Amazon story: ವಿಮಾನ ದುರಂತಕ್ಕೆ ಸಿಲುಕಿ ಐವತ್ತು ದಿನದ ನಂತರವೂ ಅಮೆಜಾನ್ ಅರಣ್ಯದಲ್ಲಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ನಾಲ್ಕು ಮಕ್ಕಳು !
Jun 10, 2023 02:19 PM IST
ವಿಮಾನ ದುರಂತದಲ್ಲಿ ಸಿಲುಕಿ ಅಮೆಜಾನ್ ದುರ್ಗಮ ಅರಣ್ಯದಲ್ಲಿ ಬದುಕಿಳಿದ ನಾಲ್ವರು ಮಕ್ಕಳನ್ನು ರಕ್ಷಿಸಲಾಗಿದೆ
- ಇದು ನಡೆದಿರುವುದು ಜಗತ್ತಿನ ಅತಿ ದುರ್ಗಮ ಹಾಗೂ ಪ್ರಾಣಿ, ವಿಷ ಜಂತುಗಳ ಆವಾಸಸ್ಥಾನ ಅಮೆಜಾನ್ ಅರಣ್ಯದಲ್ಲಿ. ಕೊಲಂಬಿಯಾದ ಮಿಲಟರಿ ಪಡೆಗಳು ಸತತವಾಗಿ ಹುಡುಕಾಟ ನಡೆಸಿ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ಇದನ್ನು ಅತಿ ಸಂತೋಷದಿಂದಲೇ ಪ್ರಕಟಿದವರು ಕೊಲಂಬಿಯಾ ದೇಶದ ಅಧ್ಯಕ್ಷ ಗುಸ್ಟಾವೋ ಪೆಟ್ರೋ.
ಬೊಗೊಟಾ: ಕುಟುಂಬವರೊಂದಿಗೆ ಹೊರಟಿದ್ದ ಪುಟ್ಟ ವಿಮಾನ ಅಪಘಾತಕ್ಕೀಡಾಯಿತು. ಪೈಲಟ್, ತಾಯಿ ಮೃತಪಟ್ಟರು. ವಿಮಾನದಲ್ಲಿದ್ದ ಮಕ್ಕಳು ಮಾತ್ರ ಕಾಣೆಯಾಗಿದ್ದರು. ಸತತ ಐವತ್ತು ದಿನಗಳ ಕಾಲ ಹುಡುಕಾಟ ನಡೆಸಿದವರಿಗೆ ಅಚ್ಚರಿ ಕಾದಿತ್ತು. ನಾಲ್ವರು ಪುಟ್ಟ ಮಕ್ಕಳು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ. ಅದರಲ್ಲಿ ಒಂದು ವರ್ಷದ ಹಸುಳೆಯೂ ಇದೆ !
ಇದು ನಡೆದಿರುವುದು ಜಗತ್ತಿನ ಅತಿ ದುರ್ಗಮ ಹಾಗೂ ಪ್ರಾಣಿ, ವಿಷ ಜಂತುಗಳ ಆವಾಸಸ್ಥಾನ ಅಮೆಜಾನ್ ಅರಣ್ಯದಲ್ಲಿ. ಕೊಲಂಬಿಯಾದ ಮಿಲಟರಿ ಪಡೆಗಳು ಸತತವಾಗಿ ಹುಡುಕಾಟ ನಡೆಸಿ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ.
ಇದನ್ನು ಅತಿ ಸಂತೋಷದಿಂದಲೇ ಪ್ರಕಟಿದವರು ಕೊಲಂಬಿಯಾ ದೇಶದ ಅಧ್ಯಕ್ಷ ಗುಸ್ಟಾವೋ ಪೆಟ್ರೋ.
ಆಗಿದ್ದೇನು
ಮೇ 1ರಂದು ನಾಲ್ವರು ಮಕ್ಕಳು ಸೇರಿದಂತೆ ಏಳು ಜನರಿಂದ ಸೆಸ್ನಾ206 ಲಘು ವಿಮಾನವು ಅಮೆಜಾನ್ ಪ್ರಾಂತ್ಯದ ಅರರಾಕುರ ಹಾಗೂ ಗುವಾವೈರೆ ಪ್ರಾಂತ್ಯದ ಸ್ಯಾನ್ ಜೋಸ್ ಡೆಲ್ ಗುವಾವೈರೆ ಪ್ರದೇಶದಿಂದ ಹೊರಟಿತ್ತು. ಎಲ್ಲರೂ ಸ್ಥಳೀಯರೇ ಆಗಿದ್ದರು. ಲಘು ವಿಮಾನ ಸ್ವಲ್ಪ ದೂರ ಪ್ರಯಾಣಿಸುತ್ತಿದ್ದಂತೆ ತಾಂತ್ರಿಕ ದೋಷ ಉಂಟಾಗಿರುವುದನ್ನು ಪೈಲಟ್ ಘೋಷಿಸಿದ್ದರು. ಕೊಲಂಬಿಯಾದ ಗುವಾವೈರೆ ಹಾಗೂ ಕಕೆಟಾ ಸಮೀಪದಲ್ಲಿ ವಿಮಾನ ಅಪಘಾತಕ್ಕೀಡಾಗಿ ಪೈಲಟ್, ಮಹಿಳೆ ಹಾಗೂ ಇನ್ನೊಬ್ಬರು ಮೃತಪಟ್ಟಿದ್ದರು.
