logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Video; ನನ್ನ ಮಗಳನ್ನು ಆಟ ಆಡಿಸ್ತಾ ಕಣ್ಣೀರು ಸುರಿಸಿದ ಅಪರಿಚಿತ; ವೈರಲ್ ಆಯಿತು ಪ್ರೊಫೆಸರ್ ಮಮ್ಮಿ ಇನ್‌ಸ್ಟಾಗ್ರಾಂ ವಿಡಿಯೋ

Viral Video; ನನ್ನ ಮಗಳನ್ನು ಆಟ ಆಡಿಸ್ತಾ ಕಣ್ಣೀರು ಸುರಿಸಿದ ಅಪರಿಚಿತ; ವೈರಲ್ ಆಯಿತು ಪ್ರೊಫೆಸರ್ ಮಮ್ಮಿ ಇನ್‌ಸ್ಟಾಗ್ರಾಂ ವಿಡಿಯೋ

Umesh Kumar S HT Kannada

Sep 10, 2024 01:29 PM IST

google News

Viral Video; ನನ್ನ ಮಗಳನ್ನು ಆಟ ಆಡಿಸ್ತಾ ಕಣ್ಣೀರು ಸುರಿಸಿದ ಅಪರಿಚಿತ; ವೈರಲ್ ಆಯಿತು ಪ್ರೊಫೆಸರ್ ಮಮ್ಮಿ ಇನ್‌ಸ್ಟಾಗ್ರಾಂ ವಿಡಿಯೋ

  • Unexpected Tears; ರೈಲು ಪ್ರಯಾಣ ವಿಭಿನ್ನ ಅನುಭವ ನೀಡುವಂಥದ್ದು. ಆ ಅನುಭವಗಳನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಳ್ತಾರೆ. ಅಂತಹ ಒಂದು ಅನುಭವ ಇದು. “ನನ್ನ ಮಗಳನ್ನು ಆಟ ಆಡಿಸ್ತಾ ಕಣ್ಣೀರು ಸುರಿಸಿದ ಅಪರಿಚಿತ” ಎಂದು ಪ್ರೊಫೆಸರ್ ಮಮ್ಮಿ ಇನ್‌ಸ್ಟಾಗ್ರಾಂ ವಿಡಿಯೋ ವೈರಲ್ ಆಯಿತು. ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ.

Viral Video; ನನ್ನ ಮಗಳನ್ನು ಆಟ ಆಡಿಸ್ತಾ ಕಣ್ಣೀರು ಸುರಿಸಿದ ಅಪರಿಚಿತ; ವೈರಲ್ ಆಯಿತು ಪ್ರೊಫೆಸರ್ ಮಮ್ಮಿ ಇನ್‌ಸ್ಟಾಗ್ರಾಂ ವಿಡಿಯೋ
Viral Video; ನನ್ನ ಮಗಳನ್ನು ಆಟ ಆಡಿಸ್ತಾ ಕಣ್ಣೀರು ಸುರಿಸಿದ ಅಪರಿಚಿತ; ವೈರಲ್ ಆಯಿತು ಪ್ರೊಫೆಸರ್ ಮಮ್ಮಿ ಇನ್‌ಸ್ಟಾಗ್ರಾಂ ವಿಡಿಯೋ

ಬದುಕಿನಲ್ಲಿ ಕೆಲವು ಕ್ಷಣಗಳು ಎಂಥವರನ್ನೂ ಭಾವುಕರನ್ನಾಗಿ ಮಾಡಿಬಿಡುತ್ತದೆ. ಅಂಥದ್ದೇ ಒಂದು ಕ್ಷಣದ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ರೈಲು ಪ್ರಯಾಣದ ವಿಡಿಯೋ ಇದಾಗಿದ್ದು, ಪುಟ್ಟ ಬಾಲಕಿಯೊಬ್ಬಳು ಹಿರಿಯೊಬ್ಬರ ಜೊತೆಗೆ ಆಟ ಆಡ್ತಾ ಇರುವ ದೃಶ್ಯ ಅದರಲ್ಲಿದೆ. ಅದರಲ್ಲೇನು ವಿಶೇಷ ಅಂತೀರಾ.

