Union Budget 2023: ಈ ಬಾರಿಯ ಬಜೆಟ್ ಎಲ್ಲ ವರ್ಗದ ನಿರೀಕ್ಷೆಗಳನ್ನು ಈಡೇರಿಸಲಿದೆ: ವಿತ್ತ ಖಾತೆ ರಾಜ್ಯ ಸಚಿವರ ಭರವಸೆ
Feb 01, 2023 11:33 AM IST
ಪಂಕಜ್ ಚೌಧರಿ
- ಈ ಬಾರಿಯ ಕೇಂದ್ರ ಬಜೆಟ್ ಸಮಾಜದ ಎಲ್ಲ ವರ್ಗಗಳ ಜನರ ನಿರೀಕ್ಷೆಯನ್ನು ಪೂರೈಸಲಿದೆ ಎಂದು ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ. ಜನಪರ ಬಜೆಟ್ ನೀಡುವ ನಮ್ಮ ವಾಗ್ದಾನವನ್ನು ನಾವು ಈಡೇರಿಸಲಿದ್ದೇವೆ ಎಂದು ಪಂಕಜ್ ಚೌಧರಿ ಭರವಸೆ ನೀಡಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..
ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್ ಸಮಾಜದ ಎಲ್ಲ ವರ್ಗಗಳ ಜನರ ನಿರೀಕ್ಷೆಯನ್ನು ಪೂರೈಸಲಿದೆ ಎಂದು ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ. ಜನಪರ ಬಜೆಟ್ ನೀಡುವ ನಮ್ಮ ವಾಗ್ದಾನವನ್ನು ನಾವು ಈಡೇರಿಸಲಿದ್ದೇವೆ ಎಂದು ಪಂಕಜ್ ಚೌಧರಿ ಭರವಸೆ ನೀಡಿದ್ದಾರೆ.
ಬಜೆಟ್‌ಗೂ ಮುನ್ನ ಮಾತನಾಡಿರುವ ಪಂಕಜ್ ಚೌಧರಿ, ಜನರ ನಿರೀಕ್ಷೆಗಳು ಈ ಬಜೆಟ್‌ನಲ್ಲಿ ಪ್ರತಿಫಲಿಸುತ್ತದೆ. ಸಮಾಜದ ಪ್ರತಿಯೊಂದು ವರ್ಗದ ನಿರೀಕ್ಷೆಗಳನ್ನು ಒಳಗೊಂಡಿರುವ ಬಜೆಟ್ ಇದಾಗಿದೆ. ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ನಿರ್ಮಲಾ ಸೀತಾರಾಮನ್ ಅವರ ಮೇಲ್ವಿಚಾರಣೆಯಿಂದ ಭಾರತದ ಆರ್ಥಿಕತೆ ವೇಗದಲ್ಲಿ ಮುನ್ನುಗ್ಗುತ್ತಿದೆ ಎಂದು ಹೇಳಿದರು.
ಆರ್ಥಿಕ ಸಮೀಕ್ಷೆ ಕೂಡ ಭಾರತದ ಆರ್ಥಿಕ ಪಥದ ಕುರಿತು ಧನಾತ್ಮಕ ಭಾವನೆ ಹೊಂದಿದೆ. ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಲಾಗಿದೆ. ಸಮಾಜದ ಪ್ರತಿ ವಿಭಾಗವನ್ನೂ ನಾವು ಬಜೆಟ್ ಮೂಲಕ ತಲುಪಲಿದ್ದೇವೆ ಎಂದು ಪಂಕಜ್ ಚೌಧರಿ ನುಡಿದರು.
ಬಜೆಟ್ ಕುರಿತು ಮಾತನಾಡಿರುವ ಮತ್ತೋರ್ವ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಬಿಆರ್. ಕರಾಡ್, ಕೋವಿಡ್ ಬಳಿಕ ಭಾರತದ ಆರ್ಥಿಕತೆಯು ಉತ್ತಮ ಚೇತರಿಕೆ ಕಂಡಿದೆ. ಆರ್ಥಿಕ ಸಮೀಕ್ಷೆಯನ್ನು ಗಮನಿಸಿದರೆ ಎಲ್ಲಾ ಕ್ಷೇತ್ರಗಳು ಪ್ರಗತಿ ಸಾಧಿಸುತ್ತಿವೆ. ಇತರ ದೇಶಗಳಿಗೆ ಹೋಲಿಸಿದರೆ, ನಮ್ಮ ಆರ್ಥಿಕತೆಯು ಉತ್ತಮವಾಗಿದೆ ಎಂದು ಹೇಳಿದರು.
