Rishi Sunak: ವಿಜಯ್ ಮಾಮ, ನಾನು ಸುನಕ್! ಬ್ರಿಟನ್ ಪ್ರಧಾನಿಯ ಮಾಮ ಮಮತೆಗೆ ನೆಟ್ಟಿಗರು ಫಿದಾ, ಯಾರಿದು ಮಾಮಾ?!
Oct 28, 2022 07:33 PM IST
Rishi Sunak: ವಿಜಯ್ ಮಾಮ, ನಾನು ಸುನಕ್! ಬ್ರಿಟನ್ ಪ್ರಧಾನಿಯ ಮಾಮ ಮಮತೆಗೆ ನೆಟ್ಟಿಗರು ಫಿದಾ, ಯಾರಿದು ಮಾಮಾ?!
- ಮಾಮ, ನಾನು ನಿಮಗೆ ಹಲೋ ಎನ್ನಲು ಒಬ್ಬರನ್ನು ತೋರಿಸಬೇಕೆಂದಿದ್ದೇನೆʼʼ ಎನ್ನುತ್ತಾರೆ. ನಂತರ ಕ್ಯಾಮೆರಾ ಫ್ರೇಮ್‌ನಲ್ಲಿ ರಿಷಿ ಸುನಕ್ ಅವರು ಕಾಣಿಸಿಕೊಳ್ಳುತ್ತಾರೆ. ಜೋರಾಗಿ ನಗುತ್ತ, "ವಿಜಯ್ ಮಾಮಾ, ನಾನು ರಿಷಿ, ಹೇಗಿದ್ದೀರಿ?ʼʼ ಎಂದು ಕೇಳುತ್ತಾರೆ.
ಲಂಡನ್: ಕಾಶ್ಮೀರದ ಸೆಲೆಬ್ರಿಟಿ ಶೆಫ್ ಸಂಜಯ್ ರೈನಾ ಅವರ ಇತ್ತೀಚಿನ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ "ರಿಷಿ ಸುನಕ್ʼʼ ಇದ್ದು ನೆಟ್ಟಿಗರಿಂದ ಸಾಕಷ್ಟು ಕುತೂಹಲ ಗಿಟ್ಟಿಸಿಕೊಂಡಿದೆ. ಆ ವಿಡಿಯೋದಲ್ಲಿ ರಿಷಿ ಸುನಕ್ ಅವರು "Vijay mama, hi it's Rishi" ಎಂದಿದ್ದು, ಯಾರಿದು ಭಾರತದಲ್ಲಿ ರಿಷಿ ಸುನಕ್ ಮಾಮಾ? ಎಂಬ ಪ್ರಶ್ನೆಯನ್ನು ನೆಟ್ಟಿಗರಲ್ಲಿ ಹುಟ್ಟು ಹಾಕಿದೆ.
ಈ ವಿಡಿಯೋದಲ್ಲಿ ಬ್ರಿಟನ್‌ನ ಪ್ರಧಾನ ಮಂತ್ರಿ ರಿಷಿ ಸುನಕ್ ಅವರಿಗೆ ಶೆಫ್ ಅವರು ತನ್ನ ಮಾವನನ್ನು ತೋರಿಸುತ್ತಿರುವ ದೃಷ್ಯವಿದೆ. ಇವರು ಡೌನಿಂಗ್ ಸ್ಟ್ರೀಟ್‌ಗೆ ಆಗಮಿಸಿದ ಸಂದರ್ಭದಲ್ಲಿ, ಕಿಂಗ್ ಚಾರ್ಲ್ಸ್ ಅವರು ದೀಪಾವಳಿ ಸಿಹಿ ನೀಡಿದ ಸಮಯದ ಮರುದಿನ ಈ ವಿಡಿಯೋ ಶೂಟ್ ಮಾಡಲಾಗಿದೆ.
ಶೆಫ್ ರೈನಾ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಮಾಮ, ನಾನು ನಿಮಗೆ ಹಲೋ ಎನ್ನಲು ಒಬ್ಬರನ್ನು ತೋರಿಸಬೇಕೆಂದಿದ್ದೇನೆʼʼ ಎನ್ನುತ್ತಾರೆ. ನಂತರ ಕ್ಯಾಮೆರಾ ಫ್ರೇಮ್‌ನಲ್ಲಿ ರಿಷಿ ಸುನಕ್ ಅವರು ಕಾಣಿಸಿಕೊಳ್ಳುತ್ತಾರೆ. ಜೋರಾಗಿ ನಗುತ್ತ, "ವಿಜಯ್ ಮಾಮಾ, ನಾನು ರಿಷಿ, ಹೇಗಿದ್ದೀರಿ?ʼʼ ಎಂದು ಕೇಳುತ್ತಾರೆ.
