Explainer: ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಯಾಕೆ ಬೇಕು? ಅಪ್ಲೈ ಮಾಡುವುದು ಹೇಗೆ? ಇಲ್ಲಿದೆ ವಿವರ
Feb 16, 2024 08:45 PM IST
ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ವೈಶಿಷ್ಟ್ಯಗಳೇನು
- National Common Mobility Card: ಒಂದೇ ಒಂದು ಕಾರ್ಡ್ ಮೂಲಕ ವಿವಿಧ ರೀತಿಯ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಬಳಸಲು ನೆರವಾಗುವ ಕಾರ್ಡ್ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್. ಮೆಟ್ರೋ ಮಾತ್ರವಲ್ಲದೆ ರೈಲು ಹಾಗೂ ಬಸ್ ಸೇವೆಗಳನ್ನು ಕೂಡಾ ಈ ಕಾರ್ಡ್ ಬಳಸಿ ಪಡೆಯಬಹುದು. ಈ ಕುರಿತ ವಿಸ್ತೃತ್ ಮಾಹಿತಿ ಇಲ್ಲಿದೆ.
ಭಾರತ ಸರ್ಕಾರವು 2019ರಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಅನ್ನು ಪರಿಚಯಿಸಿತು. ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲಿ ನಗದು ರಹಿತ (ಕ್ಯಾಶ್‌ಲೆಸ್) ವ್ಯವಹಾರಗಳನ್ನು ಹೆಚ್ಚಿಸುವ ಸಲುವಾಗಿ ಈ ಹೆಜ್ಜೆ ಇಡಲಾಗಿದೆ. ಕ್ಯಾಶ್‌ಲೆಸ್ ಟ್ರಾನ್ಸಾಕ್ಷನ್‌ಗೆ ಬೆಂಬಲಿಸುವಲ್ಲಿ ಇದು ಮಹತ್ವದ ಸುಧಾರಣೆಯಾಗಿದೆ.
ಒಂದೇ ಕಾರ್ಡ್ ಅನ್ನು ಹಲವಾರು ಕಡೆ ಬಳಸಲು ಸಹಾಯವಾಗುವಂತೆ ಈ ಮೊಬಿಲಿಟಿ ಕಾರ್ಡ್ ರೂಪಿಸಲಾಗಿದೆ. ಸಮೂಹ ಸಾರಿಗೆಗೆಳಾದ ಮೆಟ್ರೋ, ಬಸ್, ರೈಲುಗಳಲ್ಲಿ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಈ ಕಾರ್ಡ್ ಬಳಕೆಯಾಗಲಿದೆ. ಸಾರ್ವಜನಿಕ ಪ್ರಯಾಣ ವ್ಯವಸ್ಥೆಗಳಿಗೆ ಈ ಒಂದೇ ಕಾರ್ಡ್ ಬಳಕೆಯ ಯೋಜನೆಯು ಪ್ರಯಾಣಿಕರ ಬಳಕೆಗೆ ಸರಳವಾಗಿ ಸಿಗಲಿದೆ.
NCMC ಎಂದರೇನು?
ಕೇವಲ ಒಂದು ಕಾರ್ಡ್ ಮೂಲಕ ವಿವಿಧ ರೀತಿಯ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಬಳಸಲು ಸಾರ್ವಜನಿಕರಿಗೆ ನೆರವಾಗುವ ಕಾರ್ಡ್. ಸಾರಿಗೆ ಮಾತ್ರವದಲ್ಲದೆ ಟೋಲ್ ತೆರಿಗೆಗಳು, ಪಾರ್ಕಿಂಗ್ ಶುಲ್ಕಗಳು ಮತ್ತು ಇತರ ಪಾವತಿಗಳಿಗೆ NCMC ಸರಳ ಹಾಗೂ ಏಕೀಕೃತ ಪರಿಹಾರವಾಗಿದೆ.
ಇದನ್ನೂ ಒದಿ | Explainer: ಏನಿದು ವಾಟರ್ ಮೆಟ್ರೋ? ಕೊಚ್ಚಿನ್ ನಗರದ ಜನಪ್ರಿಯ ಸೇವೆ ಮಂಗಳೂರಿನಲ್ಲೂ ಜಾರಿ ಸಾಧ್ಯತೆ; ಜಲ ಮೆಟ್ರೋ ಕುರಿತ ಸಮಗ್ರ ಮಾಹಿತಿ
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 2019ರ ಮಾರ್ಚ್ 4ರಂದು ಈ ಕಾರ್ಡ್ ಅನ್ನು ಜಾರಿಗೊಳಿಸಿತು. ಪ್ರಧಾನ ಮಂತ್ರಿಯವರ ‘ಒಂದು ರಾಷ್ಟ್ರ, ಒಂದು ಕಾರ್ಡ್’ ಪರಿಕಲ್ಪನೆಯ ಅಡಿಯಲ್ಲಿ ಇದನ್ನು ಪ್ರಾರಂಭಿಸಲಾಯ್ತು.
NCMC ಕಾರ್ಡ್‌ನ ಪ್ರಮುಖ ಲಕ್ಷಣಗಳು
- NCMC ಕಾರ್ಡ್, ಬಳಕೆದಾರರಿಗೆ ಯಾವುದೇ ರೀತಿಯ ತೊಂದರೆ ಇಲ್ಲದೆ ಪ್ರಯಾಣ ಸಂಬಂಧಿತ ವಹಿವಾಟುಗಳನ್ನು ನಡೆಸಲು ನೆರವಾಗಲಿದೆ.
- ಇದು ನಿಯರ್ ಫೀಲ್ಡ್ ಕಮ್ಯುನಿಕೇಶನ್ (NFC) ತಂತ್ರಜ್ಞಾನ ಒಳಗೊಂಡಿದೆ.
