Update Aadhaar card for free: ಆನ್‌ಲೈನಲ್ಲಿ ಆಧಾರ್ ವಿವರ ಫ್ರೀಯಾಗಿ ಅಪ್ಡೇಟ್ ಮಾಡಿ; ಜೂನ್ 14ರ ತನಕ ಮಾತ್ರ ಇದು ಫ್ರೀ...
Mar 16, 2023 04:20 PM IST
ಆಧಾರ್ (ಸಾಂಕೇತಿಕ ಚಿತ್ರ)
Update Aadhaar card for free: ಮುಂದಿನ ಮೂರು ತಿಂಗಳವರೆಗೆ, ಅಂದರೆ ಮಾರ್ಚ್ 15 ರಿಂದ ಜೂನ್ 14 ರವರೆಗೆ ಈ ಉಚಿತ ಸೇವೆ ಲಭ್ಯವಿದೆ. ಈ ಸೇವೆಯು ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಉಚಿತವಾಗಿದೆ. ಸ್ಥಳೀಯ ಆಧಾರ್ ಕೇಂದ್ರಗಳಲ್ಲಿ ಇದೇ ಸೇವೆಯನ್ನು 50 ರೂಪಾಯಿ ಶುಲ್ಕವನ್ನು ಪಾವತಿಸಿ ಪಡೆಯಬಹುದು. ಅಲ್ಲಿ ಇದು ಉಚಿತವಲ್ಲ ಎಂಬುದನ್ನು ಯುಐಡಿಎಐ ಸ್ಪಷ್ಟಪಡಿಸಿದೆ.
ಆನ್‌ಲೈನ್‌ನಲ್ಲಿ ಇನ್ನು ಆಧಾರ್ ಡಾಕ್ಯುಮೆಂಟ್‌ಗಳ ವಿವರವನ್ನು ಉಚಿತವಾಗಿ ಅಪ್ಡೇಟ್ ಮಾಡಬಹುದು.
ಹೌದು… ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ವು ಆನ್‌ಲೈನ್‌ನಲ್ಲಿ ಉಚಿತವಾಗಿ ಆಧಾರ್ ವಿವರ ಅಪ್ಡೇಟ್ ಮಾಡುವುದಕ್ಕೆ, ನವೀಕರಿಸುವುದಕ್ಕೆ ಅನುಮತಿ ನೀಡಲು ನಿರ್ಧರಿಸಿದೆ. ಇದರಿಂದ ಕೋಟ್ಯಂತರ ಆಧಾರ್ ಬಳಕೆದಾರರಿಗೆ ಪ್ರಯೋಜನವಾಗಲಿದೆ.
ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ, ಯುಐಡಿಎಐ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮೈಆಧಾರ್ ಪೋರ್ಟಲ್‌ನಲ್ಲಿ ಉಚಿತ ಡಾಕ್ಯುಮೆಂಟ್ ಅಪ್‌ಡೇಟ್ ಸೌಲಭ್ಯದ ಪ್ರಯೋಜನವನ್ನು ಪಡೆಯಬಹುದು ಎಂದು ಯುಐಡಿಎಐ ತಿಳಿಸಿದೆ.
ಮುಂದಿನ ಮೂರು ತಿಂಗಳವರೆಗೆ, ಅಂದರೆ ಮಾರ್ಚ್ 15 ರಿಂದ ಜೂನ್ 14 ರವರೆಗೆ ಉಚಿತ ಸೇವೆ ಲಭ್ಯವಿದೆ. ಈ ಸೇವೆಯು ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಉಚಿತವಾಗಿದೆ. ಸ್ಥಳೀಯ ಆಧಾರ್ ಕೇಂದ್ರಗಳಲ್ಲಿ ಇದೇ ಸೇವೆಯನ್ನು 50 ರೂಪಾಯಿ ಶುಲ್ಕವನ್ನು ಪಾವತಿಸಿ ಪಡೆಯಬಹುದು. ಅಲ್ಲಿ ಇದು ಉಚಿತವಲ್ಲ ಎಂಬುದನ್ನು ಯುಐಡಿಎಐ ಸ್ಪಷ್ಟಪಡಿಸಿದೆ.
ಆಧಾರ್ ಬಳಕೆದಾರರು ತಮ್ಮ ವಿವರ ನವೀಕರಿಸಲು ಗುರುತಿನ ಪುರಾವೆ, ವಿಳಾಸದ ಪುರಾವೆ ಮುಂತಾದ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಬೇಕು. ವಿಶೇಷವಾಗಿ ಆಧಾರ್ ಅನ್ನು 10 ವರ್ಷಗಳ ಹಿಂದೆ ಪಡೆದಿದ್ದರೆ ಮತ್ತು ಇದುವರೆಗೆ ನವೀಕರಿಸದೇ ಇದ್ದರೆ ಯುಐಡಿಎಐ ನೀಡಿರುವ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು. ಇದು ಸುಧಾರಿತ ಜೀವನ, ಉತ್ತಮ ಸೇವೆ ವಿತರಣೆಗೆ ಸಹಾಯ ಮಾಡುತ್ತದೆ ಮತ್ತು ದೃಢೀಕರಣದ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ವೈಯಕ್ತಿಕ ವಿವರಗಳನ್ನು (ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಇತ್ಯಾದಿ) ಬದಲಾಯಿಸುವ ಅಗತ್ಯವಿದ್ದರೆ, ನಿವಾಸಿಗಳು ನಿಯತ ಆನ್‌ಲೈನ್ ನವೀಕರಣ ಸೇವೆಯನ್ನು ಬಳಸಬಹುದು ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಸೇವೆಯನ್ನು ಪಡೆಯಬಹುದು. ಆಧಾರ್ ಕೇಂದ್ರಕ್ಕೆ ಹೋಗಿ ಸೇವೆ ಪಡೆದ ಸಂದರ್ಭಗಳಲ್ಲಿ ಸಾಮಾನ್ಯ ಶುಲ್ಕಗಳು ಅನ್ವಯಿಸುತ್ತವೆ.
