Visva Bharati Recruitment 2023: ವಿಶ್ವ ಭಾರತಿಯಲ್ಲಿ ಉದ್ಯೋಗಾವಕಾಶ, 709 ಹುದ್ದೆಗಳಿಗೆ ಅರ್ಜಿ ಆಹ್ವಾನ
Apr 18, 2023 06:08 PM IST
Visva Bharati Recruitment 2023: Apply for 709 MTS & other posts, details here
ವಿಶ್ವ ಭಾರತಿ ವಿಶ್ವವಿದ್ಯಾಲಯವು (Visva-Bharati University) ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಿದೆ. ಆಸಕ್ತ ಅಭ್ಯರ್ಥಿಗಳು vbharatirec.nta.ac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಭಾರತದ ಯಾವುದೇ ಮೂಲೆಯಲ್ಲಿ ಕೆಲಸ ಮಾಡಲು ಸಿದ್ಧರೆನ್ನುವ ಅಭ್ಯರ್ಥಿಗಳಿಗೆ ಸೂಕ್ತವಾದ ಉದ್ಯೋಗಾವಕಾಶ ಇಲ್ಲಿದೆ. ವಿಶ್ವ ಭಾರತಿ ಯೂನಿವರ್ಸಿಟಿಯು ಪಶ್ಚಿಮ ಬಂಗಾಳದ ಸಂಘನಿಕೇತನದಲ್ಲಿದೆ. ಇದು ರವೀಂದ್ರನಾಥ ಠಾಗೂರ್ (Rabindranath Tagore ) ಅವರು ಸ್ಥಾಪಿಸಿದ ವಿಶ್ವವ ವಿದ್ಯಾಲಯ. ವಿಶ್ವ ಭಾರತಿ ವಿಶ್ವವಿದ್ಯಾಲಯವು (Visva-Bharati University) ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಿದೆ. ಆಸಕ್ತ ಅಭ್ಯರ್ಥಿಗಳು vbharatirec.nta.ac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ವಿಶ್ವ ಭಾರತಿ ವಿಶ್ವವಿದ್ಯಾಲಯವು (Visva-Bharati University) ಒಟ್ಟು 709 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 16, 2023 ಕೊನೆಯ ದಿನಾಂಕವಾಗಿದೆ.
ಹುದ್ದೆಗಳ ವಿವರ
ರಿಜಿಸ್ಟ್ರಾರ್: 1 ಹುದ್ದೆ
ಹಣಕಾಸು ಅಧಿಕಾರಿ: 1 ಹುದ್ದೆ
ಗ್ರಂಥಪಾಲಕ: 1 ಹುದ್ದೆ
ಉಪ ರಿಜಿಸ್ಟ್ರಾರ್: 1 ಹುದ್ದೆ
ಆಂತರಿಕ ಲೆಕ್ಕ ಪರಿಶೋಧನಾ ಅಧಿಕಾರಿ: 1 ಹುದ್ದೆ
ಸಹಾಯಕ ಗ್ರಂಥಪಾಲಕರು: 6 ಹುದ್ದೆಗಳು
