂದು ಲೆಗಸಿ ಬ್ಲೂ ಟಿಕ್‌ಗಳನ್ನು ತೆಗೆದುಹಾಕುವ ಯೋಜನೆಯನ್ನು ಪ್ರಕಟಿಸಿತ್ತು. ಆದರೆ ಬದಲಾವಣೆಯು ಆಯ್ದ ಖಾತೆಗಳಿಗೆ ಅನ್ವಯಿಸುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿತ್ತು. ಆದರೆ ಇದೀಗ ಚಂದಾದಾರರಲ್ಲದ ಎಲ್ಲಾ ಖಾತೆಗಳಿಂದಲೂ ನೀಲಿ ಚಿಹ್ನೆಯನ್ನು ತೆಗೆಯುವ ನಿರ್ಧಾರ ಮಾಡಲಾಗಿದೆ.

ಆದಾಗ್ಯೂ, ಟ್ವಿಟರ್ ಮತ್ತು ಅದರ ಮಾಲೀಕ ಎಲಾನ್ ಮಸ್ಕ್ ಅವರು, ಈ ಬಾರಿಯ ನಿರ್ಧಾರದೊಂದಿಗೆ ದೃಢವಾಗಿರುವಂತೆ ತೋರುತ್ತಿದೆ. ನೀಲಿ ಬ್ಯಾಡ್ಜ್ ಅನ್ನು ಉಳಿಸಿಕೊಳ್ಳಲು ಎಲ್ಲಾ ಬಳಕೆದಾರರು ಚಂದಾದಾರಿಕೆಯನ್ನು ಪಡೆಯಬೇಕು ಎಂಬುದು ಎಲಾನ್‌ ಮಸ್ಕ್‌ ಅವರ ಬಯಕೆಯಾಗಿದೆ.

ಕಳೆದ ವರ್ಷ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ ಸಂಸ್ಥೆಯನ್ನು ಖರೀದಿಸುವ ಮೊದಲು, ಟ್ವಿಟರ್ ಸಾರ್ವಜನಿಕ ಹಿತಾಸಕ್ತಿಯ ಖಾತೆಗಳನ್ನು ಪರಿಶೀಲನೆಗೆ ಒಳಪಡಿಸಿತ್ತು. ಉದಾಹರಣೆಗೆ ಪತ್ರಕರ್ತರು, ನಟರು, ರಾಜಕಾರಣಿಗಳ ಪ್ರೊಫೈಲ್‌ಗಳ ಪರಿಶೀಲನೆಗೆ ಟ್ವಿಟ್ಟರ್‌ ಮುಂದಾಗಿತ್ತು. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸುವುದು ಟ್ವಿಟ್ಟರ್‌ನ ಉದ್ದೇಶವಾಗಿತ್ತು.

ನೀಲಿ ಚಿಹ್ನೆಯ ಬ್ಯಾಡ್ಜ್ ನಿರ್ದಿಷ್ಟ ದೃಢೀಕರಣವನ್ನು ಪ್ರತಿನಿಧಿಸುತ್ತದೆ. ಏಕೆಂದರೆ ಸೆಲೆಬ್ರಿಟಿಗಳ ಅನೇಕ ನಕಲಿ ಖಾತೆಗಳು ಸೃಷ್ಟಿಯಾಗುವ ಸಾಧ್ಯತೆಗಳಿದ್ದು, ಇದನ್ನು ತಪ್ಪಿಸಲು ನೀಲಿ ಚಿಹ್ನೆಯ ಬ್ಯಾಡ್ಜ್‌ವುಳ್ಳ ಖಾತೆಗಳ ಸೃಷ್ಟಿ ಅತ್ಯವಶ್ಯ ಎಂಬುದು ಎಲಾನ್‌ ಮಸ್ಕ್‌ ಅವರ ವಾದವಾಗಿದೆ. ಟ್ವಿಟ್ಟರ್‌ ಪ್ಲಾಟ್‌ಫಾರ್ಮ್‌ನಲ್ಲಿರುವ ಬಳಕೆದಾರರು, ಕನಿಷ್ಠ ಶುಲ್ಕ ಪಾವತಿಗೆ ಮನಸ್ಸು ಮಾಡಬೇಕು ಎಂದು ಎಲಾನ್‌ ಮಸ್ಕ್‌ ಈ ಹಿಂದೆಯೇ ಮನವಿ ಮಾಡಿದ್ದರು.

