logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral News: ತನ್ನದೇ 4 ಮಕ್ಕಳನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತಳಾಗಿ 20 ವರ್ಷ ಸಜೆ ಅನುಭವಿಸಿದ ಆಸ್ಟ್ರೇಲಿಯಾ ಮಹಿಳೆ ಈಗ ನಿರ್ದೋಷಿ

Viral News: ತನ್ನದೇ 4 ಮಕ್ಕಳನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತಳಾಗಿ 20 ವರ್ಷ ಸಜೆ ಅನುಭವಿಸಿದ ಆಸ್ಟ್ರೇಲಿಯಾ ಮಹಿಳೆ ಈಗ ನಿರ್ದೋಷಿ

Umesh Kumar S HT Kannada

Dec 16, 2023 01:45 PM IST

google News

ಕ್ಯಾಥ್ಲೀನ್ ಫೋಲ್ಬಿಗ್

  • ಅತ್ಯಂತ ವಿರಳ ವಿದ್ಯಮಾನ ಒಂದರಲ್ಲಿ, ಅಪರಾಧ ಸಾಬೀತಾಗಿ 20 ವರ್ಷ ಸಜೆ ಅನುಭವಿಸಿದ ಮಹಿಳೆಯನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿದ ಪ್ರಸಂಗ ಆಸ್ಟ್ರೇಲಿಯಾದಿಂದ ವರದಿಯಾಗಿದೆ. ತನ್ನದೇ ನಾಲ್ಕು ಮಕ್ಕಳನ್ನು ಹತ್ಯೆ ಮಾಡಿದ ಆರೋಪವನ್ನು ಮಹಿಳೆ ಎದುರಿಸಿದ್ದರು.

ಕ್ಯಾಥ್ಲೀನ್ ಫೋಲ್ಬಿಗ್
ಕ್ಯಾಥ್ಲೀನ್ ಫೋಲ್ಬಿಗ್ (via REUTERS)

ಸಿಡ್ನಿ: ತನ್ನದೇ 4 ಮಕ್ಕಳನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತಳಾಗಿ 20 ವರ್ಷ ಸಜೆ ಅನುಭವಿಸಿದ ಆಸ್ಟ್ರೇಲಿಯಾ ಮಹಿಳೆಯನ್ನು ನಿರ್ದೋಷಿ ಎಂದು ನ್ಯೂ ಸೌತ್ ವೇಲ್ಸ್ ಸುಪ್ರೀಂ ಕೋರ್ಟ್ ಘೋ‍ಷಿಸಿದೆ. ಕಳೆದ ಜೂನ್ ತಿಂಗಳಲ್ಲಿ ಆಕೆಗೆ ಕ್ಷಮಾದಾನವನ್ನೂ ನೀಡಿ ಬಿಡುಗಡೆ ಮಾಡಲಾಗಿತ್ತು.

ವಿಶ್ವಾಸಾರ್ಹವಲ್ಲದ ಸಾಕ್ಷ್ಯಗಳನ್ನು ಪರಿಗಣಿಸಿ ಕ್ಯಾಥ್ಲೀನ್‌ ಫೋಲ್ಬಿಗ್ ಅವರನ್ನು ಅಪರಾಧಿ ಎಂದು ಘೋ‍ಷಿಸಲಾಗಿತ್ತು. ಹೀಗಾಗಿ ಆಕೆಯನ್ನು ನಿರ್ದೋಷಿ ಎಂದು ಪರಿಗಣಿಸಲಾಗಿದೆ ಎಂದು ಕೋರ್ಟ್‌ ತೀರ್ಪಿನಲ್ಲಿ ತಿಳಿಸಿದೆ. ಈ ಕುತೂಹಲಕಾರಿ ಸುದ್ದಿ ಜಗತ್ತಿನ ಗಮನಸೆಳೆದಿದೆ.

ಕೋರ್ಟ್‌ ತನ್ನನ್ನು ನಿರ್ದೋಷಿ ಎಂದು ಘೋಷಿಸಿದ ಬಳಿಕ ಕ್ಯಾಥ್ಲೀನ್‌ ಫೋಲ್ಬಿಗ್ ಈಗ, ಸರ್ಕಾರದ ವಿರುದ್ಧ ನ್ಯೂ ಸೌತ್ ವೇಲ್ಸ್ ಕಾನೂನು ಸಮರ ನಡೆಸಿ ತನಗಾದ ನಷ್ಟಕ್ಕೆ ಪರಿಹಾರ ಕೇಳಲು ಚಿಂತನೆ ನಡೆಸಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ತನ್ನ ಮೂರು ಮಕ್ಕಳನ್ನು ಕೊಂದಿದ್ದಕ್ಕಾಗಿ 2003ರಲ್ಲಿ ಕ್ಯಾಥ್ಲೀನ್ ಫೋಲ್ಬಿಗ್ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿತ್ತು. ನಾಲ್ಕನೆಯ ಮಗುವಿನ ಸಾವಿನ ಪ್ರಕರಣದಲ್ಲಿ ಆಕೆ ನರಹತ್ಯೆ ಮಾಡಿದ ಅಪರಾಧಿ ಎಂದು ತೀರ್ಪು ನೀಡಿತ್ತು.