ಸಹಾಯಕ ರಿಜಿಸ್ಟ್ರಾರ್: 2 ಹುದ್ದೆಗಳು
ಸೆಕ್ಷನ್ ಆಫೀಸರ್: 4 ಹುದ್ದೆಗಳು
ಸಹಾಯಕ/ ಹಿರಿಯ ಸಹಾಯಕ: 5 ಹುದ್ದೆಗಳು
ಅಪ್ಪರ್ ಡಿವಿಷನ್ ಕ್ಲರ್ಕ್/ ಆಫೀಸ್ ಅಸಿಸ್ಟೆಂಟ್: 29 ಹುದ್ದೆಗಳು
ಲೋವರ್ ಡಿವಿಷನ್ ಕ್ಲರ್ಕ್/ ಜೂನಿಯರ್ ಆಫೀಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್: 99 ಹುದ್ದೆಗಳು
ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ: 405 ಹುದ್ದೆಗಳು
ವೃತ್ತಿಪರ ಸಹಾಯಕ: 5 ಹುದ್ದೆಗಳು
ಅರೆ ವೃತ್ತಿಪರ ಸಹಾಯಕ: 4 ಹುದ್ದೆಗಳು
ಲೈಬ್ರರಿ ಸಹಾಯಕ: 1 ಹುದ್ದೆ
ಲೈಬ್ರರಿ ಅಟೆಂಡೆಂಟ್: 30 ಹುದ್ದೆಗಳು
ಪ್ರಯೋಗಾಲಯ ಸಹಾಯಕ: 16 ಹುದ್ದೆಗಳು
ಪ್ರಯೋಗಾಲಯ ಅಟೆಂಡೆಂಟ್: 45 ಹುದ್ದೆಗಳು
ಸಹಾಯಕ ಇಂಜಿನಿಯರ್: 2 ಹುದ್ದೆಗಳು
ಜೂನಿಯರ್ ಇಂಜಿನಿಯರ್: 10 ಹುದ್ದೆಗಳು
ಖಾಸಗಿ ಕಾರ್ಯದರ್ಶಿ: 7 ಹುದ್ದೆಗಳು
ವೈಯಕ್ತಿಕ ಸಹಾಯಕ: 8 ಹುದ್ದೆಗಳು
ಸ್ಟೆನೋಗ್ರಾಫರ್: 2 ಪೋಸ್ಟ್‌ಗಳು
ಹಿರಿಯ ತಾಂತ್ರಿಕ ಸಹಾಯಕ: 2 ಹುದ್ದೆಗಳು
ತಾಂತ್ರಿಕ ಸಹಾಯಕ: 17 ಹುದ್ದೆಗಳು
ಭದ್ರತಾ ಇನ್ಸ್‌ಪೆಕ್ಟರ್: 1 ಹುದ್ದೆ
ಹಿರಿಯ ಸಿಸ್ಟಂ ವಿಶ್ಲೇಷಕ: 1 ಹುದ್ದೆ
ಸಿಸ್ಟಮ್ ಪ್ರೋಗ್ರಾಮರ್: 3 ಪೋಸ್ಟ್‌ಗಳು
ಅರ್ಹತೆಗಳೇನು?
ಆಯಾ ಹುದ್ದೆಗಳಿಗೆ ತಕ್ಕಂತೆ ವಿವಿಧ ವಿದ್ಯಾರ್ಹತೆ ಮತ್ತು ಕೆಲಸ ಅನುಭವ ಬಯಸಲಾಗಿದೆ. ಹುದ್ದೆಗಳ ಮಾಹಿತಿ, ಶೈಕ್ಷಣಿಕ ಅರ್ಹತೆ, ವಯೋಮಿತಿ ಇತ್ಯಾದಿ ಮಾಹಿತಿ ಪಡೆಯಲು ಅಧಿಸೂಚನೆ ಪರಿಶೀಲಿಸಿ. ಅಧಿಸೂಚನೆಗೆ ಲಿಂಕ್ ಇಲ್ಲಿದೆ.
ಆಯ್ಕೆ ಪ್ರಕ್ರಿಯೆ
ಪೇಪರ್ 1 ಮತ್ತು ಪೇಪರ್ 2 ಪರೀಕ್ಷೆ ಬಳಿಕ ಸಂದರ್ಶನ ನಡೆಯುತ್ತದೆ. ಲಿಖಿತ ಪರೀಕ್ಷೆಗೆ ಶೇಕಡ 70 ಅಂಕ ಮತ್ತು ಸಂದರ್ಶನ/ಪರ್ಸನಾಲಿಟಿ ಪರೀಕ್ಷೆಗೆ ಶೇಕಡ 30 ಅಂಕ ಇರುತ್ತದೆ.