- ಬಳಕೆದಾರರು ಸುಲಭವಾಗಿ ಕಾರ್ಡ್ ಟ್ಯಾಪ್ ಮಾಡಿ ಕಾರ್ಡ್ ಮೂಲಕ ಪಾವತಿ ಮಾಡಬಹುದು(ಟ್ಯಾಪ್ ಮತ್ತು ಗೋ ಪಾವತಿ).
- ಈ ಪಾವತಿ ವ್ಯವಸ್ಥೆಯು ವಹಿವಾಟು ಮತ್ತು ಬಳಕೆದಾರರ ದಕ್ಷತೆಯನ್ನು ಹೆಚ್ಚಿಸುತ್ತದೆ.
- ಬಳಕೆದಾರರ ಗೌಪ್ಯತೆ ಮತ್ತು ಡೇಟಾಗಳ ರಕ್ಷಣೆಗಾಗಿ ಕಾರ್ಡ್‌ನಲ್ಲಿ ವಹಿವಾಟುಗಳಿಗೆ ಸಂಬಂಧಿಸಿದಂತೆ ಬಲವಾದ ಸುರಕ್ಷತೆ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇದನ್ನೂ ಓದಿ | Explainer: ಸ್ಕೈಡೆಕ್ ಎಂದರೇನು? ಹೇಗಿರುತ್ತೆ? ಬೆಂಗಳೂರಿಗೆ ಸಿದ್ದರಾಮಯ್ಯ ಕೊಟ್ಟ ಮಹತ್ವದ ಕೊಡುಗೆ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು
ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ಗೆ (NCMC) ಅರ್ಜಿ ಸಲ್ಲಿಸುವುದು ಹೇಗೆ?
ಎನ್‌ಸಿಎಂಸಿ ಕಾರ್ಡ್ ಡೆಬಿಟ್, ಕ್ರೆಡಿಟ್ ಅಥವಾ ಪ್ರಿಪೇಯ್ಡ್ ರುಪೇ ಕಾರ್ಡ್ ಫಾರ್ಮ್ಯಾಟ್‌ಗಳಲ್ಲಿ ಲಭ್ಯವಿದೆ. ಇದನ್ನು ದೇಶದ 25ಕ್ಕೂ ಹೆಚ್ಚು ಪಾಲುದಾರ ಬ್ಯಾಂಕ್‌ಗಳಿಂದ ಪಡೆಯಬಹುದಾಗಿದೆ. ಬಳಕೆದಾರರು ಅವರಾಗಿಯೇ ಈ ಬ್ಯಾಂಕ್‌ಗಳನ್ನು ಗುರುತಿಸಿಕೊಂಡು, ತಮ್ಮ ಅನುಕೂಲಕ್ಕೆ ತಕ್ಕಂತೆ ಬೇಕಾದ ಫಾರ್ಮ್ಯಾಟ್‌ನಲ್ಲಿ ಕಾರ್ಡ್‌ಗಳನ್ನು ಆರಿಸಿಕೊಳ್ಳಬೇಕು.
ಆಯಾ ಬ್ಯಾಂಕ್‌ನ ಮಾರ್ಗಸೂಚಿಗಳ ಪ್ರಕಾರ, ಆನ್‌ಲೈನ್ ಅಥವಾ ಆಫ್‌ಲೈನ್ ಕಾರ್ಯವಿಧಾನಗಳ ಮೂಲಕ NCMC ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಕಾರ್ಡ್ ಪಡೆಯಲು ನಿಮ್ಮ KYC ದಾಖಲೆಗಳನ್ನು ಬ್ಯಾಂಕ್‌ಗೆ ಸಲ್ಲಿಸಬೇಕಾಗುತ್ತದೆ.
ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಥವಾ ಇತರ ಅಧಿಕೃತ ರೀಚಾರ್ಜ್ ವಿಧಾನಗಳ ಮೂಲಕ ನೀವು ಕಾರ್ಡ್ ಅನ್ನು ಸುಲಭವಾಗಿ ಟಾಪ್-ಅಪ್ ಮಾಡಬಹುದು. ರೀಚಾರ್ಜ್ ಮಾಡಿ ಮತ್ತೆ ಬಳಸಬಹುದು.
ಇದನ್ನೂ ಓದಿ | Explainer: ಏನಿದು ವೇಲ್ ಫಿಶಿಂಗ್? ದುಡ್ಡಿರುವ ದೊಡ್ಡ ಮೀನುಗಳಿಗೆ ಸ್ಕ್ಯಾಮರ್‌ಗಳ ಗಾಳ; ಕೋಟಿ ಲೂಟಿ ಹಿಂದಿನ ಕೈ ಯಾರದ್ದು?
ಕಾರ್ಡ್ ಅನ್ನು ಸಕ್ರಿಯಗೊಳಿಸಿ, ಅದಕ್ಕೆ ರೀಚಾರ್ಜ್ ಮಾಡಿದ ಬಳಿಕ NCMC ಕಾರ್ಡ್ ಅನ್ನು ವಿವಿಧ ಸಾರಿಗೆ ನೆಟ್‌ವರ್ಕ್‌ಗಳಲ್ಲಿ ಮತ್ತು NCMC ಪಾವತಿ ಆಯ್ಕೆ ಇರುವ ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಬಳಸಬಹುದಾಗಿದೆ. ಒಟ್ಟಿನಲ್ಲಿ ಈ ಒಂದೇ ಕಾರ್ಡ್ ಹಲವು ಕಡೆಗಳಲ್ಲಿ ನೆರವಾಗಲಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)