logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 2023: ನಿಮ್ಮಲ್ಲಿ ಪ್ಯಾನ್‌ ಕಾರ್ಡ್‌ ಇದೆಯಾ? ಪ್ಯಾನ್‌ ಕಾರ್ಡ್‌ಗೆ ಹೊಸ ಸ್ಥಾನಮಾನ ಘೋಷಿಸಿದ ನಿರ್ಮಲಾ ಸೀತಾರಾಮನ್‌

Union Budget 2023: ನಿಮ್ಮಲ್ಲಿ ಪ್ಯಾನ್‌ ಕಾರ್ಡ್‌ ಇದೆಯಾ? ಪ್ಯಾನ್‌ ಕಾರ್ಡ್‌ಗೆ ಹೊಸ ಸ್ಥಾನಮಾನ ಘೋಷಿಸಿದ ನಿರ್ಮಲಾ ಸೀತಾರಾಮನ್‌

Praveen Chandra B HT Kannada

Feb 01, 2023 02:20 PM IST

google News

Union Budget 2023: ನಿಮ್ಮಲ್ಲಿ ಪ್ಯಾನ್‌ ಕಾರ್ಡ್‌ ಇದೆಯಾ? ಪ್ಯಾನ್‌ ಕಾರ್ಡ್‌ಗೆ ಹೊಸ ಸ್ಥಾನಮಾನ ಘೋಷಿಸಿದ ನಿರ್ಮಲಾ ಸೀತಾರಾಮನ್‌

    • Union Budget 2023: ಇಲ್ಲಿಯವರೆಗೆ ಪ್ಯಾನ್‌ ಕಾರ್ಡ್‌ ಸೀಮಿತ ಉಪಯೋಗ ಹೊಂದಿತ್ತು. ಆದರೆ, ಇಂದು ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಬಜೆಟ್‌ನಲ್ಲಿ ಪ್ಯಾನ್‌ ಕಾರ್ಡ್‌ಗೆ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾಪ ಮಾಡಿದ್ದಾರೆ. ಎಲ್ಲಾ ಸರಕಾರಿ ಏಜೆನ್ಸಿಗಳ ಎಲ್ಲಾ ಡಿಜಿಟಲ್‌ ವ್ಯವಹಾರಗಳಲ್ಲಿ ಸಾಮನ್ಯ ಗುರುತಿನ ಚೀಟಿಯಾಗಿಯೂ ಭವಿಷ್ಯದಲ್ಲಿ ಬಳಕೆಯಾಗಲಿದೆ.
Union Budget 2023: ನಿಮ್ಮಲ್ಲಿ ಪ್ಯಾನ್‌ ಕಾರ್ಡ್‌ ಇದೆಯಾ? ಪ್ಯಾನ್‌ ಕಾರ್ಡ್‌ಗೆ ಹೊಸ ಸ್ಥಾನಮಾನ ಘೋಷಿಸಿದ ನಿರ್ಮಲಾ ಸೀತಾರಾಮನ್‌
Union Budget 2023: ನಿಮ್ಮಲ್ಲಿ ಪ್ಯಾನ್‌ ಕಾರ್ಡ್‌ ಇದೆಯಾ? ಪ್ಯಾನ್‌ ಕಾರ್ಡ್‌ಗೆ ಹೊಸ ಸ್ಥಾನಮಾನ ಘೋಷಿಸಿದ ನಿರ್ಮಲಾ ಸೀತಾರಾಮನ್‌

ನವದೆಹಲಿ: ಇಲ್ಲಿಯವರೆಗೆ ಪ್ಯಾನ್‌ ಕಾರ್ಡ್‌ ಸೀಮಿತ ಉಪಯೋಗ ಹೊಂದಿತ್ತು. ಆದರೆ, ಇಂದು ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಬಜೆಟ್‌ನಲ್ಲಿ ಪ್ಯಾನ್‌ ಕಾರ್ಡ್‌ಗೆ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾಪ ಮಾಡಿದ್ದಾರೆ. ಎಲ್ಲಾ ಸರಕಾರಿ ಏಜೆನ್ಸಿಗಳ ಎಲ್ಲಾ ಡಿಜಿಟಲ್‌ ವ್ಯವಹಾರಗಳಲ್ಲಿ ಸಾಮನ್ಯ ಗುರುತಿನ ಚೀಟಿಯಾಗಿಯೂ ಭವಿಷ್ಯದಲ್ಲಿ ಬಳಕೆಯಾಗಲಿದೆ.