2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಜಾಗತಿಕ ಆರ್ಥಿಕತೆಯಲ್ಲಿ ಭಾರತ 10ನೇ ಸ್ಥಾನದಲ್ಲಿತ್ತು. ಇಂದು 5ನೇ ಸ್ಥಾನದಲ್ಲಿದೆ. ಇದು ಭಾರತದ ಅಭಿವೃದ್ಧಿಗೆ ಮೋದಿ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಡಾ.ಬಿಆರ್. ಕರಾಡ್ ಹೇಳಿದರು.
ಬೆಳಗ್ಗೆ 11 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ಅದಕ್ಕೂ ಮುನ್ನ ಅವರ ನೇತೃತ್ವದಲ್ಲಿ ಪಂಕಜ್ ಚೌಧರಿ ಹಾಗೂ ಕಾರ್ಯದರ್ಶಿ ಬೆಳಗ್ಗೆ 9 ಗಂಟೆಗೆ ರಾಷ್ಟ್ರಪತಿಯನ್ನು ಭೇಟಿ ಮಾಡಿದ್ದು, ಬಜೆಟ್‌ಗೆ ಅನುಮೋದನೆ ಪಡೆದುಕೊಳ್ಳಲಾಗಿದೆ.
ಈಗಾಗಲೇ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಂಪುಟ ಸಭೆ ನಡೆದಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ತಮ್ಮ ಬಜೆಟ್ ಭಾಷಣವನ್ನು ಆರಂಭಿಸಿದ್ದಾರೆ.
2024ರಲ್ಲಿ ಮುಂದಿನ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಈ ವರ್ಷದ ಕೇಂದ್ರ ಬಜೆಟ್‌ಗೆ ಹೆಚ್ಚಿನ ಮಹತ್ವವಿದೆ. ಮಂಗಳವಾರ ರಾಷ್ಟ್ರಪತಿ ಭಾಷಣದೊಂದಿಗೆ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಿದ್ದು, ಈ ವರ್ಷದ ಬಜೆಟ್ ಅಧಿವೇಶನವು ಏಪ್ರಿಲ್ 6ರವರೆಗೆ ನಡೆಯಲಿದೆ. ಅಧಿವೇಶನದ ಎರಡು ಭಾಗದಲ್ಲಿ ನಡೆಯಲಿದ್ದು, ಮೊದಲ ಭಾಗ ಫೆಬ್ರವರಿ 13ರಂದು ಮುಕ್ತಾಯಗೊಂಡರೆ, ಬಜೆಟ್ ಅಧಿವೇಶನದ ಎರಡನೇ ಭಾಗ ಮಾರ್ಚ್ 12ರಂದು ಮತ್ತೆ ಆರಂಭವಾಗಲಿದ್ದು, ಏಪ್ರಿಲ್ 6 ರಂದು ಮುಕ್ತಾಯಗೊಳ್ಳಲಿದೆ.
ಸಂಬಂಧಿತ ಸುದ್ದಿ
PM Modi on Union Budget: ಭಾರತದ ಬಜೆಟ್ ಮೇಲೆ ವಿಶ್ವದ ಕಣ್ಣಿದೆ: ಪ್ರಧಾನಿ ಮೋದಿ ಅಭಿಮತ
ಆರ್ಥಿಕ ಜಗತ್ತಿನಲ್ಲಿ ಮಹತ್ವದ ಧ್ವನಿಗಳು ಸಕಾರಾತ್ಮಕ ಸಂಕೇತಗಳನ್ನು ನೀಡುತ್ತಿವೆ ಎಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ ಬಜೆಟ್ ಮೇಲೆ ಇಡೀ ವಿಶ್ವದ ಕಣ್ಣಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂದು(ಫೆ.01-ಬುಧವಾರ) ಬಜೆಟ್ ಅಧಿವೇಶನಕ್ಕೆ ಸಂಸತ್ತಿಗೆ ಆಗಮಿಸಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
Union Budget 2023: ಅಭಿವೃದ್ಧಿಗೆ ಒತ್ತು, ಚುನಾವಣೆ ಮೇಲೆ ಕಣ್ಣು: ಏನಿರಲಿದೆ ಈ ಬಾರಿಯ ಸೀತಾರಾಮನ್ ಬಜೆಟ್ ಬುಟ್ಟಿಯಲ್ಲಿ?
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 2024 ರ ಹಣಕಾಸು ವರ್ಷದ ಕೇಂದ್ರ ಬಜೆಟ್, ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ.6.8 ರ ಮುನ್ಸೂಚನೆ ದರಕ್ಕೆ ಕೊಂಡೊಯ್ಯಲು ಅಡಿಪಾಯವನ್ನು ಹೊಂದಿಸುತ್ತದೆ. 2019 ರಿಂದ ಇದು ಸೀತಾರಾಮನ್ ಅವರು ಮಂಡನೆ ಮಾಡಿರುವ ಐದನೇ ಬಜೆಟ್ ಆಗಲಿದೆ. ಈ ಬಾರಿಯ ಬಜೆಟ್ ನಿರೀಕ್ಷೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