logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2024 Pdf: ಕೇಂದ್ರ ಬಜೆಟ್‌ ಪಿಡಿಎಫ್‌ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ? ಆಯವ್ಯಯದ ಕಡತ ಪಡೆಯಲು ಹೀಗೆ ಮಾಡಿ

Budget 2024 PDF: ಕೇಂದ್ರ ಬಜೆಟ್‌ ಪಿಡಿಎಫ್‌ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ? ಆಯವ್ಯಯದ ಕಡತ ಪಡೆಯಲು ಹೀಗೆ ಮಾಡಿ

Praveen Chandra B HT Kannada

Jul 23, 2024 10:49 AM IST

google News

Budget 2024 PDF: ಕೇಂದ್ರ ಬಜೆಟ್‌ ಪಿಡಿಎಫ್‌ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?

    • Union budget 2024-25 pdf download: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸುವ ಕೇಂದ್ರ ಬಜೆಟ್‌ 2024-25 ಪಿಡಿಎಫ್‌ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಬಯಸುವವರು ಭೇಟಿನೀಡಬೇಕಾದ ವೆಬ್‌ಸೈಟ್‌ ಲಿಂಕ್‌ ಮತ್ತು ಹೆಚ್ಚಿನ ವಿವರ ಇಲ್ಲಿದೆ.
Budget 2024 PDF: ಕೇಂದ್ರ ಬಜೆಟ್‌ ಪಿಡಿಎಫ್‌ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?
Budget 2024 PDF: ಕೇಂದ್ರ ಬಜೆಟ್‌ ಪಿಡಿಎಫ್‌ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?

Union budget 2024-25 pdf download: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಭಾಷಣ ಆರಂಭಿಸಲಿದ್ದಾರೆ. ಬಜೆಟ್‌ನಲ್ಲಿ ಈ ಬಾರಿ ಯಾವೆಲ್ಲ ಅಂಶಗಳು ಇವೆ. ಬಜೆಟ್‌ ಗಾತ್ರ ಏನು? ಬಜೆಟ್‌ನ ಮುನ್ನೋಟಗಳೇನು? ಬಜೆಟ್‌ನಲ್ಲಿ ಯಾವ ವಲಯಕ್ಕೆ ಎಷ್ಟು ಕೊಡುಗೆ ದೊರಕಿದೆ? ಹೀಗೆ ಬಜೆಟ್‌ ಕುರಿತಾದ ಸಂಪೂರ್ಣ ವಿವರ ದೊರಕಬೇಕಾದರೆ ಬಜೆಟ್‌ ಪಿಡಿಎಫ್‌ ಪ್ರತಿ ಅವಲೋಕಿಸಬೇಕು. ಕೇಂದ್ರ ಬಜೆಟ್‌ನ ಪಿಡಿಎಫ್‌ ಇಂದು ಮಾತ್ರವಲ್ಲದೆ ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ಎಂದೆಂದಿಗೂ ಉಪಯುಕ್ತವಾಗಿದೆ. indiabudget.gov.in ವೆಬ್‌ಸೈಟ್‌ನಲ್ಲಿ ಈ ವರ್ಷದ ಬಜೆಟ್‌ ಪಿಡಿಫ್‌ ಪ್ರತಿಗಳು ಮಾತ್ರವಲ್ಲದೆ ಈ ಹಿಂದಿನ ಬಜೆಟ್‌ ಪ್ರತಿಗಳೂ ದೊರಕುತ್ತವೆ. ದೇಶದ ಆರ್ಥಿಕ ಸ್ಥಿತಿ, ಆರ್ಥಿಕ ಬೆಳವಣಿಗೆ ಕುರಿತು ಜ್ಞಾನ ಸಂಪಾದನೆಗೂ ಈ ಪಿಡಿಎಫ್‌ ಪ್ರತಿಗಳನ್ನು ಆಸಕ್ತರು ಅವಲೋಕಿಸಬಹುದು.

ಇಂಡಿಯಾ ಬಜೆಟ್‌ ವೆಬ್‌ತಾಣದಲ್ಲಿ ಏನೇನಿದೆ?