ಆರಂಭದಿಂದಲೂ ಕ್ಯಾಥ್ಲೀನ್ ಫೋಲ್ಬಿಗ್‌, ತನ್ನ ಮಕ್ಕಳು 1989-1999ರ ಅವಧಿಯಲ್ಲಿ ಸಹಜವಾದ ಕಾರಣಗಳಿಂದ ಮೃತಪಟ್ಟಿವೆ ಎಂದು ಪ್ರತಿಪಾದಿಸುತ್ತ ಬಂದಿದ್ದಳು. ಗಮನಿಸಬೇಕಾದ ಅಂಶವೆಂದರೆ, ತನ್ನ ಮೇಲೆ ಮಕ್ಕಳನ್ನು ಕೊಂದ ಆರೋಪ ಎದುರಾದ ಕೂಡಲೇ ಕಾನೂನು ಪ್ರಕಾರವೇ ಅದನ್ನುಆಕೆ ಪ್ರಶ್ನಿಸಲು ಪ್ರಯತ್ನಿಸುತ್ತಲೇ ಇದ್ದರು. ಆದರೆ ಅವೆಲ್ಲವೂ ತಿರಸ್ಕೃತವಾಗಿದ್ದವು.

ಪದೇಪದೆ ಮೇಲ್ಮನವಿ ಸಲ್ಲಿಸಿದ ಕಾರಣ, 2019 ರಲ್ಲಿ, ಪ್ರಕರಣದ ಆರಂಭಿಕ ವಿಚಾರಣೆಯು ಫೋಲ್ಬಿಗ್ ಅವರ ತಪ್ಪನ್ನು ಪುನರುಚ್ಚರಿಸಿತು. ಆದರೆ 2022 ರಲ್ಲಿ, ಮಾಜಿ ಮುಖ್ಯ ನ್ಯಾಯಾಧೀಶರ ನೇತೃತ್ವದ ಎರಡನೇ ವಿಚಾರಣೆಯ ವೇಳೆ ಅವರಿಗೆ ಕ್ಯಾಥ್ಲೀನ್‌ ಫೋಲ್ಬಿಗ್ ವಾದದಲ್ಲಿ ಸಮಂಜಸವೆನಿಸುವ ಅನುಮಾನ ಕಂಡಿತು. ಹೀಗಾಗಿ ಸಾಕ್ಷ್ಯಗಳ ಮರುಪರಿಶೀಲನೆ ನಡೆಯಿತು. ಹಾಗೆ, ಹೊಸ ಪುರಾವೆಗಳನ್ನು ಕಂಡುಬಂತು. ಅದರಲ್ಲಿ ಇಬ್ಬರು ಮಕ್ಕಳು ಆನುವಂಶಿಕ ಕಾಯಿಲೆಗಳಿದ್ದವು ಎಂಬುದನ್ನು ಗುರುತಿಸಿ, ಅದು ಆ ಮಕ್ಕಳ ಸಾವಿಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಯಿತು.

ಇದೇ ಕಾರಣದಿಂದ ಆಕೆಯ ತಪ್ಪು ಇಲ್ಲ ಎಂಬುದು ನ್ಯಾಯಪೀಠಕ್ಕೆ ಮನವರಿಕೆಯಾಯಿತು. ಕಳೆದ ಜೂನ್ ತಿಂಗಳಲ್ಲಿ ಆಕೆಗೆ ಕ್ಷಮಾದಾನ ನೀಡಿ ಬಿಡುಗಡೆಮಾಡಲಾಗಿತ್ತು. ಆದರೆ ವಿಚಾರಣೆ ಮುಂದುವರಿದಿತ್ತು. ಡಿಸೆಂಬರ್ 14ರಂದು ಕೋರ್ಟ್ ಅಂತಿಮ ತೀರ್ಪು ನೀಡಿದ್ದು, ಕ್ಯಾಥ್ಲೀನ್‌ ನಿರ್ದೋಷಿ ಎಂದು ಘೋಷಿಸಿತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