ಆಧಾರ್ ಡಾಕ್ಯುಮೆಂಟ್ ಅಪ್ಡೇಟ್ ಮಾಡುವುದು ಹೇಗೆ?
ಆಧಾರ್ ಬಳಕೆದಾರರು https://myaadhaar.uidai.gov.in/ ವೆಬ್‌ಸೈಟ್‌ನಲ್ಲಿ ಅವರ ಆಧಾರ್ ನಂಬರ್ ಬಳಸಿಕೊಂಡು ಲಾಗ್ ಇನ್ ಆಗಬೇಕು.
ಆಧಾರ್ ಜತೆಗೆ ಜೋಡಿಸಲಾಗಿರುವ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ರವಾನೆಯಾಗುತ್ತದೆ. ಇದನ್ನು ಉಪಯೋಗಿಸಿಕೊಂಡು ʻಡಾಕ್ಯುಮೆಂಟ್ ಅಪ್ಡೇಟ್ʼ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅದರಲ್ಲಿ ಕೇಳಿರುವ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.
ಆಧಾರ್ ಬಳಕೆದಾರರು ವಿವರಗಳನ್ನು ಪರಿಶೀಲಿಸಬೇಕು. ಸರಿ ಎಂದು ದೃಢೀಕರಿಸಿದ ಬಳಿಕ ಅದರ ಮುಂದಿರುವ ಹೈಪರ್ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಬಳಕೆದಾರರು ಮುಂದಿನ ಸ್ಕ್ರೀನ್‌ನಲ್ಲಿ ಡ್ರಾಪ್‌ಡೌನ್ ಲಿಸ್ಟ್‌ನಲ್ಲಿ ಗುರುತಿನ ಚೀಟಿ ಮತ್ತು ವಿಳಾಸ ದೃಢೀಕರಣ ದಾಖಲೆಗಳನ್ನು ಆಯ್ಕೆ ಮಾಡಬೇಕು. ಅಲ್ಲದೆ, ಅದರ ಪ್ರತಿಗಳನ್ನು ಅಪ್ಲೋಡ್ ಮಾಡಿ ಅಪ್ಡೇಟ್ ಕೊಡಬೇಕು.
ಅಂಗೀಕರಿಸುವ ಗುರುತಿನ ಚೀಟಿ ಮತ್ತು ವಿಳಾಸ ದೃಢೀಕರಣ ದಾಖಲೆಗಳ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಯುಐಡಿಎಐ ನೀಡಿದೆ.
ಕಳೆದ ಒಂದು ದಶಕದಲ್ಲಿ, ಭಾರತದಲ್ಲಿ ಆಧಾರ್ ಎಂಬುದು ಸಾರ್ವತ್ರಿಕವಾಗಿ ಸ್ವೀಕೃತವಾಗಿರುವ ಗುರುತಿನ ಚೀಟಿಯಾಗಿ ರೂಪುಗೊಂಡಿದೆ. ಬಹುತೇಕ 1,200ರಷ್ಟು ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನ, ನೆರವು ಒದಗಿಸುವ ಪ್ರಕ್ರಿಯೆ ಆಧಾರ್ ಸಂಖ್ಯೆ ಆಧಾರಿತವಾಗಿಯೇ ನಡೆಯುತ್ತಿದೆ.
ಇದಲ್ಲದೆ, ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳಂತಹ ಹಣಕಾಸು ಸಂಸ್ಥೆಗಳು ಸೇರಿ ಸೇವಾ ಪೂರೈಕೆದಾರರ ಇತರ ಸೇವೆಗಳು ಗ್ರಾಹಕರನ್ನು ಮನಬಂದಂತೆ ದೃಢೀಕರಿಸಲು ಮತ್ತು ಆನ್‌ಬೋರ್ಡ್ ಮಾಡಲು ಆಧಾರ್ ಅನ್ನು ಬಳಸುತ್ತಿವೆ.
ಆಧಾರ್ ನೋಂದಣಿ ಮತ್ತು ನವೀಕರಣ ನಿಯಮಗಳ ಪ್ರಕಾರ, 2016; ಆಧಾರ್ ಸಂಖ್ಯೆ ಹೊಂದಿರುವವರು, ಆಧಾರ್‌ಗಾಗಿ ದಾಖಲಾದ ದಿನಾಂಕದಿಂದ ಪ್ರತಿ 10 ವರ್ಷಗಳಿಗೊಮ್ಮೆ ಪೂರ್ಣಗೊಂಡ ನಂತರ, ತಮ್ಮ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಗುರುತಿನ ಚೀಟಿ ಮತ್ತು ವಿಳಾಸ ದೃಢೀಕರಣ ದಾಖಲೆಗಳನ್ನು ಸಲ್ಲಿಸುವ ಮೂಲಕ ಆಧಾರ್‌ನಲ್ಲಿ ತಮ್ಮ ಪೂರಕ ದಾಖಲೆಗಳನ್ನು ಒಮ್ಮೆಯಾದರೂ ನವೀಕರಿಸಬಹುದು.