logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2024: ಚಂದ್ರಬಾಬು ಕೈಬಿಡದ ಕೇಂದ್ರ, ಆಂಧ್ರಪ್ರದೇಶ ರಾಜಧಾನಿ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ; ಬಜೆಟ್‌ನಲ್ಲಿ ಆಂಧ್ರಕ್ಕೆ ಬಂಪರ್‌

Budget 2024: ಚಂದ್ರಬಾಬು ಕೈಬಿಡದ ಕೇಂದ್ರ, ಆಂಧ್ರಪ್ರದೇಶ ರಾಜಧಾನಿ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ; ಬಜೆಟ್‌ನಲ್ಲಿ ಆಂಧ್ರಕ್ಕೆ ಬಂಪರ್‌

Praveen Chandra B HT Kannada

Jul 23, 2024 11:57 AM IST

google News

Budget 2024: ಚಂದ್ರಬಾಬು ಕೈಬಿಡದ ಕೇಂದ್ರ, ಆಂಧ್ರಪ್ರದೇಶ ರಾಜಧಾನಿ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ; ಕೇಂದ್ರ ಬಜೆಟ್‌ನಲ್ಲಿ ಆಂಧ್ರಕ್ಕೆ ಬಂಪರ್‌

    • Union budget Highlights: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ಭರ್ಜರಿ ಕೊಡುಗೆಗಳ ಘೋಷಣೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಆಂಧ್ರಪ್ರದೇಶಕ್ಕೆ ವಿವಿಧ ಕೊಡುಗೆಗಳ ಘೋಷಣೆ ಮಾಡಿದ್ದಾರೆ. ಆಂಧ್ರಪ್ರದೇಶದ ರಾಜಧಾನಿ ನಗರದ ಅಭಿವೃದ್ಧಿಗೆ ವಿಶೇಷ ಹಣಕಾಸು ಬೆಂಬಲ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
Budget 2024: ಚಂದ್ರಬಾಬು ಕೈಬಿಡದ ಕೇಂದ್ರ, ಆಂಧ್ರಪ್ರದೇಶ ರಾಜಧಾನಿ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ; ಕೇಂದ್ರ ಬಜೆಟ್‌ನಲ್ಲಿ ಆಂಧ್ರಕ್ಕೆ ಬಂಪರ್‌
Budget 2024: ಚಂದ್ರಬಾಬು ಕೈಬಿಡದ ಕೇಂದ್ರ, ಆಂಧ್ರಪ್ರದೇಶ ರಾಜಧಾನಿ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ; ಕೇಂದ್ರ ಬಜೆಟ್‌ನಲ್ಲಿ ಆಂಧ್ರಕ್ಕೆ ಬಂಪರ್‌

ಬೆಂಗಳೂರು: ಕೇಂದ್ರ ಸರಕಾರಕ್ಕೆ ಈ ಬಾರಿ ಚುನಾವಣೆಯಲ್ಲಿ ಸಾಥ್‌ ನೀಡಿದ್ದ ಚಂದ್ರಬಾಬು ನಾಯ್ಡು ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿಯೋ ಎಂಬಂತೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ಭರ್ಜರಿ ಕೊಡುಗೆಗಳ ಘೋಷಣೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಆಂಧ್ರಪ್ರದೇಶಕ್ಕೆ ವಿವಿಧ ಕೊಡುಗೆಗಳ ಘೋಷಣೆ ಮಾಡಿದ್ದಾರೆ. ಆಂಧ್ರಪ್ರದೇಶದ ರಾಜಧಾನಿ ನಗರದ ಅಭಿವೃದ್ಧಿಗೆ ವಿಶೇಷ ಹಣಕಾಸು ಬೆಂಬಲ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಬಾರಿ ಕೇಂದ್ರ ಸರಕಾರ ಅಧಿಕಾರಕ್ಕೆ ಬರಲು ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮೈತ್ರಿ ಸಹಕಾರ ನೀಡಿತ್ತು. ಇದೇ ರೀತಿ ಬಿಹಾರದಲ್ಲಿ ಜೆಡಿಯು ನೆರವು ನೀಡಿತ್ತು. ಇವೆರಡು ರಾಜ್ಯಗಳಿಗೆ ಈ ಬಜೆಟ್‌ನಲ್ಲಿ ವಿಶೇಷ ಕೊಡುಗೆಗಳ ಘೋಷಣೆ ಮಾಡಲಾಗಿದೆ.

