ViralVideo: ಕ್ಲಿನಿಕ್‌ನಲ್ಲಿ ರೋಗಿಗೆ ಹಾರ್ಟ್‌ಅಟ್ಯಾಕ್ ; ಡಾಕ್ಟರ್ ಏನ್ ಮಾಡಿದ್ರು ನೋಡಿ; ವೈರಲ್ ವಿಡಿಯೋ ಇಲ್ಲಿದೆ.
Sep 29, 2022 11:06 AM IST
ಕೊಲ್ಹಾಪುರದ ಡಾ. ಅರ್ಜುನ್ ಅಡ್ನಾಯಕ್ ಅವರನ್ನು ಅತ್ಯುತ್ತಮ ಹೃದ್ರೋಗ ತಜ್ಞರಲ್ಲಿ ಒಬ್ಬರು ಎಂದು ರಾಜ್ಯಸಭಾ ಸಂಸದ ಧನಂಜಯ್ ಮಹಾದಿಕ್ ಶ್ಲಾಘಿಸಿದ್ದಾರೆ.
World Heart Day 2022: ದಿಢೀರ್ ಹಾರ್ಟ್ ಅಟ್ಯಾಕ್ ಆದರೆ ಏನು ಮಾಡಬೇಕು? ಕ್ಲಿನಿಕ್‌ಗೆ ಆಗಮಿಸಿದ ರೋಗಿಯೊಬ್ಬರು ಕಣ್ಣೆದುರೇ ಹಾರ್ಟ್‌ಅಟ್ಯಾಕ್‌ಗೆ ಒಳಗಾದಾಗ ಡಾಕ್ಟರ್ ಒಬ್ಬರು ನಡೆದುಕೊಂಡ ರೀತಿ ಮೆಚ್ಚುಗೆಗೆ ಒಳಗಾಗಿದೆ. ಅದರ ವಿಡಿಯೋ ವೈರಲ್ ಆಗಿದೆ.
ಇಂದು ವಿಶ್ವ ಹೃದಯ ದಿನ (World Heart Day 2022). ಹೃದಯ ಆರೋಗ್ಯದ ವಿಚಾರ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಜನಜಾಗೃತಿಯ ವಿಡಿಯೋಗಳೂ ಚಲಾವಣೆಯಲ್ಲಿವೆ. ಅದರಲ್ಲಿ ಒಂದು ಮಹಾರಾಷ್ಟ್ರದ ಕೊಲ್ಹಾಪುರದ ಡಾಕ್ಟರ್ ಒಬ್ಬರ ಈ ವಿಡಿಯೋ.
ಇದು ಸಿಸಿಟಿವಿ ದೃಶ್ಯವಾಗಿದ್ದು, ಕೆಲವು ದಿನಗಳ ಹಿಂದೆ ಟ್ವಿಟರ್‌ನಲ್ಲಿ ಗಮನಸೆಳೆಯಿತು. ಬಹುಬೇಗನೆ ಇದು ವೈರಲ್ ಆಗಿದೆ. ವಿಡಿಯೋದಲ್ಲಿ ಅಂಥದ್ದೇನಿದೆ? ಮಹಾರಾಷ್ಟ್ರದ ಕೊಲ್ಹಾಪುರದ ವೈದ್ಯರೊಬ್ಬರು ಹಠಾತ್ ಹೃದಯ ಸ್ತಂಭನದಿಂದ ರೋಗಿಯನ್ನು ರಕ್ಷಿಸುತ್ತಿರುವ ದೃಶ್ಯ ಅದರಲ್ಲಿದೆ.
ವೀಡಿಯೊದಲ್ಲಿರುವ ದೃಶ್ಯ ಪ್ರಕಾರ, ರೋಗಿಯು ಆರಂಭದಲ್ಲಿ ಸಾಮಾನ್ಯವಾಗಿ ಕುಳಿತಿದ್ದ. ಇದ್ದಕ್ಕಿದ್ದಂತೆ ವೈದ್ಯರ ಮೇಜಿನ ಮೇಲೆ ಕೈ ಬೆರಳುಗಳನ್ನು ಬಡಿದು ಸದ್ದು ಮಾಡುವ ಮೂಲಕ ಅಸ್ವಸ್ಥತೆಯನ್ನು ಸೂಚಿಸುತ್ತ. ಕುರ್ಚಿಯ ಹಿಂದಕ್ಕೆ ಒರಗಿಬಿಡುತ್ತಾನೆ. ಕೂಡಲೇ ವೈದ್ಯರು ತಮ್ಮ ಸೀಟಿನಿಂದ ಎದ್ದು ಆತನ ರಕ್ಷಣೆಗೆ ಧಾವಿಸುತ್ತಾರೆ. ಬಳಿಕ ರೋಗಿ ಎದೆಯನ್ನು ಒತ್ತುವ ದೃಶ್ಯವಿದೆ.