ಲಘು ವಿಮಾನ ಮರಕ್ಕೆ ಜೋತು ಬಿದ್ದ ರೀತಿಯಲ್ಲಿದ್ದರೆ ಮೃತದೇಹಗಳು ಅಲ್ಲಿಯೇ ಸಿಕ್ಕಿದ್ದವು. ಆದರೆ ಲಘು ವಿಮಾನದಲ್ಲಿ ಹದಿಮೂರು, ಒಂಬತ್ತು, ನಾಲ್ಕು ಹಾಗೂ ಒಂದು ವರ್ಷದ ಹಸುಳೆ ಇದ್ದರೂ ಕಾಣೆಯಾಗಿದ್ದರು. ಇದರಲ್ಲಿ ಮೂವರು ಹೆಣ್ಣು ಮಕ್ಕಳಿದ್ದರೆ ಒಬ್ಬ ಮಾತ್ರ ಬಾಲಕ. ಅಲ್ಲಿಯೇ ಹುಡುಕಾಟ ನಡೆಸಿದರೆ ಮಕ್ಕಳು ಪತ್ತೆಯಾಗಲಿಲ್ಲ.
ಮೇ ಒಂದರಿಂದಲೇ ಹುಡುಕಾಟ ಚುರುಕಾಗಿತ್ತು. ಸೇನಾಪಡೆಯ ತಂಡ, ಸ್ಥಳೀಯ ಸಮುದಾಯದವರು ನಿರಂತರ ಹುಡುಕಾಟ ನಡೆಸಿದ್ದರು. ಕೊಲಂಬಿಯಾದ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನೂ ಬಳಸಲಾಗಿತ್ತು. ಶ್ವಾನ ಪಡೆಯೂ ಪತ್ತೆಗೆ ಕೈ ಜೋಡಿಸಿತ್ತು.
ಮಕ್ಕಳ ಅಜ್ಜನ ಧ್ವನಿಯನ್ನು ಈ ಪ್ರದೇಶದಲ್ಲಿ ಕೇಳಿಸಲಾಗಿತ್ತು. ದುರ್ಗಮ ಅರಣ್ಯದಲ್ಲಿ ಒಳ ಹೋಗುವುದೇ ಕಷ್ಟ. ಅಂತಹುದ್ದರಲ್ಲಿ ಸತತ ಐವತ್ತು ದಿನವಾದರೂ ನಿಲ್ಲಿಸಿರಲಿಲ್ಲ.
ಮಕ್ಕಳು ತಿಂದು ಎಸೆದ ಹಣ್ಣು ಸೇರಿ ಇತರೆ ವಸ್ತುಗಳನ್ನು ಆಧರಿಸಿ ಬದುಕಿರುವ ಸಾಧ್ಯತೆ ಮೇಲೆ ಪತ್ತೆ ಕಾರ್ಯ ಚುರುಕುಗೊಳಿಸಲಾಗಿತ್ತು. ಕೊನೆಗೆ ವಿಮಾನ ಅಪಘಾತ ನಡೆದ ಐದು ಕಿ.ಮಿ ದೂರದಲ್ಲಿ ಮಕ್ಕಳು ಇರುವಿಕೆಯನ್ನು ಶುಕ್ರವಾರ ಸೇನಾ ಸಿಬ್ಬಂದಿ ಹಾಗೂ ಸ್ಥಳೀಯರು ಪತ್ತೆ ಮಾಡಿದರು. ನಾಲ್ವರು ಆಹಾರವಿಲ್ಲದೇ ಬಳಲಿ ಹೋಗಿದ್ದರು. ಒಂದು ವರ್ಷದ ಮಗುವೂ ಬದುಕಿತ್ತು. ಅಲ್ಲಲ್ಲಿ ಸಿಕ್ಕ ಆಹಾರ ಸೇವಿಸಿದ್ದಾಗಿ ಮಗುವೊಂದು ಮಾಹಿತಿ ನೀಡಿತ್ತು. ಮಕ್ಕಳನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಎಲ್ಲಾ ರೀತಿಯ ಚಿಕಿತ್ಸೆ ಕೊಡಿಸುವಂತೆ ವೈದ್ಯರಿಗೆ ಸೂಚಿಸಲಾಗಿದೆ.
ಮಕ್ಕಳು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದು, ಅವುಗಳನ್ನು ಸೇನಾ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ರಕ್ಷಣೆ ಮಾಡಿರುವುದು ಇಡೀ ದೇಶದ ಸಂತಸಕ್ಕೆ ಕಾರಣವಾಗಿದೆ. ಇದು ದೇಶದ ಸಂತಸ ಎಂದು ಹಲವರು ಹೆಮ್ಮೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ದೇಶದ ಅಧ್ಯಕ್ಷರೂ ಸೇನಾ ಸಿಬ್ಬಂದಿ ಮಕ್ಕಳೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ವಿಭಾಗ