ಕೇಂದ್ರ ಸರಕಾರದ ಇಂಡಿಯಾ ಬಜೆಟ್‌ ವೆಬ್‌ಸೈಟ್‌ನಲ್ಲಿ ಆರ್ಥಿಕ ಸಮೀಕ್ಷೆಗಳ ಪಿಡಿಎಫ್‌ಗಳು, ಈ ಹಿಂದಿನ ಬಜೆಟ್‌ ಭಾಷಣಗಳು, ಈ ಹಿಂದಿನ ವರ್ಷಗಳ ಕೇಂದ್ರ ಬಜೆಟ್‌ನ ಪಿಡಿಎಫ್‌ ಪ್ರತಿಗಳು, ಈ ಹಿಂದಿನ ವರ್ಷಗಳ ಆರ್ಥಿಕ ಸಮೀಕಷೆಯ ಪಿಡಿಎಫ್‌ ಪ್ರತಿಗಳು ದೊರಕುತ್ತವೆ. ಈ ವೆಬ್‌ ಸೈಟ್‌ನಲ್ಲಿ ಕೇಂದ್ರ ಬಜೆಟ್‌ನ ಲೈವ್‌ ಕೂಡ ಪ್ರಸಾರವಾಗುತ್ತದೆ.

ಕೇಂದ್ರ ಬಜೆಟ್‌ ಪಿಡಿಎಫ್‌ ಯಾವಾಗ ಲಭ್ಯ?

2024-25ನೇ ಸಾಲಿನ ಬಜೆಟ್‌ ಸದ್ಯದಲ್ಲಿಯೇ ಇಂಡಿಯಾ ಬಜೆಟ್‌ ವೆಬ್‌ಸೈಟ್‌ನಲ್ಲಿ ದೊರಕುತ್ತದೆ. ಬಜೆಟ್‌ ಪ್ರಸೆಂಟೇಷನ್‌ ಮುಗಿದ ತಕ್ಷಣ ಈ ವೆಬ್‌ ತಾಣದಲ್ಲಿ ಅಪ್ಲೋಡ್‌ ಆಗಲಿದೆ.

  1. ಕೇಂದ್ರ ಬಜೆಟ್‌ 2024-25 ಪಿಡಿಎಫ್‌ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?
  2. 2024-25ನೇ ಸಾಲಿನ ಕೇಂದ್ರ ಬಜೆಟ್‌ನ ಸಂಪೂರ್‌ಣ ವಿವರ ಪಡೆಯಲು ಮತ್ತು ಬಜೆಟ್‌ನ ಪಿಡಿಎಫ್‌ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಈ ಮುಂದಿನ ಹಂತಗಳನ್ನು ಅನುಸರಿಸಿ.
  3. ಹಣಕಾಸು ಸಚಿವಾಲಯ ಮತ್ತು ಭಾರತ ಸರಕಾರದ ಬಜೆಟ್‌ ಪೋರ್ಟಲ್‌ಗೆ ಭೇಟಿ ನೀಡಿ. ವೆಬ್‌ಸೈಟ್‌ ಲಿಂಕ್‌: https://www.indiabudget.gov.in/
  4. ಇಲ್ಲಿ ಇರುವ ಬಜೆಟ್‌ 2024 ವಿಭಾಗಕ್ಕೆ ಭೇಟಿ ನೀಡಿ.
  5. ಇಲ್ಲಿ ಪಿಡಿಎಫ್‌ ಡೌನ್‌ಲೋಡ್‌ ಆಯ್ಕಯನ್ನು ಕ್ಲಿಕ್‌ ಮಾಡಿ.
  6. ಸಂಬಂಧಪಟ್ಟ ಲಿಂಕ್‌ ಕ್ಲಿಕ್‌ ಮಾಡಿಕೊಂಡು ನಿಮ್ಮ ಕಂಪ್ಯೂಟರ್‌ ಅಥವಾ ಮೊಬೈಲ್‌ ಫೋನ್‌ನಲ್ಲಿ 2024ರ ಬಜೆಟ್‌ ಕಾಪಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.

ಬಜೆಟ್‌ ಕಾಪಿ ಡೌನ್‌ಲೋಡ್‌ ಮಾಡಿದ ಬಳಿಕ ಇದನ್ನು ಸೇವ್‌ ಮಾಡಿಕೊಳ್ಳಿ. ಬಜೆಟ್‌ ಕುರಿತಾದ ಹೆಚ್ಚಿನ ಮಾಹಿತಿ, ವಿಶ್ಲೇಷಣೆಗಳನ್ನು ಪಡೆಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