ಆ ಬಾಲಕಿಗೆ ಆ ಹಿರಿಯ ವ್ಯಕ್ತಿ ಯಾರು ಅನ್ನೋದು ಗೊತ್ತಿಲ್ಲ. ಗುರುತುಪರಿಚಯ ಇಲ್ಲ. ಇನ್ನು ಆ ವ್ಯಕ್ತಿಗೂ ಅಷ್ಟೇ ಆ ಪುಟ್ಟ ಬಾಲೆ ಯಾರು ಅನ್ನೋದು ಗೊತ್ತಿಲ್ಲ. ಅದಕ್ಕೆ ನೀಡಿದ ಶೀರ್ಷಿಕೆ ಗಮನಸೆಳೆಯುತ್ತಿದ್ದು, ಅದುವೇ ವಿಡಿಯೋವನ್ನು ವೈರಲ್ ಮಾಡಿರುವಂಥದ್ದು. ಅಲ್ಲಿ ಪೇರೆಂಟಿಂಗ್, ಬಾಲ್ಯದ ಕ್ಷಣಗಳ ಸೇರಿ ಹಲವು ವಿಷಯಗಳ ಚರ್ಚೆಯೂ ನಡೆದಿದೆ.

ನೀಲಂ ಎಂಬುವವರು ಪ್ರೊಫೆಸರ್ ಮಮ್ಮಿ22 (@professor_mommy22) ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ತನ್ನ ಪ್ರೊಫೈಲ್‌ನಲ್ಲಿ ಡಿಜಿಟಲ್ ಕ್ರಿಯೇಟರ್ ಎಂದು ನಮೂದಿಸಿದ್ದು, ವೈರಲ್‌ ವಿಡಿಯೋ ಶೇರ್ ಮಾಡುವಂತೆ ತೋರುತ್ತಿದೆ.

ನನ್ನ ಮಗಳನ್ನು ಆಟ ಆಡಿಸ್ತಾ ಕಣ್ಣೀರು ಸುರಿಸಿದ ಅಪರಿಚಿತ; ಯಾಕೆ ಅನ್ನೋದು ಗೊತ್ತಿಲ್ಲ

“ನನ್ನ ಮಗಳನ್ನು ಆಟ ಆಡಿಸ್ತಾ ಕಣ್ಣೀರು ಸುರಿಸಿದ ಅಪರಿಚಿತ; ಯಾಕೆ ಅನ್ನೋದು ಗೊತ್ತಿಲ್ಲ” ಈ ಶೀರ್ಷಿಕೆಯ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಆಗಸ್ಟ್‌ 23ಕ್ಕೆ ಅಪ್ಲೋಡ್ ಆಗಿದ್ದು ಈ ವರೆಗೆ 5.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. 1300ಕ್ಕೂ ಹೆಚ್ಚು ಕಾಮೆಂಟ್‌ ಹೊಂದಿದೆ.

ಈ ಶೀರ್ಷಿಕೆ ಜೊತೆಗೆ ಆ ಸನ್ನಿವೇಶವನ್ನೂ ಅವರು ವಿಡಿಯೋ ಜೊತೆಗೆ ವಿವರಣೆ ಬಾಕ್ಸ್‌ನಲ್ಲಿ ಉಲ್ಲೇಖಿಸಿದ್ದಾರೆ. ಅದು ಹೀಗಿದೆ -

"ಇತ್ತೀಚೆಗೆ, ನನ್ನ ರೈಲು ಪ್ರಯಾಣದ ನಡುವೆ ಗೌರವಾನ್ವಿತ ಹಿರಿಯ ದಂಪತಿಯನ್ನು ಭೇಟಿಯಾದೆ. ಅವರು ವ್ಯಾಪಾರಸ್ಥರು. ಇದ್ದಕ್ಕಿದ್ದಂತೆ ಅವರು ನನ್ನ ಮಗಳನ್ನು ಕರೆದು ಅವಳೊಂದಿಗೆ ಆಟವಾಡಲು ಪ್ರಾರಂಭಿಸಿದರು. ಇದ್ದಕ್ಕಿದ್ದಂತೆ ಅವರು ಕಣ್ಣೀರು ಸುರಿಸುತ್ತಿದ್ದರು. ಏನಾಯಿತು ಎಂದು ಕೇಳಿದೆ. ಆಗ ಅವರ ಪತ್ನಿ ದಯವಿಟ್ಟು ಅಳುವುದನ್ನು ನಿಲ್ಲಿಸಿ ಎಂದರು. (ಕಣ್ಣೀರು ಹರಿಯುತ್ತಿದ್ದುದು ಅವರಿಗೆ ತಿಳಿದಿರಲಿಲ್ಲ) ನಾನು ಕೇಳಿದಾಗ ಎಲ್ಲವೂ ಚೆನ್ನಾಗಿದೆ ಎಂದು ಉತ್ತರಿಸಿದರು. ಬಹಳ ಸಮಯದ ನಂತರ, ನನ್ನ ನಿಲ್ದಾಣವು ಸಮೀಪಿಸಿದಾಗ ಅವರೊಂದಿಗೆ ಮಾತಿಗಿಳಿದೆ. ಅವರು ತಮ್ಮೊಂದಿಗೆ ವಾಸಿಸುತ್ತಿದ್ದ ತಮ್ಮ ಮೊಮ್ಮಕ್ಕಳನ್ನು ಕಳೆದುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಒಳ್ಳೆಯವರು.