ಪ್ಯಾನ್‌ಕಾರ್ಡ್‌ಗೆ ಸಾಮಾನ್ಯ ಗುರುತಿನ ಸ್ಥಾನಮಾನ ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. ಇದರಿಂದ ಕೆವೈಸಿ ಪ್ರಕ್ರಿಯೆ ಸರಳವಾಗಲಿದೆ. ಇದರಿಂದ ಆದಾಯ ತೆರಿಗೆ ಇಲಾಖೆ ಮತ್ತು ಇತರೆ ಸರಕಾರಿ ಏಜೆನ್ಸಿಗಳಿಗೆ ಪ್ಯಾನ್‌ ಕಾರ್ಡ್‌ ಹೊಂದಿರುವವರ ದಾಖಲೆಗಳನ್ನು ನಿರ್ವಹಿಸಲು ಸುಲಭವಾಗಲಿದೆ.

"ಸರಕಾರದ ಹೊಸ ಪ್ರಸ್ತಾಪದಿಂದಾಗಿ ಪ್ಯಾನ್‌ ಕಾರ್ಡ್‌ ಎನ್ನುವುದು ಯೂನಿವರ್ಸಲ್‌ ಗುರುತಿನ ಪತ್ರವಾಗಲಿದೆ. ಇದನ್ನು ಸರಕಾರದ ಎಲ್ಲಾ ಏಜೆನ್ಸಿಗಳ ಡಿಜಿಟಲ್‌ ವ್ಯವಸ್ಥೆಗಳಲ್ಲಿ ಬಳಸಲು ಸಾಧ್ಯವಾಗಲಿದೆ. ಇದನ್ನು ಪರಿಣಾಮಕಾರಿಯಾಗಿ ಬಳಸಿದರೆ ಡಿಜಿಟಲ್‌ ಸೇವೆಗಳಲ್ಲಿ ಗೇಮ್‌ ಚೇಂಜರ್‌ ಆಗಲಿದೆʼʼ ಎಂದು ಶಾರ್ದುಲ್‌ ಅಮರ್‌ಚಂದ್‌ ಮಾಗ್ನಲ್‌ಡಾಸ್‌ ಆಂಡ್‌ ಕಂನ ಪಾಲುದಾರರಾದ ಶಿಲ್ಪಾ ಮಂಕರ್‌ ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.

"ಈಗ ಆಧಾರ್‌ ಕಾರ್ಡ್‌ ಹೇಗೆ ಬಳಕೆಯಾಗುತ್ತಿದೆಯೋ ಅದೇ ರೀತಿ ಪ್ಯಾನ್‌ ಕಾರ್ಡ್‌ ಬಳಕೆಯಾಗಲಿದೆ. ಇದರಿಂದ ಕೆವೈಸಿ ಪ್ರಕ್ರಿಯೆ ಸರಳವಾಗಲಿದೆ. ವ್ಯವಹಾರಗಳು ಪರವಾನಿಗೆ ಪಡೆಯುವುದು ಮತ್ತು ನೋಂದಣಿ ಮಾಡುವುದು ಸೇರಿದಂತೆ ಹಲವು ಸೇವೆಗಳನ್ನು ಪಡೆಯಲು ಪ್ಯಾನ್‌ ಕಾರ್ಡ್‌ ಬಳಸಬಹುದಾಗಿದೆ. ಇದು ವ್ಯವಹಾರಗಳ ಕಾರ್ಯಗಳನ್ನು ಸುಸೂತ್ರವಾಗಿಸಲಿದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಪ್ಯಾನ್‌ಕಾರ್ಡ್‌ ಹೊಂದಿರುವವರ ಕ್ರೆಡಿಟ್‌, ಹೂಡಿಕೆ, ವಿಮೆ ಮತ್ತು ಇತರೆ ಹಣಕಾಸು ಉತ್ಪನ್ನಗಳ ವಿಶ್ಲೇಷಣೆ ಮಾಡಲು ಸರಕಾರಿ ಏಜೆನ್ಸಿಗಳಿಗೆ ಸಾಧ್ಯವಾಗಲಿದೆ. ಈಗ ಆಧಾರ್‌ಗೆ ಇಂತಹ ಸೇವೆಗಳು ಲಿಂಕ್‌ ಆಗಿರುವುದಿಲ್ಲ. ಎಸ್‌ಎಂಇ ಮತ್ತು ಎಂಎಸ್‌ಎಂಇ ಬಿಸ್ನೆಸ್‌ಗಳಿಗೆ ಸಾಲ ಪಡೆಯುವುದು ಸುಲಭವಾಗಲಿದೆ. ಇದರಿಂದ ಕೇಂದ್ರೀಕೃತ ಡೇಟಾಬೇಸ್‌ ಸೃಷ್ಟಿಯಾಗಲಿದದ್ದು, ಬ್ಯಾಂಕ್‌ಗಳಿಗೆ ಕೆವೈಸಿ ವೆಚ್ಚ ತಗ್ಗಿಸಲಿದೆʼʼ ಎಂದು ಅವರು ವಿವರಿಸಿದ್ದಾರೆ.