ಖಾತೆಯ ದೃಢೀಕರಣಕ್ಕಾಗಿ ನೀಲಿ ಚಿಹ್ನೆ ಅತ್ಯವಶ್ಯವಾಗಿದ್ದು, ಈ ನೀಲಿ ಚಿಹ್ನೆ ಪಡೆಯಲು ನಿಗದಿತ ಶುಲ್ಕವನ್ನು ಪಾವತಿ ಮಾಡಬೇಕು ಎಂದು ಟ್ವಿಟ್ಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ಬಳಕೆದಾರರಲ್ಲಿ ಮನವಿ ಮಾಡಿಕೊಂಡಿದ್ದರು. ಅದರಂತೆ ಇದೀಗ ಚಂದಾದಾರಿಕೆಯನ್ನು ಹೊಂದಿರದ ಖಾತೆಗಳ ನೀಲಿ ಚಿಹ್ನೆಯನ್ನು ತೆಗೆದು ಹಾಕಲು ಟ್ವಿಟ್ಟರ್‌ ನಿರ್ಧರಿಸಿದ್ದು, ಈ ನೂತನ ನಿಯಮ ಇಂದಿನಿಂದಲೇ ಜಾರಿಗೆ ಬರಲಿದೆ.

ಬಳಕೆದಾರರ ಪ್ರತಿಕ್ರಿಯೆ ಹೀಗಿತ್ತು.

ಇನ್ನು ಕನಿಷ್ಠ ಶುಲ್ಕ ಪಾವತಿ ಮಾಡದ ಬಳಕೆದಾರರ ನೀಲಿ ಚಿಹ್ನೆ ತೆಗೆದು ಹಾಕುವ ಟ್ವಿಟ್ಟರ್‌ ನಿರ್ಧಾರಕ್ಕೆ, ಟ್ವಿಟ್ಟರ್‌ ಬಳಕೆದಾರರು ಖಾರದ ಪ್ರತಿಕ್ರಿಯೆ ನೀಡಿದ್ದಾರೆ. ಬ್ಲೂ ಟಿಕ್‌ ತೆಗೆಯುವ ಕಂಪನಿ ನಿರ್ಧಾರದಿಂದ ತಮಗೇನೂ ಬೇಸರವಾಗಿಲ್ಲ ಎಂದು ಹಲವು ಬಳಕೆದಾರರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಬ್ಲೂ ಟಿಕ್‌ಗಳನ್ನು ಕಳೆದುಕೊಳ್ಳುವ ಬಗ್ಗೆ ಬಳಕೆದಾರರು ಹೆಚ್ಚು ತಲೆಕೆಡಿಸಿಕೊಂಡಂತೆ ತೋರುತ್ತಿಲ್ಲ. ಅಲ್ಲದೇ ಬ್ಲೂ ಟಿಕ್‌ಗಾಗಿ ಎಂಟು ಡಾಲರ್‌ ಹಣ ಪಾವತಿಸಲು ಬಳಕೆದಾರರು ಆಸಕ್ತಿ ತೋರುತ್ತಿಲ್ಲ ಎಂಬುದು ಅವರ ಪ್ರತಿಕ್ರಿಯೆಗಳಿಂದಲೇ ತಿಳಿದುಬರುತ್ತಿದೆ.

ಹಾಲಿವುಡ್ ತಾರೆ ಹಾಲೆ ಬೆರ್ರಿ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬ್ಲೂ ಟಿಕ್‌ ಬಳಕೆದಾರರು ಮತ್ತು ಸಾಮಾನ್ಯ ಬಳಕೆದಾರರು ಎಂಬ ಬೇರ್ಪಡಿಕೆಯೇ ಅಪ್ರಸ್ತುತ ಎಂದು ಅಸಮಾಧಾನ ಹೊರಹಾಕಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