ಈ ಮಾತುಕತೆ ಇಷ್ಟಕ್ಕೆ ಮುಗಿಯುವುದಿಲ್ಲ. 10 ಡೌನಿಂಗ್ ಸ್ಟ್ರೀಟ್‌ಗೆ ಬರುವಂತೆ ವಿಜಯ್ ಮಾಮಾ ಅವರನ್ನು ಆಹ್ವಾನಿಸಿದ್ದಾರೆ. ನೀವು ಇಲ್ಲಿಗೆ ಬಂದಾಗ ಡೌನಿಂಗ್ ಸ್ಟ್ರೀಟ್‌ಗೆ ಕರೆದುಕೊಂಡು ಬರಲು ನಿಮ್ಮ ಸಂಬಂಧಿ ಸಂಜಯ್ ಬಳಿ ಹೇಳಿ ಎಂದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ. ರಿಶಿ ಸುನಕ್ ಹಾಯ್ ಹೇಳಿದ ವಿಜಯ್ ಮಾಮ ಯಾರು? ಎಂದು ಚರ್ಚೆ ಆರಂಭಗೊಂಡಿದೆ. ಮತ್ತೆ ಕೆಲವರು ಪ್ರಧಾನಿ ಪಟ್ಟಕ್ಕೇರಿದರೂ ರಿಶಿ ತಮ್ಮ ಸಂಬಂಧ, ಆತ್ಮೀಯತೆ, ಗೆಳೆತನ ಹಾಗೇ ಉಳಿಸಿಕೊಂಡಿದ್ದಾರೆ. ಅವರ ಮಾತುಗಳಲ್ಲಿನ ಆತ್ಮೀಯತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದಿದ್ದಾರೆ.
ಸೋಷಿಯಲ್ ಮೀಡಿಯಾ ಅಂದರೆ ಇಷ್ಟಕ್ಕೆ ನಿಲ್ಲುವುದಿಲ್ಲ. ಈ ವಿಜಯ್ ಮಾಮಾ, ನಮ್ಮ ವಿಜಯ್ ಮಲ್ಯ ಇರಬಹುದೇ? ಎಂದೂ ಕೆಲವರು ಕಾಮಿಡಿ ಮಾಡಿದ್ದಾರೆ.
ರಿಷಿಗೆ ಕರೆ ಮಾಡಿದ ಮೋದಿ
ಬ್ರಿಟನ್ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್ ಅವರಿಗೆ ದೂರವಾಣಿ ಕರೆ ಮಾಡಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಬ್ರಿಟನ್ ಮುನ್ನಡೆಸುವ ಅವಕಾಶ ಪಡೆದಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರತಿಯಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿರುವ ರಿಷಿ ಸುನಕ್, ಭಾರತ-ಯುಕೆ ನಡುವಿನ ರಾಜತಾಂತ್ರಿಕ, ವಾಣಿಜ್ಯ ಹಾಗೂ ಸಾಂಸ್ಕೃತಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಇಂದು ರಿಷಿ ಸುನಕ್ ಅವರೊಂದಿಗೆ ಮಾತನಾಡಿ ಸಂತೋಷವಾಗಿದೆ. ಯುಕೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಸಮಗ್ರ ಮತ್ತು ಸಮತೋಲಿತ ಎಫ್‌ಟಿಎಯ ಆರಂಭಿಕ ತೀರ್ಮಾನದ ಪ್ರಾಮುಖ್ಯತೆಯನ್ನು ನಾವು ಒಪ್ಪಿಕೊಂಡಿದ್ದೇವೆ" ಎಂದು ತಿಳಿಸಿದ್ಧಾರೆ.
ಭಾರತ ಮತ್ತು ಯುಕೆ ನಡುವಿನ ಸಮತೋಲಿತ ಮುಕ್ತ-ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಜಾರಿಗೊಳಿಸುವ ಅಗತ್ಯತೆಯ ಕುರಿತು, ಪ್ರಧಾನಿ ಮೋದಿ ಮತ್ತು ರಿಷಿ ಸುನಕ್ ನಡುವೆ ಮಾತುಕತೆ ನಡೆದಿದೆ ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ. ದೀರ್ಘ ಸಮಯದಿಂದ ಎಫ್‌ಟಿಎ ಒಪ್ಪಂದ ಜಾರಿಯ ಹಂತದಲ್ಲೇ ಉಳಿದುಕೊಂಡಿದ್ದು, ಇದೀಗ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿರುವುದರಿಂದ, ಈ ಒಪ್ಪಂದ ಅಧಿಕೃತವಾಗಿ ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ.