logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Upsc Civils Results: ಯುಪಿಎಸ್‌ಸಿ ಸಿವಿಲ್ಸ್ ಫಲಿತಾಂಶ ಪ್ರಕಟ; ಇಶಿತಾ ಕಿಶೋರ್ ದೇಶಕ್ಕೆ ಫಸ್ಟ್

UPSC Civils Results: ಯುಪಿಎಸ್‌ಸಿ ಸಿವಿಲ್ಸ್ ಫಲಿತಾಂಶ ಪ್ರಕಟ; ಇಶಿತಾ ಕಿಶೋರ್ ದೇಶಕ್ಕೆ ಫಸ್ಟ್

HT Kannada Desk HT Kannada

May 23, 2023 09:01 PM IST

google News

ಯುಪಿಎಎಸ್ ಸಿವಿಲ್ಸ್ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದಿರುವ ಇಶಿತಾ ಕಿಶೋರ್

  • 2022ನೇ ಸಾಲಿನ ಯುಪಿಎಸ್‌ಸಿ ಸಿವಿಲ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಇಶಿತಾ ಕಿಶೋರ್ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾರೆ.

ಯುಪಿಎಎಸ್ ಸಿವಿಲ್ಸ್ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದಿರುವ ಇಶಿತಾ ಕಿಶೋರ್
ಯುಪಿಎಎಸ್ ಸಿವಿಲ್ಸ್ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದಿರುವ ಇಶಿತಾ ಕಿಶೋರ್

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು ನಡೆಸಿದ 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ (UPSC Civils 2022 results) ಇಂದು (ಮೇ 23, ಮಂಗಳವಾರ) ಪ್ರಕಟವಾಗಿದ್ದು, ಮಹಿಳಾ ಅಭ್ಯರ್ಥಿಗಳು ಇತಿಹಾಸ ನಿರ್ಮಿಸಿದ್ದಾರೆ.

ಯುಪಿಎಸ್‌ಸಿ ಸಿವಿಲ್ಸ್ 2022 ಫಲಿತಾಂಶದಲ್ಲಿ ಇಶಿತಾ ಕಿಶೋರ್ ಎಂಬುವರು ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೆ, ಈ ಫಲಿತಾಂಶದಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳೇ ಪಡೆದಿರುವುದು ದಾಖಲೆಯಾಗಿದೆ.

ರಾಷ್ಟ್ರಮಟ್ಟದಲ್ಲಿ ಇಶಿತಾ ಕಿಶೋರ್ ಮೊದಲ ರ‍್ಯಾಂಕ್ ಪಡೆದರೆ, ಗರಿಮಾ ಲೋಹಿಯಾ ಎರಡನೇ ಸ್ಥಾನ, ಉಮಾ ಹರತಿ ಮೂರನೇ ಸ್ಥಾನ ಹಾಗೂ ಸ್ಮೃತಿ ಮಿಶ್ರಾ ನಾಲ್ಕನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಒಟ್ಟು 933 ಅಭ್ಯರ್ಥಿಗಳ ಪೈಕಿ ಕರ್ನಾಟಕದಿಂದ 26 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡದ ಶೃತಿ ಯರಗಟ್ಟಿ ಅವರಿಗೆ 362, ಮೈಸೂರಿನ ಪೂಜಾ ಅವರಿಗೆ 390, ಬಿವಿ ಶ್ರೀದೇವಿ -525, ಆದಿನಾಥ್ ಪದ್ಮಣ್ಣ - 566, ಐಎನ್ ಮೇಘನಾ 617ನೇ ಸ್ಥಾನ ಪಡೆದಿದ್ದಾರೆ.

ಯಪಿಎಸ್‌ಸಿ ಸಿವಿಲ್ಸ್‌ 2022 ಪರೀಕ್ಷೆಯಲ್ಲಿ ಒಟ್ಟು 933 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರು ಐಎಎಸ್ ಮತ್ತು ಐಪಿಎಸ್‌ನಂತಹ ದೇಶದ ಅತ್ಯುನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ಯುಪಿಎಸ್‌ಸಿ ಪ್ರಕಟಿಸಿದೆ.

ಈ 933 ಜನರಲ್ಲಿ ಸಾಮಾನ್ಯ ವರ್ಗದಲ್ಲಿ 345 ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವಲಯದ 99 ಅಭ್ಯರ್ಥಿಗಳು, ಒಬಿಸಿ ವರ್ಗದಲ್ಲಿ 263, ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ 154 ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಪಂಗಡದಿಂದ (ಎಸ್‌ಟಿ) 72 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಅಲ್ಲದೆ, ಈ ನಾಗರಿಕ ಸೇವಾ ಪರೀಕ್ಷೆಯ ಮೂಲಕ ಐಎಎಸ್‌ಗೆ 180, ಐಪಿಎಸ್‌ಗೆ 200, ಐಎಫ್‌ಎಸ್‌ಗೆ 38, ಗ್ರೂಪ್ ಎ ಕೇಂದ್ರ ಸೇವೆಗಳಿಗೆ 473 ಮತ್ತು ಗ್ರೂಪ್ ಬಿ ಸೇವೆಗೆ 131 ಜನರನ್ನು ಆಯ್ಕೆ ಮಾಡಲಾಗಿದೆ. ಅಭ್ಯರ್ಥಿಗಳು UPSC ಅಧಿಕೃತ ವೆಬ್‌ಸೈಟ್ https://www.upsc.gov.in/ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