"ಪ್ಯಾನ್‌ಕಾರ್ಡ್‌ ಅನ್ನು ಎಲ್ಲಾ ಸರಕಾರಿ ಡಿಜಿಟಲ್‌ ಸೇವೆಗಳಿಗೆ ಸಾಮಾನ್ಯ ದಾಖಲೆಯಾಗಿ ಅಥವಾ ಸಾಮಾನ್ಯ ಗುರುತಿನ ಕಾರ್ಡ್‌ ಆಗಿ ಪರಿಗಣಿಸುವುದರಿಂದ ಕೆವೈಸಿ ಪ್ರಕ್ರಿಯೆ ಸರಳಗೊಳ್ಳಲಿದೆʼʼ ಎಂದು ಆಪ್ಟಿಮಾ ಮನಿ ಮ್ಯಾನೇಜರ್ಸ್‌ನ ಎಂಡಿ ಮತ್ತು ಸಿಇಒ ಪಂಕಜ್‌ ಮಾತ್ಪಲ್‌ ಅಭಿಪ್ರಾಯಪಟ್ಟಿದ್ದಾರೆ.

"ಈ ಪ್ರಸ್ತಾಪದಿಂದ ಆದಾಯ ತೆರಿಗೆ ಇಲಾಖೆ ಮತ್ತು ಇತರೆ ಸರಕಾರಿ ಇಲಾಖೆಗಳ ಕೆಲಸ ಕಾರ್ಯಗಳು ಸರಳಗೊಳ್ಳಲಿವೆ. ಡಿಜಿಟಲ್‌ ಲಾಕರ್‌ನಲ್ಲಿ ಲಭ್ಯವಿರುವ ಒಂದು ಪ್ಯಾನ್‌ಕಾರ್ಡ್‌ ಮೂಲಕ ಬಳಕೆದಾರರು ತಮ್ಮ ಕೆವೈಸಿ ಅಪ್‌ಡೇಟ್‌ ಮಾಡಲು ಸಾಧ್ಯವಿದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈಗ ಪ್ಯಾನ್‌ ಕಾರ್ಡ್‌ ಹೊಂದಿರುವವರು ತಮ್ಮ ಕೆವೈಸಿಯನ್ನು ಆದಾಯ ತೆರಿಗೆ ಕಚೇರಿಗಳು, ಬ್ಯಾಂಕ್‌ಗಳು ಸೇರಿದಂತೆ ವಿವಿಧಡೆ ಅಪ್‌ಡೇಟ್‌ ಮಾಡಬೇಕಿರುತ್ತದೆ. ಎಲ್ಲಾದರೂ ಪ್ಯಾನ್‌ ಕಾರ್ಡ್‌ ಅನ್ನು ಸಾಮಾನ್ಯ ಐಡೆಂಟಿಫೈರ್‌ ಆಗಿ ಪರಿಗಣಿಸಿದ ಬಳಿಕ ಜನರು ತಮ್ಮ ಡಿಜಿಟಲ್‌ ಲಾಕರ್‌ನಲ್ಲಿ ಒಮ್ಮೆ ಕೆವೈಸಿ ಅಪ್‌ಡೇಟ್‌ ಮಡಿದರೆ ಸಾಕು. ಏಕೆಂದರೆ, ಡಿಜಿಟಲ್‌ ಲಾಕರ್‌ನಲ್ಲಿ ಪ್ಯಾನ್‌ ಕಾರ್ಡ್‌ ಇರುತ್ತದೆ. ಹೀಗಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ನೂತನ ಪ್ರಸ್ತಾಪವು ಜನರಿಗೆ ಮತ್ತು ಬಿಸ್ನೆಸ್‌ಗಳಿಗೆ ಪ್ರಯೋಜನಕಾರಿಯಾಗಿದೆ ಎಂಬ ಅಭಿಪ್ರಾಯವ್ಯಕ್ತವಾಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