ಆಂಧ್ರಪ್ರದೇಶದ ರಾಜಧಾನಿಯ ಅಭಿವೃದ್ಧಿಗೆ ಈ ಹಣಕಾಸು ವರ್ಷದಲ್ಲಿ 15 ಸಾವಿರ ಕೋಟಿ ರೂಪಾಯಿ ಒದಗಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಇದರೊಂದಿಗೆ ಎಪಿ ಮರುಸಂಘಟನೆ ಕಾಯಿದೆ ಪ್ರಕಾರ ಹಿಂದುಳಿದ ಪ್ರದೇಶಗಳಿಗೆ ಅನುದಾನ ಒದಗಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಮೂಲಕ ಚಂದ್ರಬಾಬು ನಾಯ್ಡು ಅವರ ಬೇಡಿಕೆಗಳಿಗೆ ಕೇಂದ್ರ ಸರಕಾರವು ಸಕಾರಾತ್ಮಕವಾಗಿ ಈ ಬಜೆಟ್‌ನಲ್ಲಿ ಸ್ಪಂದಿಸಿದೆ.

ಐದು ವರ್ಷಗಳ ನಂತರ ಬಜೆಟ್‌ನಲ್ಲಿ ಎಪಿಗೆ ವಿಶೇಷ ಹಣ ದೊರಕಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ತೆಲುಗರು ಖುಷಿ ವ್ಯಕ್ತಪಡಿಸಿದ್ದಾರೆ. ಅಮರಾವತಿಗೆ 15000 ಕೋಟಿ ರೂ, ಪೋಲಾವರಂಗೆ ಅನುದಾನ, ವೈಜಾಗ್-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್‌ಗೆ ಹಣ ಮತ್ತು ಹಿಂದುಳಿದ ಜಿಲ್ಲೆಗಳಿಗೆ ಅನುದಾನ ದೊರಕಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

 

ಕಳೆದ ಲೋಕಸಭಾ ಚುನಾವಣೆ ಪ್ರಚಾರ ಮತ್ತು ನಂತರದ ಲೋಕಸಭಾ ಅಧಿವೇಶನದಲ್ಲಿ ನಿರುದ್ಯೋಗವನ್ನು ಪ್ರತಿಪಕ್ಷಗಳು ದೊಡ್ಡಮಟ್ಟದಲ್ಲಿ ಪ್ರಸ್ತಾಪಿಸಿದ್ದವು. ಈ ರಾಜಕೀಯ ನಾಡಿಮಿಡಿತ ಮತ್ತು ರಾಷ್ಟ್ರದ ಸದ್ಯದ ವಾಸ್ತವವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅರ್ಥ ಮಾಡಿಕೊಂಡಂತೆ ಇದೆ. ಹೀಗಾಗಿ ಬಜೆಟ್‌ನ ಆರಂಭದಲ್ಲಿಯೇ ಉದ್ಯೋಗ ಸಂಬಂಧಿತ ಘೋಷಣೆಗಳಿಗೆ ಒತ್ತು ನೀಡಿದರು. ಹೊಸದಾಗಿ ಕೆಲಸ ಆರಂಭಿಸುವವರಿಗೆ ಒಂದು ತಿಂಗಳ ವೇತನ, ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ, ಉದ್ಯೋಗದಾತರಿಗೆ ಹೆಚ್ಚಿನ ಬೆಂಬಲ ಒದಗಿಸುವ ಮೂರು ಘೋಷಣೆಗಳು ಈ ನಿಟ್ಟಿನಲ್ಲಿ ಗಮನ ಸೆಳೆದವು. ಎಚ್‌ಟಿ ಕನ್ನಡದ ಬಜೆಟ್‌ ಲೈವ್‌ ಅಪ್‌ಡೇಟ್‌ಗೆ ಭೇಟಿ ನೀಡಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