ಕೊಲ್ಹಾಪುರ ಮೂಲದ ರಾಜ್ಯಸಭಾ ಸಂಸದ ಧನಂಜಯ್ ಮಹಾದಿಕ್ ಕ್ಲಿನಿಕ್‌ನ ವೈರಲ್ ಸಿಸಿಟಿವಿ ದೃಶ್ಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಡಾಕ್ಟರ್ ಅರ್ಜುನ್ ಅಡ್ನಾಯಕ್ ಕ್ಲಿನಿಕ್‌ನಲ್ಲಿ ಮೂವರು ರೋಗಿಗಳಿರುವುದು ಕಂಡುಬರುತ್ತದೆ. ಮೊದಲಿಗೆ, ವೈದ್ಯರು ವ್ಯಕ್ತಿಯನ್ನು ಮಾತನಾಡುತ್ತ ಅಸೌಖ್ಯದ ವಿವರ ಪಡೆಯುತ್ತಾರೆ. ಆ ಸಂದರ್ಭದಲ್ಲಿ ನೀಲಿ ಅಂಗಿ ಧರಿಸಿದ್ದಾತ ಸಾಮಾನ್ಯವಾಗಿದ್ದ. ಆದರೆ ಇದ್ದಕ್ಕಿದ್ದಂತೆ, ಹಿಂದಕ್ಕೆ ವಾಲಿದ್ದು ಗೋಚರಿಸುತ್ತದೆ.
ವೈದ್ಯರು ಸಹಜವಾಗಿಯೇ ಪ್ರತಿಕ್ರಿಯಿಸಿದ್ದು, ಕೂಡಲೇ ರೋಗಿಯ ಸಮೀಪಕ್ಕೆ ಬಂದು ಆತನ ಎದೆಯನ್ನು ಬಡಿದು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ನೀಡುವ ಮೂಲಕ ಜೀವವನ್ನು ಉಳಿಸುತ್ತಾರೆ. ಅದ್ಭುತವೆನಿಸುವಂತೆ, ಸ್ವಲ್ಪ ಸಮಯದ ನಂತರ ರೋಗಿಯು ಚೇತರಿಸಿಕೊಂಡಿದ್ದಾನೆ.
“ನಿಜ ಜೀವನದ ಹೀರೋಗಳು ನಮ್ಮ ನಡುವೆ ವಾಸಿಸುವ ಉದಾಹರಣೆಯನ್ನು ಈ ವೀಡಿಯೊ ತೋರಿಸುತ್ತದೆ. ಅತ್ಯುತ್ತಮ ಹೃದ್ರೋಗ ತಜ್ಞರಲ್ಲಿ ಒಬ್ಬರಾದ ಡಾ. ಅರ್ಜುನ್ ಅಡ್ನಾಯಕ್, ಕೊಲ್ಹಾಪುರದಿಂದ ರೋಗಿಯ ಜೀವ ಉಳಿಸಿದ್ದಾರೆ. ಅಂತಹ ಗೌರವಾನ್ವಿತ ಮತ್ತು ಸದ್ಗುಣಶೀಲ ವೀರರನ್ನು ನಾನು ಶ್ಲಾಘಿಸುತ್ತೇನೆ, ”ಎಂದು ಮಹದಿಕ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
CPR ನ ಪ್ರಾಮುಖ್ಯತೆಯನ್ನು ಪುನರುಚ್ಚರಿಸುತ್ತಾ, "ಜೀವ ಉಳಿಸುವಿಕೆಯನ್ನು ಶಾಲೆಗಳಲ್ಲಿ ಸೇರಿಸಬೇಕು, ಇದು ಸೆಕೆಂಡುಗಳ ವಿಷಯವಾಗಿದೆʼ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.
ಹೃದಯ ಸ್ತಂಭನಕ್ಕೆ ಚಿಕಿತ್ಸೆ ನೀಡುವ ವಿಧಾನದ ಬಗ್ಗೆ ತನಗೆ ಪರಿಚಯವಿಲ್ಲದ ಕಾರಣ ಡಿಯೊ ಸಂಭವನೀಯ "ಪ್ರಚಾರದ ಗಿಮಿಕ್" ಆಗಿರಬಹುದು ಎಂದು ತನ್ನನ್ನು ತಾನು ವೈದ್ಯನೆಂದು ಹೇಳಿಕೊಂಡ ಮತ್ತೊಬ್ಬ ಬಳಕೆದಾರ ಹೇಳಿದ್ದಾನೆ.