logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಿಂದ ಫಾಸ್ಟ್​​ಟ್ಯಾಗ್ ಖರೀದಿಸಬೇಡಿ ಎಂದು ಸೂಚಿಸಿದ ಆರ್​​ಬಿಐ, ಕಾರಣವೇನು?

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಿಂದ ಫಾಸ್ಟ್​​ಟ್ಯಾಗ್ ಖರೀದಿಸಬೇಡಿ ಎಂದು ಸೂಚಿಸಿದ ಆರ್​​ಬಿಐ, ಕಾರಣವೇನು?

Prasanna Kumar P N HT Kannada

Feb 16, 2024 10:28 PM IST

google News

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಿಂದ ಫಾಸ್ಟ್​​ಟ್ಯಾಗ್ ಖರೀದಿಸಬೇಡಿ ಎಂದು ಸೂಚಿಸಿದ ಆರ್​​ಬಿಐ

    • Paytm Payments Bank Wallet : ಪೇಟಿಎಂ ಪೇಮೆಂಟ್ಸ್​​ ಬ್ಯಾಕ್​​ನಿಂದ ಫಾಸ್ಟ್​​ಟ್ಯಾಗ್​ ಖರೀದಿಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ. ಅದಕ್ಕೆ ಕಾರಣ ಇಲ್ಲಿದೆ ನೋಡಿ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಿಂದ ಫಾಸ್ಟ್​​ಟ್ಯಾಗ್ ಖರೀದಿಸಬೇಡಿ ಎಂದು ಸೂಚಿಸಿದ ಆರ್​​ಬಿಐ
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಿಂದ ಫಾಸ್ಟ್​​ಟ್ಯಾಗ್ ಖರೀದಿಸಬೇಡಿ ಎಂದು ಸೂಚಿಸಿದ ಆರ್​​ಬಿಐ

ಆತಂಕಕ್ಕೆ ಒಳಗಾಗಿದ್ದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Payment Payments Bank) ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪೇಟಿಎಂ ನಿಷೇಧದ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿಸ್ತರಿಸಿದೆ. ಮೊದಲು ಇದೇ ತಿಂಗಳ ಫೆಬ್ರವರಿ 29ರವರೆಗೆ ಇತ್ತು. ಈಗ ಮಾರ್ಚ್ 15ಕ್ಕೆ ವಿಸ್ತರಿಸಲಾಗಿದೆ. 15 ದಿನಗಳ ಹೆಚ್ಚುವರಿ ಸಡಿಲಿಕೆ ನೀಡಲಾಗಿದೆ.

ಪ್ರಶ್ನೆ: ನಾನು ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ನೀಡಿದ ಫಾಸ್ಟ್​ಟ್ಯಾಗ್​ ಅನ್ನು ಹೊಂದಿದ್ದೇನೆ. ಮಾರ್ಚ್ 15ರ ನಂತರ ಟೋಲ್ ಪಾವತಿಸಲು ನಾನು ಅದನ್ನು ಬಳಸುವುದನ್ನು ಮುಂದುವರಿಸಬಹುದೇ?

ಉತ್ತರ: ಹೌದು. ಲಭ್ಯವಿರುವ ಬಾಕಿ ಮೊತ್ತದವರೆಗೆ ಟೋಲ್ ಪಾವತಿಸಲು ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ಬಳಸುವುದನ್ನು ನೀವು ಮುಂದುವರಿಸಬಹುದು. ಮಾರ್ಚ್ 15ರ ನಂತರ ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ಫಾಸ್ಟ್‌ಟ್ಯಾಗ್‌ಗಳಲ್ಲಿ ಯಾವುದೇ ಹೆಚ್ಚಿನ ಹಣವನ್ನು ಅನುಮತಿಸಲಾಗುವುದಿಲ್ಲ. ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ನೀವು ಮತ್ತೊಂದು ಬ್ಯಾಂಕ್‌ನಿಂದ ನೀಡಲಾದ ಹೊಸ ಫಾಸ್ಟ್​ಟ್ಯಾಗ್​ ಅನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ.

ಪ್ರಶ್ನೆ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನೀಡಿದ ಫಾಸ್ಟ್​ಟ್ಯಾಗ್​ ಅನ್ನು ರೀಚಾರ್ಜ್ ಮಾಡಬಹುದೇ?

ಉತ್ತರ: ಇಲ್ಲ. ಮಾರ್ಚ್ 15ರ ನಂತರ ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ನೀಡಿದ ಫಾಸ್ಟ್​​ಟ್ಯಾಗ್ ಅನ್ನು ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಯಾವುದೇ ಅನನುಕೂಲತೆಯನ್ನು ತಪ್ಪಿಸಲು ನೀವು ಮಾರ್ಚ್ 15ರ ಮೊದಲು ಮತ್ತೊಂದು ಬ್ಯಾಂಕ್ ನೀಡಿದ ಹೊಸ ಫಾಸ್ಟ್‌ಟ್ಯಾಗ್ ಅನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

ಪ್ರಶ್ನೆ: ಪೇಟಿಎಂ ಪೇಮೆಂಟ್ ಬ್ಯಾಂಕ್ ನೀಡಿದ ನನ್ನ ಹಳೆಯ ಫಾಸ್ಟ್​ಟ್ಯಾಗ್​ನಿಂದ ಬ್ಯಾಲೆನ್ಸ್ ಅನ್ನು ಮತ್ತೊಂದು ಬ್ಯಾಂಕ್‌ನಿಂದ ಪಡೆದ ಹೊಸ ಫಾಸ್ಟ್​​ಟ್ಯಾಗ್​​ಗೆ ವರ್ಗಾಯಿಸಬಹುದೇ?

ಉತ್ತರ: ಫಾಸ್ಟ್​ಟ್ಯಾಗ್ ಕ್ರೆಡಿಟ್ ಬ್ಯಾಲೆನ್ಸ್ ವರ್ಗಾವಣೆ ವೈಶಿಷ್ಟ್ಯವು ಲಭ್ಯವಿಲ್ಲ. ಆದ್ದರಿಂದ, ನೀವು ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ನೀಡಿದ ನಿಮ್ಮ ಹಳೆಯ ಫಾಸ್ಟ್​​ಟ್ಯಾಗ್​ ಅನ್ನು ಮುಚ್ಚಬೇಕು. ಮರುಪಾವತಿಗೆ ಬ್ಯಾಂಕ್ ಅನ್ನು ವಿನಂತಿಸಬೇಕು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