ನನ್ನ ಅಭಿಪ್ರಾಯದಲ್ಲಿ, ಮಕ್ಕಳು ಮಕ್ಕಳು, ನಾವು ಚಟುವಟಿಕೆಯನ್ನು ನಿಯಂತ್ರಿಸುವ ಮತ್ತು ಚಟುವಟಿಕೆಗಳನ್ನು ಬೇರೆಡೆಗೆ ತಿರುಗಿಸುವ ಬಗ್ಗೆ ಕಲಿಯುವಂತೆ ಮಾಡಬೇಕು, ಬಾಲ್ಯದಲ್ಲಿ ಮಾತ್ರ ಆನಂದಿಸಬಹುದಾದ ವಿಷಯಗಳ ಬಗ್ಗೆ ನಾವು ಕಟ್ಟುನಿಟ್ಟಾಗಿದ್ದರೆ, ನಾವು ಅವರ ಬಾಲ್ಯದ ಕ್ಷಣಗಳನ್ನೂ ಕಳೆದುಕೊಳ್ಳುತ್ತೇವೆ" ಎಂದು ಪ್ರೊಫೆಸರ್ ಮಮ್ಮಿ22 ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಹುಟ್ಟು ಹಾಕಿದ ಚರ್ಚೆ

ಆ ಅಪರಿಚಿತನಿಗೆ ಅವರ ಬಾಲ್ಯ ನೆನಪಾಗಿರಬೇಕು. ಭಾರತೀಯರು ಇತರ ಅಪರಿಚಿತರ (ಸಾಕಷ್ಟು ಸುರಕ್ಷಿತವಾಗಿ ಕಾಣುವ) ಜೊತೆಗೆ ತಮ್ಮ ಮಕ್ಕಳೊಂದಿಗೆ ಆಟವಾಡಲು ಬಿಡಲು ಹೆದರುವುದಿಲ್ಲ ಎಂಬುದು ನನಗೆ ಖುಷಿ ಕೊಟ್ಟ ವಿಚಾರ ಎಂದು ಕಶ್ಯಪ್ ಎಂಬುವವರು ಕಾಮೆಂಟ್ ಮಾಡಿದ್ದಾರೆ.

ಇದೇ ರೀತಿ, ಇತರರ ವಿಡಿಯೋ ಮತ್ತು ಫೋಟೋಗಳನ್ನು ಅವರ ಅನುಮತಿಯಿಲ್ಲದೆ ಪೋಸ್ಟ್ ಮಾಡಬೇಡಿ ಅಥವಾ ಅವರ ಮುಖಗಳನ್ನು ಅನಾವರಣಗೊಳಿಸಬೇಡಿ. ಒಂದೊಮ್ಮೆ ವಿಡಿಯೋ ವೈರಲ್ ಆದರೆ ಅದರಿಂದಾಗುವ ದುಷ್ಪರಿಣಾಮ ನಿಮಗೆ ಗೊತ್ತಿಲ್ಲ ಎಂದು ಮತ್ತೊಬ್ಬರು ಎಚ್ಚರಿಸಿದ್ದಾರೆ.

ಬಹಳ‍ಷ್ಟು ಋಣಾತ್ಮಕ ಅಂಶಗಳು ತುಂಬಿರುವ ಜಗತ್ತಿನಲ್ಲಿ ಮಕ್ಕಳ ಜೊತೆಗೆ ಉತ್ತಮ ನಡವಳಿಕೆ ತೋರುವವರೂ ಇದ್ದಾರೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೀರಿ. ಈ ಪೋಸ್ಟ್ ಮಾಡಿರುವುದು ಖುಷಿ ಕೊಟ್ಟಿದೆ. ಎಲ್ಲರೂ ಕೆಟ್ಟವರಲ್ಲ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